ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಗೆ ಡಾ.ವಿಷ್ಟು ವರ್ಧನ್ ಎಂದು ನಾಮಕರಣ ಮಾಡುವಂತೆ ಡಾ.ವಿಷ್ಟುವರ್ಧನ್ ಅಭಿಮಾನಿಗಳಿಂದ ಶಾಸಕ ಟಿ.ರಘುಮೂರ್ತಿ, ತಹಶಿಲ್ದಾರ್ ಎನ್.ರಘುಮೂರ್ತಿ ಯವರಿಗೆ ಮನವಿ.

by | 11/11/22 | Uncategorized, ಸಾಂಸ್ಕೃತಿಕ, ಸುದ್ದಿ

ಚಳ್ಳಕೆರೆ ನವಂಬರ್ 11
ಜ್ಯೂನಿಯರ್ ವಿಷ್ಟುವರ್ಧನ್ ಎಂದೇ ಕ್ಯಾತಿ ಪಡೆದಿರುವ ಮಳಲಿಮಠ ಅವರು ಡಾ.ವಿಷ್ಟುವರ್ಧನ್ ಅವರ ಪಕ್ಕ ಅಭಿಮಾನಿ, ಇವರೀಗಾ ರಾಜ್ಯಾತ್ಯಂತ ನವಂಬರ್ ತಿಂಗಳಲ್ಲಿ ಸಂಚರಿಸಿ ಕನ್ನಡ ಭಾಷೆ ಹಾಗೂ ನಾಡಿನ ಬಗ್ಗೆ ಜಾಗೃತಿ ಮೂಡಿಸಲು ಹೊರಟಿದ್ದಾರೆ.
ಮೂಲತ ಹಾವೇರಿ ಜಿಲ್ಲೆ ಐರಾಣಿ ಗ್ರಾಮದವರಾದ ನಾಗಬಸಯ್ಯ ಮಲ್ಲಯ್ಯ ಮಳಲಿಮಠ ಅವರು ವಿಷ್ಣುವರ್ಧನ್ ಅಭಿಮಾನಿ. ಅವರಂತೆ ನಟನೆ ಮಾಡುವುದನ್ನು ರೂಡಿಸಿಕೊಂಡಿರುವ ಮಳಲಿಮಠ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿಷ್ಟು ರಥ( ಸ್ಕೂಟಿ) ಮೇಲೆ ಹೊರಟಿರುವ ಅವರು ಡಾ.ವಿಷ್ಣುವರ್ಧನ್ ಭಾವಚಿತ್ರ ಹಾಗೂ ಕನ್ನಡ ಬಾವುಟವನ್ನು ಕಟ್ಟಿಕೊಂಡು ಅವರ ಉಡುಗೆ ತೊಡುಗೆ, ಕಣ್ಣಿಗೆ ಹಾಕಿರುವ ಕನ್ನಡಕ ಸೇರಿದಂತೆ ವಾಹನದ ಮೇಲೆ ಕನ್ನಡ ದ್ವಜಂತೆ ಶೃಂಗರಿಸಿ ವಿಷ್ಣುವರ್ಧನ್ ಚÀಲನ ಚಿತ್ರದ ಹೆಸರುಗಳನ್ನು, ಭಾವಚಿತ್ರ, ಕನ್ನಡ ನುಡಿಮುತ್ತುಗಳನ್ನು ಹಾಕಿಕೊಂಡು ಜನರ ಗಮನ ಸೆಳೆಯುತ್ತಾ. ನಿಷ್ಟೆಯಿಂದ ಜಾಗೃತಿ ಆರಂಭಿಸಿರುವ ಅವರು ಹಾವೇರಿಯಿಂದ ಬೆಂಗಳೂರಿಗೆ ಹೋಗುವ ಮಧ್ಯೆ ನಗರದ ಡಾ. ವಿಷ್ಟುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ, ರವಿ, ತಿಪ್ಪೇಸ್ವಾಮಿ, ಬೆಟ್ಟಪ್ಪ, ಶಿವರಾಜ್ ಗೌಡ, ಶಾಂತಕುಮಾರ್, ಕರ್ಣ, ರಾಮಚಾರಿ, ಬಾಬಣ್ಣ, ಕಾಶಿ, ಸತೀಶ್ ಮನು , ಕಲಾವಿದ ಜೂ.ವಿಷ್ಟುವರ್ಧನ್ ನಾಗಬಸಯ್ಯ ಮಲ್ಲಯ್ಯ ಮಳಲಿಮಠ ನಗರಕ್ಕೆ ಬರಮಾಡಿಕೊಂಡರು.
ಕಲಾವಿದ ಜೂ.ವಿಷ್ಟುವರ್ಧನ್ ನಾಗಬಸಯ್ಯ ಮಲ್ಲಯ್ಯ ಮಳಲಿಮಠ ಪತ್ರಿಕೆಯೊಂದಿಗೆ ಮಾತನಾಡಿ ನಾನು ಜಂಗಮನಾಗಿದ್ದರಿAದ ಕಂತೆ ಬಿಕ್ಷೆ ಬೇಡಿ ವ್ಯಾಸಂಗ ಮಾಡಿ ಈಗ ನಾನು ಕನ್ನಡ ಅಭಿಮಾನಿಯಾಗಿ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಬಗ್ಗೆ ಯಾರಾದರೂ ವಿರೋದ ಮಾತನಾಡಿದರು ನಾನು ಸುಮ್ಮನೆ ಇರುವುದಿಲ್ಲ ಆದ್ದರಿಂದ ನಾನು ಕಳೆದ ಸುಮಾರು ೬ ವರ್ಷಗಳಿಂದ ಕನ್ನಡ ಜಾಗೃತಿ ಮೂಡಿಸಲು ಹಾವೇರಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಿಷ್ಟು ರಥ(ಸ್ಕೂಟಿ) ಮೇಲೆ ಸಂಚರಿಸುವ ಮೂಲಕ ಜಾಗೃತಿ ಮೂಡಿಲಾಗುತ್ತಿದೆ ಎಂದು ನುಡಿದರು.
ರಸ್ತೆಗೆ ಡಾ.ವಿಷ್ಣುವರ್ಧನ್ ನಾಮಕರಣಕ್ಕೆ ಮನವಿ.
ನಗರಕ್ಕೆ ಅಗಮಿಸಿ ವಿಷ್ಟು ಅಭಿಮಾನಿ ಜೂನಿಯರ್ ವಿಷ್ಟು ನಾಗಬಸಯ್ಯನೊಂದಿಗೆ ತಾಲೂಕು ಕಚೇರಿಗೆ ತೆರಳಿಗೆ ಚಿತ್ರದುರ್ಗ ಮುಖ್ಯ ರಸ್ತೆಯಿಂದ ಸೋಮಗುದ್ದು ರಸ್ತೆಯ ಮುಖ್ಯ ದ್ವಾರಕ್ಕೆ ಡಾ.ವಿಷ್ಣು ಮಹಾದ್ವಾರ ಹಾಗೂ ವಿಷ್ಟು ರಸ್ತೆ ಎಂದು ನಾಮಕರಣಮಾಡುವಂತೆ ತಹಶೀಲ್ದಾರ್ ಎನ್.ರಘುಮೂರ್ತಿಗೆ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದವತಿಯಿAದ ಮನವಿ ಸಲ್ಲಿಸಿದರು.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *