ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಈ ಸಾಲಿನಲ್ಲಿ ಅಂದರೆ 31-3-2024ರ ಅಂತ್ಯಕ್ಕೆ 100,13,90 ಲಕ್ಷರೂಗಳ ಷೇರು ಬಂಡವಾಳ ಹೊಂದಿದ್ದು ಈ ಸಾಲಿನಲ್ಲಿ ಬ್ಯಾಂಕಿನ ದುಡಿಯುವ ಬಂಡವಾಳ 1.27607.34 ಲಕ್ಷರೂಗಳಾಗಿದ್ದು ಈ 2023-2024ನೇ ಸಾಲಿನಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 11.83.93.708.69 ನಿವ್ವಳ ಲಾಭ ಗಳಿಸಲಾಗಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಿ. ಸುಧಾಕರ್ ಅವರು ಹೇಳಿದರು.
ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಶ್ರೀ ರಾಮಕಲ್ಯಾಣ ಮಂಟಪದ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ 2023-24ನೇ ಸಾಲಿನ ಬ್ಯಾಂಕಿನ 61ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ನಮ್ಮ ಬ್ಯಾಂಕ್ ಸುಮಾರು 1955 ರಲ್ಲಿ ನೊಂದಾಯಿಸಿ ಸ್ಥಾಪನೆಗೊಂಡಿದ್ದು ನಮ್ಮ ಬ್ಯಾಂಕ್ ನ ಆಡಳಿತ ವ್ಯಾಪ್ತಿಯು ಪೂರ್ಣ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿದ್ದು, ಜಿಲ್ಲೆಯ ಸುಮಾರು 420 ಸಹಕಾರ ಸಂಘಗಳು ಬ್ಯಾಂಕಿನ ಸದಸ್ಯತ್ವ ಹೊಂದಿವೆ.ಈ ಬ್ಯಾಂಕಿನ ಮೂಲಕ ಸಹಕಾರ ಸಂಘಗಳಿಗೆ ರೈತರ ಕೃಷಿ ಅಭಿವೃದ್ಧಿಗಾಗಿ ಮತ್ತು ರೈತರಿಗೆ ಅನುಕೂಲವಾಗುವಂತಹ ಸಾಲಸೌಲಭ್ಯಗಳನ್ನು ನೀಡಲಾಗಿದೆ ಎಂದರು.
ಈ ನಿಟ್ಟಿನಲ್ಲಿ ಸಹಕಾರ ಸಂಘಗಳ ಮೂಲಕ ರೈತರಿಗೆ ಬೆಳೆಸಾಲ, ಬೀಜ ಹಾಗೂ ರಸಗೊಬ್ಬರಗಳ ಸಾಲ, ರೈತರಿಗೆ ಗೋದಾಮು ನಿರ್ಮಾಣ ಸಾಲ, ಟ್ರ್ಯಾಕ್ಟರ್,ಟಿಲ್ಲರ್ ಗಳ ಸಾಲ, ಕೃಷಿ ಉಪಕರಣಗಳ ಸಾಲ, ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೇರಿದಂತೆ ಸರ್ಕಾರದ ಆದೇಶದಂತೆ ಈ 2023-2024 ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸುಮಾರು 48.077.83 ಲಕ್ಷ ರೂಗಳ ಸಾಲ ಸೌಲಭ್ಯ ನೀಡಲಾಗಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ಉಲ್ಲಾ ಷರೀಫ್ ಅವರು 2024-2025ನೇಸಾಲಿನ ಆಯವ್ಯಯ ಮಂಡಿಸಿ ಮಾತನಾಡಿ ಮುಂದಿನ ವರ್ಷದಲ್ಲಿ ಬ್ಯಾಂಕ್ ಮೂಲಕ ಸುಮಾರು 10,000 ಹೊಸ ರೈತರಿಗೆ 48.00ಕೋಟಿರೂಗಳ ಬೆಳೆಸಾಲ, 812 ಹೊಸ ರೈತರಿಗೆ 76.00ಕೋಟಿ ರೂಗಳ ಕೃಷಿ ಮಧ್ಯಮಾವಧಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದರಲ್ಲದೆ,
ಮುಂದಿನ 2024-2025ನೇಸಾಲಿನಲ್ಲಿ ನಮ್ಮ ಬ್ಯಾಂಕ್ ವತಿಯಿಂದ ಸುಮಾರು 210.00ಕೋಟಿರೂಗಳ ಕೃಷಿಯೇತರ ಸಾಲಗಳನ್ನು ವಿತರಿಸುವ ಯೋಜನೆ ಹೊಂದಿದ್ದು, ಬ್ಯಾಂಕ್ ಸುಮಾರು 800 ಕೋಟಿ ಲಾಭಗಳಿಸುವ ನಿರೀಕ್ಷೆಯಿದೆ ಹಾಗೂ ಸುಮಾರು 578.19 ಕೋಟಿರೂಗಳ ಠೇವಣಿ ಸಂಗ್ರಹಣೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ, ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಟಿ. ಮಂಜುನಾಥ್, ಬ್ಯಾಂಕಿನ ನಿರ್ದೇಶಕರುಗಳಾದ ಟಿ.ಮಹಾಂತೇಶ್, ಎಸ್.ಆರ್.ಗಿರೀಶ್, ಎಚ್.ಟಿ.ನಾಗರೆಡ್ಡಿ, ಪಿ.ರಾಜು, ಎಂ.ನಿಶಾನಿಜಯಣ್ಣ, ಡಿ.ಎಸ್.ಶಶಿಧರ್, ಸಿ.ವೀರಭದ್ರಬಾಬು, ಪಿ.ವಿನೋದಸ್ವಾಮಿ, ಕೆ.ಜಗಣ್ಣ, ಅಫೆಕ್ಸ್ ಬ್ಯಾಂಕ್ ನಾಮಿನಿ ರಘುರಾಮರೆಡ್ಡಿ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್, ಸಹಕಾರ ಸಂಘಗಳ ಉಪನಿಬಂಧಕರಾದ ಆರ್.ಎಸ್.ದಿಲೀಪ್ ಕುಮಾರ್, ವೃತ್ತಿಪರ ನಿರ್ದೇಶಕರುಗಳಾದ ಬಿ.ಶಿವಲಿಂಗಪ್ಪ, ಎಸ್.ಕೆ.ಮರಳಿ, ಎಂ.ದ್ಯಾಮಣ್ಣ, ಡಿಸಿಸಿ ಬ್ಯಾಂಕ್ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments