ಹಿರಿಯೂರು..ಜಗತ್ತಿನ ಶ್ರೇಷ್ಠ ಕೃತಿಕಾರರಲ್ಲಿ ವಾಲ್ಮೀಕಿ ಮಹರ್ಷಿ ಮೊದಲಿಗರು. ಕಸವನಹಳ್ಳಿ ರಮೇಶ್ ಸಾಮಾಜಿಕ ಕಾರ್ಯಕರ್ತರು.
ಕಸವನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಲ್ಮೀಕಿ ಜಯಂತಿ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಸವನಹಳ್ಳಿ ರಮೇಶ್ ವಾಲ್ಮೀಕಿ ಅಂತ ಮಹಾನ್ ಪುರುಷರು ಇವತ್ತು ಜಗತ್ತಿಗೆ ಪಿತೃ ಭಕ್ತಿ ಸಾರುವ ರಾಮಾಯಣದಂತ ಮಹಾನ್ ಕಾವ್ಯವನ್ನು ಕೊಟ್ಟು ಇದರ ಆಧಾರದ ಮೇಲೆ 300ಕ್ಕೂ ಹೆಚ್ಚು ರಾಮಾಯಣಗಳು ರಚಿತವಾಗಿವೆ ರಾಮಾಯಣ ಮಹಾಕಾವ್ಯ ಹಳ್ಳಿ ರಾಜ್ಯ ದೇಶ ವಿದೇಶಗಳ ಗಡಿ ದಾಟಿ ಸತ್ಯ ಧರ್ಮ ಸಾರುವ ನೀತಿ ಕಥೆಯನ್ನು ಒಳಗೊಂಡ ಜನಪದ ಸಾಹಿತ್ಯವನ್ನು ಪರಿಚಯಿಸುವ ಎಲ್ಲರನ್ನೂ ಒಳಗೊಂಡ ವಿಶ್ವವಿಖ್ಯಾತ ಕಾವ್ಯವಾಗಿದೆ.
ರಾಮಾಯಣದ ಮಹರ್ಷಿ ವಾಲ್ಮೀಕಿಯ ಹಾಗೂ ರಾಮನ ಹೆಸರೇಳದೇ ಇರುವ ಮನೆಗಳೇ ಇಲ್ಲ.
ಪ್ರತಿ ವ್ಯಕ್ತಿ ಪ್ರತಿ ಕುಟುಂಬ ರಾಮಾಯಣವನ್ನು ಉಲ್ಲೇಖಿಸಿ ಮಾತನಾಡುತ್ತಾರೆ ಇಂತಹ ಜಗದ್ಗುಖ್ಯಾತ ಮಹಾಕಾವ್ಯ ಕಟ್ಟಿದ ವಾಲ್ಮೀಕಿ ಮಹಾಪುರುಷರಿಗೆ ಇವತ್ತು ಜಗತ್ತಿನಾದ್ಯಂತ ಜಾತಿ ಲಿಂಗ ಧರ್ಮ ಮೀರಿ ಗೌರವ ಸಮರ್ಪಣೆ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಚಾರ ಎಂದು ಹೇಳಿದರು ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ಮಂಜುನಾಥ್ ಗ್ರಾಮದ ಮುಖಂಡ ರಾಮಚಂದ್ರ ಕಸವನಹಳ್ಳಿ, ಭಕ್ತ ಪ್ರಹ್ಲಾದ, ಮುಖ್ಯ ಶಿಕ್ಷಕ ರಂಗನಾಥ್ ವಂದನಾರ್ಪಣೆ ಮಾಡಿದರು.ಹಾಗೂ ಅಂಗನವಾಡಿ ಸಹಾಯಕಿ ನಂದಿನಿ,ಶಾಲಾ ಮಕ್ಕಳು ಸೇರಿ ಸಂಭ್ರಮದಿಂದ ವಾಲ್ಮೀಕಿ ಜಯಂತಿ ಆಚರಿಸಲಾಯಿತು
ಜಗತ್ತಿನ ಶ್ರೇಷ್ಠ ಕೃತಿಕಾರರಲ್ಲಿ ವಾಲ್ಮೀಕಿ ಮಹರ್ಷಿ ಮೊದಲಿಗರು. ಕಸವನಹಳ್ಳಿ ರಮೇಶ್ ಸಾಮಾಜಿಕ ಕಾರ್ಯಕರ್ತ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments