ಚಿತ್ರದುರ್ಗ ಮಾರ್ಚ್28:
ಸಮುದಾಯದಲ್ಲಿ ಜನರು ಸುಲಭವಾಗಿ ಆರೋಗ್ಯ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಸರಿಯಾಗಿ ತಿಳುವಳಿಕೆ ನೀಡಿ, ಅರಿವು ಮೂಡಿಸಿ ಯೋಜನೆಯ ಅನುಷ್ಠಾನಕ್ಕೆ ಮನವೊಲಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರೇತರ ಸೇವಾ ಸಂಸ್ಥೆಗಳ ಸಹಭಾಗಿತ್ವ ಉಪಯುಕ್ತವಾಗಿದೆ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಆರೋಗ್ಯ ಇಲಾಖೆ ಎನ್.ಹೆಚ್.ಎಮ್ ಯೋಜನೆಯಡಿಯಲ್ಲಿ ಮಂಗಳವಾರ ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ವಿಮುಕ್ತಿ ವಿದ್ಯಾಸಂಸ್ಥೆಯ ಧಮ್ಮಾ ಕೇಂದ್ರದಲ್ಲಿ ಸರ್ಕಾರೇತರ ಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ ಆರೋಗ್ಯ ಯೋಜನೆಗಳ ಅನುμÁ್ಠನದಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವ ಕುರಿತು ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್-_19 ಲಸಿಕಾಕರಣದಲ್ಲಿ ನೀವೆಲ್ಲರೂ ಸಹಕರಿಸಿದ್ದೀರಾ. ಆದ್ದರಿಂದ ಪ್ರತಿಶತ 100% ರಷ್ಟು ಸಾಧನೆ ಮಾಡಲು ಸಹಾಯವಾಯಿತು ಎಂದರು.
ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಆರೋಗ್ಯ ಇಲಾಖೆಯ ಕೇಂದ್ರ ಪುರಸ್ಕøತ, ರಾಜ್ಯ ಪುರಸ್ಕೃತ ಯೋಜನೆಗಳ ಮಾಹಿತಿ ನೀಡಿ, ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ , ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮ, ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ತಿಳಿಸಿ ಇತ್ತೀಚೆಗೆ ಚಾಲನೆಯಾದ ನಮ್ಮ ಕ್ಲೀನಿಕ್ ಮತ್ತು ಮಹಿಳೆಯರಿಗಾಗಿ ಆಯುಷ್ಮತಿ ಯೋಜನೆಯ ಬಗ್ಗೆ ತಿಳಿಸುತ್ತಾ ನಗರ ಕೊಳಚೆ ಪ್ರದೇಶ, ಸೇವಾ ವಂಚಿತಾ ಸೇವೆ ತಲುಪಲು ದುಸ್ತರ ಪ್ರದೇಶದಲ್ಲಿ ವಾಸಿಸುವ ಮಹಿಳೆಯರು ಹೆಚ್ಚು ವಾಸಿಸುವ ಪ್ರದೇಶವನ್ನು ಗುರುತಿಸಿ ಅಲ್ಲಿ ಎಲ್ಲಾ ತಜ್ಞ ವದ್ಯರ ಸೇವೆಯನ್ನು ಒದಗಿಸುವ ಕಾರ್ಯಕ್ರಮವಾಗಿದ್ದು ಈ ಸೇವೆಯನ್ನು ಚಿತ್ರದುರ್ಗ ನಗರದ ಮಾರುತಿನಗರ ಆರೋಗ್ಯ ಕೇಂದ್ರದಲ್ಲಿ ತೆರೆಯಲಾಗಿದೆ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಿಮುಕ್ತಿ ವಿದ್ಯಾಸಂಸ್ಥೆಯ ವಿಶ್ವಸಾಗರ್ ಮಾತನಾಡಿದರು. ಕೆ.ಹೆಚ್.ಪಿ.ಟಿ. ಜಿಲ್ಲಾ ಸಂಯೋಜಕಿ ವೀಣಾ, ವಿಮುಕ್ತಿ ಸಂಸ್ಥೆಯ ಅನ್ನಪೂರ್ಣ, ಗುರುರಾಜ್, ಕೆಂಚಪ್ಪ, ಬಿ.ಬಿ.ಜಾನ್, ಆರೋಗ್ಯ ಇಲಾಖೆಯ ಶ್ರೀಧರ್, ರಂಗಾರೆಡ್ಡಿ, ಪ್ರಶಾಂತ್, ನವೀನ್, ಶಿಲ್ಪಾ, ತಸ್ಕಿಯಾ ಹೈದರ್ ಇತರರು ಉಪಸ್ಥಿತರಿದ್ದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ಸರ್ಕಾರೇತರ ಸೇವಾಸಂಸ್ಥೆಗಳ ಸಹಭಾಗಿತ್ವ ಉಪಯುಕ್ತವಾಗಿದೆ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments