ಜನಧ್ವನಿ

ಪೂರ್ಣಗೊಳ್ಳದ ಕಾಮಗಾರಿ -ನಿಂತಲ್ಲೇ ನಿಂತ ಕೊಳಚೆ ನೀರು..ಸಾಂಕ್ರಮಿಕ ರೋಗಭೀತಿಯಲ್ಲಿ ನಾಗರೀಕರು…


ಚಳ್ಳಕೆರೆ ಜನಧ್ವನಿ ವಾರ್ತೆವಮೇ,25 ನಗರದ ಚರಂಡಿಯಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದು, ಸೊಳ್ಳೆಗಳ ಕಾಟದಿಂದ ಸಾಂಕ್ರಮಿಕ ರೋಗಗಳಿಗೆ ಕೈಬೀಸಿ ಕರೆಯುವಂತಾಗಿದೆ.


ಹೌದು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ರಾಜಕಾಲುವೆಗೆ ನಿರ್ಮಿಸಿದ ಸೇತುವೆ ಕಾಮಗಾರಿ ಸುಮಾರು ಮೂರು ವರ್ಷಗಳಿಂತ ಕುಂಟುತ್ತಾ .ತೆವಳುತ್ತಾ ಸಾಗಿರುವುದು ಕಾಮಗಾರಿ ಪೂರ್ಣಗೊಳಿಸದೇ ಇರುವುದರಿಂದ ಇಡಿ ನಗರದ ಕೊಳಚೆ ನೀರು ಹರಿದು ಬಂದು ರಾಷ್ಟ್ರೀಯ ಹೆದ್ದಾರಿಗೊಂದಿಕೊಂಡು ನಿಂತು ಮಿನಿಕೆರೆಯಾಗಿದ್ದು ಇದು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದ್ದು ಸುತ್ತಮುತ್ತಲ ನಾಗರೀಕರಿಗೆ ಹಗಲು ರಾತ್ರಿ ಸೊಳ್ಳೆಗಳ ಕಡಿತದಿಂದ ಡೆಂಗ್ಯು.ಕಾಲರ ಮಲೇರಿಯದಂತಹ ಸಾಂಕ್ರಮಿಕ ರೋಗ ಭೀತಿ ಎದುರಾಗಿದೆ.

ಸುಮಾರು ವರ್ಷಗಳಿಂದ ನೀರು ಮುಂದಕ್ಕೆ ಹರಿಯದೇ ನಿಂತಿರುವುದರಿಂದ ಸುತ್ತ ಮುತ್ತಲ ಮನೆಗಳಿಗೆ ಹಾಗೂ ರಾಜಕಾಲುವೆಗೆ ಹೊಂದಿಕೊಂಡು ಪೆಟ್ರೋಲ್ ಬಂಕ್ ಇರುವುದರಿಂದ ಪೆಟ್ರೋಲ್ ಸಂಗ್ರಹಣೆಯ ನೆಲದೊಳಗಿನ ಸಂಪು ಗೆ ಜಲ ಬರಲಿದ್ದು ಇದರಿಂದ ಪೆಟ್ರೊಲ್ ಜತೆ ನೀರು ಮಿಶ್ರಣವಾಗುವ ಬೀತಿ ಒಂದು ಕಡೆಯಾದರೆ ಪೆಟ್ರೊಲ್ ಬಂಕ್ ಹಾಗೂ ಸುಮುತ್ತ ಹೋಟೆಲ್.ಗ್ಯಾರೇಜ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರಿಗೆ ಹಾಗೂ ಗ್ರಾಹಕರಿಗೆ ಸೊಳ್ಳೆಗಳ ಕಡಿತ ಹೆಚ್ಚಾಗಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಸುತ್ತಮುತ್ತಲಿನ ಜನರು ನರಕಯಾತನೆ ಅನುಭವಿಸುವಂತಾಗಿದೆ.

ಪೆಟ್ರೊಲ್ ಬಂಕ್ ಲಕ್ಷ್ಮಣ್ ರೆಡ್ಡಿ ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿ ಕೊಳಚೆ ನೀರು ಹರಿದು ಬಂದು ರಸ್ತೆ ಬದಿಯಲ್ಲಿಕೆರೆಯಂತೆ ನಿಂತಿದೆ. ಇದು ಗಬ್ಬು ವಾಸನೆ ಬೀರುತ್ತಿದ್ದು ಜನ ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.ಕಳೆದ ಮೂರು ವರ್ಷಗಳಿಂದ ಬಗೆ ಹರಿಯದ ರಾಜಕಾಲುವೆ ಸಮಸ್ಯೆ 2022 ರಲ್ಲಿ ಖುದ್ದು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ಈ ಸಮಸ್ಯೆ ಬಗ್ಗೆ ಸ್ಥಳಿಯ ಅಧಿಕಾರಿಗಳಿಗೆ ಸೂಚನೆ ನೀಡಿ ಸಾಕಷ್ಡು ಹಣ ಖರ್ಚು ಮಾಡಿ ನೀರು ಹಳ್ಳಕ್ಕೆ ಸಾಗಿಸುವ ಕಾಮಗಾರಿ ಪೂರ್ಣಗಳ್ಳದಿರಿವುದರಿಂದ ಸ್ಥಳಿಯರಿಗೆ ಸಮಸ್ಯೆ ಆಗುತ್ತಿದೆ ಈ ರೀತಿ ನೀರು ಮುಂದಕ್ಕೆ ಹರಿಯದೆ ವರ್ಷಗಟ್ಟಲೆ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗಗಳು ಹರುಡುತ್ತಿವೆ…

ಇದಕ್ಕೆ ಸಂಭಂದ ಪಟ್ಟ ಅಧಿಕಾರಿಗಳು‌ ಆದಷ್ಟು ಬೇಗ ಸಮಸ್ಯೆ ಬಗೆ ಹರಿಸಬೇಕಾಗಿ ಸ್ಥಳಿಯರಾದ ಲಕ್ಷ್ಮಣ ರೆಡ್ಡಿ , ವೆಂಕಟೇಶ್, ರಾಜೇಂದ್ರ ಭಗೀರಥ .ಕರಿಯಣ್ಣ ವೀರೇಶ್ ನಾಯಕ ಒತ್ತಾಯಿಸಿದ್ದಾರೆ

ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೊಬೈಲ್ ಹಿಂಪಡೆತ ಪಿಂಚಿಣಿಗಾಗಿ ವೃದ್ಧರು ಮುಖ್ಯ ಅಂಚೆ ಕಚೇರಿಗೆ ಅಲೆದಾಟ.


ಚಳ್ಳಕೆರೆ ಮೇ25ವೃದ್ಯಾಪ್ಯ, ಅಂಗವಿಕಲ ವೇತನ
ಸೇರಿದಂತೆ ವಿವಿಧ ಸಾಮಾಜಿಕ ಪಿಂಚಣಿಯೋಜನೆಯ
ಫಲಾನುಭವಿಗಳು ಅಂಚೆ ,ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಇದು ಚಳ್ಳಕೆರೆ ನಗರದ ಮುಖ್ಯ ಕಚೇರಿಯಲ್ಲಿ ಅಂಚೆ ವಿತರಕರಿಗೆ ನೀಡಿದ ಮೊಬೈಲ್ ಹಿಂಪಡೆದಿರುವುದರಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಸಿಮಾರು 20 ದಿನಗಳಿಂದ ಸ್ಥಗಿತಗೊಂಡಿದ್ದು ಅಂಚೆ ಕಚೇರಿಯ ಖಾತೆಯಲ್ಲಿ ವಿವಿಧ ಸಾಮಾಜಿಕ ಭದ್ರತಾ ಪಿಂಚಿಣಿ ಹಣ ಬಿಡಿಸಲು ಸಾಧ್ಯವಾಗುತ್ತಿಲ್ಲ ಖಾಸಗಿಯವರ ಬಳಿ ಹಣ ಬಿಡಿಸಿದರೆ 20 ರೂ ಹಣ ಪಡೆಯುತ್ತಾರೆ ಅಂಚೆ ಕಚೇರಿಯಲ್ಲಿ ಹಣ ಬಿಡಿಸಲು ಸಾಧ್ಯವಾದೆ ಖಾಸಗಿಯವರ ಬಳಿ ಹಣ ಬಿಡಿಸುವಂತಾಗಿದೆ . ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ನಗರದ ಮುಖ್ಯ ಅಂಚೆ ಕಚೇರಿಗೆಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುವರೇ ಕಾದು ನೋಡ ಬೇಕಿದೆ.

ಸರಕಾರಿ ಸಿಮ್ ಬಳಕೆ ಮಾಡದೆ ಪಿಡಿಒಗಳು-ಸಾರ್ವಜನಿಕರ ಆರೋಪ.


ಚಳ್ಳಕೆರೆ ಮೇ 25 ಸಾರ್ವಜನಿಕರಿಗೆ ಸೇವೆ ನೀಡಲು ಅನುಕೂಲವಾಗಲಿ ಎಂಬ ಉದ್ದೇಶಕ್ಕಾಗಿ ಸರಕಾರ ನೀಡಿದ ಸಿಮ್ ಗಳನ್ನು ಪಿಡಿಒಗಳು ಬಳಸುತ್ತಿಲ್ಲ. ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಹೌದು ಇದು ಚಳ್ಳಕೆರೆ ತಾಲೂಕಿನ 40 ಗ್ರಾ.ಪಂ. ಪಿಡಿಒ ಗಳಿಗೆ ಉಚಿತವಾಗಿ ನೀಡಿದ ಮೊಬೈಲ್‌ ಸಿಮ್ ಬದಲಿಗೆ ಖಾಸಗಿ ಮೊಬೈಲ್ ಸಿಮ್ ಬಳಸುತ್ತಿರುವುದರಿಂದ ಯಾರನ್ನು ಸಂಪರ್ಕಿಸಬೇಕೆಂಬುದು ತಿಳಿಯದಂತಾಗಿದೆ.

2010-11 ನೇ ಸಾಲಿನಲ್ಲಿ ಪಂಚಾಯತ್‌ ರಾಜ್‌ ಇಲಾಖೆಯು ಪ್ರತಿ ಪಿಡಿಒಗಳಿಗೆ ಬಿಎಸ್ಸೆನ್ನೆಲ್‌ ನಂಬರನ್ನು ನೀಡಲಾಗಿತ್ತು. ಸಾರ್ವಜನಿಕರ ಹಾಗೂ ಮೇಲಧಿಕಾರಿಗಳ ಸಂಪರ್ಕಕ್ಕೆ ಅನುಕೂಲವಾಗಲಿ ಎಂಬುದು ಇದರ ಉದ್ದೇಶವಾಗಿತ್ತು. ಮೊಬೈಲ್‌ ಸಿಮ್ ನೀಡಿದಾಗಲೇ ಯಾರೂ ಸ್ವಿಚ್ಡ್‌ ಆಫ್‌ ಮಾಡಬಾರದು, 24 ಗಂಟೆಗಳ ಕಾಲ ಫೋನ್‌ ಚಾಲನೆಯಲ್ಲಿಡಬೇಕು ಎಂದು ತಿಳಿಸಿತ್ತು. ಆದರೆ ಕೆಲವು ಪಿಡಿಒಗಳು ಸರಕಾರ ನೀಡಿದ ಬಿಎಸ್ಸೆನ್ನೆಲ್‌ ನಂಬರ್‌ನ್ನು ಬಳಸದೇ ರದ್ದಾಗಿದ್ದು ಆ ನಂಬರ್ ಬೇರೆಯವರಿಗೆ ಹೋಗಿದೆ ಖಾಸಗಿ ನಂಬರ್‌ಗಳನ್ನು ಬಳಸುತ್ತಿದ್ದಾರೆ. ಹೀಗಾಗಿ, ಪಿಡಿಒಗಳನ್ನು ಅಗತ್ಯವಿದ್ದಾಗ ಸಂಪರ್ಕಿಸುವುದು ಸಾರ್ವಜನಿಕರಿಗೆ ತಲೆನೋವಾಗಿದೆ.

ಸಿಮ್ ಬಳಕೆ ಮಾಡಿದ ಗ್ರಾಪಂ.

ಮೈಲನಹಳ್ಳಿ, ಘಟಪರ್ತಿ, ದೇವರೆಡ್ಡಹಳ್ಳಿ, ತಿಮ್ಮಪ್ಪಯನಹಳ್ಳಿ, ಮಲ್ಲೂರಹಳ್ಳಿ, ಗೌಡಗೆರೆ, ನನ್ನಿವಾಳ, ಅಬ್ಬೇನಹಳ್ಳಿ, ಮನ್ನೇಕೋಟೆ, ಓಬಳಾಪುರ, ರೇಣುಕಾಪುರ, ಗೋಪನಹಳ್ಳಿ ಒಟ್ಟು 14 ಗ್ರಾಪಂ ಪಿಡಿಒಗಳು ಸರಕಾರಿ ಸಿಮ್ ಬಳಕೆ ಮಾಡದೆ ದೂರ ಉಳಿದಿರುವ ಬಗ್ಗೆ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಸಂದೇಶ ಕೇಳಿ ಸುಸ್ತು: ಯಾವಾಗ ಕರೆ ಮಾಡಿದರೂ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ. ನೀವು ಕೆರೆ ಮಾಡಿದ ಸಂಖ್ಯೆ ಇನ್ ವ್ಯಾಲಿಡ್ ಆಗಿದೆ ಸ್ವಲ್ಪ ಸಮಯದ ನಂತರ ಕರೆ ಮಾಡಿ ಎಂಬ ಸಂದೇಶ ಬರುತ್ತಿದೆ. ಇನ್ನು ಕೆಲವು ಸಿಮ್ ಬೇರೆಯವರಿಗೆ ಹೋಗಿವೆ ಇದನ್ನು ಕೇಳಿ ಕೇಳಿ ಸಾರ್ವಜನಿಕರು ಸುಸ್ತಾಗುತ್ತಿದ್ದಾರೆ. ದಿನಪೂರ್ತಿ ಕರೆ ಮಾಡಿದಾಗಲೂ ಇದೇ ಸಂದೇಶ ಕೇಳಿದ ಕೆಲವರು ಪಿಡಿಒಗಳ ಮೇಲೆ ಅಸಮದಾನಕ್ಕೆ ಕಾರಣವಾಗಿದೆ.

.ಇನ್ನಾದರೂ ಮೇಲಧಿಕಾರಿಗಳು ಇತ್ತಕಡೆ ಗಮನಹರಿಸಬೇಕು. ಪಿಡಿಒಗಳು ಸಕರಿ ಸಿಮ್ ದೂರವಾಣಿ ಮೂಲಕ ಸಾರ್ವಜನಿಕ ಸಂಪರ್ಕಕ್ಕೆ ಸಿಗಲು ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗೌರಸಮುದ್ರ ಮಾರಮ್ಮ ಜಾತ್ರೆ ನಡೆಯುವ ಪ್ರದೇಶದಲ್ಲಿ ನಿತ್ಯ ಬರುವ ಭಕ್ತರಿಗಿಲ್ಲ ಸೌಲಭ್ಯ ಬಯಲೇ ಸ್ನಾನ, ಶೌಚಾಲಯ …


ಚಳ್ಳಕೆರೆ ಜನಧ್ವನಿ ವಾರ್ತೆ ಮೇ 23. ಸಾವಿರಾರು ವರ್ಷಗಳ ಇತಿಹಾಸವಿರುವ ದೇವಸ್ಥನಕ್ಕೆ ಬರುವ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೆ ನಲುಗುತ್ತಿದೆ.

ಹೌದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ನಡೆಯುವ ತುಮ್ಮಲು ಪ್ರದೇಶದಲ್ಲಿ ನೆಲಸಿರುವ ಮಾರಮ್ಮ ದೇವಸ್ಥಾನಕ್ಕೆ ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.
ರಾತ್ರಿ ತಂಗುವ ಮಹಿಳೆಯರಿಗೆ ಸ್ನಾನದ ಗೃಹ ಹಾಗೂ ಶೌಚಾಯಲಗಳಿಲ್ಲದೆ ಬಯಲೇ ಶೌಚಾಲಯ, ಸೀರೆಯ ಪರದೆ ಕಟ್ಟಿಕೊಂಡು ಮಹಿಳೆಯರು ಸ್ನಾನ ಮಾಡುವ ಪರಿಸ್ಥಿತಿ ಇದೆ. ಮಳೆ ಗಾಳಿ ಬಂದರೆ ಭಕ್ತರಿಗೆ ರಕ್ಷಣೆಗೆ ಇಲ್ಲಿ ಯಾವುದೇ ಸಮುದಾಯ ಭವನಗಳಿಲ್ಲದೆ ಬಿಸಿಲು ಮಳೆ,ಗಾಳಿಯಿಂದ ರಕ್ಷಣೆಗೆ ತೊಂಡರೆಯಾಗುತ್ತಿದೆ ಇತ್ತೀಚಿಗೆ ಭಕ್ತರು ಪೌಳಿಯನ್ನು ನಿರ್ಮಿಸಿದ್ದಾರೆ.
ಗೌರಸಮುದ್ರ ಗ್ರಾಮದ ಭಕ್ತಾಧಿಗಳ ಆರಾಧ್ಯ ದೇವತೆ ಮಾರಮ್ಮ ದೇವಿಯ ಸುಕ್ಷೇತ್ರ 500 ವರ್ಷಗಳ ಇತಿಹಾಸ ಹೊಂದಿದೆ. ಈ ದೇಗುಲವು ಮುಜರಾಯಿ ಇಲಾಖೆಗೆ ಒಳಪಟ್ಟಿದೆ ಎನ್ನಲಾಗಿದೆ ಆದರೆ ಮುಜರಾಯಿ ಇಲಾಖೆಗೆ ಸೇರಿಸಿದರುವ ಸಂಬಂಧಪಟ್ಟ ಇಲಾಖೆಯಲ್ಲಿ ದಾಖಲೆಗಳು ಲಭ್ಯವಿಲ್ಲ ಎನ್ನಲಾಗಿದೆ ಪ್ರತಿ ವರ್ಷದಲ್ಲಿ 20 ರಿಂದ 25 ಲಕ್ಷ ರೂ. ಆದಾಯ ಸಂಗ್ರಹವಾಗಲಿದೆ. ಆದರೂ ಮಾರಮ್ಮದೇವಿ ದೇವಸ್ಥಾನದಲ್ಲಿ ಮೂಲ ಸೌಕರ್ಯ ಮರಿಚೀಕೆಯಾಗಿದೆ.

ಜಾತ್ರೆ ಸಂದರ್ಭದಲ್ಲಿ ಮಾತ್ರ ಜನಪ್ರತಿ ನಿಧಿ ಹಾಗೂ ಅಧಿಕಾರಿ ಸಭೆ ಮಾಡಿ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆ ಯಾಗದಂತೆ ಎಲ್ಲಾ ಅಗತ್ಯ ಮೂಲ ಭೂತ ಸೌಲಭ್ಯಗಳನ್ನು ಒದಗಿಸುವಂತೆ ಹೇಳಲಾಗುತ್ತದೆ ಜಾತ್ರೆ ಮುಗಿದ ನಂತರ ಇತ್ತ ಯಾರು ಇಣಿಕಿ ನೋಡುವುದಿಲ್ಲ ಬಸ್ ತಂಗುದಾಣಗಳಿಲ್ಲ. ಭಕ್ತರಿಗೆ ಆರೋಗ್ಯ ಸಮಸ್ಯೆಯ ನಿವಾರಣೆಗೆ ಪ್ರಥಮ ಚಿಕಿತ್ಸಾ ಘಟಕ ಇಲ್ಲದಿರುವುದರಿಂದ 15 ಕಿ.ಮೀ.ದೂರದ ಬೇಡರೆಡ್ಡಿಹಳ್ಳಿ ಅಥವಾ 40 ಕಿ.ಮೀ. ದೂರವಿರುವ ಚಳ್ಳಕೆರೆಗೆ ಹೋಗಬೇಕಿದೆ.

ಗೌರಸಮುದ್ರ ಜಾತ್ರೆ ನಡೆಯುವ ತಮಲಿನಲ್ಲಿ ವಸತಿ ಮತ್ತು ಶೌಚಾಲಯಗಳಿಲ್ಲದೆ ಶುಕ್ರವಾರ ಮತ್ತು ಮಂಗಳವಾರ ಬರುವ ಮಹಿಳಾ ಭಕ್ತರು ಸೀರೆ ಕಟ್ಟಿಕೊಂಡು ಬಟ್ಟೆ ಬದಲಾಯಿಸಬೇಕಿದೆ.ಎಂದು ಬೇಸರ ವ್ಯಕ್ತಪಡಿಸಿದರು.


ಗ್ರಾಪಂ ಸದಸ್ಯ ಶಶಿಕುಮಾರ್ ಮಾತನಾಡಿ, ಮುಜರಾಯಿ ಇಲಾಖೆಗೆ ದೇವಿಯ ದುಡ್ಡು ಬೇಕೇ ಹೊರತು ಯಾತ್ರಿ ನಿವಾಸವಾಗಲಿ, ಶೌಚಾಲಯವಾಗಲಿ ಕಟ್ಟಿಸುತ್ತಿಲ್ಲ ಊರಿನವರು ತಾತ್ಕಾಲಿಕ ಶೌಚಾಲಯಗಳು ಜಾತ್ರೆಯಲ್ಲಿ ನಿರ್ಮಾಣ ಮಾಡುವುದು ಬೇಡ ಶಾಶ್ವತವಾಗಿ ಶೌಚಾಲಯ , ಸ್ನಾನದ ಗೃಹ, ನಿರ್ಮಿಸಬೇಕು ಎಂದು ಗಮನಸೆಳೆದಿದ್ದಾರೆ.

ಶಾಲಾ ಆವರಣದಲ್ಲಿ ಕಸದ ರಾಶಿ..ಕುಡುಕರೆ ಅಡ್ಡೆಯಾದ ಶಾಲಾ ಆವರಣ..

ಚಳ್ಳಕೆರೆ ಮೇ.22 ಇದು ಜ್ಞಾನ ದೇಗುಲ ಕೈ ಮುಗಿದು ಒಳಗೆ ಬನ್ನಿ ಎಂಬ ಬದಲಾಗಿ ಇದು ಕುಡುಕರ ಅಡ್ಡೆ ಕೇಂದ್ರನಾ ಎಂಬ ಅನುಮಾನೆ ಎಡೆ ಮಾಡಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ‌ ಶಾಲಾ ಅವರಣದಲ್ಲಿ ಮದ್ಯದ ಬಾಟಲು. ಕಸದ ತ್ಯಾಜ್ಯದಿಂದ ತುಂಬಿ ಗೊಬ್ಬು ವಾಸನೆಯಿಂದ ಸಾಂಕ್ರಮಿಕ ರೋಗಳ ಉತ್ಪತ್ತಿ ಕೇಂದ್ರವಾಗಿದೆ.

ಶಾಲಾ ಆವರದಲ್ಲಿ ಬಳಕೆಗಾಗಿ ನಿರ್ಮಿಸಿದ ನೀರಿನ ತೊಟ್ಟಿ ತುಂಬಿ ಹರಿಯುತ್ತಿದ್ದು ನೀರೂ ಸಹ ಮಲಿನಗೊಂಡಿದ್ದು ಸೊಳ್ಳೆಗಳ ತಾಣವಾಗಿದೆ ಇನ್ನೇನು ಶಾಲೆ ಪ್ರಾರಂಭವಾಗಲು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದ್ದು ಇಂತಹ ಮಲೀನವಾದ ಸ್ಥಳ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಇದೆ. ಗ್ರಾಮೀಣ ಭಗಾದಲ್ಲಿ ಅಕ್ರಮ ಮದ್ಯ ಮಾರಾಟದಿಂದಾಗಿ ಶಾಲಾ ಆವರಣಗಳು ಕುಡುಕರ ಅಡ್ಡೆಗಳಗಾಗಿವೆ .


ಶಾಲಾ ಆವರಣದಲ್ಲಿ ಮದ್ಯದ ಬಾಟಲಿ ಹಾಗೂ ಕಸದ ರಾಶಿಯನ್ನು ಸ್ವಚ್ಚತೆ ಮಾಡುವವರು ಯಾರು ..? ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಮೂಡಿದೆ. ಈಗಲಾದರೂ ಸಂಬಂಧಪಟ್ಟ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸ್ವಚ್ಚತೆಗೆ ಮುಂದಾಗುವರೇ ಕಾದು ನೋಡ ಬೇಕಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ -ಪೋಷಕರ ಶೋಷಣೆ ಅಧಿಕ ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳು ಕಣ್ಮುಚ್ಚಿ ಕುಳಿತಿರುವಂತ ಸಾರ್ವಜನಿಕ ಶಿಕ್ಷಣಇಲಾಖೆ


ಚಿತ್ರದುರ್ಗ:
ಪ್ರಸಕ್ತ ಸಾಲಿನ 2024-25 ರ ಹೊಸ ಶೈಕ್ಷಣಿಕ ವರ್ಷ ಮೇ 29 ರಿಂದ ಅಧಿಕೃತವಾಗಿ ಶುರುವಾಗುತ್ತದೆ. ಆದರೆ ಬಹುತೇಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಶಾಲಾ ಮಕ್ಕಳ ಮರು ಪ್ರವೇಶಾತಿ ಸೇರಿದಂತೆ ಹೊಸ ಪ್ರವೇಶವನ್ನು ಮುಗಿಸುವ ಹಂತದಲ್ಲಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಪ್ರವೇಶ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿದ್ದಾರೆಂಬುದು ಮಕ್ಕಳ ಪೋಷಕರ ಆರೋಪವಾಗಿದೆ.
ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾರದೇ ಹಂಗಿಲ್ಲದೇ ಕಾನೂನು ಮೀರಿ ಶುಲ್ಕ ವಸೂಲಿ ಮಾಡುತ್ತಿರುವುದಲ್ಲದೆ, ದೊಡ್ಡ ಪ್ರಮಾಣದಲ್ಲಿ ಶುಲ್ಕ ಹೆಚ್ಚಳ ಮಾಡಿವೆ. ಆದರೂ ಸಂಬಂಧಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕೂತಿದ್ದಾರೆ. ಇದರಿಂದಾಗಿ ಮಕ್ಕಳು ಮತ್ತು ಪೋಷಕರ ಶೋಷಣೆ ನಿರಂತರವಾಗಿ ನಡೆಯುತ್ತಿದ್ದುಶಾಲಾ ಮಕ್ಕಳ ಪಾಲಕರು ಚಿಂತಿತರಾಗಿದ್ದಾರೆ.
ಸಿಬಿಎಸ್ಇ, ಐಸಿಎಸ್ಇ ಮತ್ತು ಎಸ್ ಎಸ್ ಎಲ್ ಸಿ ಬೋರ್ಡ್ ಗೆ ಸಂಯೋಜಿತ ಕೆಲ ಖಾಸಗಿ ಶಾಲೆಗಳು ಮನಬಂದಂತೆಶುಲ್ಕ ಏರಿಕೆ ಮಾಡಿದ್ದು ಪ್ರತಿಷ್ಟಿತ ಶಾಲೆಗಳಲ್ಲಿನ ಕಲಿಕೆ ಎನ್ನುವುದು ಬಡಜನರಿಗೆ ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದೆ.ಖಾಸಗಿ ಶಿಕ್ಷಣ ಸಂಸ್ಥೆಗಳ ಅಸಹಕಾರದಿಂದ ಬಿಇಒಗಳು ಕೈಕಟ್ಟಿ ಕೂರುವಂತಾಗಿರುವುದು ಗುಟ್ಟಾಗಿ ಉಳಿದಿಲ್ಲ.
ಎಲ್ ಕೆಜಿ, ಯುಕೆಜಿ, 1ನೇ ತರಗತಿ ಹೀಗೆ ಮಕ್ಕಳ ಪ್ರವೇಶಾತಿಗೆ ಜಿಲ್ಲಾ ಮಟ್ಟದ ಖಾಸಗಿ ಸಂಸ್ಥೆಗಳಲ್ಲಿ ಆ ಶುಲ್ಕ, ಈ ಶುಲ್ಕ ಎಂದು ಬಿಂಬಿಸಿ ಕನಿಷ್ಟ 50ಸಾವಿರದಿಂದ ಲಕ್ಷರೂ. ತನಕ ಶುಲ್ಕ ಪಡೆಯಾಲಾಗುತ್ತಿದೆ.
ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರವಾಗಿ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವಂತಿಲ್ಲ.ಅದು ಆಯಾ ಶಾಲೆಗೆ ಸಂಬಂದಿಸಿದ್ದು ಎಂಬುದಾಗಿ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ನೀಡಿದ ತೀರ್ಪು ನೀಡಿದ ಮೇಲೆ ಖಾಸಗಿ ಶಾಲೆಗಳಿಗೆ ವರದಾನವಾಗಿದ್ದು ಮನ ಬಂದಂತೆ ಶುಲ್ಕ ಏರಿಕೆ ಮಾಡಿವೆ.
ಶುಲ್ಕ ಏರಿಕೆ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನುಕೂಲವಾಗಿದ್ದು ಶಾಲೆಯಲ್ಲಿ ಬೋಧನೆ ಮಾಡುವಂತ ಶಿಕ್ಷಕರ ವೇತನ ಹೆಚ್ಚಳ ಮಾಡುತ್ತಿಲ್ಲ. ಶಾಲಾ ಆಡಳಿತ ಮಂಡಳಿ ಶಾಲಾ ಸಿಬ್ಬಂದಿಗೆ ಸರಿಯಾಗಿ ವೇತನ ನೀಡುವುದಿಲ್ಲ.ಕಾನೂನು ಉಲ್ಲಂಘಿಸಿ ಶಿಕ್ಷಕರಿಗೆ , ಸಿಬ್ಬಂದಿಗಳಿಗೆ ಕಡಿಮೆ ವೇತನ ನೀಡಿ ಶೋಷಿಸಲಾಗುತ್ತಿದೆ. ಎಂಬುದು ಮಕ್ಕಳ ಪೋಷಕರ ಆರೋಪವಾಗಿದೆ.
ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲೇ ಪಾಲಕರ ಬಳಿ ಇಡು ಗಂಟಿನಂತೆ ದೊಡ್ಡ ಮೊತ್ತ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕಾಗಿದೆ ಎಂಬುದಾಗಿ ಮಕ್ಕಳ ಪೋಷಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಶಾಲಾ ದಾಖಲೆಯಲ್ಲಿ ಜಾತಿ ತಿದ್ದುಪಡಿಗೆ ಅವಕಾಶ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ:ರಂಗನಾಥ್


ಹಿರಿಯೂರು :
ಶಾಲಾ ದಾಖಲೆಯಲ್ಲಿ ‘ಕುಂಚಿಟಿಗ’ ಜಾತಿ ಬದಲಿಗೆ ಒಕ್ಕಲಿಗ, ಲಿಂಗಾಯತ,ಅಥವಾ ನಾಮಾಧಾರಿ ಎಂದು ತಪ್ಪಾಗಿ ನಮೂದಾಗಿದ್ದಲ್ಲಿ ನಿಜವಾದ ಜಾತಿ ನಮೂದಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿ, ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್ ತಿಳಿಸಿದ್ದಾರೆ.
ಶಾಲಾ ದಾಖಲಾತಿಯ ಜಾತಿ ಕಾಲಂನಲ್ಲಿ ಜಾತಿಯ ವಿವರ ತಪ್ಪಾಗಿ ನಮೂದಾಗಿದ್ದರೆ ಅಥವಾ ತಿಳಿಯದೇ ಬೇರೊಂದು ಜಾತಿಯನ್ನು ನೀಡಿದ್ದರೆ ಪಾಲಕರು, ವಿದ್ಯಾರ್ಥಿಗಳು ಚಿಂತಿಸುವ ಅಗತ್ಯವಿಲ್ಲ.ಶಿಕ್ಷಣ ಇಲಾಖೆ ಆಯುಕ್ತರು ಜಾತಿ ತಿದ್ದುಪಡಿ ಕುರಿತು ಆದೇಶ ಹೊರಡಿಸಿದ್ದು,ರಾಜ್ಯದ ಎಲ್ಲಾ ಡಿಡಿಪಿಐ ಕಚೇರಿಗಳಿಗೆ ಆದೇಶದ ಪ್ರತಿ ರವಾನಿಸಿದ್ದಾರೆ.
ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಾಗ ಅನಿವಾರ್ಯ ಕಾರಣಗಳಿಂದ ಮಕ್ಕಳ ಪೋಷಕರು ಮಕ್ಕಳ ಜಾತಿಯನ್ನು ತಪ್ಪಾಗಿ ನಮೂದಿಸಿದ್ದಲ್ಲಿ ಅದನ್ನು ಸರಿಪಡಿಸುವಂತೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಆದ್ದರಿಂದ ಪಾಲಕರು ತಮ್ಮ ತಮ್ಮ ಮೂಲ ಜಾತಿಯನ್ನು ಶಾಲಾ ದಾಖಲಾತಿಯಲ್ಲಿ ನಮೂದಿಸಬಹುದಾಗಿದೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.
ತಹಶೀಲ್ದಾರ್ ಅವರು ನೀಡಿರುವ ಜಾತಿ ಪ್ರಮಾಣ ಪತ್ರದಲ್ಲಿ ಸಂಶಯಗಳಿದ್ದರೆ ಅಥವಾ ಅದರಿಂದ ಬಾಧಿತರಾದವರಿದ್ದರೆ ಮೀಸಲಾತಿ ಕಾಯ್ದೆ 1990 ಕಲಂ 4 (ಬಿ) ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು.ಶಾಲಾ ದಾಖಲೆಗಳಲ್ಲಿ ಮುಖ್ಯ ಶಿಕ್ಷಕರು ಯಾವುದೇ ವಿಚಾರಣೆ ಇಲ್ಲದೆ ಪಾಲಕರು ನೀಡಿದ ಮಾಹಿತಿ ಆಧಾರದ ಮೇಲೆ ಜಾತಿ ನಮೂದು ಮಾಡಿರುತ್ತಾರೆ.
ಆದ್ದರಿಂದ ಶಾಲಾ ದಾಖಲೆಗಳಲ್ಲಿ ನಮೂದಾದ ಜಾತಿಯೇ ನೈಜ ಜಾತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದ ಕಾರಣ ಶಾಲಾ ದಾಖಲಾತಿಗಳಲ್ಲಿ ಜಾತಿ ತಪ್ಪಾಗಿ ನಮೂದಾಗಿದ್ದರೆ ಸಂಬಂಧಪಟ್ಟ ಅರ್ಜಿದಾರರು ಮೊದಲು ಜಾತಿ ಪ್ರಮಾಣಪತ್ರ ಪಡೆದು ಸಂಬಂಧಸಿದ ಶಾಲಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಿ, ಶಿಕ್ಷಣ ಇಲಾಖೆಯ ಅನುಮತಿ ಪಡೆದು ತಿದ್ದುಪಡಿಮಾಡಿಕೊಳ್ಳಬಹುದಾಗಿದೆ.
ಸದರಿ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಶಾಲಾ ದಾಖಲಾತಿಗಳಲ್ಲಿ ಜಾತಿ ತಿದ್ದುಪಡಿ ಮಾಡಲು ಮುಖ್ಯ ಶಿಕ್ಷಕರು ಸಂಬಂಧಿಸಿದ ಬಿಇಒಗಳ ಮುಖಾಂತರ ಡಿಡಿಪಿಐಗೆ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಅವರು ಸರ್ಕಾರದ ಸುತ್ತೋಲೆಯಂತೆ ಪರಿಶೀಲನೆ ನಡೆಸಿ ದಾಖಲಾತಿಗಳು ಸರಿ ಇದ್ದರೆ ಜಾತಿ ತಿದ್ದುಪಡಿ ಮಾಡಲು ಆದೇಶ ನೀಡುವರು ಎಂಬುದಾಗಿ ರಂಗನಾಥ್ ತಿಳಿಸಿದ್ದಾರೆ.

ಕುವೆಂಪು ಶಾಲೆಗೊಂದಿಕೊಂಡ ಚರಂಡಿ ಹೂಳು ಸಾಂಕ್ರಮಿಕ ರೋಗ ಬೀತಿಯಲ್ಲಿ ಸುತ್ತ ಮುತ್ತಲಿನ ನಿವಾಸಿಗಳು…


ಚಳ್ಳಕೆರೆ ಜನಧ್ವನಿ ವಾರ್ತೆ ಮೇ18 ಚರಂಡಿಗಳಲ್ಲಿ ಸ್ವಚ್ಛತೆ ಕಾಣದೆ ಸಾಂಕ್ರಾಮಿಕ ರೋಗ ಹರಡುವ ಭೀತಿಯನ್ನು ನಾಗರೀರು ಮೂಗುಮುಚ್ಚಿಕೊಂಡು ಜೀವನ ಸಾಗಿಸುವಂತಾಗಿದೆ.

ಹೌದು ಇದು ಚಳ್ಳಕೆರೆ ನಗರದ ವಾಲ್ಮೀಕಿ ನಗರದ ಕುಂಪು ಶಾಲೆಗೆ ಹೊಂದಿಕೊಂಡ ಚರಂಡಿ ಹೂಳು ತುಂಬಿಕೊಂಡಿದ್ದು ಪಕ್ಕ ಖಾಲಿ ನಿವೇಶನಲ್ಲಿ ಗಿಡಗೆಂಟೆಗಳು ಬೆಳೆ ಕೊಳಚೆ ನೀರು ನಿಂತಿದ್ದು ಸೋಳ್ಳೆಗಳ ಉತ್ಪತ್ತಿ ಕೇಂದ್ರವಾಗಿದ್ದು ಸಾಂಕ್ರಮಿಕ ರೋಗಗಳಿಗೆ ಕೈಬೀಸಿ ಕರೆಯುವಂತಾಗಿದೆ. ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಮುಂದೆ ಹರಿಯದೇ ಮಡುಗಟ್ಟಿ ನಿಂತಿದೆ.


ಚರಂಡಿಯ ಅಕ್ಕಪಕ್ಕದಲ್ಲಿ ವಾಸ ಮಾಡುತ್ತಿರುವವರ ಪಾಡು ಹೇಳತೀರದಾಗಿದೆ. ಚಳರಂಡಿಯಲ್ಲಿ ಕುಡಿಯುವ ನೀರಿನ ನಲ್ಲಿಯೂ ಸಹ ಇದೆ.
ಚರಂಡಿ ಕುವೆಂಪು ಶಾಲಾ ಕಟ್ಟಡಕ್ಕೆ ಹೊಂದಿಕೊಂಡಿದ್ದು ಶಾಲಾ ಮಕ್ಕಳ ಹಾಗೂ ಸುತ್ತಮುತ್ತಲ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಚರಂಡಿಯಲ್ಲಿನ ಹೂಳು ಹಾಗೂ ಖಾಲಿ ನಿವೇಶದಲ್ಲಿನ ಗಿಡಗೆಂಟೆಗಳನ್ನು ತೆರವು ಗೊಳಿಸಿವರೇ ಕಾದು ನೋಡ ಬೇಕಿದೆ.

ಶ್ರೀ ಚಳ್ಳಕೆರೆಮ್ಮ,ವೀರಭದ್ರಸ್ವಾಮಿ ದೇವಸ್ಥಾನಗಳ ವಿವಾದಕ್ಕೆ ತೆರೆ-ಕಮಿಟಿ ಬದಲಾಗಿ ಟ್ರಸ್ಟ್ ರಚನೆಗೆ ಒಪ್ಪಿಗೆ.


ಚಳ್ಳಕೆರೆ ಮೇ 16 ನಗರದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಹಾಗೂ ಚಳಕರೆಮ್ಮ ಸಾರ್ವಜನಿಕ ದೇವಸ್ಥಾನಗಳಲ್ಲಿ ದುರಾಡಳಿತ ಹಾಗೂ ಹಣದ ದುರುಪಯೋಗ ವಾಗುತ್ತಿರುವ ಕಾರಣ ಈ ಎರಡು ದೇವಸ್ಥಾನವನ್ನು ಕೂಡಲೆ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧಾರ್ಮಿಕ ದತ್ತಿ ಇಲಾಖೆಯ ವಶಕ್ಕೆ ಪಡೆಯುವಂತೆ ಎಂ.ಎಸ್. ಬಸವರಾಜು ಜಿಲ್ಲಾಧಿಕಾರಿಗಳಿಗೆ ದೂರುಸಲ್ಲಿಸಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಗೆ ದೇವಸ್ಥಾನಗಳಿಗೆ ಭೇಟಿ ನೀಡಿ ಸಭೆ ನಡೆಸಿ ಆರೋಪಕ್ಕೆ ಸುಖಾಂತ್ಯ ಕಂಡಿದೆ.
ಚಳ್ಳಕೆರೆ ತಾಲೂಕು ಕಛೇರಿಯ ಕಂದಾಯ ಅಧಿಕಾರಿಗಳು ಸ್ಥಳ ಪರೀಶಿಲಿಸಿ ವರದಿ ನೀಡಲು ಎರಡು ಬಣದವರ ಸಮ್ಮುಖದಲ್ಲಿ ಸಭೆ ನಡೆಸಿದ್ದಾರೆ
ನಗರದ ಆರಾಧ್ಯದೇವ ಶ್ರೀ ವೀರಭದ್ರಸ್ವಾಮಿ ದೇವಾಲಯ ಹಾಗೂ ಶ್ರೀಚಳ್ಳಕೆರೆಮ್ಮ ದೇವಿ ದೇವಾಲಯದ ಎರಡು ದೇವಾಲಯಗಳಲ್ಲಿ ಸರಿಯಾದ ರೀತಿಯಲ್ಲಿ ದೇವರ ಆರಾಧನೆ ನಡೆಯುತ್ತಿಲ್ಲ ಆದ್ದರಿಂದ ಮುಜುರಾಯಿ ಇಲಾಖೆಗೆ ಸೇರಿಸಬೇಕು ಎಂಬ ವರದಿ ಮೇರೆಗೆ ಚಳ್ಳಕೆರೆ ತಾಲೂಕು ಕಂದಾಯ ಅಧಿಕಾರಿಗಳು ತಂಡ ದೇವಾಸ್ಥಾನಕ್ಕೆ ಸಂಬಂಧಿಸಿದ ಪದಾಧಿಕಾರಗಳ ಸಮಕ್ಷಮದಲ್ಲಿ ಸಭೆ ನಡೆಸಿದ್ದಾರೆ.
ಇನ್ನೂ ಸಭೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇರುವ ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ದೇವರುಗಳ ದೇವಾಲಯ ಹೊರತು ಪಡಿಸಿದರೆ ಬೇರೆ ಯಾವುದೇ ಮೂಲ ಆದಾಯ ಇಲ್ಲ ಇನ್ನೂ ಭಕ್ತರು ನೀಡಿದ ಅಲ್ಪ ಕಾಣಿಕೆ ಸಂದಾಯವಾಗುತ್ತಿದೆ, ಇದರಿಂದ ದೇವರ ಪೂಜಾ ಕೈಂಕಾರ್ಯಗಳು ಜರುಗುತ್ತಿವೆ, ಇದರಿಂದ ಮುಜರಾಯಿ ಇಲಾಖೆಗೆ ಒಳಪಡುವ ಯಾವುದೇ ಆಸ್ತಿ ಪಾಸ್ತಿ ಈ ದೇವಾಲಯಗಳಿಗೆ ಇಲ್ಲದೆ ಇರುವುದು ಕಂಡು ಬಂದಿದೆ ಎಂದು ಸಭೆಯಲ್ಲಿ ಚರ್ಚಿಸಿದ್ದಾರೆ, ಇನ್ನೂ ಪೂರ್ವಿಕರು ಯಾವ ರೀತಿಯಲ್ಲಿ ವಿಧಿ ವಿಧಾನ ಪದ್ದತಿಗಳನ್ನು ಅನುಸರಿಸಿಕೊಂಡು ದೇವಿಗಳ ಆರಾಧಕರು ಹಾಗಿದ್ದರು, ಆದೇ ರೀತಿಯಲ್ಲಿ ಸಂಪ್ರದಾಯ ಮುಂದುವರೆಸಿಕೊಂಡು ಹೋಗಲಾಗುವುದು ಹಾಗೂ ಈಗೀರುವ ಕೇವಲ “ಕಮಿಟಿ” ಬದಲಾಗಿ ‘ಟ್ರಸ್ಟ್” ಮಾಡಿಸಿಕೊಂಡು ಮುಂದುವರೆಸಲಾಗುವುದು ಎಂದು ಕಂದಾಯ ಅಧಿಕಾರಿಗಳಿಗೆ ಎರಡು ಬಣದವರು ಒಪ್ಪಿಕೊಂಡಿದ್ದಾರೆ.

ಪಟ್ಟದ ಐನೋರು ಬಸವರಾಜ್. ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸ ಇರುವ ಗುರುಪರಂಪರೆಯ ದೇವಾಲಗಳನ್ನು ಮುಜರಾಯಿ ಇಲಾಖೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳ ಗಮನ ಸೇಳೆದಿದ್ದೆ ಆದ್ದರಿಂದ ಕಂದಾಯ ಅಧಿಕಾರಿಗಳು ಸ್ಥಳ ಪರೀಶಿಲಿಸಿ ಮಾಹಿತಿ ಪಡೆಯಲು ಬಂದಿದ್ದರು, ಎರಡು ಬಣಗಳ ಸಮಕ್ಷಮದಲ್ಲಿ ಸಭೆ ನಡೆಸಿ ಅಂತಿಮವಾಗಿ ಈಗಿರುವ ಎರಡು ದೇವಾಲಯಗಳ ಕಮಿಟಿ ಬೇಡ ಅದರ ಬದಲಾಗಿ ಟ್ರಸ್ಟ್ ಮಾಡಿಸಿಕೊಂಡರೆ ಅಧಿಕೃತವಾಗುತ್ತದೆ, ಎಂದು ಕಂದಾಯ ಅಧಿಕಾರಿಗಳ ಗಮನ ಸೇಳೆದಿದ್ದೆವೆ ಎಂದು ತಿಳಿಸಿದ್ದಾರೆ.
ಧರ್ಮಧಶಿಗಳಾದ ಪಿಜಿ.ರಾಮಣ್ಣ, ಪಿ.ತಿಪ್ಪೆಸ್ವಾಮಿ ತಳವಾರ ಮುಖ್ಯಸ್ಥರು. ಮಾತನಾಡಿ ಪೂರ್ವಿಕರು ಆರಾಧನೆ ಮಾಡಿಕೊಂಡ ಪುರಾತನ ಈ ದೇವರುಗಳ ದೇವಾಲಯಕ್ಕೆ ಸಂಬಂಧಿಸಿದಂತೆ ದೇವಾಲಯ ಬಿಟ್ಟರೆ ಯಾವುದೇ ಆದಾಯ ಬರುವ ಆಸ್ತಿಗಳು ಇಲ್ಲ, ಆದ್ದರಿಂದ ಗ್ರಾಮದಲ್ಲಿ ಒಪ್ಪಿ ಟ್ರಸ್ಟ್ ಮಾಡಿಸಲು ಒಪ್ಪಿಗೆ ಸಹಿ ಮಾಡಲಾಗಿದೆ, ಈಗೀರುವ ಎಲ್ಲಾ ಬಾಬ್ತುದಾರರು ಯಥಾ ಪ್ರಕಾರ ಸಂಪ್ರದಾಯ ಮುಂದುವರೆಸಲಾಗುವುದು.–
ಇದೇ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರ ಪಿ.ಲಿಗೇಗೌಡ, ಗ್ರಾಮ ಲೆಕಕ್ಕಾಧಿಕಾರಿ ಪ್ರಕಾಶ್, ಧರ್ಮಧಶಿಗಳಾದ ಪಿಜಿ.ರಾಮಣ್ಣ. ಪಿ.ತಿಪ್ಪೆಸ್ವಾಮಿ, ದಳವಾಯಿಮೂರ್ತಿ, ನಾಗರಾಜ್, ಗೌಡ್ರುನಾಗಣ್ಣ, ಮಂಜಣ್ಣ, ಸೂರಯ್ಯ, ಚಿಕ್ಕಣ್ಣ, ರುದ್ರಣ್ಣ, ಬಸವರಾಜ್, ಹೆಚ್.ಮಂಜಣ್ಣ, ವಿ.ತಿಪ್ಪೆಸ್ವಾಮಿ. ಇತರರಿದ್ದರು.

ಪಾದಾಚಾರಿ ರಸ್ತೆಗಳ ಒತ್ತುವರಿ-ವಿದ್ಯಾರ್ಥಿಗಳು ಸಾರ್ವಜನಿಕರು ನಡುರಸ್ತೆಯಲ್ಲಿ ಓಡಾಟ..

ಚಳ್ಳಕೆರೆ ಮೇ.15 ಪಾದಾಚಾರಿ ರಸ್ತೆಗಳನ್ನು ಕೋಟಿ ಕೋಟಿ ಅನುದಾನ ಖರ್ಚುಮಾಡಿ ನಿರ್ಮಿಸಿ ಪಾದಚಾರಿ ರಸ್ತೆಯನ್ನು ವ್ಯಾಪಾರಸ್ಥರು ಒತ್ತುವರಿ ಮಾಡಿಕೊಂಡಿರುವುದರಿಂದ ಜನತೆ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಹೌದು ಇದು ಚಳ್ಳಕೆರೆ ನಗರದ ನೆಹರು ವೃತ್ತದಿಂದ ಚಿತ್ರದುರ್ಗ .ಪಾವಗಡ.ಬೆಂಗಳೂರು ರಸ್ತೆಯ ಎರಡು ಬದಿಯಲ್ಲಿ ನಗರಸಭೆವತಿಯಿಂದ ಕೋಟಿ ಕೊಇಟಿ ಅನುದಾನ ಖರ್ಚು ಮಾಡಿ ಪಾದಾಚಾರಿ ರಸ್ತೆಗಳನ್ನು ನಿರ್ಮಿಸಿದ ರಸ್ತೆಗಳನ್ನು ಗೂಡಂಗಡಿ. ವರ್ತಕರು. ತಳ್ಳೋಗಾಡಿಗಳನ್ನು ಅಕ್ರಮಿಸಿಕೊಂಡು ವ್ಯಾಪಾರಾಡುತ್ತಿದ್ದಾರೆ. ಇನ್ನು ಕೆಲವರು ಖಾಯಂ ಆಗಿ ಪಾದಾಚಾರಿ ರಸ್ತೆಗಳ ಮೇಲೆ ಗೋಡಂಗಡಿ ಶೆಡ್ ನಿರ್ಮಾಣದಿಂದ ಪಾದಾಚಾರಿಗಳಿಗೆ ರಸ್ತೆ ಭಾಗ್ಯವಿಲ್ಲದೆ ಮುಖ್ಯ ರಸ್ತೆ ಮೇಲೆ ಸಂಚರಿಸುವಂತಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ.ತಾಲೂಕು ಕಚೇರಿ ಮುಂಭಾಗದ ಪಾದಚಾರಿ ರಸ್ತೆ ಮೇಲೆ ಗೂಡಂಗಡಿಳು ಅಕ್ರಮಿಸಿಕೊಂಡರೆ ಪಾದಾಚಾರಿ ರಸ್ತೆಗೆ ಹೊಂದಿಕೊಂಡು ವಿವಿಧ ಕಡೆಯಿಂದ ಬಂದ ವಾಹನಗಳು ರಸ್ತೆ ಮೇಲೆ ನಿಲ್ಲಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಾರೆ. ರಸ್ತೆ ಅಗಲೀಕರದಿಂದ ಬೀದಿ ವ್ಯಾಪಾರಿಗಳಿಗೆ ರತ್ನಗಂಬಳಿ ಹಾಸಿದಂತಾದರೆ ಇತ್ತ ಪಾದಾಚಾರಿಗಳು ಜೀವ ಕೈಯಲ್ಲಿಡುದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

‌‌‌‌‌ ಚಿತ್ರದುರ್ಗ ರಸ್ತೆಯಲ್ಲಿ ಶಾಲಾ ಕಾಲೇಜು.ಸರಕಾರಿ ಕಚೇರಿಗಳು ಹೆಚ್ಚು ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಸರಕಾರಿ ಕಚೇರಿಗಳಿಗೆ ವಿವಿಧ ಸೌಲಭ್ಯಗಳನ್ನು ಪಡೆಯಲು ಯಾವಾಗಲು ಜನದಟ್ಟಣೆಯಿಂದ ಕೂಡಿರುತ್ತದೆ. ಪಾದಾಚಾರಿ ರಸ್ತೆ ಹಾಗೂ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುವುದರಿಂದ ಸಾವಿರಾರು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಂಚಾರ ಮಾಡುವುದರ ಜತೆಗೆ ವಾಹನ ದಟ್ಟಣೆ ಹೆಚ್ಚಾಗಿದೆ.ಫುಟ್‌ಪಾತ್‌ನ್ನು ವ್ಯಾಪಾರಿಗಳು ಅಕ್ರಮಿಸಿಕೊಂಡು ವಹಿವಾಟು ಮಾಡುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ಒಡಾಟ ಮಾಡಬೇಕಾದ ಅನಿವಾರ್ಯ ಎದುರಾಗಿ ಅಪಘಾತಗಳಿಗೆ ಆಹ್ವಾನ ನೀಡುವಂತಾಗಿದೆ. ಪಾದಚಾರಿಗಳ ಸುರಕ್ಷ ತೆ ನಿರ್ಲಕ್ಷತೆ ಒಳಗಾಗಿದೆ.

ಪಾದಾಚಾರಿಗಳು ಒತ್ತುವರಿಯಾಗಿದ್ದರೂ ಸಹ ತೆರವುಗೊಳಿಸಿವಲ್ಲಿ ನಗರಸಭೆ ಹಾಗೂ ಸಂಬಂಧ ಅಧಿಕಾರಿಗಳು ಮೌನವಹಿಸಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆಮಾಡಿದೆ. ಈಗಲಾದರೂ ಪಾದಾಚಾರಿಗಳ ರಸ್ತೆ ಒತ್ತುವರಿ ತೆರವುಗೊಳಿಸುವರೇ ಕಾದು ನೋಡ ಬೇಕಿದೆ.

You cannot copy content of this page