ರಸ್ತೆ ತಿರುವು,ಶಾಲೆಗಳ ಬಳಿ ರಸ್ತೆ ಸುರಕ್ಷತಾ ಫಲಕಗಳನ್ನು ಅಳವಡಿಸುವಂತೆ ಗ್ರಾಪಂ ಸದಸ್ಯ ಶಶಿಕುಮಾರ್ ಒತ್ತಾಯಿಸಿದ್ದಾರೆ.

by | 02/11/22 | ಜನಧ್ವನಿ

ಚಳ್ಳಕೆರೆ ನ.2 ರಸ್ತೆ ತಿರುವುಗಳು ಅಪಘಾತಕ್ಕೆ ಕೈ ಬೀಸಿ ಕರೆಯುವಂತಿವೆ. ಹೌದು ಇದುವ ಚಳ್ಳೆಕೆರೆ ತಾಲೂಕು ಕೇಂದ್ರದಿಂದ ಸುಮಾರು 45 ಕಿ.ಮೀ ದೂರದ ಗೌರಸಮುದ್ರ ಮಾರಮ್ಮ ಪುಣ್ಯ ಕ್ಷೇತ್ರ ಹಾಗೂ ಆಂದ್ರ ಪ್ರದೇಶಕ್ಕೆ ತಲುಪುವ ರಸ್ತೆ ಅನೇಕ ಕಡೆ ತಿರುವುಗಳಿದ್ದು ಯಾವುದೇ ಮಾರ್ಗ ಸೂಚನೆ, ಸವಾರರಿಗೆ ಯಾವುದೇ ಫಲಕಗಳನ್ನು ಅಳವಡಿಸದೆ ಇರುವುದು , ಎರಡುಕಡೆ ರಸ್ತೆಯಲ್ಲಿ ಸೀಮೆ ಜಾಲಿ ಬೆಳೆದಿರುವುದು ಹಾಗೂ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಅನೇಕ ಬಾರಿ ಮುಖಾಮುಖಿ ಡಿಕ್ಕಿ ಸಂಭವಿಸಿ ಕೈ ಕಾಲುಗಳನ್ನು ಕಳೆದು ಕೊಂಡ ನಿದರ್ಶನಗಳಿವೆ ಎಂದು ಸಾರ್ವ ಜನಿಕರು ಆರೋಪಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ನೆಲಸಿರುವಂತಹ ಮಾರಮ್ಮ ದೇವಿಯ ದೇವಸ್ಥಾನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಮಾರ್ಗಗಳಿಂದ ಭಕ್ತಾದಿಗಳು ದೇವಿಯ ದರ್ಶನಕ್ಕೆ ಗೌರಸಮುದ್ರ ಗ್ರಾಮಕ್ಕೆ ಆಗಮಿಸುತ್ತಾರೆ.
ದೇವಿಯ ದರ್ಶನ ಪಡೆಯಲು ಬರುವಂತ ಭಕ್ತಾದಿಗಳಿಗೆ ದಾರಿಯಲ್ಲಿ ವಾಹನಗಳು ಅತಿ ವೇಗವಾಗಿ ಬರುವುದರಿಂದ ಯಾವುದೇ ಸೂಚನೆ ಫಲಕವಿಲ್ಲದೆ ಅಪಘಾತವಾಗಿ ಅನೇಕ ಭಕ್ತರು ಗಾಯಾಳುಗಳಾಗಿ ಆಸ್ಪತ್ರೆ ಸೇರುವ ಉದಾಹರಣೆಗಳು ಇವೆ ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ರಸ್ತೆ ತಿರುವುಗಳ ಬಳಿ ಸೂಚನಾ ಫಲಕಗಳು ಅಳವಡಿಸದೇ ಇರುವುದು ದಾರಿಯೇ ಪಕ್ಕದಲ್ಲಿರುವ ಶಾಲೆಯ ಮಕ್ಕಳು ಸಹ ಮನೆಗೆ ಹೋಗುವ ಸಂದರ್ಭದಲ್ಲಿ ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಗೆ ಶಾಲೆಯ ಮಕ್ಕಳಿಗೆ ಡಿಕ್ಕಿ ಹೊಡೆದು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿರುವ ಉದಾಹರಣೆಗಳು ಇವೆ ಗ್ರಾಮೀಣ 3 ಗ್ರಾಮಗಳ ಸಂಪರ್ಕ ಕೂಡುವ ದಾರಿಗಳಿಗೆ ಹೋಗಬೇಕೆಂದು ಸೂಚನಾ ಫಲಕಗಳಿಲ್ಲದೆ ಕೂಡುವ ರಸ್ತೆಗಳಲ್ಲಿ ಅನೇಕ ರೀತಿಯ ಅಪಘಾತಗಳಾಗಿವೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ದಾರಿಯ ತಿರುವು, ಶಾಲೆಗಳ ಬಳಿ , ಕೂಡುವ ರಸ್ತೆಗಳ ಸಮೀಪ ರಸ್ತೆ ಸುರಕ್ಷಾ ನಾಮಫಲಕಗಳನ್ನು ಅಳವಡಿಸುವಂತೆ ಗೌರಸಮುದ್ರ ಗ್ರಾಮದ ವಕೀಲ ಹಾಗೂ ಗ್ರಾಪಂ ಸದಸ್ಯ ಶಶಿಕುಮಾರ್ ಒತ್ತಾಯಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *