ಚಳ್ಳಕೆರೆ ನ.10 ನೀರಗಂಟಿ ಸರಿಯಾಗಿ ನೀರು ಬಿಡುತ್ತಿಲ್ಲ,ಚರಂಡಿ ಸ್ವಚ್ಚತೆಯಿಲ್ಲ, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ. ನಿವೇಶನರಹಿತರಿಗೆ ನಿವೇಶನ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ದೂರಿನ ಸುರಿಮಳೆ ಗೈದರು.
ಚಳ್ಳಕೆರೆ ತಾಲೂಕಿನಗೋಪನಹಳ್ಳಿ ಗ್ರಾಮದಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಡು ಬಂತು.
ಶಾಸಟಿ ಟಿ.ರಘುಮೂರ್ತಿ ಮಾತನಾಡಿ ಸರಕಾರ ಬರಗಾಲ ಎಂದು ಚಳ್ಳಕೆರೆ ತಾಲೂಕನ್ನು ಘೋಷಣೆ ಮಾಡಿರುವುದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ನಿವೇಶನ ರಹಿತರಿಗೆ ಆಶ್ರಯ ಯೋಜನೆಯಲ್ಲಿ ನಿವೇಶನ,ಸ್ಮಾಶಾನ ಅಭಿವೃದ್ಧಿ,ರಸ್ತೆ ಚರಂಡಿಗಳ ಸ್ವಚ್ಚತೆ,ಬೀದಿ ದೀಪಗಳ ಅಳವಡಿಕೆ ಮಾಡುವಂತೆ ತಿಳಿಸಿದರು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ ಐದು ಗ್ಯಾರೆಂಟ್ ಗಳನ್ನು ಮಹಿಳೆಯರಿಗೆ ಸರಕಾರ ಬಂದ ತಕ್ಷಣ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಇದು 19 ನೇ ಗ್ರಾಮಪಂಚಾಯಿತಿ ಮಟ್ಟದ ಜನಸಂಪರ್ಕ ಸಭೆಯಾಗಿದ್ದು ಅಧಿಕಾರಿಗಳು ಸಾರ್ವಜನಿಕರಿಗೆ ಅಲೆದಾಡಿಸಿದೆ ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ಸರಕಾರದ ಸೌಲಭ್ಯಗಳನ್ನು ನೀಡುವಂತೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಗರಣಿ ಗೇಟ್ ನಿಂದ ಗೋಪನಹಳ್ಳಿ ಗ್ರಾಮಕ್ಕೆ ಬರುವ ರಸ್ತೆ ಗುಂಡಿ ಬಿದ್ದಿದ್ದು ಹಾಗೂ ಗ್ರಾಮಕ್ಕೆಹೊಂದಿಕೊಂಡು ನಿರ್ಮಿಸಿರುವ ಸೇತುವೆ ಕಾಮಗಾರಿ ನಿಂತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ದುರಸ್ಥಿ ಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡರು,
ತಕ್ಷಣ ಶಾಸಕ ಟಿ,ರಘುಮೂರ್ತಿ ದೂರವಾಣಿ ಮೂಲಕ ಸೇತುವೆ ಕಾಮಗಾರಿ ಇಲಾಖೆ ಅಧಿಕಾರಿಗಳಿಗೆ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ಥಿ ಪಡಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷತೆ ರಾದಮ್ಮ ,ಉಪಾಧ್ಯಕ್ಷೆ ಕೋಡ್ಯಾಳಮ್ಮ ಸದಸ್ಯರು, ತಹಶೀಲ್ದಾರ್ ರೇಹಾನ್ ಪಾಷ ,ತಾಪಂ ಇಒ ಶಶಿಧರ್, ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
0 Comments