ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಪೌರಕಾರ್ಮಿಕರು ಬಂದು ಸ್ವಚ್ಛಗೊಳಿಸಲಿ ಎಂಬ ಅಸಡ್ಡೆತನ ಬಿಟ್ಟು ತಾವೇ ಸ್ವಚ್ಛಗೊಳಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಷ್ಮೆ ಕಲಕಪ್ಪ ಗೋಣಿ

by | 31/01/23 | ಜನಧ್ವನಿ

ಚಳ್ಳಕೆರೆ ಜನಧ್ವನಿ ವಾರ್ತೆ ಜ.31ಪ್ರಸ್ತುತ ದಿನಗಳಲ್ಲಿ ನಗರದ ಸ್ವಚ್ಛತಾ ಕಾರ್ಯವು ಸವಾಲಿನ ರೂಪದಲ್ಲಿದ್ದು, ಪ್ರತಿಯೊಬ್ಬ
ನಾಗರೀಕರು ಸ್ವ-ಇಚ್ಛೆಯಿಂದ ನಗರ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಪೌರಕಾರ್ಮಿಕರು ಮತ್ತು
ನಗರಸಭೆಯೊಂದಿಗೆ ಸಹಕರಿಸುವ ಜತೆಗೆ ಕಂಡ ಕಂಡಲ್ಲಿ ಉಗುಳುತ್ತಾ ಗಲೀಜು ಮಾಡದಂತೆ ವ್ಯಾಪಾರಸ್ಥರು
ಹಾಗೂ ಸಾರ್ವಜನಿಕರಿಗೆ , ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಷ್ಮೆ ಕಲಕಪ್ಪ ಗೋಣಿ ಕಿವಿಮಾತು ಹೇಳಿದರು.
ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಪೌರಕಾರ್ಮಿಕರು ಬಂದು ಸ್ವಚ್ಛಗೊಳಿಸಲಿ ಎಂಬ ಅಸಡ್ಡೆತನ ಬಿಟ್ಟು ತಾವೇ ಸ್ವಚ್ಛಗೊಳಿಸಿಕೊಂಡರೆ ಪೌರಕಾರ್ಮಿಕರ ಆರೋಗ್ಯವನ್ನು ಕಾಪಾಡಿದಂತಾಗುತ್ತದೆ ಹಾಗೂ ಪರಿಸರವನ್ನು ಸ್ವಚ್ಛ ಮಾಡಿದ ಖುಷಿ ದೊರೆಯುತ್ತದೆ ಇದರಿಂದ ಸಮಾಜಕ್ಕೆ ಉತ್ತಮ ರೀತಿಯ ಸಂದೇಶ ನೀಡಲು ನೆರವಾಗುತ್ತದೆ ಎಂದು ತಾಲೂಕಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ರೇಷ್ಮ ಕಲಕಪ್ಪ ಗೋಣೆ  ಅಭಿಪ್ರಾಯಪಟ್ಟರು.

ನಗರದ ಸಂತೆ ಮೈದಾನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಹಾಗೂ ನಗರ ಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ದಿನಾಚರಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪೌರಕಾರ್ಮಿಕರನ್ನು ತುಚ್ಛ ಮನೋಭಾವದಿಂದ ಕಾಣದೆ ಗೌರವಹಿತವಾಗಿ ಕಾಣುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು ಅವರು ಸಹ ನಮ್ಮಂತೆ ಮನುಷ್ಯರು ಎಂಬ ಭಾವನೆ ಮೂಡಿಸಿಕೊಂಡು ಸಮಾಜದ ಒಳಿತಿಗಾಗಿ ಹಾಗೂ ಪರಿಸರದ ಹಿತದೃಷ್ಟಿಯಿಂದ ಪೌರ ಕಾರ್ಮಿಕರ ಜೊತೆ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದಾಗ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.

ಅಪರ ಸಿವಿಲ್ ನ್ಯಾಯದೀಶ ಗೌಡ ಜಗದೀಶ ರುದ್ರೆ ಮಾತನಾಡಿ ಭೂಮಿ ಎಂಬ ನಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ತಾಲೂಕಿನಲ್ಲಿ 70 ಸಾವಿರ ಜನಸಂಖ್ಯೆ ಇದ್ದು ನಗರಸಭೆಯಲ್ಲಿ ಕೇವಲ 70 ಜನ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಇದರಿಂದಾಗಿ ನಗರದ ಸ್ವಚ್ಛತೆ ಮಾಡಲು ಅವರನ್ನು ಅತಿಯಾಗಿ ಆಶ್ರಯಿಸುವುದನ್ನು ಬಿಡಬೇಕು ನಮ್ಮ ಕೈಲಾದಷ್ಟು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಅವರ ಕೆಲಸದ ಒತ್ತಡ ಕಡಿಮೆಯಾಗಿ ಅವರು ಸಹ ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ ಎಂದರು

ನಗರಸಭೆ ಉಪಾಧ್ಯಕ್ಷೆ ಮಂಜುಳ ಪ್ರಸನ್ನ ಕುಮಾರ್ ಮಾತನಾಡಿ ನಗರದಲ್ಲಿ ಸ್ವಚ್ಛತೆ ಕಾಪಾಡಲು ನಗರಸಭೆ ವತಿಯಿಂದ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರು ಹಾಗೂ ವರ್ತಕರು ಎಲ್ಲೆಂದರಲ್ಲಿ ಕಸವನ್ನು ಬಿಸಾಡುವ ಬದಲು ಮನೆ ಬಾಗಿಲಿಗೆ ಕಸದ ವಾಹನ ಬರುತ್ತಿದ್ದು ಜನರು ತಮ್ಮ ಮನೆಗಳಲ್ಲಿನ ಕಸವನ್ನು ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ವಾಹನ ಬಂದಾಗ ಕೊಟ್ಟು ಸಹಕರಿಸಿದಾಗ ಮಾತ್ರ ನಗರದ ಸ್ವಚ್ಛತೆಯನ್ನು ಕಾಪಾಡಿ ಸಾಂಕ್ರಾಮಿಕ ರೋಗಗಳಿಂದ ಜನರನ್ನು ಮುಕ್ತಗೊಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ . ವಕೀಲರ ಸಂಘದ ಅಧ್ಯಕ್ಷ ಜಿ.ಎಂ ಆನಂದಪ್ಪ ಪೌರಾಯುಕ್ತ ಸಿ ಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *