ಜೆಜೆಹಳ್ಳಿ ಹೋಬಳಿಕೆರೆಗಳಿಗೆ ವಿವಿ ಸಾಗರ ನೀರು ಹರಿಸುವಂತೆ ಒತ್ತಾಯಿಸಿ ಹೋಬಳಿಯ ಪ್ರಮುಖ ಬೀದಿಗಳಲ್ಲಿ ಪಂಜಿನಮೆರವಣಿಗೆ ನಡೆಸಲಾಯಿತು

by | 05/07/24 | ಸುದ್ದಿ


ಹಿರಿಯೂರು :
ತಾಲ್ಲೂಕಿನ ಜವಗೊಂಡನಹಳ್ಳಿ ಹೋಬಳಿಯ ಕೆರೆಗಳಿಗೆ ವಾಣಿವಿಲಾಸ ಜಲಾಶಯದ ನೀರು ಹರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾಧಿ ಧರಣಿ 15 ನೇ ದಿನಕ್ಕೆ ಮುಂದುವರೆದಿದ್ದು, ಬುಧವಾರ ಸಂಜೆ 7.30 ರಿಂದ ರಾತ್ರಿ 8.30 ರವರೆಗೆ ಜವಗೊಂಡನಹಳ್ಳಿ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಧಿಕ್ಕಾರ ಕೂಗುತ್ತಾ ಪಂಜಿನ ಮೆರವಣಿಗೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರು.
ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವನಕಲ್ಲು ಮಠದ ಶ್ರೀಬಸವ ರಾಮಾನಂದ ಸ್ವಾಮೀಜಿ ಮಾತನಾಡಿ, ಸರ್ವ ಜೀವಿಗೂ ನೀರು ಬಹಳ ಅವಶ್ಯಕ . ಈ ಭಾಗದಲ್ಲಿ ಎಲ್ಲಾ ಬೋರ್ ವೆಲ್ ಗಳೂ ಬತ್ತಿ ಹೋಗಿ ಎಲ್ಲಾ ಬೆಳೆಗಳು ಒಣಗುವಂತಹ ಪರಿಸ್ಥಿತಿಯಾಗಿದೆ. ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ನೀರು ಹರಿಸಬೇಕು ಎಂದರಲ್ಲದೆ,
ಈ ಬಗ್ಗೆ ಸರ್ಕಾರ ವಿಫಲವಾದಲ್ಲಿ ಮುಂದಿನ ದಿನಗಳಲ್ಲಿ ಇಲ್ಲಿಂದ ವಿಧಾನ ಸೌಧದವರೆಗೆ ಪಾದಯಾತ್ರೆ ಮಾಡಲು ನಾನೊಬ್ಬನೇ ಅಲ್ಲ ನನ್ನ ಜೊತೆಗೆ ನೂರು ಸ್ವಾಮೀಜಿಗಳನ್ನು ಕರೆತಂದು ದೊಡ್ಡಮಟ್ಟದ ಹೋರಾಟವನ್ನು ಮಾಡೋಣ ಯಾವುದೇ ಕಾರಣಕ್ಕೂ ರೈತರು ಎದೆಗುಂದದೆ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂಬುದಾಗಿ ಕರೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆ.ಟಿ. ತಿಪ್ಪೇಸ್ವಾಮಿ ವಾಣಿವಿಲಾಸ ಜಲಾಶಯದಿಂದ ಯಾವುದೇ ಅಲೋಕೇಶನ್ ಇಲ್ಲದೆಚಳ್ಳಕೆರೆ ಮೊಳಕಾಲ್ಮೂರು ಭಾಗಕ್ಕೆ ನದಿ ಮೂಲಕ ಸುಮಾರು ಮುಕ್ಕಾಲು ಟಿಎಂಸಿ ನೀರನ್ನು ಹರಿಸಿದ್ದು, ಹನಿ ನೀರಾವರಿ ನೀರು ಹಾಯಿಸಲು ಎಲ್ಲಿ ಅಲೋಕೇಶನ್ ಇದೆ. ಕೇವಲ ಹತ್ತು- ಹದಿನೈದು ಕಿಲೋಮೀಟರ್ ದೂರದಲ್ಲಿರುವ ವಾಣಿವಿಲಾಸ ಜಲಾಶಯದಿಂದ ಈ ಭಾಗಕ್ಕೆ ನೀರು ಹರಿಸಬೇಕು ಎಂದರಲ್ಲದೆ,
ಸುಮಾರು 200 ಕಿ.ಮೀ ದೂರದಿಂದ ಭದ್ರಾ ಮೇಲ್ದಂಡೆ ಯೋಜನೆಯಿಂದ ಈ ಭಾಗಕ್ಕೆ ನೀರು ಬರಲು ಸುಮಾರು 15-20 ವರ್ಷವಾಗುತ್ತದೆ. ಅಲ್ಲಿವರೆಗೂ ಈ ಭಾಗದಲ್ಲಿ ಬದುಕುವುದಾದರೂ ಹೇಗೆ? ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಹಾಗೂ ಜಿಲ್ಲಾಧಿಕಾರಿಗಳು ರೈತರ ಸಭೆಗೆ ಬಂದರೆ ನಾನು ಎಲ್ಲಾ ವಿವರಗಳನ್ನು ಹೇಳಲು ಬದ್ದನಾಗಿದ್ದೇನೆ, ಅಲ್ಲದೆ ಮುಂದಿನ ದಿನಗಳಲ್ಲಿ ಚಳುವಳಿಯನ್ನು ಉಗ್ರರೂಪಕ್ಕೆ ಕೊಂಡೊಯ್ಯಲಾಗುವುದು ಎಂಬುದಾಗಿ ಅವರು ಸಭೆಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಪಣ್ಣ ಮಾತನಾಡಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಈ ತಾಲ್ಲೂಕಿನ ಶಾಸಕರು ಈ ಭಾಗಕ್ಕೆ ನೀರು ಹರಿಸಲು ಬದ್ಧತೆಯನ್ನು ತೋರಿಸಬೇಕು ಇದುವರೆಗೂ ಈ ಹೋರಾಟದ ಬಗ್ಗೆ ಗಮನ ಹರಿಸದೆ ಸ್ಥಳಕ್ಕೆ ಬಾರದೆ ಇರುವುದು ತುಂಬಾ ಅವಮಾನಕರವಾಗಿದೆ.ಹೆಚ್ಚಿಗೆ ಮತ ಪಡೆದು ತಾವು ರೈತರನ್ನು ನಿರ್ಲಕ್ಷಿಸಿದರೆ ಹೇಗೆ? ತಾವುಗಳು ವಿಳಂಬ ಮಾಡದೆ ಸಭೆಗೆ ಬಂದು ನೀರು ಹರಿಸುವ ಪ್ರಯತ್ನಮಾಡಬೇಕು ಎಂಬುದಾಗಿ ಅವರು ತಿಳಿಸಿದರು.
ಈ ಸಭೆಯಲ್ಲಿ ರೈತ ಸಂಘದ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ, ಎಂ.ಆರ್.ವೀರಣ್ಣ, ನಟರಾಜ್, ಜೆ.ಅಶ್ವತಪ್ಪ ಮಾತನಾಡಿದರು. ಈರಣ್ಣ, ಕನ್ಯಪ, ರಾಜಪ್ಪ, ಕೆ.ಆರ್.ಹಳ್ಳಿಕುಮಾರ್, ಮಂಜುನಾಥ್, ಬಾಲಕೃಷ್ಣ, ರಾಮಕೃಷ್ಣ, ಕರಿಯಪ್ಪ, ಶಿವಣ್ಣ, ಮಹೇಶ, ವಜೀರ್ ಸಾಬ್, ಚಿತ್ರಲಿಂಗಪ್ಪ, ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News >>

ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು,ನಾವು ರೋಗಿಗಳ ಸೇವೆಮಾಡುವಲ್ಲಿ ದೇವರನ್ನ ಕಾಣಬೇಕು. ಬೆಂ.ಗ್ರಾ.ಕ್ಷೇತ್ರದಸಂಸದ ಡಾ.ಸಿ.ಎನ್.ಮಂಜುನಾಥ್

ತುಮಕೂರು : ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು ಸಾರ್ವಜನಿಕರು, ರೋಗಿಗಳು ನಮ್ಮನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ನಾವು...

ಹೊಸ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರನ್ನು ವರ್ಗಾಯಿಸಿದಂತೆ ಗ್ರಾಮಸ್ಥರ ಆಗ್ರಹ 

ಚಳ್ಳಕೆರೆ: ತಾಲೂಕಿನ ಜಾಜೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳು ವಾಸಿಸುವ ಕಾಲೋನಿಯ ಪಡಿತರ ಚೀಟಿದಾರರ ಅನುಮತಿ ಪಡೆಯದೆ...

ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಳ್ಳಕೆರೆ ಜು.16 ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ತಾಲ್ಲೂಕಿನಲ್ಲಿ ಪ್ರಗತಿ ಸಾಧಿಸಬೇಕು...

ನಗರದ ಪಾದಾಚಾರಿಗಳ ರಸ್ತೆ ಮೇಲಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ವೆಂಕಟೇಶ್ ಬಳಿ ದೂರು.

ಚಳ್ಳಕೆರೆ ಜು.16 ಪುಟ್ ಬಾತ್ ನಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಕೂಡಲೆ...

ಗೃಹ ಲಕ್ಷ್ಮೀ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ಜು.16: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಯೋಜನೆಯ ಸೌಲಭ್ಯ...

ಸಿದ್ದು ಬೆನ್ನಿಗೆ ಇದೆ ದಲಿತ ಶಕ್ತಿ ಟೀಕೆ, ಆರೋಪಗಳಿಗೆ ಎದೆಗುಂದದಿರಿ ಮಾಜಿ ಸಚಿವ ಎಚ್.ಆಂಜನೇಯ ಅಭಯ ಆಂಜನೇಯ ಅವರಿಗೆ ಬೆಳ್ಳಿಗಧೆ ನೀಡಿ ಗೌರವಿಸಿದ ದಲಿತ ಮುಖಂಡರು*

ಚಿತ್ರದುರ್ಗ: ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ...

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರನ್ನ ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖಪಾತ್ರ ವಹಿಸುತ್ತವೆ:ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ್

ಹಿರಿಯೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಸಮಾಜದ ಜನರನ್ನು ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ...

ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಮನುಕುಲಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಭಗೀರಥ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ

ಪರಶುರಾಮಪುರ ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ...

ಪೀರಲು ದೇವರು ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ

ಹಿರಿಯೂರು: ನಗರದ ಚಿಕ್ಕಪೇಟೆ ಬಳಿ ಇರುವ ಪೀರಲು ದೇವರುಗಳ ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ ನಡೆಯುತ್ತಿದ್ದು...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page