ಚನ್ನಗಿರಿ: ಇಸೀಟ್ ಜೂಜಾಟ ಆಡುತ್ತಿರುವವರ
ಮೇಲೆ ದಾಳಿ ನಡೆಸಿ 7 ಜನರನ್ನು ಬಂಧಿಸಿ, 43,530
ರೂ. ನಗದನ್ನು ಸಿಇಎನ್ ಅಪರಾಧ ಠಾಣೆ ಪೊಲೀಸರು
ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ
ಕತ್ತಲಗೆರೆ ಗ್ರಾಮದ ಕಡೆಯಿಂದ ಕೂಲಂಬಿ ಗ್ರಾಮದ
ಕಡೆಗೆ ಹೋಗುವ ರಸ್ತೆಯಲ್ಲಿರುವ ಜಮೀನಿಗೆ ಹೋಗುವ
ಕಾಲು ದಾರಿಯ ಸ್ಥಳದಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ
ಮಾಹಿತಿ ಬಂದ ಮೇರೆಗೆ ಸಿಇಎನ್ ಅಪರಾಧ ಪೊಲೀಸ್
ಠಾಣೆಯ ಪಿಎಸ್‌ಐ ಪಿ.ಪ್ರಸಾದ್, ಸಿಬ್ಬಂದಿ ಪ್ರಕಾಶ,
ಗೋವಿಂದರಾಜ್, ಅಂಜಿನಪ್ಪ, ಮುತ್ತುರಾಜ್,
ಮಂಜುನಾಥ ಮಠೋಳಿ, ಮಲ್ಲಿಕಾರ್ಜುನ ಹಾದಿಮನಿ,
ಸಚಿನ್, ಲಿಂಗರಾಜ್ ಅವರನ್ನೊಳಗೊಂಡ ತಂಡ
ಜೂಜಾಟದಲ್ಲಿ ತೊಡಗಿದ್ದ 7 ಜನರನ್ನು ಬಂಧಿಸಿ, ನಗದು,
ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದೆ.
ಜೂಜಾಟ: 7 ಜನರ ಬಂಧನ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments