ಚಳ್ಳಕೆರೆ ನ.13: ಇತ್ತೀತೆಗೆ ಪಟಾಕಿ ದುರಂತಕ್ಕೆ ಸಾವು ನೋವು ನೋವುಗಳ ಪ್ರಕರಣ .ಬೆಂಕಿ ಅವಘಡ ದಿಂದ ಸರಕಾರ ಪರಿಸರ ಮಾಲಿನ ನಿಯಂತ್ರಣ ನಿಷೇಧಿತ ಒಟಾಕಿಗಳಿಗೆ ಕಟ್ಟು ನಿಟ್ಟಿನ ಮಾರಾಟಕ್ಕೆ ಬ್ರೇಕ್ ಹಾಕಿದ್ದರೂ ಸಹ ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ನಗರಸಭೆ ಹಾಗೂ ಪರಿಸರ ಅಧಿಕಕಾರಿಗಳು ದಾಳಿ ನಡೆಸಿ ಪಟಾಕಿ ವಶ ಪಡಿಸಿಕೊಂಡಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಬಯಲು ಸೀಮೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ, ಹಬ್ಬಕ್ಕೆ ದೀಪಗಳ ಖರೀದಿ, ಹಾಗೂ ಪಟಾಕಿ ಖರೀದಿ ಬಲೂ ಜೋರಾಗಿದೆ.
ಸಾರ್ವಜನಿಕರಿಗೆ ಕೊಂಚ ಹೊರೆಯಾದರೂ ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚುವುದು ದೀಪ ಬೆಳಗುವುದು ಮಾತ್ರ ಕಡಿಮೆಯಾಗಿಲ್ಲ ಎಂಬುದಕ್ಕೆ ಇಲ್ಲಿನ ಜನರೇ ಸಾಕ್ಷಿಯಾಗಿದ್ದಾರೆ.
ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಟಾಕಿ ಅಂಗಡಿ ಮಳಿಗೆಗಳು ಹಾಕಿದ್ದ ವ್ಯಾರಸ್ಥರ ನಿರೀಕ್ಷೆ ಹುಸಿಮಾಡದೆ ಚಳ್ಳಕೆರೆ ಜನತೆ ತಾ ಮುಂದು ನೀ ಮುಂದು ಎಂದು ಪಟಾಕಿ ಖರೀದಿಯಲ್ಲಿ ನಿರತರಾಗಿದ್ದಾರೆ.
ಇನ್ನೂ ಸರಕಾರ ಘೋಷಣೆ ಮಾಡಿದ ಹಸಿರು ಪಟಾಕಿಯನ್ನೆ ಮಾರಾಟ ಮಾಡಬೇಕು ಎಂಬ ಘೊಷಣೆಗೆ ಕೆಲವು ಅಂಗಡಿಗಳಲ್ಲಿ ಮಾತ್ರ ಹಸಿರು ಪಟಾಕಿ ಜೊತೆ ನಿಷೇಧಿತ ಪಟಾಕಿ ಮಾರಾಟ ಮಾಡುವುದು ಕಂಡು ಬಂದಿದ್ದು ಇದರ ಬೆನ್ನಲೆ ಎಚ್ಚೆತ್ತು ಕೊಂಡ ನಗರಸಭೆ ಪರಿಸರ ಅಧಿಕಾರಿಗಳು ಹಾಗೂ ಪೌರಾಯುಕ್ತರ ತಂಡ ಪಟಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 15ಸಾವಿರದಷ್ಟು ನಿಷೇಧಿತ ಪಟಾಕಿಗಳನ್ನು ಆಕ್ರಮಿಸಿಕೊಂಡು ಅಂಗಡಿಗಳ ಮಾಲಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪೌರಾಯುಕ್ತ ಸಿ.ಚಂದ್ರಪ್ಪ ಮಾತನಾಡಿ ಸಾರ್ವಜನಿಕರ ಹಿತ ರಕ್ಷಣೆಗಾಗಿ ಸರಕಾರ ಹಸಿರು ಪಟಾಕಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು ಪ್ರತಿ ಪಟಾಕಿಗಳ ಮೇಲೆ ಹಸಿರು ಪಟಾಕಿ ಎಂಬ ಲೋಗೋ ಕೂಡ ಮುದ್ರಿತವಾಗಿದೆ, ಕ್ಯೂಆರ್ ಕೋಡ್‌ವುಳ್ಳ ಪಟಾಕಿ ಬಾಕ್ಸ್ ಪರೀಶಿಲಿಸಿ ಪಟಾಕಿ ಖರೀದಿಸಿ, ನಿಮ್ಮ ಮಕ್ಕಳ ಹಾಗೂ ನಿಮ್ಮ ಕುಟುಂಬದ ರಕ್ಷಣೆಗೆ ಬದ್ದರಾಗಿರಿ ದೀಪಾವಳಿ ಬೆಳಕಿನ ಹಬ್ಬ ಎಲ್ಲಾರ ಬಾಳಲಿ ಬೆಳಕು ತರಲಿ ಎಂದು ತಿಳಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಪರಿಸರ ಅಧಿಕಾರಿ ಪ್ರಕಾಶ್, ಉಪ ಪರಿಸರ ಅಧಿಕಾರಿ ರಾಜೇಶ್, ಚಳ್ಳಕೆರೆ ನಗರಸಭೆ ಪರಿಸರ ಅಧಿಕಾರಿ ನರೇಂದ್ರಬಾಬು, ಗಣೇಶ್, ದಾದಾಪೀರ್, ಇತರರಿದ್ದರು.
0 Comments