ತರಬೇತಿ ಕಾರ್ಯಗಾರಕ್ಕೆ ಸುಮಾರು 12 ಗಂಟೆಯಾದರೂ ಬಾರದ ಮಹಿಳಾ ಸದಸ್ಯರು ದೂರವಾಣಿ ಕರೆ ಮಾಡಿ ಅಂಗಲಾಚುವ ಸಂಪನ್ಯೂಲ ವ್ಯಕ್ತಿಗಳು.

by | 16/12/23 | ಜನಧ್ವನಿ

ಚಳ್ಳಕೆರೆ ಜನಧ್ವನಿವಾರ್ತೆ ಡಿ 16 ಅಕ್ಕ ಬನ್ನಿ, ಮೇಡಂ ಬನ್ನಿ ಸಮಯ ಆಗ್ತಾ ಇದೆ ಎಂದು ಮಹಿಳಾ ಸಂನ್ಮೂಲ ವ್ಯಕ್ತಿಯೊಬ್ಬರು ದೂರವಾಣಿ ಮೂಲಕ ಕರೆಮಾಡಿ ಅಂಗಲಾಚುವ ದೃಶ್ಯ ಜನಧ್ವನಿ ಡಿಜಿಟಲ್ ಮೀಡಿಯಾ ಕಣ್ಣಿಗೆ ಬಿದ್ದ ದೃಶ್ಯ.


ಹೌದು ಇದು ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿರುವ ಸಮಾರ್ಥ್ಯ ಸೌಧದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ & ಪಂಚಾಯತ ರಾಜ್ ಸಂಸ್ಥೆ, ಮೈಸೂರು ಇವರ ಸಹಯೋಗದೊಂದಿಗೆ ಮಹಿಳಾ ಚುನಾಯಿತ ಪ್ರತಿನಿಧಿಗಳ ಉಪಗ್ರಹ ಆಧಾರಿತ ಪುನಶ್ವೇತನ-ಸಾಮರ್ಥ್ಯಾಭಿವೃದ್ಧಿ” ತರಬೇತಿ ಕಾರ್ಯಕ್ರಮಕ ನಿಗಧಿತ ಸಮಯಕ್ಕೆ ಬಾರದ ಸದಸ್ಯರಿಗೆ ಅಂಗಲಾಚುವ ದೃಶ್ಯ ಕಂಡು ಬಂತು.
ಗ್ರಾಪಂ ವ್ಯಾಪ್ತಿಯ ಮಹಿಳಾ ಸದಸ್ಯರಿಗೆ ಮೂರು ದಿನಗಳ ಕಾಲ ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಚರ್ಚೆ, ನೀವೇಶನ ಹಂಚಿಕೆ ಮಾಡುವುದು., ವಸತಿ ಯೋಜನೆ ಕಲ್ಪಿಸುವುದು, ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದು, ಕಣ್ಣಿನ ಆಧಾರದ ಮೇಲೆ ಕಲ್ಪಿದಿಕೊಡುವುದು, ಸಂಧ್ಯಾ ಸುರಕ್ಷಾ ಯೋಜನೆಯನ್ನು ಕಲ್ಪಿಸಿಕೊಡುವುದು,ಶೌಚಾಲಯ ನಿರ್ಮಿಸಿಕೊಡುವುದು ಸೇರಿದಂತೆ ಗ್ರಾಮೀಣ ಬಡಜರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸಂಪನ್ಯೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ ಇಂತಹ ಮಹತ್ವದ ತರಬೇತಿ ಕಾರ್ಯಕ್ರಮಕ್ಕೆ ನಿಗಧಿತ ಸಮಯಕ್ಕೆ ಬಾರದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.


ನಗರದ ತಾಪಂ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಬೆಳಗ್ಗೆ 10 .30 ರಿಂದ 5ಯ ರವರಗೆ 40 ಮಹಿಳಾ ಸದಸ್ಯರಿಗೆ ಪ್ರತಿ ನಿತ್ಯ ಮೂರು ಗ್ರಾಪಂ ವ್ಯಾಪ್ತಿಯವರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಶನಿವಾರ ನೇರಲಗುಂಟೆ, ಪಗಡಲಬಂಡೆ, ಸಾಣೀಕೆರೆ, ಎನ್ .ದೇವರಹಳ್ಳಿ ಗ್ರಾಮಪಂಚಾಯಿತಿ ಗಳಿಂದ ತರಬೇತಿಗೆ ಬರಬೇಕಿತ್ತಿ ಆದರೆ ಸುಮಾರು 12 ಗಂಟೆಯಾದರೂ ತರಬೇತಿ ಕಾರ್ಯಗಾರದ ಕಡೆ ಸದಸ್ಯರು ಸುಳಿಯದೇ ಇರುವುದರಿಂದ ಮಹಿಳಾ ಸಂನ್ಮೂಲ ವ್ಯಕ್ತಿ ರೀನಾ ಗ್ರಾಪಂ ಸದಸ್ಯರಿಗೆ ದೂರವಾಣಿ ಕರೆ ಮಾಡಿ ಅಂಗಲಾಚುವ ದೃಶ್ಯ ಕಂಡು ಬಂತು.
ತರಬೇತಿಗೆ ಬರುವ ಮಹಿಳಾ ಸದಸ್ಯರಿಗೆ ದಿನಕ್ಕೆ 300 ರೂ ಸಹಾಯಧನ. ಎರಡು ಬಾರಿ ಕಾಫಿ, ಮಧ್ಯಹ್ನಾದ ಊಟ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ ಆದರೂ ಸಹ ಇಂತಹ ನೀಡಲಾಗುತ್ತಿದೆ ಎನ್ನಲಾಗಿದೆ.

ಸರಕಾರ ಮಹಿಳೆಯರ ಸಬಲೀಕರಣ ಮತ್ತು ಜಾಗೃತಿಗೊಳಿಸಲು ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರ ಮಾಹಿತಿ ಮಹಿಳೆಯರಿಗಿಲ್ಲ. ಜತೆಗೆ ಗ್ರಾಮದ ಸರ್ವತೋಮುಖ ಬೆಳವಣಿಗೆಗಾಗಿ ತರಬೇತಿ ನೀಡಲಾಗುತ್ತಿದೆ ಇಂತಹ ಅಮೂಲ್ಯವಾದ ತರಬೇತಿ ಕಾರ್ಯಗಾರಕ್ಕೆ ನಿಗಧಿತ ಸಮಯದೊಳಗೆ ಜನಪ್ರತಿನಿಧಿ ಮಹಿಳಾ ಸದಸ್ಯರು ಇನ್ನು ಮುಂದೆಯಾದರೂ ನಿಗಧಿತ ಸಮಯಕ್ಕೆ ಹಾಜರಾರಿ ಮಾಹಿತಿ ಪಡೆದು ಗ್ರಾಮೀಣ ಜನರ ಸೇವೆಗೆ ಮುಂದಾಗುವರೇ ಕಾದು ನೋಡ ಬೇಕಿದೆ.

Latest News >>

ಹಾಸ್ಯನಟ ಸಂಗೀತ ನಿರ್ದೇಶಕ ಸಾಧುಕೋಕಿಲ ಸೂರನಹಳ್ಳಿ ಗ್ರಾಮಕ್ಕೆ ಭೇಟಿ.

ಚಳ್ಳಕೆರೆ ಜು.14ಚಳ್ಳಕೆರೆ ತಾಲೂಕಿನ‌ ಸೂರನಹಳ್ಳಿ‌ಗ್ರಾಮದ ಶ್ರೀ ಆಂಜನೇಸ್ವಾಮಿ ದೇವಸ್ಥಾನ ಕ್ಕೆ ಹಾಸ್ಯನಟ, ಸಂಗೀತಗಾರ, ಚಲನಚಿತ್ರ ನಿರ್ದೇಶಕ...

ಮೊಳಕಾಲ್ಮೂರಿಗೆ ಇಎಸ್ ಐ ಆಸ್ಪತ್ರೆ ಹಾಗೂ ಜವಳಿ ಪಾರ್ಕ್ ಮಂಜುರಾತಿ ನೀಡುವಂತೆ ಕೇಂದ್ರ ಸಚಿವರಿಗೆ ಜೆ.ಡಿ.ಎಸ್ ಮುಖಂಡ ಟಿ.ವೀರಭದ್ರಪ್ಪ ಮನವಿ

ಬೆಂಗಳೂರು ಜು. 14ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವು ತುಂಬಾ ಹಿಂದುಳಿದ ಪ್ರದೇಶವಾಗಿದ್ದು ಹಾಗೂ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಇಲ್ಲಿ...

ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಮಾಳಜ್ಜಯ್ಯನವರಿಗೆ ಸನ್ಮಾನ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ ,

ನಾಯಕನಹಟ್ಟಿ. ಜುಲೈ 14 . ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗ್ರಾಮೀಣ ಪ್ರದೇಶದ ರೈತರಿಗೆ ಸಹಕಾರವಾಗಲಿ ಎಂದು ಪಟ್ಟಣ...

ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮತದಾನ ಮಾಡಲು ಸರತಿ ಸಾಲಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಚಳ್ಳಕೆರೆ ಜು.13 ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು...

ಲೋಕ ಅದಾಲತ್ ಮೂಲಕ ಪ್ರಕರಣಗಳು ಇತ್ಯರ್ಥ ಗೊಂಡರೆ ದ್ವೇಷ ಭಾವನೆ ದೂರವಾಗಿ ಸಂಬಂಧಗಳು ಸುಧಾರಿಸಲಿವೆ: ಕೆಎಂ ನಾಗರಾಜ್ 

ಚಳ್ಳಕೆರೆ: ಲೋಕ ಅದಾಲಾತ್ ಕಾರ್ಯಕ್ರಮವು ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಇಡೀ ದೇಶದಾದ್ಯಂತ ನಡೆಯುತ್ತಿದ್ದು ಕಕ್ಷಿದಾರರು ಇದರ...

ಕರ್ನಾಟಕರಾಜ್ಯವೆಂದು ನಾಮಾಕರಣ ಮಾಡಿ 50ವರ್ಷಗಳುಸಂದ ಹಿನ್ನಲೆಯಲ್ಲಿ ಇಂದು ಸುವರ್ಣಾಕರ್ನಾಟಕಉತ್ಸವವನ್ಆಚರಿಸುತ್ತಿದ್ದೇವೆ:ತಹಶೀಲ್ದಾರ್ ರಾಜೇಶ್ ಕುಮಾರ್

ಹಿರಿಯೂರು: ಅಂದಿನ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಾಕರಣ ಮಾಡಿ 50 ವರ್ಷಗಳು ಸಂದ...

ಪತ್ರಿಕಾ ದಿನಾಚರಣೆಯಲ್ಲಿ ಸಚಿವ ಡಿ.ಸುಧಾಕರ್ ಹೇಳಿಕೆಸತ್ಯಕ್ಕೆ ಹತ್ತಿರವಾದ ಸುದ್ದಿಗಳಿಗೆ ಮಾತ್ರ ಜನಮನ್ನಣೆ

ಚಿತ್ರದುರ್ಗ ಜುಲೈ.13: ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸತ್ಯಕ್ಕೆ ಹತ್ತಿರವಾದ ಸುದ್ದಿಗಳಿಗೆ ಮಾತ್ರ ಜನಮನ್ನಣೆ...

ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸೂಚನೆ ಡೆಂಗ್ಯೂ ಪರೀಕ್ಷೆ: ಖಾಸಗಿ ಲ್ಯಾಬ್‍ಗಳು ವಿಧಿಸುವ ದರ ಸಾರ್ವಜನಿಕರಿಗೆ ಹೊರೆಯಾಗದಿರಲಿ

ಚಿತ್ರದುರ್ಗ ಜು.13 ಡೆಂಗ್ಯೂ ಪರೀಕ್ಷೆಗೆ ಖಾಸಗಿ ನರ್ಸಿಂಗ್ ಹೋಂ, ಲ್ಯಾಬ್‍ಗಳು ವಿಧಿಸುವ ದರದ ಬಗ್ಗೆ ನಿಗಾವಹಿಸಿ, ಸರ್ಕಾರ ನಿಗಧಿಪಡಿಸಿದ ದರ...

ಡಾ. ಬಾಬು ಜಗಜೀವನ್ ರಾಮ್ ಭವನ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಹಾಗೂ ಸಂಶೋಧಕರ ಕೇಂದ್ರವಾಗಿ ಹೊರಹೊಮ್ಮಲಿ. ಹಿರಿಯ ದಲಿತ ಮುಖಂಡ ತೊರೆಕೋಲಮ್ಮನಹಳ್ಳಿ ಆರ್. ಬಸಪ್ಪ,

ನಾಯಕನಹಟ್ಟಿ:: ಜುಲೈ 13 . ಡಾ. ಬಾಬು ಜಗಜೀವನ್ ರಾಮ್ ಸಂಶೋಧನ ಕೇಂದ್ರ ರಾಜ್ಯದ ದಲಿತ ಜನಾಂಗದ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಅಧ್ಯಯನ...

ಪ್ರತಿಭೋತ್ಸವದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ವಿದ್ಯಾರ್ಥಿಗಳು ವೈಯಕ್ತಿಕ ಹಿತಾಸಕ್ತಿ ಅರಿತು ಉದಯೋನ್ಮುಖರಾಗಿ ಬೆಳೆಯಬೇಕು

ಚಿತ್ರದುರ್ಗ ಜುಲೈ.12: ವಿದ್ಯಾರ್ಥಿಗಳು ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತಮ್ಮ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page