ಹಿರಿಯೂರು:
ತಾಲ್ಲೂಕಿನ ಹುಲುಗಲಕುಂಟೆ ಗ್ರಾಮ ಹಿರಿಯೂರು- ಮೈಸೂರು ರಸ್ತೆಯಲ್ಲಿದ್ದು, ಬೀದರ್ – ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿದ್ದು, ಈ ಹೆದ್ದಾರಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಓಡಾಡುತ್ತಿದ್ದು ಇಲ್ಲಿ ಪ್ರತಿದಿನಸರಣಿ ಅಪಘಾತಗಳು ನಡೆಯುತ್ತಿದ್ದು, ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ರೋಡ್ ಕ್ರಾಸ್ ಮಾಡುವುದೇ ತೀವ್ರ ಕಷ್ಟವಾಗಿದ್ದು ಇಲ್ಲೊಂದು ಅಂಡರ್ ಪಾಸ್ ನಿರ್ಮಿಸಿಕೊಡುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಜೇವರ್ಗಿಯಿಂದ ಶ್ರೀರಂಗಪಟ್ಟಣದವರೆಗೆ ನಿರ್ಮಾಣವಾಗುತ್ತಿರುವ ಹೆದ್ದಾರಿ ಕಾಮಗಾರಿಯು ಹುಲಗಲಕುಂಟೆಯ ಮೂಲಕ ಹಾದು ಹೋಗಿದ್ದು ನೂರಾರು ರೈತರು ಜಮೀನುಗಳಿಗೆ ಹೋಗಲು, ವಿದ್ಯಾರ್ಥಿಗಳು ಶಾಲೆಗೆ ಹೋಗಲು, ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಗೇಟ್ ನ ಬಳಿ ನಿರ್ಮಾಣವಾಗುತ್ತಿರುವ ಸೇತುವ ಬಳಿ ಅಂಡರ್ ಪಾಸ್ ನಿರ್ಮಿಸಿಕೊಡಿ ಎಂಬುದಾಗಿ ಗ್ರಾಮದ ಜನತೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ ಪ್ರತಿಭಟನಾಕಾರರು ದೂರಿದರು.
ಈ ಭಾಗದ ಹುಲಗಲಕುಂಟೆಕ್ರಾಸ್ ಗೆ ಹೊಂದಿಕೊಂಡಂತಿರುವ ಸುತ್ತಮುತ್ತಲಿನ ಗ್ರಾಮಗಳಾದ ಸೋಮೇರಹಳ್ಳಿ, ಯಾದವನಗರ, ಗಾಂಧಿನಗರ, ಗೌಡನಹಳ್ಳಿ, ರಂಗಾಪುರ, ಹಿಮಡಸಟ್ಟೆ, ಏಕೆಕಾಲೋನಿ, ಪಿಲಾಜನಹಳ್ಳಿ ಭಾಗದ ಶಾಲಾ ಮಕ್ಕಳಿಗೆ, ರೈತರಿಗೆ ಈ ಅಂಡರ್ ಪಾಸ್ ಅನುಕೂಲವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಯುಕ್ತರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಹ ಪ್ರಯೋಜನವಾಗದಿದ್ದಾಗ ಶುಕ್ರವಾರ ಬೆಳಗ್ಗೆ ರಸ್ತೆ ಕಾಮಗಾರಿ ಬಳಿ ಪ್ರತಿಭಟನೆ ನಡೆಸಿದರು.
ಹೆದ್ದಾರಿ ನಿರ್ಮಾಣದ ಕೆಲಸಕ್ಕೆ ತೊಂದರೆ ಮಾಡಲಾಗಿದೆ ಎಂಬ ಹೆದ್ದಾರಿ ಪ್ರಾಧಿಕಾರದ ದೂರಿನ ಮೇರೆಗೆ ಪ್ರತಿಭಟನಾನಿರತರಲ್ಲಿ ಮುಖಂಡರುಗಳಾದ ಎಚ್.ರಂಗಸ್ವಾಮಿ, ಎಚ್.ರಂಗನಾಥ, ಉಮೇಶ್ ಸ್ವಾಮಿ, ಶ್ರೀಮತಿ ಶಶಿಕಲಾ, ಟಿ. ರಂಗನಾಥ, ಜೆ.ಶಿವಣ್ಣ, ವಿ. ರಂಗಸ್ವಾಮಿ, ಆರ್. ರಂಗಸ್ವಾಮಿ, ಕೃಷ್ಣಮೂರ್ತಿ, ನಾಗರಾಜಪ್ಪ, ಕರಿಯಪ್ಪ, ಸೋಮನಾಥ, ಮಂಜುನಾಥ, ರಾಜು ಎನ್ನುವ ಸುಮಾರು 14 ಜನರನ್ನು ಮಧ್ಯಾಹ್ನದ ಹೊತ್ತಿಗೆ ಬಂಧಿಸಿ ಸಂಜೆಯವರೆಗೂ ಠಾಣೆಯಲ್ಲಿಯೇ ಇಟ್ಟುಕೊಂಡು ಅನಂತರ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಕಾಳಿಕೃಷ್ಣ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ ಎಂಬ ದೂರಿನ ಮೇರೆಗೆ ಸ್ಥಳದಲ್ಲಿ ಶಾಂತಿ ಕಾಪಾಡುವ ದೃಷ್ಠಿಯಿಂದ ಗ್ರಾಮದ 10ಕ್ಕೂ ಹೆಚ್ಚು ಜನರನ್ನು ಬಂಧಿಸಿ ಠಾಣೆಗೆ ಕರೆತಂದು ಸಂಜೆ ಬಿಡುಗಡೆ ಮಾಡಲಾಗಿದೆ ಆದರೆ ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ಮೇಲೆ ಯಾವುದೇ ದೂರು ದಾಖಲಿಸಿಲ್ಲ ಎಂಬುದಾಗಿ ಸಿಪಿಐ ಕಾಳಿಕೃಷ್ಣ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments