ಚಳ್ಳಕೆರೆ ಆ.23. ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ತಾಪಂ ಇಒ ಶಶಿಧರ್ ಕಿವಿಮಾತು ಹೇಳಿದರು.
ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ ಗೌರಸಮುದ್ರ ಗ್ರಾಮದಲ್ಲಿ ಸೆ.3 ರಂದು ನಡೆಯಲಿರುವ ಶ್ರೀ ಗೌರದಮುದ್ರ ಮಾತಮ್ಮ ದೇವಿಯ ಜಾತ್ರ ಸ್ಥಳವಾದ ತುಮಲು ಪ್ರದೇಶವನ್ನು ವೀಕ್ಷಣೆ ಮಾಡಿ ಮಾತನಾಡಿದರು.
ಜಾತ್ರೆಗೆ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿರಿಂದ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ, ಸ್ವಚ್ಚತೆಗೆ ಆತ್ಯತೆ ನೀಡಬೇಕು ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ಅಗತ್ಯ ಮುಂಜಾಗೃತೆವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಓಬಣ್ಣ, ಈ ಸಂದರ್ಭದಲ್ಲಿ ತಾಲೂಕಪಂಚಾಯತಿ ಸಿಬ್ಬಂದಿಯಾದ ಪ್ರವೀಣ್ ಪ್ರಶಾಂತ್ ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಹನುಮಂತರಾಯ ಮತ್ತು ಅಧ್ಯಕ್ಷರಾದ ಎಂ ಓಬಣ್ಣ ಗ್ರಾಮ ಪಂಚಾಯತಿ ಸದಸ್ಯರಾದ ಟಿ ಶಶಿಕುಮಾರ್ ಬೊಮ್ಮಣ್ಣ ಜಿಎಂ ಈರಣ್ಣಸಿಬ್ಬಂದಿಗಳಾದ ಪ್ರಕಾಶ್ ಮತ್ತು ರಾಜಣ್ಣ ಊರಿನ ಮುಖಂಡರಾದ ಬಾಬು ನಾಗರಾಜ್ ಬೊಮ್ಮಣ್ಣ ಮಾರಣ್ಣ ಜಾತ್ರೆ ಸ್ಥಳದಲ್ಲಿ ನಡೆಯುವ ಸಮುದಾಯ ಕಾಮಗಾರಿ ವೀಕ್ಷಣೆ ಮಾಡಿದರು.
0 Comments