ಚುನಾವಣಾ ಸಭೆ- ಸಮಾರಂಭ, ಪ್ರಚಾರ ಸಾಮಗ್ರಿಗಳ ಅಳವಡಿಕೆಗೆ ಪೂರ್ವಾನುಮತಿ ಕಡ್ಡಾಯವಾಗಿದೆ ಚುನಾವಣಾಧಿಕಾರಿ ಆನಂದ್

by | 31/03/23 | ಸುದ್ದಿ


ಚಳ್ಳಕೆರೆ ಜನಧ್ವನಿ ವಾರ್ತೆ ಮಾ.31
ಚುನಾವಣಾ ಸಭೆ- ಸಮಾರಂಭ, ಪ್ರಚಾರ ಸಾಮಗ್ರಿಗಳ ಅಳವಡಿಕೆಗೆ ಪೂರ್ವಾನುಮತಿ ಕಡ್ಡಾಯವಾಗಿದೆ. ಚುನಾವಣಾ ಆಯೋಗ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸ್ವಚ್ಛ ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಚುನಾವಣಾಧಿಕಾರಿ ಆನಂದ್ ತಿಳಿಸಿದರು.
ನಗರದ ತಾಲೂಕು ಕಚೇರಿಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ, ಚುನಾವಣಾ ಆಯೋಗದ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಿದರು.
ಚುನಾವಣೆ ಪ್ರಚಾರ ಮಾಡುವ ಮುನ್ನ ಚುನಾವಣೆ ಶಾಖೆಯಿಂದ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ ಪೊಲೀಸ್ ಇಲಾಖೆ ಮೂಲಕ ಧ್ವನಿ ವರ್ಧಕ ಪರವಾನಿಗೆ ಪಡೆಯ ಬೇಕು ಬೆಳಗ್ಗೆ 6 ರಿಂದ ರಾತ್ರಿ 10ಗಂಟೆಯವರೆಗೆ ಮಾತ್ರ ಬಳಸಬೇಕು ಜಾತ್ರೆ , ಉತ್ಸವ, ಹಬ್ಬ, ದೇವಸ್ಥಾನ, ಮಸೀದಿ ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣೆ ಪ್ರಚಾರ ನಡೆಸುವಂತಿಲ್ಲ,
ವಿವಿಧ ರಾಜಕೀಯ ಪಕ್ಷಗಳು ಕಚೇರಿ ಮಾಡುವ ಮುನ್ನ ಪರವಾನಿಗೆ ಪಡೆಯ ಬೇಕು ಒಬ್ಬರ ಅಭ್ಯರ್ಥಿಗೆ ೪೦ ಲಕ್ಷ ರೂಖರ್ಚು ಮಾಡಲು ಅವಕಾಶ ಇದೆ. ಯಾವುದೇ ಪಕ್ಷದಿಂದ ಎರಡು ಬಿ. ಪಾರಂ ನೀಡಿದಾಗ ಯಾವ ಅಭ್ಯರ್ಥಿ ಮೊದಲು ನಾಮ ಪತ್ರ ಸಲ್ಲಿಸುತ್ತಾರೋ ಅವರದನ್ನು ಪರಿಗಣೆನೆಗೆ ಪಡೆಯಲಾಗುವುದು. ನಾಮ ಪತ್ರ ಸಲ್ಲಿಸುವಾಗ ನಿಗಧಿ ನುಮೂನೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸ ಬೇಕು
ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲು ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಲಾಗುವುದು. ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯನ್ನು ಸುಲಲಿತವಾಗಿ ಪ್ರಾರಂಭದಿಂದ ಮುಕ್ತಾಯವಾಗುವವರೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಯಾವುದೇ ಪಕ್ಷಗಳು ಅಥವಾ ಅಭ್ಯರ್ಥಿಗಳು ಆಯೋಜಿಸುವ ಸಭೆ ಮತ್ತು ಮೆರವಣಿಗೆಗಳಿಗೆ ಇತರ ಪಕ್ಷಗಳು ಅಥವಾ ಕಾರ್ಯಕರ್ತರು ಅಡೆತಡೆ ಉಂಟುಮಾಡುವಂತಿಲ್ಲ. ಬೇರೊಂದು ಪಕ್ಷದ ಸಾರ್ವಜನಿಕ ಸಭೆಗಳಲ್ಲಿ ಗೊಂದಲ ಸೃಷ್ಟಿಸುವಂತಿಲ್ಲ. ಏಕ ಕಾಲಕ್ಕೆ ಒಂದು ಪಕ್ಷವು ಮತ್ತೊಂದು ಪಕ್ಷವು ಸಭೆ-ಮೆರವಣಿಗೆ ನಡೆಸುವಂತಿಲ್ಲ. ಪೋಸ್ಟ್ಗಳನ್ನು ಇತರ ಪಕ್ಷದ ಕಾರ್ಯಕರ್ತರು ತೆಗೆಯುವಂತಿಲ್ಲ. ಯಾವುದೇ ರಾಜಕೀಯ ಸಮಾರಂಭ, ಸಭೆ ನಡೆಸಿದರೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಧ್ವನಿವರ್ಧಕ ಬಳಕಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಚುನಾವಣೆ ಸಿಬ್ಬಂದಿ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ನಿರ್ಬಂಧಿಸಿದ ಪ್ರದೇಶಗಳಲ್ಲಿ ಪ್ರಚಾರ ನಡೆಸುವಂತಿಲ್ಲ. ಪ್ರಚಾರ ಸಾಮಗ್ರಿ ಪ್ರದರ್ಶನ ಮಾಡುವಂತಿಲ್ಲ. ಮತಗಟ್ಟೆ ಬಳಿ ಅನಗತ್ಯ ಜನ ಸಂದಣಿ ಇರಿವÀಂತಿಲ್ಲ. ಮತದಾರರಿಗೆ ಆಹಾರ, ಪಾಹನೀಯ, ಮದ್ಯ ವಸ್ತುಗಳನ್ನು ಆಮಿಷ ರೀತಿಯಲ್ಲಿ ಹಂಚುವAತಿಲ್ಲ ಎಂದು ಸೂಚನೆ ನೀಡಿದರು.
ಸಭೆ ಸಮಾರಂಭಗಳಿಗೆ ಅನುಮತಿ ಪಡೆದು ಅಳವಡಿಸಿದ ಪ್ಲೆಕ್ಸ್ ಬ್ಯಾನರ್ , ಬಂಡಿಗ್ಸ್ಗಳನ್ನು ನಿಗಧಿತ ಸಮಯದೊಳಗೆ ತೆರವುಗೊಳಿಸದಿದ್ದರೆ ತೆರವುವ ಖರ್ಚು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸಲಾಗುವುದು ಆದ್ದರಿಂದ ಕಾರ್ಯಕ್ರಮ ಮುಗಿತ ತಕ್ಷಣ ಅವುಗಳನ್ನು ತೆರವುಗೊಳಿಸುವಂತೆ ತಿಳಿಸಿದರು.
ತಾಲೂಕು ಚುನಾವಣಾಧಿಕಾರಿ ರೇಹಾನ್ ಪಾಷ, ವೃತ್ತ ನಿರೀಕ್ಷಕ ಸಮೀವುಲ್ಲ, ಪಿಎಸ್‌ಐ ಪ್ರಮೀಳಮ್ಮ. ವಿವಿಧ ಪಕ್ಷಗಳ ಮುಖಂಡರು, ಅಬಾಕಾರಿ ಇಲಾಖೆ ಅಧಿಕಾರಿಗಳು ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *