ಜನಧ್ವನಿ ಮೀಡಿಯಾ ವರದಿ ಎಫೆಕ್ಟ್
ಚಳ್ಳಕೆರೆ ಜನಧ್ವನಿ ವಾರ್ತೆ ಅ.26. ಕಿರು ನೀರು ಸರಬರಾಜು ಟ್ಯಾಂಕ್ ಇದೆ. ನೀರಿನ ತೊಟ್ಟಿ ಇದೆ ನಲ್ಲಿಗಳೂ ಇವೆ ಆದರೆ ನೀರು ಮಾತ್ರ ಬರಲ್ಲ ಯಾರಿಗೆ ಹೇಳಲಿ ನಮ್ಮ ಕುಡಿಯುವ ನೀರಿನ ಪ್ರಾಬ್ಲಮ್ ? ಓಬಯ್ಯನಹಟ್ಟಿ ಗ್ರಾಮಸ್ಥರ ಅಳಲು. ಎಂಬ ತಲೆಬತಹದಡಿಯಲ್ಲಿ ಬುಧವಾರ ಜನಧ್ವನಿ ಮೀಡಿಯಾ ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಗುರುವಾರ ಬೆಳಗ್ಗೆ ಪಿಡಿಒ ಶ್ರೀನಿವಾಸ್ ಹಾಗೂ ಗ್ರಾಪಂ ಸದಸ್ಯರು ನೀರಿನ ವ್ಯವಸ್ಥೆ ಒದಗಿಸುವ ಭರವಸೆ ನೀಡಿದ್ದಾರೆ. ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ವ್ಯಾಪ್ಯಿಯ ಓಬಯ್ಯನಹಟ್ಟಿ ಗ್ರಾಮದ ಸಮೀಪವಿರುವ ಬಡಹುಚ್ಚಯ್ಯರ ಕಪಿಲೆ ಗಟ್ಟಿ ಬೋರಯ್ಯ ಕಪಿಲೆ ಹಾಗೂ ತಿಪ್ಪಳ್ಳಿ ಕಪಿಲೆ ವ್ಯಾಪ್ತಿಯಲ್ಲಿ ಸುಮಾರು 27 ರಿಂದ30 ಮನೆಗಳಿದ್ದು ಕಿರು ನೀರು ಸಬರಾಜು ಕುಡಿಯುವ ನೀರಿನ 4 ಟ್ಯಾಂಕ್ ಗಳಿವೆ 2 ಜಾನುವಾರು ತೊಟ್ಟಿಗಳಿವೆ ಕಳೆದ ಸುಮಾರು 8 ವರ್ಷಗಳಿಂದ ವರ್ಷಗಳಿಂದ ನೀರು ಬಿಡದೆ ಖಾಲಿ ಇವೆ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುಔಮತಾಗಿದೆ ಎಂದು ಇಲ್ಲಿನ ಜನರು ಜನಧ್ವನಿ ಮೀಡಿಯಾದೊಂದಿಗೆ ಅಳಲು ತೋಡಿಕೊಂಡಿದ್ದರು. ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಸ್ಥಳಕ್ಕೇ ಪಿ ಡಿ ಒ ಹಾಗೂ ಸದಸ್ಯ ಭೇಟಿ ನೀಡಿ ಪರಿಶೀಲನೆ ನಡೆಸುದರು.
ಪಿ ಡಿ ಒ ಶ್ರೀನಿವಾಸ್ ಗ್ರಾಮಸ್ಥರಿಗೆ ಭರವಸೆ ನೀಡಿದರು. ಸಂದರ್ಭದಲ್ಲಿ ಗ್ರಾಮಸ್ಥರಾದ ಪೆದ್ದಯ್ಯಾ
ಮ್ಯಾಕಲಮಲ್ಲಯ್ಯ ಬೋಡಿ ಹುಚ್ಚಯ್ಯ ನಾಗಬೂಷಣ
ಪಾಲಯ್ಯ ವಿಜಯ. ಮಹದೇವಣ್ಣ ಮರಡಿ ಬೋರಯ್ಯ ಬೈಯಣ್ಣ. ಗ್ರಾಪಂ ಸದಸ್ಯರಾದ ಒಬಣ್ಣ ಬಂಡೆ. ಸೋಮಣ್ಣ. ಗೀತಮ್ಮ. ಬಡಯ್ಯ ಲಕ್ಷ್ಮಿ. ಮಹದೇವಣ್ಣ ಇತರರಿದ್ದರು.
[

0 Comments