ಹಿರಿಯೂರು ಆ. 16
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯಲ್ಲದಕೆರೆ-ಹಿರಿಯೂರು ಮಾರ್ಗದಲ್ಲಿ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ಜಿಲ್ಲಾ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.
ಯಲ್ಲದಕೆರೆ-ಹಿರಿಯೂರು ಮಾರ್ಗದಲ್ಲಿ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿರುತ್ತದೆ. ಹಿರಿಯೂರು-ದಿಂಡಾವರ-ಚಿಗಳಿಕಟ್ಟೆ-ಯಲ್ಲದಕೆರೆ ಮಾರ್ಗದಲ್ಲಿ 2 ಸಿಂಗಲ್ ಹಾಗೂ ಹಿರಿಯೂರು-ಯಲ್ಲದಕೆರೆ-ಕೆ.ಕೆ.ಹಟ್ಟಿ-ಚಿಗಳಿಕಟ್ಟೆ-ಬ್ಯಾರಮಡು-ಶೇಷಪ್ಪನಹಳ್ಳಿ-ದಸೂಡಿ-ಹೊಯ್ಸಳಕಟ್ಟೆ ಮಾರ್ಗದಲ್ಲಿ 06 ಸಿಂಗಲ್ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ.
ಚಿತ್ರದುರ್ಗ-ಹಿರಿಯೂರು-ಹುಳಿಯಾರು ಮಾರ್ಗವಾಗಿ ಮೈಸೂರಿಗೆ ಕಾರ್ಯಾಚರಣೆಯಾಗುವ ಎಲ್ಲ ಸಾರಿಗೆಗಳು ಯಲ್ಲದಕೆರೆಯಲ್ಲಿ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿರುತ್ತದೆ. ವಿಭಾಗದಲ್ಲಿ ಸಂಪನ್ಮೂಲಗಳ ಕೊರತೆ ಇರುವುದರಿಂದ ಸಂಪನ್ಮೂಲಗಳ ಲಭ್ಯತೆ ಮೇರೆಗೆ ಹಿರಿಯೂರು-ಹುಳಿಯಾರು ಮಾರ್ಗದಲ್ಲಿ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲು ಪರಿಶೀಲಿಸಲಾಗುತ್ತಿದೆ ಎಂದು ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments