ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಮಾಜಿ ಮುಖ್ಯ ಮಂತ್ರಿ ಎಚ್. ಡಿ.ಕುಮಾರಸ್ವಾಮಿ

by | 09/04/23 | ಚುನಾವಣೆ-2023ಚಳ್ಳಕೆರೆ ಜನಧ್ವನಿ ಏ.9
ವಿಧಾನಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದದಿಂದ ಅಧಿಕಾರ ಹಿಡಿದ ಕೇವಲ ಒಂದು ಗಂಟೆಯೊಳಗೆ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತೇನೆ. ಕೊಟ್ಟ ಮಾತನ್ನು ತಪ್ಪಿದರೆ ಜಾತ್ಯತೀತ ಜನತಾದಳವನ್ನು ವಿಸರ್ಜಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನುಡಿದರು.
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತುರುನೂರು ಹೋಬಳಿ ಕೇಂದ್ರದಲ್ಲಿ ಪಂಚರತ್ನಯಾತ್ರೆ ಬಹಿರಂಗಸಭೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡುವಂತೆ ಮನವಿ ಮಾಡಿಕೊಂಡರು.

ಗAಡು ಮೆಟ್ಟಿನ ನಾಡು ಸ್ವಾತಂತ್ರö್ಯ ಹೋರಾಟಗಾರರ ತವರು ತುರುನೂರು ಗ್ರಾಮದಲ್ಲಿ ಗಾಂಧಿಜೀಯವರ ಪುತ್ತಳಿ ಇದ್ದು ಇಂತಹ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಬಹುದಿನ ಬೇಡಿಕೆಯಾಗಿದ್ದು ನನ್ನ ಅಧಿಕಾರ ಅವಧಿಯಲ್ಲಿ ಹೊಸ ತಾಲೂಕು ಕೇಂದ್ರಗಳನ್ನು ಘೋಷಣೆ ಮಾಡಿದ್ದೇನೆ ಆ ಸಂದರ್ಭದಲ್ಲಿ ಇದು ನನ್ನ ಗಮನಕ್ಕೆ ಯಾರು ತಂದಿಲ್ಲ ತಂದಿದ್ದಾರೆ ಆಗಲೇ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುತ್ತಿದ್ದೆ ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಿದರೆ ತುರುನೂರು ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲಾಗುವುದು ,


ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ. ರವೀಶ್‌ಕುಮಾರ್ ಕೇವಲ ೫ ಸಾವಿರ ಮತಗಳ ಹಂತದಲ್ಲಿ ಸೋತಿದ್ದಾರೆ ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್‌ಕುಮಾರ್ ಗೆಲವು ತಂದು ಕೊಟ್ಟರೆ ಹಾಗೂ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದರ ರೈತರ ಸಾಲ ಮನ್ನ, ಮಹಿಳಾ ಸ್ವಸಹಾಯ ಸಂಘಗಳ ಸಾಲಮನ್ನ, ಎಲ್‌ಕೆಜೆ ಯಿಂದ ಪಿಯುಸಿ ವರೆಗೆ ಸರಕಾರಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಇಂಗ್ಲೀಸ್ ಮಾಧ್ಯಮ , ಸರಕಾರಿ ಶಾಲೆಗಳ ಅಭಿವೃದ್ಧಿ, ಪ್ರತಿ ಗ್ರಾಪಂ ಕೇಂದ್ರದಲ್ಲಿ 30 ಹಾಸಿಗೆ ಆಸ್ಪತ್ರೆ, ಉಚಿತ ಚಿಕಿತ್ಸೆ, ಕ್ಯಾನ್ಸ್ರ್ ಸೇರಿದಂತೆ ಮಾರಕ ಖಾಯಿಲೆ, ಕಿಡ್ನಿ ಸೇರಿದಂತೆ ಹಲವು ಗಂಬೀರ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ, ರೈತರಿಗೆ ಬೀಜ ಗೊಬ್ಬರ ಖರೀದಿಗೆ ಪ್ರತಿ ರೈತರ ಖಾತೆಗೆ 19ಸಾವಿರ ಉಚಿತವಾಗಿ ನೀಡುವುದು ಸೇರಿದಂತೆ ಹಲವು ಜನ ಪ್ರರ ಯೋಜನೆಗಳನ್ನು ಜಾರಿಗೊಳಿಸಲಾಗುವುದು.


ರಾಜ್ಯದ ಬಡವರು, ರೈತಾಪಿ ಜನರ ಬದುಕು ಹಸನಾಗಿಸಲು ಪಂಚರತ್ನ ಯೋಜನೆ ಅತ್ಯವಶ್ಯಕವಾಗಿದೆ. ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಇಲ್ಲ. ರೈತರನ ಬದುಕು ಅತಂತ್ರವಾಗಿದೆ. ಬೆಲೆ ಏರಿಕೆ, ಮಕ್ಕಳ ಶಿಕ್ಷಣ, ಅನಾರೋಗ್ಯ ಸಮಸ್ಯೆ, ವಸತಿ ಸೇರಿದಂತೆ ಹಲವಾರು ಸವಾಲುಗಳು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ರೈತ ಎಂದಿಗೂ ಸಾಲಗಾರರಾಗದ ರೀತಿಯಲ್ಲಿ ಕಾರ್ಯಕ್ರಮ ರೂಪಿಸುವುದೇ ನನ್ನ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಕಳೆದ ೨೦೧೮ರ ಚುನಾವಣೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದಂತೆ ಎಲ್ಲ ವರ್ಗದ ೨೮ ಸಾವಿರ ಕೋಟಿ ಮನ್ನಾ ಮಾಡಿದ್ದೇನೆ. ಈ ಬರೀ ಸಾಲ ಮನ್ನಾ ಮಾಡುವ ಯೋಜನೆ ರೂಪಿಸಿಲ್ಲ. ಬದಲಾಗಿ ರೈತರನ್ನೇ ಸಾಲಗಾರರಾಗದಂತೆ ಕಾರ್ಯಕ್ರಮ ರೂಪಿಸಿ ೨೫ ಸಾವಿರ ಕೋಟಿ ಯೋಜನೆ ತಯಾರಿಸಿದ್ದೇನೆ. ಇದೆಲ್ಲವೂ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಹೊಂದಾಣಿಕೆಯಿAದ ಸಾಧ್ಯವಾಗುವುದಿಲ್ಲ. ಆದ್ದರಿಂದ ಜಾತ್ಯತೀತ ಜನತಾ ದಳಕ್ಕೆ 123 ಸ್ಥಾನ ಗೆಲ್ಲಿಸಿ ಪೂರ್ಣಾವಧಿ ಸರ್ಕಾರವನ್ನು ರೂಪಿಸಲು ಅವಕಾಶ ಮಾಡಿಕೊಡಿ ಎಂದು ಕೋರಿದರು.


ಚಳ್ಳಕೆರೆ ಬಯಲು ಪ್ರದೇಶದ ಇಲ್ಲಿ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ ಬೆಳೆಯುತ್ತಾರೆ ಸುಮಾರು ೨೦ ವರ್ಷಗಳಿಂದ ಸಕಾಲಕ್ಕೆ ಮಳೆ ಬೆಳೆಯಲಿಲ್ಲದೆ ರೈತರ ಸಾಲದ ದವಡೆಗೆ ಸಿಲುಕಿದ್ದಾರೆ. ಶೇಂಗಾ ಬೆಳೆಯಿಲ್ಲದೆ ಎಣ್ಣೆ ಮಿಲ್‌ಗಳು ಮುಚ್ಚಿ ಹೋಗಿದ್ದು ಇತ್ತು ಉದ್ಯೋಗವೂ ಇಲ್ಲದೆ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಜೆಡಿಎಸ್ ಸರಕಾರ ಬಂದ ತಕ್ಷಣ ಮತ್ತೆ ರೈತರಿಗೆ ಹಾಗೂ ಎಣ್ಣೆ ಮಿಲ್‌ಗಳಿಗೆ ಮರು ಜೀವ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮೀಣರ ಬದುಕು ದುರ್ಭರವಾಗಿದೆ. ಬದುಕು ನಡೆಸಲು ಸಾಲ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಅವರಿಗೆ ವೈದ್ಯಕೀಯ ಸೌಲಭ್ಯ ದೊರೆಯುತ್ತಿಲ್ಲ. ಗ್ರಾಮೀಣ ಜನತೆಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ. ರೈತರ ಉತ್ಪನ್ನಗಳಿಗೆ ವೈಜ್ಞಾನಿಕವಾದ ಬೆಲೆ ದೊರೆಯಬೇಕು. ಯುವಕರು ಸ್ವಾವಲಂಬಿಗಳಾಗಬೇಕು. ರಾಜ್ಯ ವಾಸಿಗಳ ಬದುಕು ನೆಮ್ಮದಿಯುತ ವಾಗಿರಬೇಕೆಂಬ ಚಿಂತನೆಯ ಫಲವೇ ಪಂಚರತ್ನ ಯೋಜನೆ. ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವ ಶಕ್ತಿಯನ್ನು ಜನತೆ ನೀಡಿದರೆ ಈ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇನೆ ಎಂದು ಹೇಳಿದರು.
ಬಹಿರಂಗ ಸಭೆಯಲ್ಲಿ ಚಳ್ಳಕೆರೆ ವಿಧಾನ ಸಭೆ ಕ್ಷೇತ್ರದ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮಾತನಾಡಿದರು . ಸಭೆಯಲ್ಲಿ ಜಿಲ್ಲಾ ಹಾಗೂ ಕ್ಷೇತ್ರದ ಜೆಡಿಎಸ್ ಮುಖಂಡರು ಕಾರ್ಯಕರ್ತರು ಹಾಗೂ ಹೋಬಳಿ ಕೇಂದ್ರದಿAದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು,
ತುರುನೂರು ಹೋಬಳಿ ಕೇಂದ್ರದಲ್ಲಿ ಬಹಿರಸಂಗ ಸಭೆ ನಂತರ ಕುನಬೇವು, ಬೆಳಗಟ್ಟ, ಹಾಯ್ಕಲ್, ಪೇಲರಹಟ್ಟಿ, ರಾಮಜೋಗಿಹಳ್ಳಿ, ಬಾಲೆನಹಳ್ಳಿ ಕ್ರಾಸ್, ಮೂಲಕ ರೋಡ್ ಶೋ ಮುಗಿಸಿ ಚಳ್ಳಕೆರೆ ನಗರದ ಜೆಡಿಎಸ್ ಮುಖಂಡ ಎಲೆ ಭದ್ರಣ್ಣ ಇವರ ಮನೆಯಲ್ಲಿ ಊಟ ಮಾಡಿಕೊಂಡು ನಂತರ ಪರಶುರಾಂಪುರ ಹೋಬಳಿಯತ್ತ ಪಂಚರತ್ನ ಯಾತ್ರೆ ಪ್ರಯಾಣ ಬೆಳೆಸಿತು,

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *