ಚಳ್ಳಕೆರೆ ಅ 26. ಕಳೆದ ಬಾರಿ ಬೆಳೆ ಪರಿಹಾರದ ಹಣವನ್ನು ಗ್ರಾಮಲೆಕ್ಕಾಧಿಕಾರಿಗಳು ದುರುಪಯೋಗಪಡಿಸಿಕೊಂಡು ರೈತರಿಗೆ ವಂಚನೆಮಾಡಿದ್ದಾರೆ. ಈ ಬಾರಿ ತಾಲ್ಲೂಕಿನ ಪ್ರತಿಯೊಬ್ಬ ರೈತನಿಗೂ ಬೆಳೆ ಪರಿಹಾರದ ಹಣ ಸಿಗಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಚಿಕ್ಕಣ್ಣ.
ನಗರದ ಪ್ರವಾಸಿ ಮಂದಿರದಲ್ಲಿ ಬೆಳೆ ಪರಿಹಾರ, ಬೆಳೆವಿಮೆ ಹಾಗೂ ವಿದ್ಯುತ್ ಲೋಡ್ ಶೆಡ್ಡಿಂಗ್ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ ೨೦೨೨-೨೩ ನೇ ಸಾಲಿನಲ್ಲಿ ಅತಿವೃಷ್ಠಿ, ಅನಾವೃಷ್ಠಿ ಸಿಲುಕಿ ರೈತರು ಬೆಳೆದ ಶೇಂಗಾ, ಈರುಳ್ಳಿ ಬೆಳೆಗಳು ನಷ್ಟವಾದ ಹಿನ್ನಲೆ ಸರ್ಕಾರ ತಾಲ್ಳೂಕಿಗೆ ಸುಮಾರು ೮೨ ಕೋಟಿ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಿತ್ತು. ಈ ಹಣವನ್ನು ಗ್ರಾಮಲೆಕ್ಕಾಧಿಕಾರಿಗಳು ದುರುಪಯೋಗಪಡಿಸಿಕೊಂಡು ರೈತರ ಖಾತೆಗೆ ಹಣ ಜಮಾ ಮಾಡದೆ, ಖಾಲಿ ನಿವೇಶನ, ಗೋಮಾಳ ಜಮೀನುಗಳ ಸರ್ವೆ ನಂಬರ್ ನಮೂದಿಸಿ ಖಾತೆದಾರರಲ್ಲದ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಿಕೊಂಡು ಲಪಾಟಯಿಸಿದ್ದಾರೆ. ಈ ಬಾರಿ ಬೆಳೆಪರಿಹಾರದ ಹಣ ದುರುಪಯೋಗವಾಗದಂತೆ ತಾಲ್ಲೂಕಿನ ಪ್ರತಿಯೊಬ್ಬ ರೈತನಿಗೂ ಸಿಗಬೇಕು. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬೆಳೆ ಪರಿಹಾರದ ಹಣ ಗ್ರಾಮಲೆಕ್ಕಾಧಿಕಾರಿಗಳು ದುರುಪಯೋಗಪಡಿಕೊಂಡ ಕುರಿತು ಅಖಂಡ ಕರ್ನಾಟಕ ರಾಜ್ಯ ಸಂಘ ಸಲ್ಲಿಸಿದ ಮನವಿಗೆ ಸ್ಪಂದಿÀಸಿ ೩೧ ಗ್ರಾಮಲೆಕ್ಕಾಧಿಕಾರಿಗಳು, ೩೧ ಗ್ರಾಮಸಹಾಯಕರು ವಿರುದ್ದ ಜಿಲ್ಲಾಧಿಕಾರಿಗಳು ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ, ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥ ಗ್ರಾಮಲೆಕ್ಕಾಧಿಕಾರಿಗಳನ್ನು ಅಮಾನತ್ತು ಪಡಿಸಿ, ಅರ್ಹ ರೈತರಿಗೆ ಬೆಳೆ ಪರಿಹಾರದ ಹಣ ಒದಗಿಸಬೇಕು ಎಂದರು.
ಪಿ.ಮಹದೇವಪುರ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆ ವಿಮೆ ಹಣದಲ್ಲಿ ಗೋಲ್ ಮಾಲ್ ಮಾಡಲಾಗಿದೆ. ಇದರಂತೆ ೨೦ ಗ್ರಾಪಂಗಳಲ್ಲಿ ವಿಮಾ ಕಂಪನಿಯು ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ಇದನ್ನು ತನಿಖೆ ನಡೆಸಲು ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ ರೈತರ ಪಂಪ್ ಸೆಟ್ ಗಳಿಗೆ ಐದು ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಆದರೆ ವಿದ್ಯುತ್ ಪೂರೈಕೆಯಲ್ಲಿ ಪದೆ-ಪದೆ ಲೋಡ್ ಶೆಡ್ಡಿಂಗ್ ಮಾಡದೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಜಂಪಣ್ಣ, ಕಾರ್ಯಾಧ್ಯಕ್ಷ ಹನುಮಂತರಾಯಪ್ಪ, ಮುಖಂಡರಾದ ಖಾದರ್ ಬಾಷಾ, ನರಸಿಂಹಮೂರ್ತಿ ಸೇರಿದಂತೆ ಮುಂತಾದವರು ಇತರರಿದ್ದರು.
ತಾಲ್ಲೂಕಿನ ಪ್ರತಿಯೊಬ್ಬ ರೈತನಿಗೂ ಬೆಳೆ ಪರಿಹಾರದ ಹಣ ಸಿಗಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಚಿಕ್ಕಣ್ಣ ಒತ್ತಾಯ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments