ಜನಧ್ವನಿ ವರದಿ ಎಫೆಕ್ಟ್-ಬಿಡಾಡಿ ದನಗಳನ್ನು ಮೂರು ದಿನದೊಳಗೆ ರಸ್ತೆಗೆ ಬಿಟ್ಟರೆ ದಂಡ ಹಾಗೂ ಸರಕಾರಿ ಗೋಶಾಲೆಗೆ ಸಾಗಿಸಲಾಗುವುದು ನಗರಸಭೆ ಅಧಿಕಾರಿಗಳು ಎಚ್ಚರಿಕೆ.

by | 15/10/23 | ಇಂಪ್ಯಾಕ್ಟ್

ಜನಧ್ವನಿ ಮೀಡಿಯಾ ಎಫೆಕ್ಟ್


ಚಳ್ಳಕೆರೆ ಜನಧ್ವನಿ ವಾರ್ತೆ ಅ.15. ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ನಾಗರಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ ಆದ್ದರಿಂದ ಬಿಡಾಡಿ ದನಗಳ ಮಾಲಿಕರು ತಮ್ಮ ದನಗಳನ್ನು ರಸ್ತೆಗೆ ಬರದಂತೆ ಎಚ್ಚರ ವಹಿಸಬೇಕು ಮತ್ತು ತಮ್ಮ ದನಗಳನ್ನು ಮನೆಯಲ್ಲಿ ಕಟ್ಟಿ ಹಾಕುವಂತೆ ನಗರಸಭೆ‌ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಹೌದು ಬಿಡಾಡಿ ದನಗಳಿಗೆ ಸಿಲಿಕಿ ಬೈನಲ್ಲಿ ಪೂಜೆಗೆ ಹೋಗುತ್ತಿದ್ದ ತಾಯಿ ಮಗ ಬಿದ್ದು ಗಾಡಗೊಂಡ ಘಟನೆ ಬಗ್ಗೆ ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬೆಳಕು ಚೆಲ್ಲಿದ ಕೆಲವೇ ಗಂಟೆಗಳಲ್ಲಿ ನಗರಸಭೆ ಅಧಿಕಾರಿಗಳು ವಾಹನದ ಮೂಲಕ ಧ್ವನಿವರ್ಧಕದಲ್ಲಿ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ‌ ಹಾಗೂ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಇಮಾಂಪುರ ಗ್ರಾಮದಲ್ಲಿ ಕಸ ಸಂಗ್ರಹಣೆ ಮಾಡುವ ವಾಹಬದಲ್ಲಿ ರಸ್ತೆಗೆ ಬಿಡುವ ಮಾಲಿಕರಿಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ. ನಗರದ ಮುಖ್ಯ ರಸ್ತೆ, ತಕಾರಿ ಮಾರುಕಟ್ಟೆ, ಬಸ್ ನಿಲ್ದಾಣದ ಸೇರಿದಂತೆ ಎಲ್ಲೆಂದರಲ್ಲಿ ಹಿಂಡು ಹಿಂಡಾಗಿ ನಿಲ್ಲುವ ಬಿಡಾಡಿ ದನಗಳು ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೊಂದರೆ ನೀಡುತ್ತಿವೆ. ಇನ್ನೂ ತರಕಾರಿ ಸೇರಿದಂತೆ ಅಗತ್ಯ ವಸ್ತಗಳನ್ನು ಕೈಯಲ್ಲಿಡಿದು ಸಾಗುವ ಜನರ ಹಿಂದೆ ಹೋಗಿ ಕೈಯಲ್ಲಿನ ಚೀಲಗಳನ್ನು ಬಾಯಿಂದ ಕಚ್ಚಿಕೊಂಡು ಚೆಲ್ಲಾಪಿಲ್ಲಿ ಮಾಡುತ್ತವೆ. ಅಲ್ಲದೆ ಗದ್ದಲದಲ್ಲಿ ಜಿಗಿಯುತ್ತ, ಎದುರಿಗೆ ಸಿಕ್ಕವರಿಗೆ ತಿವಿಯುತ್ತ ಓಡಾಡುತ್ತಿದ್ದು ಇದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರ ಅಸಮದಾನಕ್ಕೆ ಎಡೆ ಮಾಡಿತ್ತು . ಇನ್ನು ಮುಂದೆ ಬಿಡಾಡಿ ದನಗಳನ್ನು ಮೂರು ದಿನದೊಳಗೆ ರಸ್ತೆಗೆ ಬಿಟ್ಟರೆ ದಂಡ ಹಾಗೂ ಸರಕಾರಿ ಗೋಶಾಲೆಗೆ ಸಾಗಿಸಕಾಗುವುದು ಎಂದು ನಗರಸಭೆ ಅಧಿಕಾರಿಗಳು ದನಗಳ ಮಾಲಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *