ಹಿರಿಯೂರು:
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ ಸಂಯುಕ್ತಾಶ್ರಯದಲ್ಲಿ ಸೆಪ್ಟಂಬರ್ 8ರಂದು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಪತ್ರಿಕಾ ವಿತರಕರ 4ನೇ ರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ ಎಂಬುದಾಗಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ಹಾಗೂ ಹಿರಿಯೂರು ತಾಲ್ಲೂಕು ಪತ್ರಕರ ಸಂಘದ ಅಧ್ಯಕ್ಷರಾದ ಆಲೂರು ಹನುಮಂತರಾಯಪ್ಪ ಶುಭಕೋರಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ನೇತೃತ್ವದಲ್ಲಿ ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಸೆಪ್ಟಂಬರ್ 8 ಭಾನುವಾರದಂದು ನಡೆಯಲಿರುವ ಪತ್ರಿಕಾ ವಿತರಕರ 4ನೇ ರಾಜ್ಯ ಸಮ್ಮೇಳನಕ್ಕೆ ಹಿರಿಯೂರು ತಾಲ್ಲೂಕು ಪತ್ರಿಕಾ ಹಂಚಿಕೆದಾರರು ಹಾಗೂ ವಿತರಕರ ಸಂಘದಿಂದ ಆಹ್ವಾನ ಸ್ವೀಕರಿಸಿ ಅವರು ಮಾತನಾಡಿದರು.
ಪತ್ರಕರ್ತರು ಬರೆದ ಸುದ್ಧಿಗಳು ,ವರದಿಗಳು, ಪತ್ರಿಕೆಗಳಲ್ಲಿ ಪ್ರಿಂಟ್ ಆಗಿ ಓದುಗರ ಮನೆ ಬಾಗಿಲಿಗೆ ತಲುಪಬೇಕೆಂದರೆ ಪತ್ರಿಕಾ ವಿತರಕರ ಹಾಗೂ ಪತ್ರಿಕಾ ಹಂಚಿಕಾದಾರರ ಪರಿಶ್ರಮವಿರುತ್ತದೆ. ಅಲ್ಲದೆ, ಬೆಳ್ಳಂಬೆಳಿಗ್ಗೆಯೇ ನಸುಕಿನಲ್ಲಿ ಎದ್ದು ಮಳೆ,ಗಾಳಿ ಚಳಿ ಎನ್ನದೆ ಓದುಗರ ಮನೆಬಾಗಿಲಿಗೆ ತಲುಪಿಸುವ ಜವಬ್ದಾರಿ ವಿತರಕರ ಮೇಲಿದೆ. ಈ ವಿತರಕರಿಗೂ ಸರ್ಕಾರದಿಂದ ಅಗತ್ಯ ಸೌಲಭ್ಯಗಳು ಸಿಗುವಂತಾಗಬೇಕು ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕು ಪತ್ರಿಕೆ ಹಂಚಿಕೆದಾರರು ಮತ್ತು ವಿತರಕರ ಸಂಘದ ಗೌರವಾಧ್ಯಕ್ಷರಾದ ನಟರಾಜ್, ಅಧ್ಯಕ್ಷರಾದ ಎನ್.ನಾಗಣ್ಣ ಮ್ಯಾಕ್ಲೂರಳ್ಳಿ , ಉಪಾಧ್ಯಕ್ಷರಾದ ಚಂದ್ರಕಾಂತ್, ಪ್ರಧಾನ ಕಾರ್ಯದರ್ಶಿ ಉಮೇಶ್ ಬಬ್ಬೂರು, ಖಜಾಂಚಿ ಟಿ.ತಿಪ್ಪೇಸ್ವಾಮಿ, ನಿರ್ದೇಶಕರಾದ ಏಕಾಂತಪ್ಪ, ಕೃಷ್ಣಮೂರ್ತಿ, ಉಬೇದುಲ್ಲಾ, ತಿಪ್ಪೇಶ್ ಚಾರ್, ಮಂಜುನಾಥ್, ಶಿವರಾಜ್, ಶ್ರೀಮತಿ ವಸಂತಾ, ಶ್ರೀಮತಿ ನಂದಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments