ಚಳ್ಳಕೆರೆ ಆ.21 ನಗರದ ರಹೀಂನಗರಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದರೆ ಅಲ್ಲಲ್ಲಿ ಮರಗಗಳು ಬಿದ್ದಿದಗದು ಪಾಬಗಡರಸ್ತೆಯಲ್ಲಿ ಹಳ್ಳ ಹರಿಯುತ್ತಿರುವುದರಿಂದ ವಾಹನ ಸಂಚಾರ ಅಡಚಣೆಯಾಗಿ ಅವಾಂತರ ಸೃಷ್ಟಿಸಿದೆ.
ಹೌದು ಇದು ಚಳ್ಳಕೆರೆ ನಗರದ ವಿಠಲನಗರ. ಪ್ರವಾಸಿ ಮಂದಿರ ಸೇರಿದಂತೆ ನಗದ ಬಹುತೇಕ ಕಡೆಗಳಿಂದ ಹರಿದು ಬರುವ ರಾಜಕಾಲುವೆ ಒತ್ತುವರಿಯಾಗಿದ್ದು ಮಳೆಗಾಲ್ಲಿ ನೀರು ಹರಿಯಲು ಸ್ಥಳವಕಾಶ ಕಡಿಮೆಯಾಗಿದ್ದು ಅಕ್ಕ ಪಕ್ಕದ ಮನೆಗಳಿಗೆ ನುಗ್ಗುವುದು ಇದೇನು ಹೊಸದಲ್ಲ ಪ್ರತಿ ಮಳೆ ಬಂದಾಗ ರಹೀಂನಗರ ಜಲಾವೃತಗೊಂಡ ಜನಪ್ರತಿನಿಧಿಗಳು.ಅಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬಂದು ಸಮಾಧಾನ ಪಡಿಸಿ ಅಕ್ಕಿ ಬೇಳೆ.ಬಟ್ಟೆ ಬರೆಗಳನ್ನು ವಿತರಿಸಿ ಹೋಗುತ್ತಾರೆ ಹೊರತು ಇದಕ್ಕೆ ಶಾಶ್ವತ ಪರಿಹಾರ ಮಾಡಲು ಮುಂದಾಗುತ್ತಿತ್ತಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಬಳ್ಳಾರಿ ರಸ್ತೆಯ ಚಳ್ಳಕೆರೆಮ್ಮ ದೇವಸ್ಥಾಮದ ಬಳಿ ಹಳ್ಳದ ನೀರು ರಸ್ತೆ ಮೇಲೆ ಹರಿದರೆ.ಪಾವಗಡ ರಸ್ತೆಯ ಮುಖ್ಯರಸ್ತೆಯಲ್ಲಿ ರಬಸವಾಗಿ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ರಾಜಕಾಲುವೆ ಯಿಂದ ಇಷ್ಟು ಹಂತರದಿಂದ ಮನೆ ನಿರ್ಮಾಣ ಮಾಡಿಕೊಳ್ಳಬೇಕೇಂಬ ನಿಮಯವುದ್ದರೂ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನೆಗಳನ್ನು ಕಟ್ಟಿಕೊಂಡರೂ ಸಹ ನಗರಸಭೆ ಅಧಿಕಾರಿಗಳು ಮಾತ್ರ ಮೌನವಹಿಸುತ್ತಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ರಾಜಕಾಲುವೆಗಳುತ್ಯಾಜ್ಯ ಹಾಗೂ ಆಪು ಬೆಳೆದಿರುವುದರಿಂದ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆ ಹರಿಯುವಂತಾಗಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ರಾಜಕಾಲುವೆ ಒತ್ತುವರಿ ತೆರವಿಗೆ ತೆರವುಗೊಳಿಸಿ ಸ್ವಚ್ಚತೆ ಕಾಪಾಡುವರೇ ಕಾದು ನೋಡ ಬೇಕಿದೆ.
0 Comments