ತಾಲೂಕು ಕಚೇರಿಯ ದಾಖಲೆಗಳು ಕಳವು ಆರೋಪಿಗಳ ಪತ್ತೆಗಾಗಿ ಸಾರ್ವಜನಿಕರ ಆಗ್ರಹ.

by | 26/12/22 | ತನಿಖೆ ವರದಿ

ಚಳ್ಳಕೆರೆ.
ಸರಕಾರಿ ಕಚೇರಿಯ ಆವರಣದಲ್ಲಿರುವ ದಾಖಲೆಗಳನ್ನು ಕಳ್ಳತನ ಮಾಡಿರುವ ಪ್ರಕರಣ ಸೋಮವಾರ ಕಚೇರಿ ಹಿಂಭಾಗದಲ್ಲಿ ಬಿದ್ದಿರುವ ಕಡತದ ಬಂಡಲ್ ನಿಂದ ಬೆಳೆಕಿಗೆ ಬಂದಿದೆ.
ಚಳ್ಳಕೆರೆ ನಗರದ ತಾಲೂಕು ಕಚೇರಿ ಆವರಣದಲ್ಲಿರುವ ದಾಖಲೆ ಕೊಠಡಿಯಲ್ಲಿರುವ ಸಾರ್ವಜನಿಕರು ಕಚೇರಿಗೆ ನೀಡಿದ ಅಮೂಲ್ಯವಾದ ದಾಖಲೆಗಳನ್ನು ಶನಿವಾರ ತಡ ರಾತ್ರಿ ಸುಮಾರು ನೂರಕ್ಕು ಹೆಚ್ಚು ಬಂಡಲ್‌ಗಳು ಕಳವಾಗಿರುವುದು ಪತ್ತೆಯಾಗಿದೆ.
ರೈತರು ನೀಡಿದ ಪವತಿ ಖಾತೆ, ವಿಲ್ ,ದಾನ ಪತ್ರ, ಕ್ರಯ ಪತ್ರ, ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯಕ್ಕಾಗಿ ಜಮೀನುಗಳನ್ನು ಬ್ಯಾಂಕ್ ಗಳಿಗೆ ಆಧಾರ ಮಾಡಿರುವ ದಾಖಲು,ವಂಶವೃಕ್ಷ, ಸೇರಿಂತೆ ವಿವಿಧ ಅರ್ಜಿ ಪಾರಂಗಳಿದ್ದು ಅವುಗಳನ್ನು ಕಚೇರಿ ತಹಶೀಲ್ದಾರ್ ಕೊಠಡಿಯ ಪಕ್ಕದ ಜಾಲರಿಯ ಕೊಠಡಿಯಲ್ಲಿ ಸಂಗ್ರಹಿಸಿದ್ದ ದಾಖಲೆಗಳನ್ನು ಕಟ್ಟಿ ಸಂಗ್ರಹಿಸಿರುತ್ತಾರೆ. ಯಾರೋ ಕಿಡಿಗೇಡಿಗಳು ಕಬ್ಬಿಣದ ಜಾಲರಿ ಗೇಟೆ ಎಗರಿ ಕಾಗದ ಪತ್ರಗಳ ಬಂಡಲ್‌ಗಳನ್ನು ತಾಲೂಕು ಕಚೇರಿ ಹಿಂಭಾಗಿಲಿನಿAದ ಕದ್ದು ಪರಾರಾರಿಗಿರುವುದು ಬೆಳಕಿಗೆ ಬಂದಿದೆ.
ತಾಲೂಕು ಕಚೇರಿಯ ಹಿಂಭಾಗಿನಲ್ಲಿ ಸೋಮವಾರ ಬೆಳಗ್ಗೆ ೧೦-೩೦ ರ ಸುಮಾರಿನಲ್ಲಿ ದಾಖಲೆಯ ಒಂದು ಬಂಡಲ್ ಬಿದ್ದಿರುವುದು ಸಾರ್ವಜನಿಕರು ಕಚೇರಿ ಸಿಬ್ಬಂದಿಗೆ ತಿಳಿಸಿದಾಗ ತಕ್ಷಣ ಬಿದ್ದಿರುವ ಬಂಡಲ್ ತೆಗೆದುಕೊಂಡು ಹೋಗಿ ದಾಖಲೆ ಕೊಠಡಿ ನೋಡಿದಾಗ ಕಳವಾಗಿರುವುದು ಪತ್ತೆಯಾಗಿದೆ.
ತಾಲೂಕು ಕಚೇರಿಯಲ್ಲಿ ಸಿ.ಸಿ ಕ್ಯಾಮರ ಇದ್ದರೂ ಸಹ ಕಳವಾಗಿರುವುದು ಸಾರ್ವಜನಿಕರು ಕಚೇರಿಗೆ ನೀಡಿದ ದಾಖಲೆ ಪತ್ರಗಳಿಗೆ ರಕ್ಷಣೆ ಇಲ್ಲದಂಗಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದು ಕೂಡಲೆ ಸಿ.ಸಿ ಕ್ಯಾಮರವನ್ನು ಪರಿಶೀಲನೆ ನಡೆಸಿ ಕಳವು ಮಾಡಿದ ಆರೋಪಿಯನ್ನು ಪತ್ತೆ ಮಾಡುವಂತೆ ಒತ್ತಾಯಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *