ಚಿತ್ರದುರ್ಗ (ಕರ್ನಾಟಕ ವಾರ್ತೆ)ಆಗಸ್ಟ್.03:
ತಾಯಿಯ ಎದೆ ಹಾಲು ಮಕ್ಕಳಿಗೆ ಪ್ರಥಮ ಲಸಿಕೆ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮದಕರಿಪುರ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಗು ಹುಟ್ಟಿದ ಒಂದು ಗಂಟೆಯ ಒಳಗೆ ಎದೆ ಹಾಲು ಉಣಿಸಬೇಕು ಮೊದಲ ಹಾಲಿನ ಹನಿಗಳು ಬಂಗಾರದ ಬಣ್ಣದಂತೆ ಇರುತ್ತದೆ ಇದಕ್ಕೆ ಕೊಲೆಸ್ಟಾಮ್ ಎನ್ನುತ್ತಾರೆ (ಗಿಣ್ಣು ಹಾಲು) ಮಗುವಿನ ರೋಗ ನಿರೋಧಕ ಶಕ್ತಿಯನ್ನು ತಂದುಕೊಡುತ್ತದೆ. ಎದೆಹಾಲನ್ನು ಬಿಟ್ಟು ಬೇರೆ ಏನನ್ನು ಕೊಡಬೇಡಿ. ಆಗತಾನೆ ಹುಟ್ಟಿದ ಮಕ್ಕಳು ಸೂಕ್ಷö್ಮವಾಗಿ ಇರುತ್ತವೆ. ಜೇನು ತುಪ್ಪ ನೆಕ್ಕಿಸುವುದು, ಸಕ್ಕರೆ ನೀರು ಕುಡಿಸುವುದು ಇವುಗಳನ್ನು ಮಾಡಲೇ ಬೇಡಿ. ನಿಮ್ಮ ಮಗುವನ್ನು ನೀವೆ ಸೋಂಕು ತಗುಲುವಂತೆ ಮಾಡಬೇಡಿ ಎಂದು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಜನರಿಗೆ ಜಾಗೃತಿ ಮೂಡಿಸಲು ಮತ್ತು ಎದೆಹಾಲಿನ ಮಹತ್ವ ಸಾರಲು ಪ್ರತಿ ವರ್ಷ ಆಗಸ್ಟ್ 1 ರಿಂದ ಆಗಸ್ಟ್ 7 ನೇ ತಾರೀಕಿನ ತನಕ ಒಂದು ಸಪ್ತಾಹ ರೂಪದಲ್ಲಿ ತಾಯಂದಿರ ಸಭೆ ನಡೆಸಿ ಮಾಹಿತಿ ಶಿಕ್ಷಣ ನೀಡಲಾಗುತ್ತದೆ ಎಂದರು.
ಮಕ್ಕಳಿಗೆ ಆರು ತಿಂಗಳವರೆಗೆ ಬೇರೇನನ್ನು ನೀಡದೇ ನಿರಂತರವಾಗಿ ಎದೆಹಾಲುಣಿಸುವ ಅಭ್ಯಾಸ ನಮ್ಮ ತಾಯಂದಿರು ಕಲಿಯಬೇಕು. ಎದೆಹಾಲುಣಿಸುವುದು ಮಕ್ಕಳಿಗಷ್ಟೇ ಅಲ್ಲದೇ ತಾಯಂದಿರಿಗೆ ಜನನಾಂತರದ ರಕ್ತಸ್ರಾವವನ್ನು ತಡೆಗಟ್ಟುತ್ತದೆ. ಕೆಲವರಿಗೆ ಗರ್ಭಕೋಶದ ಕ್ಯಾನ್ಸರ್ ಬರುವುದಿಲ್ಲ ಎನ್ನುವ ತಜ್ಞನರ ಅಭಿಪ್ರಾಯವಿದೆ. ಆರು ತಿಂಗಳ ನಂತರ ಮಕ್ಕಳಿಗೆ ಮೆದು ಆಹಾರ ನೀಡಲು ಪ್ರಾರಂಭಿಸಿ ಕಡೇ ಪಕ್ಷ ಎರಡೂ ವರ್ಷವಾದರು ಎದೆಹಾಲು ಉಣಿಸಿ ಸ್ವಾಸ್ಥö್ಯ ಸಮಾಜ ನಿರ್ಮಾಣ ಮಾಡಿ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಜರೀನಾ ಬೇಗಮ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾ ಬಿ.ಮೂಗಪ್ಪ, ಬಿ.ಜಾನಕಿ, ಸಮುದಾಯ ಆರೋಗ್ಯಾಧಿಕಾರಿ ರಶ್ಮಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಪವಿತ್ರ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಜ್ಯೋತಿ, ಪ್ರವೀಣ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ತಾಯಿ ಮಕ್ಕಳು ಭಾಗವಹಿಸಿದ್ದರು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments