ಚಿಕ್ಕಾಲಘಟ್ಟ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಶೀಘ್ರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ಭರವಸ -ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ

by | 19/06/24 | ಸುದ್ದಿ


ಚಿತ್ರದುರ್ಗ. ಜೂನ್.19:
ಚಿಕ್ಕಾಲಘಟ್ಟ ಗ್ರಾಮದ ಬಹುದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ. ಶೀಘ್ರದಲ್ಲೇ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಿ, ಕಾರ್ಯಾರಂಭ ಮಾಡಲಾಗುವುದು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ನೀಡಿದರು.


ಗ್ರಾಮದ ದೇವಾಲಯಗಳಿಗೆ ರೂ.10 ಲಕ್ಷ ಅನುದಾನ: ಗ್ರಾಮದ ಈಶ್ವರ ದೇವಸ್ಥಾನ ಹಾಗೂ ದುರ್ಗಾಂಭ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆಯಿಂದ ತಲಾ ರೂ.5 ಲಕ್ಷದಂತೆ ಒಟ್ಟು ರೂ.10 ಲಕ್ಷ ಅನುದಾನ ಒದಗಿಸಲಾಗಿದೆ. ಗ್ರಾಮದ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ರೂ.15 ಲಕ್ಷ ಅನುದಾನ ಒದಗಿಸಿದ್ದು. ಗ್ರಾಮದ ಸವಾರ್ಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದರು.
ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಮಾತನಾಡಿ, ಇಡೀ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ತಮ್ಮ ಗ್ರಾಮಕ್ಕೆ ಆಗಮಿಸಿ, ಸಮಸ್ಯೆ ಅಹವಾಲುಗಳನ್ನು ಆಲಿಸಿದೆ. ನಿಗದಿತ ಸಮಯದೊಳಗೆ ಈ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲಾಗುವುದು. ಕುರಿತು ಅರ್ಜಿಯೊಂದಿಗೆ ನೀವು ನೀಡಿರುವ ಮೊಬೈಲ್ ನಂಬರ್‍ಗೆ ಸಮಸ್ಯೆ ಪರಿμÁ್ಕರದ ಹಂತದ ಕುರಿತು ಸಂದೇಶವನ್ನು ಕಳುಹಿಸಿಕೊಡಲಾಗುವುದು. ಸರ್ಕಾರದ ಜನಪರ ಆಡಳಿತದ ಪರಿಣಾಮವಾಗಿ ಜನಸ್ಪಂದನ ಕಾರ್ಯಕ್ರಮ ರೂಪುಗೊಂಡಿದೆ ಎಂದರು.
ತಹಶೀಲ್ದಾರ್ ಡಾ.ನಾಗವೇಣಿ ಮಾತನಾಡಿ, ಜನಸ್ಪಂದನ ಕಾರ್ಯಕ್ರಮದಲ್ಲಿ ಐಪಿಜಿಆರ್‍ಎಸ್ ತಂತ್ರಾಂಶದ ಮೂಲಕ ನೀವು ನೀಡಿರುವ ಅರ್ಜಿಯನ್ನು ಸ್ವೀಕರಿಸಲಾಗುವುದು. ಹೀಗೆ ಸ್ವೀಕರಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿಕೊಟ್ಟು ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಜನಸ್ಪಂದನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ: ಲೋಕಸಭೆ ಚುನಾವಣೆ ನಂತರ ಆಯೋಜಿಸಲಾದ ಜನ ಸ್ಪಂದನ ಕಾರ್ಯಕ್ರಮಕ್ಕೆ ಚಿಕ್ಕಾಲಘಟ್ಟ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ದೊರಕಿತು. ಗ್ರಾಮಕ್ಕೆ ಆಗಮಿಸಿದ ಶಾಸಕ ವಿರೇಂದ್ರ ಪಪ್ಪಿ ಅವರನ್ನು ಹಸಿರು ತೋರಣದಿಂದ ಅಲಂಕೃತಗೊಂಡ ಜೋಡೆತ್ತಿನ ಬಂಡಿಯ ಮೇಲೆ ಗ್ರಾಮಕ್ಕೆ ಕರೆತರಲಾಯಿತು. ಪೂರ್ಣಕುಂಬ ಹೊತ್ತ ಅಂಗನಾಡಿ ಕಾರ್ಯಕರ್ತೆಯರು ಸ್ವಾಗತಕೋರಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಹಾಗೂ ಕಲ್ಯಾಣ ಮಂಡಳಿ ವತಿಯಿಂದ 25 ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‍ಪೋನ್, ಸಮವಸ್ತ್ರ, ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‍ಟಾಪ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಸಕ ವಿರೇಂದ್ರ ಪಪ್ಪಿ, ಗ್ರಾಮ ವಿಕಚೇತನರೊಬ್ಬರಿಗೆ ಸರ್ಕಾರದಿಂದ ನೀಡಲಾದ ಟ್ರೈಸಿಕಲ್ ಸ್ಕೂಟರ್ ದುರಸ್ಥಿಯನ್ನು ಸ್ವತಂ ಖರ್ಚಿನಿಂದ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. ಜನಸ್ಪಂದನ ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಗ್ರೇಡ್-2 ತಹಶೀಲ್ದಾರ್ ನಾಗರಾಜ್, ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಹಮೂರ್ತಿ, ಆಲಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ.ನಾಗರಾಜ್, ಉಪಾಧ್ಯಕ್ಷೆ ನಿರ್ಮಲಮ್ಮ, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Latest News >>

ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು,ನಾವು ರೋಗಿಗಳ ಸೇವೆಮಾಡುವಲ್ಲಿ ದೇವರನ್ನ ಕಾಣಬೇಕು. ಬೆಂ.ಗ್ರಾ.ಕ್ಷೇತ್ರದಸಂಸದ ಡಾ.ಸಿ.ಎನ್.ಮಂಜುನಾಥ್

ತುಮಕೂರು : ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು ಸಾರ್ವಜನಿಕರು, ರೋಗಿಗಳು ನಮ್ಮನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ನಾವು...

ಹೊಸ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರನ್ನು ವರ್ಗಾಯಿಸಿದಂತೆ ಗ್ರಾಮಸ್ಥರ ಆಗ್ರಹ 

ಚಳ್ಳಕೆರೆ: ತಾಲೂಕಿನ ಜಾಜೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳು ವಾಸಿಸುವ ಕಾಲೋನಿಯ ಪಡಿತರ ಚೀಟಿದಾರರ ಅನುಮತಿ ಪಡೆಯದೆ...

ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಳ್ಳಕೆರೆ ಜು.16 ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ತಾಲ್ಲೂಕಿನಲ್ಲಿ ಪ್ರಗತಿ ಸಾಧಿಸಬೇಕು...

ನಗರದ ಪಾದಾಚಾರಿಗಳ ರಸ್ತೆ ಮೇಲಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ವೆಂಕಟೇಶ್ ಬಳಿ ದೂರು.

ಚಳ್ಳಕೆರೆ ಜು.16 ಪುಟ್ ಬಾತ್ ನಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಕೂಡಲೆ...

ಗೃಹ ಲಕ್ಷ್ಮೀ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ಜು.16: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಯೋಜನೆಯ ಸೌಲಭ್ಯ...

ಸಿದ್ದು ಬೆನ್ನಿಗೆ ಇದೆ ದಲಿತ ಶಕ್ತಿ ಟೀಕೆ, ಆರೋಪಗಳಿಗೆ ಎದೆಗುಂದದಿರಿ ಮಾಜಿ ಸಚಿವ ಎಚ್.ಆಂಜನೇಯ ಅಭಯ ಆಂಜನೇಯ ಅವರಿಗೆ ಬೆಳ್ಳಿಗಧೆ ನೀಡಿ ಗೌರವಿಸಿದ ದಲಿತ ಮುಖಂಡರು*

ಚಿತ್ರದುರ್ಗ: ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ...

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರನ್ನ ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖಪಾತ್ರ ವಹಿಸುತ್ತವೆ:ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ್

ಹಿರಿಯೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಸಮಾಜದ ಜನರನ್ನು ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ...

ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಮನುಕುಲಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಭಗೀರಥ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ

ಪರಶುರಾಮಪುರ ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ...

ಪೀರಲು ದೇವರು ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ

ಹಿರಿಯೂರು: ನಗರದ ಚಿಕ್ಕಪೇಟೆ ಬಳಿ ಇರುವ ಪೀರಲು ದೇವರುಗಳ ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ ನಡೆಯುತ್ತಿದ್ದು...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page