ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಆಡಂಬರಕ್ಕೆ ಗ್ರಾಪಂ ಬೊಕ್ಕಸಕ್ಕೆ ನಷ್ಟ….

by | 15/11/22 | ಆರ್ಥಿಕ, ಜನಧ್ವನಿ

ಜನಧ್ವನಿ ವಾರ್ತೆ ಚಳ್ಳಕೆರೆ.(ನ.15)
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಆಡಂಬರ ಗ್ರಾಮಪಂಚಾಯತ್ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹೌದು ಇದು ಜಿಲ್ಲಾಡಳಿತವಯಿಂದ ಪ್ರತಿ ತಿಂಗಳು ಮೂರನೇ ಶನಿವಾರ ಗ್ರಾಪಂ ಕೇಂದ್ರದಲ್ಲಿ ಕಂದಾಯ ಇಲಾಖೆವತಿಯಿಂದ ಜಿಲ್ಲಾ಼ಧಿಕಾರಿಗಳನಡೆ ಹಳ್ಳಿ ಕಡೆ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಗ್ರಾಮೀಣ ಭಾಗದ ಜನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಹಳ್ಳಿಗಳ ಮನೆ ಮನೆಗೆ ತೆರಳಿ ಸಮಸ್ಯೆಗಳನ್ನು ಹಾಲಿಸಿ ಸ್ಥಳದಲ್ಲೇ ಪರಿಹಾರ ನೀಡಬೇಕೆಂಬ ಉದ್ದೇಶವಿದೆ.
ಗ್ರಾಮೀಣ ಭಾಗದಲ್ಲಿ ಜನರು ಮನೆ, ನಿವೇಶನ, ಕುಡಿಯುವ ನೀರಿನ ತೆರಿಗೆ ವಸುಲಾತಿಯಿಲ್ಲದೆ ಕುಡಿಯುವ ನೀರು, ರಸ್ತೆ, ಚರಂಡಿ ಸ್ವಚ್ಚತೆ, ಬೀದಿ ದೀಪ ನಿರ್ವಹಣೆ ಕುಂಠಿತಗೊAಡಿದ್ದು. ಸಿಬ್ಬಂದಿಗಳ ವೇತನಕ್ಕೂ ಹಣವಿಲ್ಲದೆ ಪರದಾಡುವ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ನಡೆ ಕಾರ್ಯಕ್ರಮಕ್ಕೆ ಊಟ, ತಿಂಡಿ, ಶ್ಯಾಮಿಯಾನ, ಕುರ್ಚಿ, ಹೂವಿನ ಹಾರ, ಶ್ಯಾಲು, ಹಣ್ಣು. ಕಲಾತಂಡ, ಸೇರಿದಂತೆ ವಿವಿಧ ಸುಮಾರು 1 ಲಕ್ಷ ರೂ ಗ್ರಾಪಂ ವತಿಯಿಂದ ಖರ್ಚು ಮಾಡುತ್ತಿರುವುದು ಬೆಳೆಕಿಗೆ ಬಂದಿದೆ.
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಕಂದಾಯ ಇಲಾಖೆಯದ್ದಾಗಿದ್ದು ಅದಕ್ಕೆಂದೇ ಸರಕಾರ ಅನುದಾನ ಬಿಡುಗಡೆ ಮಾಡುತ್ತಿದೆ ಆದರೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ನಡೆ ಕಾರ್ಯಕ್ರಮ ಸಮಸ್ಯೆ ಬಗೆಹರಿಸುವ ಬದಲು ಸಮಸ್ಯೆಯನ್ನುಂಟು ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಳ್ಳಿಗಳಲ್ಲಿ ನಡೆಸಿದರೂ ಸಹ ಪವತಿ ಖಾತೆ, ಪೋಡಿ ದುರಸ್ತಿ, ಪಹಣಿ ತಿದ್ದುಪಡಿ, ಸ್ಮಶಾನ ಒತ್ತುವರಿ, ರೈತರ ಜಮೀನುಗಳಿಗೆ ರಸ್ತೆ ವಿವಾದ, ನಿವೇಶನಗಳ ಹಕ್ಕು ಪತ್ರ, ಬಗರ್ ಹುಕುಂ ಸಾಗುವಳಿ ಪತ್ರ, ವಿವಿಧ ಸಾಮಾಜಿಕ ಭದ್ರತಾ ಪಿಂಚಿಣಿ ಪಡೆಯಲು ಸಾರ್ವಜನಿಕರು ಕಚೇರಿಗಳಿಗೆ ಹಲೆದಾಟ ತಪ್ಪಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.,
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಎತ್ತಿನ ಬಂಡಿ ಮೆರವಣಿಗೆ, ವಾಧ್ಯಗೋಷ್ಠಿ , ಕಲಾ ತಂಡ,ಹಾರ ತುರಾಯಿ ಹೆಸರಿನಲ್ಲಿ ಗ್ರಾಮಪಂಚಾಯತ್ ಆಡಳೀತ ಮಂಡಳಿ ಖರ್ಚು ಮಾಡಿ ಕಣ್ಣು ಬಿಡುವಂತಾಗಿದೆ.
ಈಗಾಗಲೆ ಓಬಣ್ಣನಹಳ್ಳಿ, ಘಟಪರ್ತಿ, ರಾಮಜೋಗಿಹಳ್ಳಿ, ನೆಲಗೇತನಹಟ್ಟಿ, ಪಿ.ಮಹದೇವಪುರ, ದೊಡ್ಡೇರಿ ಗ್ರಾಪಂ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆದಿದ್ದು ನವಂಬರ್ ಮೂರನೇ ಶನಿವಾರ ದೊಡ್ಡ ಚೆಲ್ಲೂರು ಗ್ರಾಪಂ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಜರುಗಲಿದೆ.
ಜಿಲ್ಲಾಧಕಾರಿಗಳ ನಡೆ ಹಳ್ಳಿ ನಡೆ ಕಾರ್ಯಕ್ರಮಕ್ಕೆ ಗ್ರಾಪಂ ವತಿಯಿಂದ ಖರ್ಚು ಮಾಡುತ್ತಿದ್ದು. ಕಾರ್ಯಕ್ಕೆಂದೇ ಕಂದಾಯ ಇಲಾಖೆಗೆ ಬಿಡುಗಡೆಯಾದ ಅನುದಾನ ಎಲ್ಲಿಗೆ ಹೋಗುತ್ತದೆ ಎಂಬ ಯಕ್ಷ ಪ್ರಶ್ನೆ ಪ್ರಜ್ಙಾವಂತರಲ್ಲಿ ಕಾಡುತ್ತಿದ್ದು ಸಂಬAಧಪಟ್ಟ ಅಧಿಕಾರಿಗಳೇ ಉತ್ತರ ಕೊಡಬೇಕಿದೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *