ಚಳ್ಳಕೆರೆ ಜಾತ್ರೆಗೆ ಬರುವ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕ ಎನಗ.ವೈ.ಗೋಪಾಲಕೃಷ್ಣ ಗ್ರಾಪಂ ಅಧ್ಯಕ್ಷರಿಗೆ ಸೂಚಿಸಿದರು.
ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಗೌಎಸಮುದ್ರ ಮಾರಮ್ಮ ದೇವಿ ಜಾತ್ರ ಪೂರ್ವ ಸಿದ್ದತೆ ವೀಕ್ಷಣೆ ನಾಡಿ ಮಾತನಾಡಿದರು.
ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು.ವಿದ್ಯುತ್. ಬೆಳಕು. ರಸ್ತೆ.ಚರಂಡಿ ಸ್ವಚ್ಚತೆ .ವಾಹನಗಳ ದಟ್ಟಣೆ ನಿಯಂತ್ರ ಮಾಡಿದರೆ ಭಕ್ತರು ದೇವಿಯ ದರ್ಶನ ಪಡೆದು ನಿಮ್ಮನ್ನು ನೆನೆಸಿಕೊಳ್ಳುತ್ತಾರೆ ತಾಲೂಕು ಆಡಳೀತ .ಗ್ರಾಮಪಂಚಾಯಿತಿ ಜವಾಬ್ದಾರಿ ಯಿಂದ ಕೆಲಸ ಮಾಡುವಂತೆ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಓಬಣ್ಣ ಮಾತನಾಡಿ ಭಕ್ತರಿಗೆ ಕುಡಿಯುವ ನೀರಿಗಾಗಿ ಎರಡು ಹೊಸ ಬೋರ್ ಗಳನ್ನು ಕೊರೆಸಿ ಮೋಟರ್ ಪಂಪ್ ಅಳವಡಿಸಿದ್ದು ಬೀದಿ ದೀಪ ಸ್ವಚ್ಚತೆ ಸೇರಿದಂತೆ ಎಲ್ಲಾ ಅಗತ್ಯ ಮುಂಜಾಗ್ರತೆ ವಹಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರು ಇತರರಿದ್ದರು.
0 Comments