-
ಚಳ್ಳಕೆರೆ ಜನಧ್ವನಿ ವಾರ್ತೆ ಫೆ.6ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುವುದು ಶತಸಿದ್ಧ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷೆ ಪಿ.ತಿಪ್ಪೇಸ್ವಾಮಿ ಹೇಳಿದರು.

ನಗರದ ಗಾಂಧಿನಗರ ಹಾಗೂ ಬಾಗೇನಾಳ್ ಗ್ರಾಮದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಪಂಚರತ್ನ ಯಾತ್ರೆಯಲ್ಲಿ ಸ್ವಂ ಪ್ರೇರಿತರಾಗಿ ಉತ್ಸಹದಿಂದ ನಿರೀಕ್ಷೆಗೂ ಮೀರಿ ಜನರು ಸೇರುವ ಮೂಲಕ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯರಿಗೆ ವಿಭಿನರೀತಿಯ ಹಾರಗಳನ್ನು ಹಾಕುವ ಮುಲ್ಲ ಹಬ್ಬದ ವಾತಾವರಣದಂತೆ ಜನರು ಭಾಗವಹಿಸುತ್ತಾರೆ.
ಜೆಡಿಎಸ್ ಸರಕಾರದ ಅವಧಿಯಲ್ಲಿ ರೈತರ ಪರ ಯೋಜನೆಗಳು ಸಾಲಮನ್ನ, ಕೃಷಿ ಪಂಪಸೆಟ್ ವಿದ್ಯುತ್ ಸೇರಿದಂತೆ ಹಲವು ಜನರ ಯೋಜನೆಗಳನ್ನು ಜಾರಿಗೆ ತಂದಿರುವುದರಿAದ ಮತ್ತೆ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿ ಆಗುವುದು ಖಚಿತ ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತನೀಡುವಂತೆ ಮನವಿ ಮಾಡಿಕೊಂಡರು.
ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್‌ಕುಮಾರ್ ಮಾತನಾಡಿ ಜೆಡಿಎಸ್ ಪಕ್ಷ ನಿರಂತರವಾಗಿ ನಾಡಿನ ಅನ್ನದಾತರ ಹಿತ ಕಾಯುವ ಆಲೋಚನೆಗಳು ನಡೆಸುತ್ತಾ ಬಂದಿದೆ. ಈ ನೆಲೆಯಲ್ಲಿ ರಾಜ್ಯದಲ್ಲಿನ ನೀರಾವರಿ ಯೋಜನೆಗಳ ಸಮರ್ಪಕ ಜಾರಿಗೆ ತರಲು ಜಲಸಂರಕ್ಷಣೆ ಹೆಸರಿನಲ್ಲಿ ಜೆಡಿಎಸ್ ಪಕ್ಷ ಜನತಾ ಜಲಧಾರೆ, ಪಂಚರತ್ನ ಸೇರಿದಂದ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವಂತ ಬಲದಿಂದ ಅಧಿಕಾರುವುದು ಖಚಿತ.
ಜೆಡಿಎಸ್ ಪಕ್ಷದ ಸಿದ್ದಾಂತವನ್ನು ಮೆಚ್ಚಿ ಬಿಜೆಪಿ , ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದರು.

ಬಾಗೇಳ್ ಗ್ರಾಮದವರು ಪಕ್ಷಕ್ಕೆ ಸೇರ್ಪಡೆಗೊಂಡವರು ವಸಂತ್ ಕುಮಾರ್ , ತಿಪ್ಪೇಸ್ವಾಮಿ , ಬಸವರಾಜು, ಲೋಕೇಶ್ , ಮಹಾಂತೇಶ್, ಮಲ್ಲಿಕಾರ್ಜುನ , ಆನಂದಪ್ಪ
ಜನತಾ ಕಾಲೋನಿಯಲ್ಲಿ ಶಾಖೆಲ್, ಇಮ್ರಾನ್, ವೀರೇಶ್, ಅನೀಫ್, ಇಮಾಡ್, ಇರ್ಫಾನ್, ಭಾಷಾ, ಕಾಜ, ರೆಹಮಾನ್, ಲತೀಫ್, ಮಾಬು, ಸುನಿ,ಲೋಕೇಶ್, ಜಲೀಲ್, ಮುನ್ನಫಿ ಸುಮಾರು 5೦ಕ್ಕೂ ಹೆಚ್ಚು ಜನರು ಸೇರ್ಪಡೆಗೊಂಡರು.
ನಗರಸಭಾ ಸದಸ್ಯರಾದ ನಾಗವೇಣಿ ,ವಿ.ವೈ ಪ್ರಮೋದ್, ನಿರ್ಮಲ, ತಿಪ್ಪಕ್ಕ ಇತರರಿದ್ದರು.
0 Comments