ಜನಧ್ವನಿ

ಪೂರ್ವಜರ ಕಾಲದಿಂದ ಜಮೀನಿಗೆ ಹೋಗಲು ಇದ್ದ ರೂಡಿಗತ ದಾರಿಗೆ ತಂತಿ ಬೇಲಿ ದಾರಿ ಬಿಡಿಸುವಂತೆ ರೆಡ್ಡಿಹಳ್ಳಿ ಗ್ರಾಮದ ರೈತರು.


ಚಳ್ಳಕೆರೆ ಆ.8ಹೊಲಕ್ಕೆ ದಾರಿ ಯಾವುದಯ್ಯಾ…?
ರೈತರ ಜಮೀನಗಳಿಗೆ ತೆರಳಲು ಸಮರ್ಪಕ ದಾರಿ ಇಲ್ಲದೇ ಇರುವುದರಿಂದ ರೈತರು ದಾರಿ ಬಿಡಿಸಿಕೊಡುವಂತೆ ಕಂದಾ ಇಲಾಖೆಗೆ ಅಲೆದಾಡಿದರೂ ದಾರಿ ಭಾಗ್ಯವಿಲ್ಲಂದಂತಾಗಿದೆ.


ಹೌದು ಇದು ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ಎಂ.ಶಶಿಕಲಾ ಇವರಹೆಸರಿನಲ್ಲಿ ರಿ ಸಂ 98 ರಲ್ಲಿ 12 ಎಕರೆ ಜಮೀನು ಹಾಗೂ ಎಸ್ಸಿ- ಎಸ್ಟಿ ಸಮುದಾಯಗಳಿಗೆ ಶ್ರೀ ಅಂಬೇಡ್ಕಾರ್ ಅಭಿವೃದ್ಧಿನಿಗಮದಿಂದ ರಿ.ಸಂ 112 ರಲ್ಲಿ 20 ಎಕರೆ ಭೂಮಿಯನ್ನು ಭೂ ಒಡೆತನದ ಯೋಜನೆಯಲ್ಲಿ ಸರಕಾರ ನೀಡಿದ ಭೂಮಿಗೆ ಹೋಗಲು ಸುಮಾರು 63 ವರ್ಷಗಳಿಂದ ರೂಡಿಗತ ದಾರಿಯಲ್ಲಿ ಗಾಡಿ.ಟ್ರಾಕ್ಟರ್ ಮೂಲಕ ರೈತರು ಕೈಚಿ ಚಟುವಟಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು.
ಈಗ ಬೇರೆಯವರು ರಿ.ಸಂ95/6 ರ ಜಮೀನು ಖರೀದಿ ಮಾಡಿಕೊಂಡು ಪೂರ್ವಜರ ಕಾಲದಿಂದಲೂ ಓಡಾಡಿಕೊಂಡು ಬಂದಿದ್ದ ರೂಡಿಗತ ದಾರಿಗೆ ತಂತಿಬೇಲಿ ಹಾಕಿ ಬಂದು ಮಾಡಿದ್ದು ಎಂ.ಶಶಿಕಲಾ ಹಾಗೂ ಎಸ್ಸಿ-ಎಸ್ಟಿ ಸಮುದಾಯಗಳ ಜಮೀನಿಗೆ ಹೋಗಲು ದಾರಿಇಲ್ಲದೆ ಫಲವತ್ತಾದ ಭೂಮಿಯಿದ್ದರೂ ಬಿತ್ತನೆ ಮಾಡದೆ ಪಾಳು ಬಿಡುವಂತಾಗಿದ್ದು ದಾರಿ ಬಿಡಿಸಿಕೊಡಿ ಎಂದು ಜನ ಸ್ಪಂದನ ಸಭೆ. ತಾಲೂಕು ಕಚೇರಿ.ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ನೀಡಿದರೂ ಸಹ ದಾರಿ ಸಮಸ್ಯೆಗೆ ಪರಿಹಾರಮಾತ್ರ ಸಿಕ್ಕಿಲ್ಲ. ತಮ್ಮ ಜಮೀನುಗಳಿಗೆ ಹೋಗಲು ಸಮರ್ಪಕವಾದ ವಹಿವಾಟು ದಾರಿ ಇರದೇ ಇರುವುದರಿಂದ ಸಾಕಷ್ಟು ಸಂಖ್ಯೆಯ ರೈತರು ಸ್ವಂತ ಜಮೀನಿದ್ದರೂ ಕೃಷಿ ಚಟುವಟಿಕೆಯಲ್ಲಿ ಉತ್ಸುಕತೆ ತೋರುತ್ತಿಲ್ಲ.


ಕೆಲ ವರ್ಷಗಳ ಹಿಂದೆ ಜಮೀನುಗಳಿಗೆ ತೆರಳಲು ನಿರ್ದಿಷ್ಟವಾದ ದಾರಿ ಇಲ್ಲದೇ ಇದ್ದರೂ ಪ್ರಮುಖ ರಸ್ತೆಯಿಂದ ಜಮೀನುಗಳಿಗೆ ತೆರಳಲು ಅನುಕೂಲವಾಗುವಂತೆ ಸುತ್ತಮುತ್ತಲಿನ ಜಮೀನುಗಳ ರೈತರು ತಮ್ಮ ಜಮೀನಿನ ಒಂದು ಬದಿಯಲ್ಲಿ ಚಕ್ಕಡಿ, ಟ್ರ್ಯಾಕ್ಟರ್ ಹಾದು ಹೋಗುವಷ್ಟು ದಾರಿ ಬಿಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಭೂಮಿಗೆ ಹೆಚ್ಚು ಬೆಲೆ ಬಂದಿದ್ದರಿಂದ ರೈತರು ಬದುವನ್ನು ಸ್ವಚ್ಛಗೊಳಿಸಿ ಬಿತ್ತನೆ ಮಾಡುತ್ತಿರುವುದರಿಂದ ಕೆಲ ರೈತರು ತಮ್ಮ ಜಮೀನುಗಳಿಗೆ ತೆರಳಲು ಬೆಳೆ ಇರುವಾಗ, ಮಳೆ ಬಂದಾಗ ತೊಂದರೆ ಅನುಭವಿಸಿದ್ದಾರೆ.

ದಾರಿ ವಿಷಯವಾಗಿ ರೈತರ ಮಧ್ಯೆ ದ್ವೇಷದ ವಾತಾವರಣ ಉಂಟಾಗಿ ಹೊಡೆದಾಟ ನಡೆಯುತ್ತಿವೆ. ಸರ್ಕಾರ ಈ ವಿಷಯನ್ನು ಗಂಭೀರವಾಗಿ ಪರಿಗಣಿಸಿ ರೈತರು ಎದುರಿಸುತ್ತಿರುವ ದಾರಿ ಸಮಸ್ಯೆ ಇತ್ಯರ್ಥ ಪಡಿಸಬೇಕು.
ರೈತರ ಜಮೀನಿಗೆ ತೆರಳುವ ದಾರಿಗೆ ಅನ್ಯಭೂಮಾಲೀಕರು ಇನ್ನುಮುಂದೆ ಅಡ್ಡಿಪಡಿಸುವಂತಿಲ ರಾಜ್ಯ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಆದರೂ ಸಹ ಸರಕಾರದ ಆದೇಶಕ್ಕೂ ಕಿಮ್ಮತ್ತು ನೀಡದ ಕೆಲವರು ಮುಚ್ಚಿರುವ ರೂಡಿಗತ ದಾರಿ ಬಿಡುತ್ತಿಲ್ಲ ಸರ್ಕಾರ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಪೂರ್ವಜರ ಕಾಲದಿಂದಲೂ ಇದ್ದ ಮುಚ್ಚಿರುವ ರೂಡಿಗತ ದಾರಿಯನ್ನು ತೆರವುಗೊಳಿಸುವರೇ ಕಾದು ನೋಡ ಬೇಕಿದೆ.

ಕಾಲೇಜು ಬಳಿ ಪುಂಡರ ಹಾವಳಿಗೆ ಕಡಿವಾಣ ಹಾಕುವರೇ….?


ಚಳ್ಳಕೆರೆ ಆ.5 ಕಾಲೇಜುಗಳ ಬಳಿ ಹುಡುಗಿಯರಿಗೆ ಕೀಟಲೆ ಮಾಡುವುದು, ರ್ಯಾಶ್‌ ಡ್ರೈವಿಂಗ್‌ ಮಾಡುತ್ತಾರೆ, ಕಾಲೇಜಿಗೆ ಬರುವಾಗ ಹಾಗೂ ಸಂಜೆ ಮನೆಗೆ ಹೋಗುವಾಗ ಪೋಲಿಗಳ ಕಾಟ ಜಾಸ್ತಿಯಾಗಿದೆ…
ಹೌದು ಇದು ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯ ಸರಕಾರಿ ಪಿಯು ಕಾಲೇಜಿನ ಹೆಸರೇಳಲು ಇಚ್ಚಿಸದ ಉಪನ್ಯಾಸಕರು ಜನಧ್ವನಿ ನ್ಯೂಸ್ ನೊಂದಿಗೆ ನೊಂದು ಮಾಹಿತಿ ಹಂಚಿಕೊಂಡಿದ್ದಾರೆ. ಕಾಲೇಬಿಡುವ ಮಧ್ಯಹ್ನ 2.30 ರ ಸುಮಾರಿಗೆ ಜಾಲೇಜಿನಿಂದ ಹೊರಗೆ ಬೇರೆಯ ಯುವಕರು ಹಾಗೂ ಬೇರೆ ಕಡೆಯಿಂದ ಬಂದ ಆಟೋಚಾಲಕರು ಕಾಲೇಜ್ ವಿದ್ಯಾರ್ಥಿನಿಯರಿಗೆ ಚುಡಾಯಿಸುವಯದು ಆಟೋ ಹತ್ತಿಕೊ ಎಂದು ವಿದ್ಯಾರ್ಥಿನಿರಿಗೆ ಕೀಟಲೆ ಮಾಡುವ ದೃಶ್ಯಗಳು ಸಾಮಾನ್ಯವಾಗಿವೆ ಇದರಿಂದ ಕೆಲವು ವಿದ್ಯರ್ಥಿನಿಯರು ನೊಂದಿದ್ದಾರೆ. ಕಾಲೇಜು ಹಿಂಭಾಗದ ಗುಡ್ಡದಲ್ಲಿ ಮರಗಿಡದ ಪೊದೆಯಲ್ಲೇ ಪ್ರೇಮಿಗಳ ರಾಸಲೀಲೆಗಳು ನಡೆಯುತ್ತಿವೆ. ಇದೇ ರೀತಿ ಕಾಲೇಜು ರಸ್ತೆಯಲ್ಲಿ ಅಪೂರ್ಣಗೊಂಡ ಕನಕ ಭವನಗಳಲ್ಲಿ ಕಿಡಿಗೇಡಿಗಳ ಕೇಂದ್ರಗಳಾಗಿವೆ .ಮುಖ್ಯ ಅಂಚೆ ಕಚೇರಿ ರಸ್ತೆ. ಹಳೆ ರವೀಂದ್ರಕಾಲೇಜು ರಸ್ತೆಯಲ್ಲಿ ಪೋಲಿಗಳ ಕಾಟ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈಗಲೆ ಕೆಲವು ಕಡೆ ಪುಂಡರ ಕೀಟಲೆಗಳ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಇಲ್ಲಿಯೂ ಅಂತಹ ಪ್ರಕರಗಳಿಗೆ ಬ್ರೇಕ್ ಹಾಕಲು ಕಾಲೇಜುಗಳ ಬಳಿ ಬೆಳಗ್ಗೆ ಹಾಗೂ ಪೋಲಿಸ್ ಗಸ್ತು ಹೆಚ್ಚಿಸುವರೇ ಕಾದು ನೋಡ ಬೇಕಿದೆ.

ವಿದ್ಯುತ್ ಅವಘಡಕ್ಕೆ ಕೈಬೀಸಿ ಕರೆಯುವಂತಿರುವ ಮರದಲ್ಲಿರುವ ವಿದ್ಯುತ್ ತಂತಿ.


ಚಳ್ಳಕೆರೆ ಜು.31 ಮರಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಗಾಳಿಗೆ ಪದೇ ಪದೇ ಕಟ್ಟಾಗಿ ನೆಲಕ್ಕೆ ಬೀಳುವ ವಿದ್ಯುತ್ ವೈರ್ ವಿದ್ಯುತ್ ಅವಘಡದ ಭೀತಿಯಲ್ಲಿ ನಿವಾಸಿಗಳು. ಹೌದು ಇದು ಯಾವುದೇ ಕುಗ್ರಾಮ ಅಥವಾ ಹಳ್ಲಕಿಯ ಕಥೆಯಲ್ಲ ನಗರದ ಹಳೆ ಪೋಲಿಸ್ ವಸತಿ ಗೃಹಗ ರಸ್ತೆಯ ಮರಗಳಲ್ಲಿ ವಿದ್ಯುತ್ ತಂತಿಗಳು ಹೋಗಿದ್ದು ಈಗ ಆಶಾಡ ಮಾಸ ಹಾಗೂ ಗಾಳಿಕಾಲವಾಗಿರುವುದರಿಂದ ಗಾಳಿ ಬೀಸಿದರೆ ಸಾಕು ಮರದಕೊಂಬೆಗಳಿಂದ ವಿದ್ಯುತ್ ತಂತಿಗಳಿಗೆ ಹಲುಗಾಡಿ ಮನೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಪದೇಪದೆ ವಿದ್ಯುತ್ ವ್ಯತ್ಯಾಯದಿಂದ ಮನೆಯಲ್ಲಿನ ಟಿ ವಿ. ಪ್ರಿಜ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳಿಗೆ ನಷ್ಟವಾಗುತ್ತಿದ್ದು. ಮರಗಳಲ್ಲಿ ಹಾಗು ಹೋಗಿರುವ ವಿದ್ಯುತ್ ವೈರ್ ಕಟ್ಟಾಗಿ ಬಿದ್ದು ವಿದ್ಯುತ್ ಅವಘಡವಾಗುವ ಸಾಧ್ಯತೆಗಳಿವೆ.

ಈಗಾಗಲೆ ಹಲವುಕಡೆ ವಿದ್ಯುತ್ ಅವಘಡದಿಂದ ಮೃತಪಟ್ಟ ಘಟನೆಗಳಿವೆ. ಸಾಮಾನ್ಯವಾಗಿ ವಿದ್ಯುತ್ ತಂತಿ ಹಾದು ಹೋಗಿರುವ ಮಾರ್ಗಗಳಲ್ಲಿ ತಂತಿಗೆ ತಾಗುವಂತೆ ಇರುವ ಮರಗಳ ಕೊಂಬೆಗಳನ್ನು ಕಡಿದು ಮಾರ್ಗವನ್ನು ಸುಗಮಗೊಳಿಸ ಬೇಕೆಂಬ ನಿಯಮವಿದೆ ಆದರೆ ನಗರದಲ್ಲೇ ಮರಗಳಲ್ಲಿ ಹಾದೂ ಹೋಗಿರುವ ವಿದ್ಯುತ್ ತಂತಿಗೆ ತಾಗುವ ಕೊಂಬೆಗಳನ್ನು ಮಾತ್ರ ಬೆಸ್ಕಾಂ ಇಕಾಖೆ ತೆರವುಗೊಳಿಸಲು ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈಗಕಾದರೂ ಸಂಬಂಧಪಟ್ಟ ಅಧಿಕಾರಿಗಳು ಮರದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗುವ ಗೊಂಬೆಗಳನ್ನು ತೆರವುಗೊಳಿಸುವರೇ ಕಾದು ನೋಡ ಬೇಕಿದೆ.

ಕೈಬರಹ ಜನನ ಪ್ರಮಾಣಪತ್ರ ಆಧಾರ್ ತಿದ್ದು ಪಡಿ ನೋಂದಣೆಗೆ ಅಡ್ಡಿ-ಮಕ್ಕಳ ನವೋದಯ ಪರೀಕ್ಷೆ ಶಾಲಾದಾಖಲಾತಿ ವಿಳಂಭದ ಭೀತಿಯಲ್ಲಿ ಪೋಷಕರು.

ಚಳ್ಳಕೆರೆ ಜನಧ್ವನಿ ವಾರ್ತೆ ಜು.29.ಮಕ್ಕಳ‌ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ನೋಂದಣೆ ಮಾಡಿಸಲು ಪೋಷಕರು ಕಚೇರಿಗೆ ಅಲೆದಾಡಿದರೂ ಪರಿಹಾರ ಮಾತ್ರ ಸಿಕ್ಕಿಲ್ಲ.

ಹೌದು ಇದು ಚಳ್ಳಕೆರೆ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರು ತಮ್ಮ ಮಕ್ಕಳ ವ್ಯಾಸಂಗ ಹಾಗೂ ನವೋದಯ ಪರೀಕ್ಷೆಗೆ ಅರ್ಜಿಸಲ್ಲಿಸಲು ಆಧಾರ್ ಕಡ್ಡಾಯವಾಗಿದ್ದು. ಮಕ್ಕಳ ಜನನ ಪ್ರಮಾಣ ಪತ್ರ ತೆಗೆದುಕೊಂಡು ಆಧಾರ್ ಕೇಂದ್ರಗಳಿಗೆ ಹೋದರೆ ಕೈ ಬರಹ ಜನನ ಪ್ರಮಾಣ ಪತ್ರ ಬರುವುದಿಲ್ಲ‌ಆನ್ ಲೈನ್ ಜನನ ಪ್ರಮಾಣ ಪತ್ರ ತನ್ನಿ ಎನ್ನುತ್ತಾರೆ. ತಾಲೂಕು ಕಚೇರಿಗೆ ಹೋದರೆ ಅದರಲ್ಲಿ ಕನ್ನಡ ಮತ್ತು ಇಂಗ್ಲೀಷ್ ನಲ್ಲಿದೆ ಏನು ಸಮಸ್ಯೆಯಾಗುವುದಿಲ್ಲ ಅದರಲ್ಲೂ 2015 ರ 2015ಏಪ್ರೆಲ್ ನಿಂದ ಇತ್ತ ನೊಂದಣೆ ಮಾಡಿಕೊಂಡ ಜನನ ಪ್ರಮಾಣ ಪತ್ರಗಳು ಮಾತ್ರ ಆನ್ ಲೈನ್ ನಲ್ಲಿ ದೊರೆಯುತ್ತವೆ 2015 ಹಿಂದಿನವು ಕೈಬರಹ ಜನನ ಪ್ರಮಾಣ ಪತ್ರಗಳನ್ನು ಮಾತ್ರ ದೊರೆಯುತ್ತವೆ ಎನ್ನುತ್ತಾರೆ ಆದರೆ ಆಧಾರ್ ಕೇಂದ್ರಗಳಲ್ಲಿ ಮಾತ್ರ ಕೈಬರಹ ಜನನ ಪತ್ರಗಳನ್ನು ಆಧಾರ್ ತಿದ್ದುಪಡಿ ನೋಂದಣೆ ಮಾಡಲು ತಿರಸ್ಕರಿಸಲಾವುದು ಇದರಿಂದರಿಂದ ಪೋಷಕರು ಮಕ್ಕಳನ್ನು ನವೋದಯ ಪರೀಕ್ಷೆ ಹಾಗೂ ಶಾಲೆಗಳಿಗೆ ದಾಖಲಿಸಲು ಆಧಾರ್ ಕಾರ್ಡ್ ಕಡ್ಡಾಯ ಎನ್ನುತ್ತಾರೆ ತಾಲೂಕು ಕಚೇರಿಯಿಂದಲೇ ನೀಡಿದ ಕೈಬರಹ ಜನನ ಪ್ರಮಾಣ ಪತ್ರ ನೀಡಿದರೂ ಸಹ ಆನ್ ಲೈನ್ ಜನನ ಪ್ರಮಾಣ ಪತ್ರ ಕೇಳುತ್ತಾರೆ ತಾಲೂಕು ಕಚೇರಿ ಹಾಗೂ ಆಧಾರ್ ಕೇಂದ್ರಗಳಿಗೆ ತಿಂಗಳುಗಟ್ಟಲೆ ಅಲೆದಾಡಿದರೂ ಸಹ ಆಧಾರ್ ತಿದ್ದುಪಡಿ ಹಾಗೂ ನೋಂದಣೆ ಆಗದೆ ಇರುವುದರಿಂದ ಮಕ್ಕಳ ನವೋದಯ ಪರೀಕ್ಷೆ ಗೆ ಅರ್ಜಿ ಸಲ್ಲಿಸಲು ವಂಚಿತರಾಗುವಂತೆ ಮಾಡಿದೆ. ಈಗಲಾದರೂ ಸಂಬಂದಪಟ್ಟ ಅಧಿಕಾರಿಗಳು ಕೈ ಬರಹ ಜನನ ಪ್ರಮಾಣ ಪತ್ರಗಳಿಗೆ ಆಧಾರ್ ನೋಂದಣೆ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡುವರೇ ಕಾದು ನೋಡ ಬೇಕಿದೆ. ಈ ಬಗ್ಗೆ ತಾಲೂಕು ಕಚೇರಿಯ ಜನನ.ಮರಣ ದಾಖಲೆ ಶಾಖೆಗೆ ಜನಧ್ವನಿ ಸಂಪರ್ಕಿಸಿದಾಗ 2015ಏಪ್ರೆಲ್ ನಿಂದ ಇತ್ತ ಆನ್ ಲೈನ್ ಜನನ .ಮರಣ ಪ್ರಮಾಣ ಪತ್ರಗಳು ಆನ್ ಲೈನ್ ನಲ್ಲಿ ದೊರೆಯುತ್ತವೆ 2015 ರ ಏಪ್ರೆಲ್ ಹಿಂದಿನ ಜನನ .ಮರಣ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಲಾಗಿದ್ದು ಅವುಗಳನ್ನು ಆನ್ ಲೈನ್ ಗೆ ಎಂಟ್ರಿಮಾಡಿಲ್ಲ ಹಾಗಾಗಿ ಆನ್ ಲೈನ್ ನಲ್ಲಿ ಲಭ್ಯವಾಗಿತ್ತಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಕುರಡಿಹಳ್ಳಿ ಗ್ರಾಮದ ಮಹಿಳೆಯೊಬ್ಬರು ಮಗನ ಆಧಾರ್ ಕಾರ್ಡ್ ತಿದ್ದಪಡಿಗೆ ಕೈಬರಹ ಜನನ ಪ್ರಮಾಣ ಪತ್ರಹಿದು ತಾಲೂಕು ಕಚೇರಿ ಬಳಿ ಅಲೆದಾಡುವ ದೃಶ್ಯ ಜನಧ್ವನಿ ಕ್ಯಾಮರಕಣ್ಣಿಗೆ ಸೆರೆಯಾಗಿದೆ

ರಸಗೊಬ್ಬರ ಮಾರಾಟರನ ಸಲಹೆ ಕೇಳಿ ಔಷಧಿ ಸಿಂಪರಣೆ ಬೆಳೆ ನಷ್ಟ- ರೈತರನಿಗೆ ಜಿಎಸ್ ಟಿ ಬಿಲ್ ಬದಲು ಎಸ್ಟಿಮೇಟ್ ಬಿಲ್ ….?

ಚಳ್ಳಕೆರೆ ಜನಧ್ವನಿ ವಾರ್ತೆ ಜು.25 ಟೊಮ್ಯೊಟೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ. ಜಮೀನಲ್ಲಿ ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದ ರೈತನಿಗೆ ಬರಸಿಡಿಲು ಬಡಿದಂತಾಗಿದೆ
ಹೌದು ಇದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಎನ್.ಮಹದೇವಪುರ ಗ್ರಾಮದ ರೈತ ಮಹಮದ್ ಜಾಫರ್ ತಮ್ಮ ಎರಡು ಎಕರೆ ಜಮೀನಿನಲ್ಲಿ 12 ಸಾವಿರ ಟೊಮೋಟ ಸಸಿಗಳನ್ನು ನಾಟಿ ಮಾಡಿದ್ದು ಬೆಳೆ ಚನ್ನಾಗಿ ಬಂದಿತ್ತು ಟೊಮೆಟೋ ಸಸಿ ಅತಿ ಬೇಗ ಬೆಳವಣಿಗೆಗಾಗಿ ಚಳ್ಳಕೆರೆ ನಗರದ ಶ್ರೀ ಕರಿ ಬಸವೇಶ್ವರ ಫರ್ಟಿಲೈಜರ್ ಮಾಲಕರು ರಂಗೋಲಿ ಔಷಧಿಯನ್ನು ಸಿಂಪರಣೆ ಮಾಡು ಸಸಿ ಬೇಗನೆ ಬೆಳೆಯುತ್ತದೆ ಎಂದು ಸಲಹೆ ನೀಡಿದ ಮೇರೆಗೆ ಜು.3 ರಂದು ಮರುದಿನ ಟೊಮ್ಯೊಟೆ ಬೆಳೆಗೆ ಔಷಧಿ ಸಿಂಪರಣೆ ಮಾಡಿದ್ದಾರೆ.
ಔಷಧಿ ಸಿಂಪರಣೆ ಮಾಡಿದ ಎರಡು ದಿನಗಳ ನಂತರ ನೋಡಿದರೆ ಟೊಮ್ಯಾಟೊ ಬೆಳೆ ಸುಟ್ಟಂತಾಗಿ ಶೇಕಡ 90 ಬೆಳೆ ನಾಶವಾಗಿರುವುದು ಕಂಡು ಬಂದಿದೆ. ಅಂಗಡಿ ಮಾಲಿಕರನ್ನು ವಿಚಾರಿಸಿದರೆ ನಿರ್ಲಕ್ಷದ ಉತ್ತರ ನೀಡುತ್ತಾರೆ.


ಟೊಮ್ಯಾಟೊ ಬೆಲೆ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದ್ದು ಅತಿ ಹೆಚ್ಚು ಇಳುವರಿ ಹಾಗೂ ಕೈ ತುಂಬಾ ಲಾಭದ ನೀರೀಕ್ಷೆಯಲ್ಲಿದ್ದ ರೈತನಿಗೆ ರಸಾಯನಿಕ ಔಷಧಿ ಮಾರಾಟಗಾರಲ ಸಲಹೆ ಕೇಳಿ ಔಷಧಿ ಸಿಂಪರಣೆ ಮಾಡಿ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು. ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಔಷಧಿ ವಿತರಕನ ಮೇಲೆ ಸೂಕ್ತ ಕ್ರಮವಹಿಸಿ ಬೆಳೆ ನಷ್ಟ ಪರಿಹಾರಕೊಡಿಸುವಂತೆ ರೈತ ತೋಟಗಾರಿಕೆ ಇಲಾಖೆಗೆ ದೂರು ನೀಡಿದ್ದಾರೆ.
ಸರಗೊಬ್ಬರ ಕಾಯ್ದೆ ಉಲ್ಲಂಘಟನೆ.


ರೈತ ಖರೀದಿಸಿ ಔಷಧಿಗೆ ಜಿಎಸ್ ಟಿ ಬಿಲ್ ಬದಲು ಎಸ್ಟಿಮೇಟ್ ಬಿಲ್ ನೀಡಿರುವುದು
ಕಳಪೆ ಗೊಬ್ಬರ, ಬಿತ್ತನೆ ಬೀಜ ಹಾಗೂ ರಾಸಾಯನಿಕ ಔಷಧಿ ನಕಲಿ , ಕಳಪೆ ಮಾರಾಟ ತಡೆಯಲು ಕಡ್ಡಾಯವಾಗಿ ರೈತರಿಗೆ ಖರೀದಿಸಿದ ಬಿಲ್ ನೀಡಬೇಕು, ವಿತರಕರ ಸಹಿ ಹಾಕಬೇಕು ಆಧಾರ್ ಆಧಾರಿತ ಪಿಒಎಸ್ ಯಂತ್ರಗಳ ಮೂಲಕ ಕಡ್ಡಾಯವಾಗಿ ಹೆಬ್ಬೆಟ್ಟು ಪಡೆದು, ಬಿಲ್ ನೀಡಬೇಕು ಎಂಬ ನಿಯವಿದ್ದರೂ ಸಹ ರೈತರು ಖರೀದಿಸಿ ಗೊಬ್ಬರ ಹಾಗೂ ಔಷಧಿ ಖರೀದಿ ಮಾಡಿದ ಜಿಎಸ್ ಟಿ ಬಿಲ್ ನೀಡುವ ಬಲದು ಎಸ್ಟಿಮೇಟ್ ಬಿಲ್ ನೀಡಿ ಕೈತೊಳೆದುಕೊಳ್ಳುತ್ತಾರೆ.
ರೈತರು ಖರೀದಿಸಿ ಗೊಬ್ಬರ ಹಾಗೂ ಔಷಧಿಯಲ್ಲಿ ಲೋಪ ಕಾಣದೆ ಇದ್ದರೆ ಯಾವುದೇ ಸಮಸ್ಯೆ ಬರುವುದಿಲ್ಲ ಒಂದು ವೇಳೆ ಬಿತ್ತನೆ ಬೀಜ , ಗೊಬ್ಬರ ಔಷಧಿ ಸಿಂಪರಣೆ ಮಾಡಿದಾಗ ಬೆಳೆ ನಷ್ಟವಾದಗ ಮಾತ್ರ ರಯತರಿಗೆ ಸಮಸ್ಯೆಯಾಗುತ್ತದೆ ಅದೇ ರೀತಿ ನಾಯಕನಹಟ್ಟಿ ಹೋಬಳಿಯ ಎನ್.ಮಹದೇವಪುರ ಗ್ರಾಮದ ರೈತ ಮಹಮದ್ ಜಾಪರ ಬಹಳ ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಅಂಗಡಿಯವರೇ ಜಿಎಸ್ ಟಿ ಬಿಲ್ ನೀಡದೆ ಎಸ್ಟಿಮೆಟ್ ಬಿಲ್ ನೀಡಿದ್ದು ಔಷಧಿ ಸಿಂಪರಣೆ ಮಾಡಿ ಲಕ್ಷಾಂತರ ರೂ ಮೌಲ್ಯದ ಬೆಳೆ ಕಳೆದು ಕೊಂಡು ತೋಟಗಾರಿಗೆ ಇಲಾಖೆಗೆ ದೂರು ಕೊಡಲು ಹೋದಾಗ ಜಿಎಸ್ ಟಿ ಬಿಲ್ ನೀಡದೆ ಇರುವುದು ಬೆಳೆಕಿಗೆ ಬಂದಿದೆ.
ರಸಗೊಬ್ಬರ ಮತ್ತು ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟಗಾರ ನಿಯಮ ಉಲ್ಲಂಘನೆ ಕಂಡು ಬಂದಿದ್ದು ಈಗಾ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಜರುಗಿಸುವರು ಕಾದು ನೋಡ ಬೇಕಿದೆ.

ಆಂಧ್ರಗಡಿಗ್ರಾಮಗಳ ಶಾಲೆಗೆ ಹೋಗುವ ಶಿಕ್ಷಕರುಗೆ ವಿದ್ಯಾರ್ಥಿಗಳೆಗೆ ಸಾರಿಗೆ ಬಸ್ ನಿಲ್ದಾಣದಿಂದ8.40 ಬಸ್ ಬಿಡುವಂತೆ ಗಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

‌‌‌
ಚಳ್ಳಕೆರೆ ಜು.25 ಗಡಿ ಗ್ರಾಮಗಳ ಶಾಲೆಗೆ ತಲುಪುವ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿ ನಿಗಧಿತ ಸಮಕ್ಕೆ ಸಾರಿಗೆ ಬಸ್ ಬಿಡುವಂತೆ ಗಡಿಗ್ರಾಮಸ್ಥರು ಆಗ್ರಹಿಸಿದ್ದಾರೆ. ನಗರದ ಸಾರಿಗೆ ಬಸ್ ನಿಲ್ದಾಣದಿಂದ ಓಬಳಾಪುರ ಬಾದಿಹಳ್ಳಿ ಬಸಾಪುರ ಮಾರ್ಗದ ಸಾರಿಗೆ ಬಸ್ ಬೆಳಗ್ಗೆ 8.45 ಕ್ಕೆ ಬಿಡಬೇಕಾದ ಬಸ್ 9.10 ಕ್ಕೆ ಬಿಡುವುದರಿಂದ ನಗರದಿಂದ ಸುಮಾರು 45 ಕಿ.ಮೀ ದೂರದ ಗಡಿ ಗ್ರಾಮಗಳ ಶಾಲೆಗಳಿಗೆ ಹೋಗುವ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳು ಶಾಲೆಗಳಿಗೆ ತಲುಪಲು ವಿಳಂಬವಾಗುತ್ತಿದ್ದು ಪ್ರತಿ ನಿತ್ಯ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆಬ8.45 ಕ್ಕೆ ಬಸ್ ಬಿಟ್ಟರೆ 10 ಗಂಟೆಗೆ ಶಾಲೆಗಳಿಗೆ ತಪುಪಲು ಸಹಕಾರಿಯಾಗುತ್ತದೆ ಎಂದು ಗಡಿ ಗ್ರಾಮಗಳಿಗೆ ಹೋಗುವ ಶಿಕ್ಷಕರು.ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸಾರಿಗೆ ವ್ಯವಸ್ಥಾಪರಿಗೆ ಗಮನಸೆಳೆದರೂ ವಿಳಂಬವಾಗಿ ಬಸ್ ಬಿಡಲಾಗುತ್ತಿದೆ. ಹಳ್ಳಿಗಳಿಗೆ ಬಸ್ ಬಿಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳ ಗಮನ ಸೆಳೆದರೆ ಶಾಸಕರ ಶಿಪಾರಸ್ ಪತ್ರ ಕೊಡಿಸಿ ಎನ್ನುತ್ತಾರೆ. ಆದರೆ ಸಂಜೆ.3.40 ರ ಸಮಯದಲ್ಲಿ ಬಸಾಪುರ ಗ್ರಾಮಕ್ಕೆ ಬಸ್ ಇಲ್ಲದಿದ್ದರೂ ಸಹ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರ ಸಂಬಂಧಿ ಶಿಕ್ಷಕಿಯೊಬ್ಬರು ಬಸಾಪುರ ಗ್ರಾಮಕ್ಕೆ ಹೋಗಿ ಕರೆತರಲಾಗುತ್ತಿದೆ ಇದಕ್ಕೆ ಯಾರು ಶಿಪರಾಸ್ ಪತ್ರ ಪಡೆದು ಬಸಾಪುರ ಗ್ರಾಮಕ್ಕೆ ಬಿಟ್ಟಿದ್ದಾರೆ ಎಂದು ಗ್ರಾಮಾರ ಆರೋಪವಾಗಿದೆ. ಈ ಬಗ್ಗೆ ಜನಧ್ವನಿ ಡಿಜಿಟಲ್ ಮೀಡಿಯಾ ಸಾರಿ

ಇಲಾಖೆ ವ್ಯವಸ್ಥಾಪಕರನ್ನು ದೂರವಾಣಿ ಮೂಲಕ ಯಾರೂ ಸಾರ್ ಬಸಾಪುರದಲ್ಲಿ ನಿಮ್ಮ ಸಂಬಂದಿ ಶಿಕ್ಷರೊಬ್ಬರಿಗೆ ಬಸ್ ಬಿಟ್ಟಿದ್ದೀರಂತೆ ಪ್ರಯಾಣಿಕರು ಕೇಳಿದರೆ ಶಾಸಕರ ಪತ್ರ ಕೊಡಿಸಿ ಎನ್ನುತ್ತೀರಂತೆ ಆಗಾದರೆ ಶಿಕ್ಷಕರೊಬ್ಬರನ್ನು ಕರೆತರಲು ಬಸಾಪುರ ಗ್ರಾಮಕ್ಕೆ ಬಸ್ ಕಳಿಸುತ್ತೀರಂತೆ ಎಂದು ಕೇಳಿದಾಗ. ಡಿಪೋ ಮ್ಯಾನೇಜರ್ ಉತ್ತರಿಸಿ ಇಲ್ಲಾ ಸಾರ್ ನಮ್ಮ ಸಂಬಂಧಿಕರು ಯಾರೂ ಇಲ್ಲ ಯಾರೋ ಡಿವಿಜನ್ ಕಚೇರಿಗೆ ಪೋನ್ ಮಾಡಿದ್ದರಂತೆ ಅದಕ್ಕೆ ಬಸಾಪುರಕ್ಕೆ ಕಳಿಸಲಾಗುತ್ತಿದೆ ವರತು ನಮ್ಮ ಸಂಬಧಿಕರಿಲ್ಲ ಎಂದು ಉತ್ತರಿಸಿದರು. ಈಗಲಾದರೂ ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ನಗರದಿಂದ ಪ್ರತಿನಿತ್ಯ ಬೆಳಗ್ಗೆ 9.10ರ ಬದಲಾಗಿ 8.40ಕ್ಕೆ ಬಸ್ ನಿಲ್ದಾಣ ಬಿಡುವ ವ್ಯವಸ್ಥೆ ಮಾಡುವರೇ ಕಾದು ನೋಡ ಬೇಕಿದೆ

.

ವಿದ್ಯುತ್ ಅವಘಡಕ್ಕೆ ಆಹ್ವಾನ ನೀಡುವಂತಿರುವ ಶಿಥಿಲವಾದ ವಿದ್ಯುತ್ ಕಂಬ.

ಚಳ್ಳಕೆರೆ:
ವಿದ್ಯುತ್ ಕಂಬ ಒಂದು ಸಂಪೂರ್ಣವಾಗಿ ಶಿಥಲಗೊಂಡಿದ್ದು ವಿದ್ಯುತ್ ಅವಘಡಕ್ಕೆ ಕೈ ಬೀಸಿ ಕರೆಯುವಂತಾಗಿದೆ.
ಚಳ್ಳಕೆರೆ ನಗರದ ಗಾಂಧಿನಗರ ಮಹಾತ್ಮ ಗಾಂಧಿ ಶಾಲೆ ಸಮೀಪ ವಕೀಲ ಎನ್.ತಿಪ್ಪೇಸ್ವಾಮಿ ಕಚೇರಿ ಮುಂಭಾಗದಲ್ಲಿ ವಿದ್ಯುತ್ ಕಂಬ ಸಂಪೂರ್ಣ ಶಿಥಿಲಗೊಂಡಿದ್ದು ಮಳೆ ಗಾಳಿಗೆ ಯಾವುದೇ ಸಂದರ್ಭದಲ್ಲಿ ಬೀಳುವಂತಾಗಿದ್ದು ಈ ರಸ್ತೆಯಲ್ಲಿ ಮೂರು ಶಾಲೆಗಳ ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ. ಅಲ್ಲದೆ ಇಲ್ಲಿ ವಾಹನಗಳ ಸಂಚಾರವು ಸಹ ಇರುತ್ತದೆ ಅಕ್ಕ ಪಕ್ಕದ ಮನೆಗಳು ಜನರು ವಾಸ ಮಾಡುತ್ತಿದ್ದು ವಿದ್ಯುತ್ ಕಂಬ ಬುಡದಿಂದ ಅರ್ಧದವರೆಗೆ ಸಂಪೂರ್ಣ ಬಿರುಕು ಬಿಟ್ಟಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೆ ಗಾಳಿಗೆ ಗಾಂಧಿನಗರದ ವೆಂಕಟೇಶ್ವರ ದೇವಸ್ಥಾನ ಮುಂಭಾಗದಲ್ಲಿ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದು ವೆಂಕಟೇಶ ಎನ್ನುವವರ ಆಟೋ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿತ್ತು.


ಸದ್ಯ ಈ ಸಮಯದಲ್ಲಿ ವಿದ್ಯುತ್ ಇಲ್ಲದ ಕಾರಣ ಯಾವುದೇ ಅಪಾಯ ವಾಗಿರಲಿಲ್ಲ
ಸಂಪೂರ್ಣ ಸಿಳಿ ಹೋಗಿರುವ ಈ ವಿದ್ಯುತ್ ಕಂಬ ಅಪಾಯ ತಂದೊಡ್ಡುವ ಮುನ್ನವೇ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬವನ್ನು ತೆಗೆದು ಬದಲಿ ವಿದ್ಯುತ್ ಕಂಬವನ್ನು ಹಾಕಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷತೆ ವಹಿಸಿದ್ದಾರೆ ಎಂದು ಚಳ್ಳಕೆರೆ ವಕೀಲರಾದ ಎನ್. ತಿಪ್ಪೇಸ್ವಾಮಿ, ಆರೂಪಿಸಿದ್ದಾರೆ..

ಶವಗಾರಕ್ಕೆ ಬೇಕಿದೆ ಶಸ್ತ್ರ ಚಿಕಿತ್ಸೆ -ಶಿಥಲೀಕರಣ ಘಟಕ


ಚಳ್ಳಕೆರೆ ಜು.24 ನಗರದ ಸಾರ್ವಜನಿಕ‌ಆಸ್ಪತ್ರೆ ಆವರಣದಲ್ಲಿರುವ ಶವಗಾರಕ್ಕೆ ಬೇಕಿದೆ ಶಸ್ತ್ರ ಚಿಕಿತ್ಸೆ. ಹೌದು ಇದು ಚಳ್ಳಕೆರೆ ನಗರದ ಹೃದಯ ಭಾಗದಲ್ಲಿ ಸಾರ್ಚಜನಿಕ ಆಸ್ಪತ್ರೆ ಆವರಣದಲ್ಲಿರುವ ಶವಗಾರ ಬಹಳ ಹಳೆಯದಾಗಿದ್ದು ಸುತ್ತ ಮುತ್ತಲಿನ ಪರಿಸರ ತ್ಯಾಜ್ಯ ಹಾಗೂ ಗಿಡಗೆಂಟೆಗಳಿಂದ ಕೂಡಿದ್ದು ಶವ ಮರಣೋತ್ತರ ಪರಿಕ್ಷೆ ಮಾಡುವಾಗ ಕೈಗಳಿಗೆ ಹಾಕಿಕೊಂಡ ಯ್ಯಾಂಡ್ ಗ್ಲೌಜ್ ಸಹ ಶವಗಾರದ ಮುಂದೆ ಹಾಕಲಾಗಿದೆ. ಆಸ್ಪತ್ರೆಯ ತ್ಯಾಜ್ಯವನ್ನು ಅಲ್ಲಲ್ಲಿ ಸುರಿದು ಬೆಂಕಿ ಹಚ್ಚಿ ಸುಡಲಾಗಿದೆ. ತ್ಯಾಜ್ಯದಿಂದ ಜಾನುವಾರುಗಳು ಜೀವ ಕಳೆದುಕೊಳ್ಳುವಂತಾಗಿದೆ.

{“remix_data”:[],”remix_entry_point”:”challenges”,”source_tags”:[“local”],”source_ids”:{},”source_ids_track”:{},”origin”:”unknown”,”total_draw_time”:2,”total_draw_actions”:5,”layers_used”:2,”brushes_used”:0,”photos_added”:0,”total_editor_actions”:{},”tools_used”:{“brushes”:1,”draw”:2,”shape_mask”:1,”addons”:2},”is_sticker”:false,”edited_since_last_sticker_save”:true,”containsFTESticker”:false,”used_sources”:{“version”:1,”sources”:[{“id”:”371299160012900″,”type”:”premium”}]}}


ಶವಾಗಾರಕ್ಕೆ ಬೇಕಿದೆ ಕಾಯಕಲ್ಪ.‌‌‌ ಚಳ್ಳಕೆರೆ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಮೃತಪಡುವವರ ಸಂಖ್ಯೆ ಜತೆಗೆ ಕೊಲೆ. ಆತ್ಮಹತ್ಯೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಟ್ಟ ಶವಗಳನ್ನು ಶವಗಾರಕ್ಕೆ ಸಾಗಿಸ ಬೇಕಾಗುತ್ತದೆ. ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ಅಪಘಾತದಲ್ಲಿ ಕೊಪ್ಪಳ.ರಾಯಚೂರು.ಬಳ್ಳಾರಿ ಸೇರಿದಂತೆ ನೂರರಾರು ಕಿ.ಮೀ ದೂರದ ಪ್ರಯಾಣಿಕರೇ ಹೆಚ್ಚು ಮೃತಪಡುತ್ತಿದ್ದು ಒಮ್ಮೆ ಎರಡು ಮೂರು. ಐದು ಜನಕ್ಕೂ ಮೇಲ್ಪಟ್ಟು ಮೃತಪಟ್ಟ ಪ್ರಕರಣಗಳಿವೆ. ಈಗಿರುವ ಶವಗಾರದಲ್ಲಿ 3 ರಿಂದ 4 ಶವ ಶೇಕರಣೆ ಮಾಡಲು ಸ್ಥಳವಿದೆ. ಅಪಘಾತದಲ್ಲಿ ದೂರದ ನಗರದವರು ಮೃತಪಟ್ಟಾಗ ಸಂಬಂಧಿಗಳು ಬರುಲು ವಿಳಂಭ ಕೆಲವು ಸಮಸ್ಯೆಯಿಂದ ಶವ ಮರಣೋತ್ತರ ವಿಳಂಬ ವಾಗುವ ಸಾಧ್ಯತೆ ಇದ್ದು ಶವಗಳನ್ನು ಎರಡು ದಿನ ಶೇಖರಣೆ ಮಾಡಿದರೆ ಕೊಳೆಯುವ ಸಾಧ್ಯತೆ ಇದ್ದು ಸಾರ್ವಜನಿಕ‌ ಆಸ್ಪತ್ರೆಯ ಶವಗಾರ ಶವಗಳ ಶೇಖರಣೆ ಸಾಮರ್ಥ್ಯ ಹೆಚ್ಚಿಸ ಬೇಕು ಹಾಗೂ ಶವಗಾರಕ್ಕೆ ಶೀತಲೀಕರಣ ಘಟಕ ಅಳವಡಿಸಬೇಕಿದೆ. ಶವಾಗಾರದಲ್ಲಿ ಕಡಿಮೆ ಸಾಮರ್ಥ್ಯ ಇರುವುದರಿಂದ ಶವಗಳಿಗೂ ಸರಿಯಾದ ಮುಕ್ತಿ ಸಿಗದಂತಾಗಿದೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಶವಗಾರದ ವಿಸ್ತರಣೆ ಹಾಗೂ ಶಿಥಲೀಕರ ಘಟಕ ಅಳವಡಿಸುವರೇ ಕಾದು ನೋಡ ಬೇಕಿದೆ.

ಎರಡು ವರ್ಷಗಳು ಕಳೆದರೂ ಪೂರ್ಣಗೊಳ್ಳದ ಘನತ್ಯಾಜ್ಯ ಘಟಕ ಕಾಮಗಾರಿ- ಮನೆಮನೆಗೆ ಹೋಗಿ ಸಂಗ್ರಹಿಸ ಬೇಕಾದ ಸ್ವಚ್ಚವಾಹಿತಿ ಮರದ ಕೆಳಗೆ ವಿಶ್ರಾಂತಿ…!.


ಚಳ್ಳಕೆರೆ ಜನಧ್ವನಿ ವಾರ್ತೆ ಜು.23 ರಸ್ತೆಗಿಳಿಯದೆ ವಿಶ್ರಾಂತಿಗೆ ಜಾರಿದ ‘ಸ್ವಚ್ಛ ವಾಹಿನಿ ವಾಹನ ಹಳ್ಳ ಹಿಡಿದ ಸ್ವಚ್ಚ ಭಾರತ ಯೋಜನೆ.
ಹೌದು ಇದು ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ‘ಸ್ವಚ್ಛ ಭಾರತ್ ಮಿಷನ್’ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಾರಂಭಿಸಿದ ‘ಘನ ತ್ಯಾಜ್ಯ ನಿರ್ವಹಣೆ’ಯು ಅಂಕಿ ಸಂಖ್ಯೆಗೆ ಮಾತ್ರ ಸೀಮಿತವಾಗಿದೆ ಎಂಬುದನಕ್ಕೆ ಇದು ತಾಜ ಸಾಕ್ಷಿಯಾಗಿದೆ.

ಸುಮಾರು ಎರಡು ವರ್ಷಗಳು ಕಳೆದರೂ ಪೂರ್ಣಗೊಳ್ಳದೆ ಘನ ತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡ ಕಾಮಾರಿ
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಯಿಂದ ಹಸಿಕಸ, ಒಣಕಸ ಸಂಗ್ರಹಿಸ ಸಂಗ್ರಹಿಸಲು ಎರಡು ಬಕೆಟ್ ನೀಡುವ ಬದಲು ಒಂದು ಬಕೆಟ್ ನೀಡಿ ಕೈತೊರೆದುಕೊಂಡರೆ. ಘನ ತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡ ಕಾಮಾರಿ ಸುಮಾರು ಎರಡು ವರ್ಷಗಳು ಕಳೆದರೂ ಪೂರ್ಣಗೊಳ್ಳದೆ ಇರುವ ಕಾರಣ ಕಸ ವಿಲೇವಾರಿ ಮಾಡುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಇರುವುದರಿಂದ . ಮನೆ ಮನೆಗೆ ಹೋಗಿ ಕಸ ಸಂಗ್ರಹಣೆಗಾಗಿ ಖರೀದಿಸ ಬೇಕಾದ ಸ್ವಚ್ಚವಾಹಿನಿ ಬಿಸಿಲು ಮಳೆ ಎನ್ನದೆ ತೋಟದ ಮರದಕೆಳೆಗೆ ನಿಂತಲ್ಲೇ ಕೆಟ್ಟು ಧೂಳು ಮುಕ್ಕುವಂತಾಗಿದೆ.
‘ಗ್ರಾಮದಲ್ಲಿ ಕಸ ಸಂಗ್ರಹಣೆ ಮಾಡುವ ವಾಹನ ಬಂದು ವರ್ಷಗಳೇ ಕಳೆದಿವೆ ಬಂದು ಹೊಸದರಲ್ಲಿ ಕೆಲವೇದಿನಗಳುಸಂಚರಿಸಿದ್ದು ಬಿಟ್ಟರೆ ಅದು ನಿಂತಲ್ಲೇ ತುಕ್ಕು ಹಿಡಿಯುವ ಹಂತಕ್ಕೆ ತಲುಪಿದೆ.
ಸ್ವಚ್ಚಭಾರತ್ ಮಿಷನ್ ಯೋಜನೆಯಡಿಯಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ
ಖರೀದಿಸಲಾದ ವಾಹನ ಹಾಗೂ ಘನತ್ಯಾಜ್ಯ ಘಟಕ ಕಟ್ಟಡ ಪೂರ್ಣಗೊಳ್ಳದೆ ಇರುವುದು ಸರ್ಕಾರದ ಹಣ ಪೋಲಾಗುತ್ತಿದೆ’ ಎಂಬುದು ಸಾರ್ಜನಕರಿಂದ ಕೇಳಿ ಬರುತ್ತಿವೆ.
ಹಸಿ, ಒಣ ಕಸ ಹಾಕಲು ಬಕೆಟ್ ಕೊಡಲಾಗಿದೆ. ಮನೆಗಳಿಂದ ಕಸ ಸಂಗ್ರಹಣೆ ಮಾಡಲು ವಾಹನ ಮಾತ್ರ ತಿರುಗಾಡುತ್ತಿಲ್ಲ. ಹಾಗಾಗಿ, ಜನರು ಬಕೆಟ್ಗಳಲ್ಲಿ ಕಸ ಹಾಕುವ ಬದಲು ಬಿಟ್ಟು ಬೇರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ.


ಮನೆ ಮನೆಗೆ ಹೋಗಿ ಕಸ ಸಂಗ್ರಹಣೆ ಮಾಡ ಬೇಕಾದ ವಾಹನ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವುದು.
ಕಸದ ವಾಹನ ಬಾರದೆ ಇರುವುದು ಹಾಗೂ ಜಾಗೃತಿ ಕೊರತೆಯಿಂದ ಕಸವನ್ನು ಮನೆ ಅಕ್ಕಪಕ್ಕ ಚರಂಡಿಯಲ್ಲಿ ಎಸೆಯುವುದು ಅನಿರ್ವಾಯವಾಗಿದೆ
ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ ಎದುರಿಸುವಂತಾಗಿದೆ.

ಇದು ಕೇವಲ ಗೋಪನಹಳ್ಳಿ ಗ್ರಾಪಂ ಕಚೇರಿಯ ಕಥೆಯಲ್ಲಿ ಬಹುತೇ ಗ್ರಾಪಂ ಕಚೇರಿಗಳಲ್ಲಿ ಘನತ್ಯಾಜ್ಯ ವಿಲೆವಾರಿ ಘಟಕಗಳ ಹಾಗೂ ಸ್ವಚ್ಚವಾಹಿನಿಗಳ ಕಥೆಯಾಗಿದೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಘಟನತ್ಯಾಜ್ಯ ಘಟಕದ ಕಾಮಗಾರಿ ಪೂರ್ಣಗೊಳಿಸುವ ಜತೆಗೆ ನಿಂತಲ್ಲೆ ನಿಂದ ಸ್ವಚ್ಚವಾಹಿನಿ ಯನ್ನು ಮನೆ ಮೆನೆ ಸಂಚರಿಸಿ ಕಸ ಸಂಗ್ರಹಣೆ ಮಾಡುವಂತೆ ಮಾಡುವರೇ ಕಾದು ನೋಡ ಬೇಕಿದೆ.

ಮಳೆಗಾಲಕ್ಕೆ ಮತ್ತೆ ಮರುಕಳಿಸಿದ”ಡಾಗ್ ಸರ್ಕಲ್” ರಸ್ತೆ ಸಮಸ್ಯೆ -ಎಸ್ ವಿ ರಂಗನಾಥ್


ಹಿರಿಯೂರು ಟೌನ್ ವೇದಾವತಿ ನಗರದ 3 ನೇ ವಾರ್ಡ್” ಡಾಗ್ ಸರ್ಕಲ್” ರಸ್ತೆ ಸಮಸ್ಯೆ ಮಳೆಗಾಲಕ್ಕೆ ಮತ್ತೆ ಮರುಕಳಿಸಿದೆ ಎಂದು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ
ಎಸ್ ವಿ ರಂಗನಾಥ್ ತಿಳಿಸಿದ್ದಾರೆ.
ಚಂದ್ರಾ ಲೇ ಔಟ್ ಮತ್ತು ಶಿವಶಂಕರಪ್ಪ ಲೇ ಔಟ್ ಗಳ ಮದ್ಯದಲ್ಲಿ 40 ಅಡಿಗಳ ರಸ್ತೆ, ನಗರ ಯೋಜನೆ ಅನುಮೋದಿತ ನಕ್ಷೆಯಲ್ಲಿ ಇದ್ದಾಗ್ಯೂ ಕೇವಲ 18 ರಿಂದ 20 ಅಡಿಗಳ ರಸ್ತೆ ಚಾಲ್ತಿ ಇದ್ದು ಜಿಟಿ ಜಿಟಿ ಮಳೆಗೆ ಕೆಸರು ಗದ್ದೆಯಂತಾಗಿದೆ,ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಜಾರಿ ಬೀಳುವಂತೆ ಆಗಿದೆ. ಕಾರುಗಳು ಎದುರಿಗೆ ಬಂದರೆ ಎದುರುದಾರ ವಾಹನಗಳಿಗೆ ಜಾಗವೆ ಇಲ್ಲ.
ತಗ್ಗು ಗುಂಡಿ ಮುಚ್ಚಿ ರಸ್ತೆ ಸಮತಟ್ಟು ಮಾಡುವಂತೆ ಪೌರಾಯುಕ್ತರು ನಾಲ್ಕೈದು ಬಾರಿ ಆರೋಗ್ಯ ನಿರೀಕ್ಷಕರಿಗೆ ಹೇಳಿದ್ದಾರೆ. ಆದಾಗ್ಯೂ ಅವರು ರಸ್ತೆ ಸಮತಟ್ಟು ಮಾಡದೆ ತಾತ್ಸಾರ ಮಾಡಿದ್ದಾರೆ.ತಗ್ಗು ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳ ಆಶ್ರಯತಾಣವಾಗಿ ಮಲೇರಿಯ,ಚಿಕೂನ್ ಗುನ್ಯಾ,ಡೆಂಗ್ಯೂ ರೋಗ ಹರಡುವ ಸಾಧ್ಯತೆ ಇರುತ್ತದೆ. ಹೆಸರಿಗೆ ಮಾತ್ರ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಈ ಭಾಗದ ನಾಗರೀಕರಿಗೆ ಓಡಾಡಲು ಸಮರ್ಪಕವಾಗಿ ರಸ್ತೆ ಇರುವುದಿಲ್ಲ.
ಪ್ರಯುಕ್ತ ನಗರಸಭೆ ಪೌರಾಯುಕ್ತರು ಡಾಗ್ ಸರ್ಕಲ್ ರಸ್ತೆ ಮದ್ಯದಲ್ಲಿರುವ ತಗ್ಗು ಗುಂಡಿಗಳನ್ನು ಮುಚ್ಚಿಸಿ,ಹೊಸದಾಗಿ ನಾಲ್ಕೈದು ಬೀದಿ ದೀಪ ಹಾಕಿಸಿಕೊಡಬೇಕೆಂದು ಎಸ್ ವಿ ರಂಗನಾಥ್ ಮನವಿ ಮಾಡಿದ್ದಾರೆ.

You cannot copy content of this page