ಹಿರಿಯೂರು:
ತಾಲ್ಲೂಕಿನ ಕೂಡ್ಲಹಳ್ಳಿ ಗ್ರಾಮದ ಸಮೀಪವಿರುವ ವೇದಾವತಿ-ಸುವರ್ಣಮುಖಿ ನದಿಗಳ ಸಂಗಮ ಸ್ಥಳದಲ್ಲಿರುವ ಪುರಾತನ ಐತಿಹಾಸಿಕ ದೇವಾಲವಾದ ಶ್ರೀಸಂಗಮೇಶ್ವರಸ್ವಾಮಿ ದೇವಸ್ಥಾನವು ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಹೆಸರು ಪಡೆದಿದ್ದು, ಶ್ರಾವಣ ಮಾಸದ ಕಡೆಸೋಮವಾರದಂದು ಇಲ್ಲಿ ಜಾತ್ರಾಮಹೋತ್ಸವ ನಡೆಯುತ್ತದೆ.
ಪೂರ್ವ ದಿಕ್ಕಿನಿಂದ ಸುವರ್ಣಮುಖಿ, ದಕ್ಷಿಣ ದಿಕ್ಕಿನಿಂದ ಹರಿದು ಬರುವ ವೇದಾವತಿ ನದಿಗಳು ಕೂಡುವ ಸ್ಥಳದಲ್ಲಿ ಈ ಸಂಗಮೇಶ್ವರ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಈ ಸಂಗಮೇಶ್ವರನಿಗೆ ನಾಡಿನಾದ್ಯಂತ ಭಕ್ತರು ಇದ್ದಾರೆ.
ಎರಡು ನದಿಗಳು ದೇಗುಲದ ಎದುರು ಸಂಗಮವಾಗಿ ಮುಂದೆ ವೇದಾವತಿ ನದಿ ಎಂಬ ಹೆಸರಿನಲ್ಲಿ ಉತ್ತರ ದಿಕ್ಕಿನಕಡೆ ಮುಂದಕ್ಕೆ ಹರಿದು ಚಳ್ಳಕೆರೆ ತಾಲ್ಲೂಕಿನ ಮೂಲಕ ಆಂಧ್ರಪ್ರದೇಶದ ಮೂಲಕ ಅಂತಿಮವಾಗಿ ಬಂಗಾಳಕೊಲ್ಲಿ ಸೇರುತ್ತದೆ.
ಈ ಕೂಡಲಸಂಗಮದಲ್ಲಿ ಸ್ನಾನ ಮಾಡಿ, ಸಂಗಮೇಶ್ವರಸ್ವಾಮಿಯ ದರ್ಶನ ಮಾಡಿ, ಸ್ವಾಮಿಗೆ ಹರಕೆ ಸಲ್ಲಿಸಿದರೆ ಜನರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ. ಆದ್ದರಿಂದ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.
ಜಿಲ್ಲೆಯ ವಿವಿಧ ದೇವರ ಉತ್ಸವ ಮೂರ್ತಿಗಳನ್ನು ಶ್ರಾವಣ ಮಾಸ, ಯುಗಾದಿ ಇತರ ಶುಭ ಸಂದರ್ಭದಲ್ಲಿ ವೇದಾವತಿ ಸುವರ್ಣ ಮುಖಿ ನದಿಗಳ ಸಂಗಮ ಸ್ಥಳಕ್ಕೆ ಕರೆತಂದು ನದಿಸ್ನಾನ ಮಾಡಿಸಲಾಗುತ್ತದೆ.
ಈ ಸಂಗಮೇಶ್ವರ ದೇವಸ್ಥಾನದಲ್ಲಿ ಶಿವಲಿಂಗ, ಬಸವಣ್ಣ, ಗಣೇಶ ಮೂರ್ತಿಗಳಿದ್ದು, ಇಲ್ಲಿ ವರ್ಷವಿಡೀ ವಿವಾಹ ಕಾರ್ಯಗಳು ನೆರವೇರುತ್ತವೆ. ಅಲ್ಲದೆ ಶ್ರಾವಣ ಮಾಸದ ಕಡೇ ಸೋಮವಾರ ಜಾತ್ರೋತ್ಸವ ವೈಭವದಿಂದ ನೆರವೇರುತ್ತದೆ. ಈ ಜಾತ್ರಾಮಹೋತ್ಸವಕ್ಕೆ ರಾಜ್ಯದ ವಿವಿಧಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಈ ಪುರಾತನ ಕಾಲದ ಸಂಗಮೇಶ್ವರ ದೇವಸ್ಥಾನವನ್ನು ಅಪಾರ ಭಕ್ತರು ಹಾಗೂ ದಾನಿಗಳ ನೆರವಿನಿಂದ ಜೀರ್ಣೋದ್ದಾರ ಮಾಡಿ, ನೂತನವಾಗಿ ನಿರ್ಮಿಸಲಾಗಿದ್ದು, ಶ್ರಾವಣ ಮಾಸದಲ್ಲಿ ವಿಶೇಷ ಪೂಜಾ ಕಾರ್ಯ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಗಳು ನಡೆಯುತ್ತವೆ.
ಈ ಸಂಗಮೇಶ್ವರ ದೇವಸ್ಥಾನದ ಸುತ್ತಮುತ್ತ ಹಸಿರು ಮರ-ಗಿಡಗಳನ್ನು ಬೆಳೆಸಲಾಗಿದ್ದು, ಇಲ್ಲಿನ ಪರಿಸರ ಅತ್ಯಂತ ಆಹ್ಲಾದಕರವಾಗಿದ್ದು, ನಾಡಿನ ವಿವಿಧ ಭಾಗಗಳಿಂದ ಸಂಗಮೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ಭಕ್ತಿಭಾವ ಮೂಡಿಸುವ ಜೊತೆಗೆ ಮನಸ್ಸಿಗೆ ಆನಂದವನ್ನು ಉಂಟು ಮಾಡುತ್ತದೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments