ಜನಧ್ವನಿ ಮೀಡಿಯಾ ವರದಿ ಫಲಶೃತಿ
ಚಳ್ಳಕೆರೆ ಜನಧ್ವನಿ ವಾರ್ತೆ ಅ 30 ಹೂಳು ತುಂಬಿದ ಚರಂಡಿ ರಸ್ತೆ ಮೇಲೆ ಹರಿಯುತ್ತಿರುವ ಮಲೀನ ನೀರು ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ ಚಳ್ಳಕರೆ ಹೈಟೆಕ್ ಸಾರಿಗೆ ಬಸ್ ನಿಲ್ದಾಣ. ಎಂಬ ತಲೆಬರಹದಡಿ ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬೆಳೆಕು ಚೆಲ್ಲಿದ ಬೆನ್ನಲ್ಲೇ ನಗರಭೆ ಅಧಿಕಾರಿಗಳು ಸ್ವಚ್ಚತೆಗೆ ಮುಂದಾಗಿದ್ದಾರೆ. ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲೆ ಹರಿದರೂ ಕೇಳೋರಿಲ್ಲ..ಸಾಂಕ್ರಮಿಕ ರೋಗ ಭೀತಿಯಲ್ಲಿ ಸಾರ್ವಜನಿಕರು.
ಹೌದು ಇದು ಚಳ್ಳಕೆರೆ ನಗರದ ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿರುವ ಹೈಟೆಕ್ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣಕ್ಕೆ ಪ್ರವೇಶ ಮಾಡುವ ಮುಖ್ಯದ್ವಾರದಲ್ಲಿರುವ ಚರಂಡಿ ಮಲ ಮೂತ್ರ.ತ್ಯಾಜ್ಯದಿಂದ ತುಂಬಿ ಮಲೀನ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಮಲೀನ ನೀರನ್ನು ತುಳಿದು ಕೊಂಡು ಮೂಗು ಮುಚ್ಚಿಕೊಂಡು ಬಸ್ ನಿಲ್ದಾಣಕ್ಕೆ ಪ್ರವೇಶ ಮಾಡಿ ಬಸ್ ನಲ್ಲಿ ಪ್ರಯಾಣ ಮಾಡ ಬೇಕಾಗಿದೆ. ಎಂದು ಜನಧ್ವನಿ ಡಿಜಿಟಲ್ ಮೀಡಿಯಾ ಸಾರಿಗೆ ಬಸ್ ನಿಲ್ದಾಣದ ಚರಂಡಿ ಅವ್ಯವಸ್ಥೆ ಬಗ್ಗೆ ವರದಿ ಮಾಡಿದ ಕೆಲವೇ ಗಂಟೆಗಳಲ್ಲಿ ಸ್ವಚ್ಚತೆ ಮಾಡುತ್ತಿರುವ ಬಗ್ಗೆ ಜನಧ್ವನಿ ಮೀಡಿಯಾ ಗೆ ಸ್ವಚ್ಚತೆ ಮಾಡುತ್ತಿರುವ ಪೋಟೋ ಗಳನ್ನುನ್ನು ಕಳಿಸಿ ಜನಧ್ವನಿ ಮೀಡಿಯಾ ಹಾಗೂ ನಗರಸಭೆ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
0 Comments