ಚಳ್ಳಕೆರೆ ಜನಧ್ವನಿ ವಾರ್ತೆ.ಅ16. ಗ್ರಾಮ ಪಂಚಾಯಿತಿ ಅಧಿಕಾರಿಗಳ ಇಚ್ಛಾಶಕ್ತಿಯಿಂದ ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಗ್ರಂಥಾಲಯಗಳು ತಲೆ ಎತ್ತಿ ನಿಂತಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮಪಂಚಾಯತ್ ಕಚೇರಿ ಆವರಣದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ತಂತ್ರಜ್ಞಾನವನ್ನು ಮುಟ್ಟಿಸುವ ದೃಷ್ಟಿಯಿಂದ ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಡಿಜಿಟಲ್ ಗ್ರಂಥಾಲಯ ನೋಡಿದರೆ ಅಧಿಕಾರಿಗಳು.ಜನಪ್ರತಿನಿಧಿಗಳ ಇಚ್ಚಾಶಕ್ತಿ ಇದ್ದರೆ ಏನೆಲ್ಲ ಅಭಿವೃದ್ಧಿ ಮಾಡ ಬಹುದು ಎನ್ನುವುದಕ್ಕೆ ನಗರಂಗೆರೆ ಗ್ರಾಮಪಂಚಾಯತ್ ಸಾಕ್ಷಿಯಾಗಿದೆ. ಗ್ರಾಮ ಪಂಚಾಯಿತಿ ಕೇಂದ್ರದ ಆವರಣದಲ್ಲಿನ ಗ್ರಂಥಾಲಯಕ್ಕೆ ಡಿಜಿಟಲ್ ಟಚ್ ನೀಡಲಾಗಿದ್ದಯ ವಿವಿಧ ರೀತಿಯ ಸೌಲಭ್ಯಗಳು ಓದುಗರನ್ನು ಕೈಬೀಸಿ ಕರೆದು ಆಕರ್ಷಿಸುವಂತಿದೆ. ಜಿಲ್ಲಾ ಪಂಚಾಯಿತಿ ಸಿಇಒ ಅವರ ಮಾರ್ಗದರ್ಶನ .ತಾಲೂಕು ಪಂಚಾಯಿತಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮಪಂಚಾಯಿತಿ ಜನಪ್ರತಿನಿಧಿಗಳು .ಪಿಡಿಒ ಇವರ ಸತತ ಪರಿಶ್ರಮದಿಂದ ಮಾದರಿ ಡಿಜಿಟಲ್ ಗ್ರಂಥಾಲಯವಾಗಿ ಹೊರಹೊಮ್ಮಿದೆ.
ಗ್ರಾಮೀಣ ಭಾಗದ ಗ್ರಂಥಾಲಯ ಎಂದರೆ ಹಳೆ ಕಟ್ಟಡ, ಧೂಳು ತಿಂದ ಪುಸ್ತಕಗಳು ಇರುತ್ತವೆ ಎನ್ನೋ ಭಾವನೆ ಎಲ್ಲರಲ್ಲೂ ಇರುತ್ತೆ. ಆದ್ರೆ ಅಧಿಕಾರಿಗಳ ಆಸಕ್ತಿಯಿಂದ ಅಂತಹ ಭಾವನೆ ದೂರವಾಗಿದೆ. ಗ್ರಾಮದ ಡಿಜಿಟಲ್ ಗ್ರಂಥಾಲಯದಲ್ಲಿ ಕುಳಿತುಕೊಂಡು ಓದಲು.ಕಂಪ್ಯೂಟರ್ ನೋಡಲು ಕುರ್ಚಿಗಳ ವ್ಯವಸ್ಥೆ ಆನ್‌ಲೈನಲ್ಲೇ ಉದ್ಯೋಗ. ಸ್ಪರ್ಧ ಪರೀಕ್ಷೆಗಳಿಗೆ ಅಗತ್ಯ ಮಾಹಿತಿ ನೋಡಲು. ಅರ್ಜಿ ಸಲ್ಲಿಸುವ ವ್ಯವಸ್ಥೆ ಕುಳಿತುಕೊಂಡು ಪ್ರಪಂಚದಲ್ಲಿರುವ ಎಲ್ಲಾ ಪುಸ್ತಕದ ಮಾಹಿತಿಯನ್ನು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಮೊಬೈಲ್ ಹಾವಳಿಗೆ ಮರೆಮಾಚುತ್ತಿರುವ ಹವ್ಯಾಸಗಳಲ್ಲಿ ಓದುವ ಹವ್ಯಾಸ ಸಹ ಒಂದು. ಈ ಹಿಂದೆ ಪ್ರತಿ ಗ್ರಾಮಕ್ಕೆ ಒಂದು ಗ್ರಂಥಾಲಯಗಳಿದ್ದವು. ಗ್ರಾಮದ ಜನರು ದಿನಪತ್ರಿಕೆ ವಾರಪತ್ರಿಕೆ ಮಾಸಿಕ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆ ಓದಲು ಗ್ರಂಥಾಲಯಕ್ಕೆ ಬರುತ್ತಿದ್ದರು. ಅದರ ಜೊತೆಗೆ ಕನ್ನಡ ನುಡಿಯ ಗ್ರಂಥಗಳು ಗ್ರಂಥಾಲಯದಲ್ಲಿ ಸಿಗುತ್ತಿದ್ದವು. ಕವನಸಂಕಲನ, ಕಾದಂಬರಿ, ಕಾವ್ಯ ಪ್ರಭಂದಗಳು ಕಾದಂಬರಿಗಳು ಕಥಾಸಂಕಲನ ಸೇರಿದಂತೆ ವಿವಿಧ ಪ್ರಕಾರದ ಗ್ರಂಥಗಳು ಗ್ರಂಥಾಲಯದಲ್ಲಿ ಸಿಗುತ್ತಿದ್ದವು. ಅಷ್ಟೇ ಯಾಕೆ ಕನ್ನಡದ ಆದಿಕವಿಗಳಿಂದ ಹಿಡಿದು ಇತ್ತಿಚೀನ ಲೇಖಕರ ಗ್ರಂಥಗಳು ಸಹ ಗ್ರಂಥಾಲಯದಲ್ಲಿ ಸಿಗುತ್ತಿದ್ದವು. ಜನ ಇವುಗಳನ್ನು ಓದಲು ಗ್ರಂಥಾಲಯದ ಮೆಂಬರಶಿಪ್ ಪಡೆದು ಪುಸ್ತಕ ಎರವಲು ಪಡೆದು ಮನೆಗೆ ತಂದು ಓದುವ ಹವ್ಯಾಸ ಇಟ್ಟುಕೊಂಡಿದ್ದರು. ಇತ್ತೀಚೆಗೆ ಅವುಗಳ ನಿರ್ವಹಣೆ ಇಲ್ಲದೆ ಮುಚ್ಚುವ ಹಂತಕ್ಕೆ ತಲುಪಿದ್ದವು ಇತ್ತೀಚೆ ಸರಕಾರ ಅವುಗಳನ್ನು ಗ್ರಾಮಪಂಚಾತಿ ಮಡಿಲಿಗೆ ವಹಿಸಿದ್ದು ಗ್ರಂಥಪಾಲಕರನ್ನು ಗ್ರಾಪಂ ಸಿಬ್ಬಂದಿ ಎಂದು ಗ್ರಾಪಂಗಳಿಗೆ ವಹಿಸಿತು. ಗ್ರಂಥಲಾಯಕ್ಕೆ ಶಾಸಕರ ನಿಧಿ.
ಗ್ರಾಮಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಶಾಸಕ ಟಿ.ರಘುಮೂರ್ತಿ 15 ಲಕ್ಷ ಅನುದಾನ ನೀಡಿದ್ದಾರೆ. ಜನತೆ ಗ್ರಾಮಪಂಚಾಯಿತಿ ಅನುದಾನ ಖರ್ಚು ಮಾಡುವ ಮೂಲಕ ಸುಸಜ್ಜಿತವಾದ ಹೈಟೆಕ್ ಡಿಜಿಟಲ್ ಗ್ರಂಥಾಲಯ ಮಾಡಲಾಗಿದೆ. ಕಟ್ಟಡದ ಒಳಗೆ ಹೊರಗೆ ವಿವಿಧ ನಮೂನೆಯ ಚಿತ್ರಗಳೊಂದಿಗೆ ಬಣ್ಣ ಬಳಿಸುವ ಮೂಲಕ ಮೆರಗು ನೀಡಲಾಗಿದೆ ಓದುಗರನ್ನು ಜ್ಞಾನಾರ್ಜನೆಗೆ ಕೈಬೀಸಿ ಕರೆಯುವಂತೆ ಮಾಡಲಾಗಿದೆ.
ಗ್ರಾಪಂ ಪಿಡಿಒ ರಾಮಚಂದ್ರಪ್ಪ ಮಾತನಾಡಿ ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡುವ ಮೂಲಕ ಶಾಲಾ ಕಾಲೇಜ್. ನಿರುದ್ಯೋಗಿ ಯುವಕರಿಗೆ ಉದ್ಯೋಗ ಮಾಹಿತಿ. ವಿವಿಧ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಸಹಕಾರಿಯಾಗುವಂತೆ ಕಂಪ್ಯೂಟರ್. ಪ್ರಿಂಟರ್.ಜೆರಾಕ್ಸ್ .ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಘನತ್ಯಾಜ್ಯ. ಸ್ವಚ್ಚ. ಶೌಚಾಲಯ ಬಗ್ಗೆ ಅರಿವು ಮೂಡಿಸಲಾಗುವುದು ನಿರುಒಯುಕ್ತ ವಸ್ತುಗಳಿಂದ ಅಗತ್ಯ ವಸ್ತುಗಳ ತಯಾರಿಸಿ ನರುಬಳಕೆ ಮಾಡುವ ಬಗ್ಗೆ ತರಬೇತಿ ನೀಡಲಾಗುವುದು ಡಿಜಿಟಲ್ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ.ರೈತರಿಗೆ ಹೆಚ್ಚಿನ ಜ್ಞಾನಾರ್ಜನೆಯಾಗುವಂತಹ ಪುಸ್ತಕಗಳನ್ನು ಇಲ್ಲಿ ಸಂಗ್ರಹಸಲಾಗಿದೆ ವಿದ್ಯಾರ್ಥಿಗಳು.ನಿರುದ್ಯೊಗಿ ಯುವಕರು ಹಾಗೂ ಗ್ರಾಮದ ನಾಗರಿಕರು ಹೆಚ್ವಿನ ಸಂಖ್ಯೆಯಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಣದಲ್ಲಿ ಪ್ರಗತಿಸಾಧಿಸುವಂತೆ ಪಿಡಿಒ ರಾಮಚಂದ್ರಪ್ಪ ಮನವಿ ಮಾಡಿಕೊಂಡಿದ್ದಾರೆ.
0 Comments