ಚಳ್ಳಕೆರೆ ಆ.17ತಾಲೂಕಿನ ಜಾಜೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗುಡುಗು ಮಿಂಚು ಮಿಶ್ರಿತ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ ನೂರಕ್ಕು ಹೆಚ್ಚು ಕುರಿಗಳು ಬಲಿಯಾದ ಘಟನೆ ಜರುಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದ ಆಂಜನೇಯ 90ಹಾಗೂ ಓಬಣ್ಣ16ಇವರಿಗೆ ಸೇರಿದ ನೂರಕ್ಕೂ ಹೆಚ್ಚು ಕುರಿಗಳು ಕುರಿಹಟ್ಟಿಯಲ್ಲಿವು ರಾತ್ರಿ 8.30 ರ ಸುಮಾರಿನಲ್ಲಿ ಗುಡುಗು ಸಹಿತ ಮಳೆಯಿಂದಾಗಿ ಸಿಡಿಲು ಬಡಿತಕ್ಕೆ ಸಿಲುಕಿ ಕುರಿಗಳು ಮೃತ ಮಪಟ್ಟಿದ್ದು ಕುರಿಸಾಕಾಣಿಕೆ ದಾರರಿಗೆ ಅಪಾರ ನಷ್ಟವಾಗಿದ್ದು ಸಂಕಷ್ಟಕ್ಕೆ ಸಿಲುವಂತೆ ಮಾಡಿದೆ ಸಂಬಂಧಪಟ್ಟ ಅಧಿಕಾರಿ ಪರಿಹಾರದೊರಕಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಗ್ರಾಮಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರಿಕ್ಷೆ ನಡೆಸಿ ಅನುಗ್ರಹ ಯೋಜನೆಯಡಿ ಪರಿಹಾರಕ್ಕೆ ಸರಕಾರಕ್ಕೆ ಕಳೊಸಿಕೊಡಲಾಗುವುದು ಎಂದು ಸಹಾಯಕ ನಿರ್ದೇಶಕ ಡಾ.ರೇವಣ್ಣ ಜನಧ್ವನಿ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
0 Comments