ಚಳ್ಳಕೆರೆ ನ.15. ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ರೋಗಿಗಳು ಚೀಟಿ ಪಡೆಯಲು ಹರಸಹಾಸ ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಚೀಟಿ ಬರೆಯುವ ಕೌಂಟರ್ ನಲ್ಲಿ ಒಬ್ಬನೇ ಸಿಬ್ಬಂದಿ ಇರುವುದರಿಂದ ಚೀಟಿ ನೀಡಲು ವಿಳಂಭವಾಗುತ್ತಿರುವುದರಿಂದ ನೂಕು ನುಗ್ಗಲಿನಲ್ಲಿ ಚೀಟಿ ಪಡೆಯಲು ವಿಳಂಭವಾದರೆ ಇನ್ನು ತುರ್ತು ಚಿಕಿತ್ಸೆ ಪಡೆಯಲು ವಿಳಂಭವಾಗುತ್ತಿರುವುದರಿಂದ ಚೀಟಿ ಕೊಡುವ ಕೌಂಟರ್ ನಲ್ಲಿ ಹೆಚ್ಚುವರಿ ಸಿಬ್ಬಂದಿ ಯನ್ನು ನೇಮಕ ಮಾಡುವಂತೆ ಮಗುವನ್ನು ಚಿಕಿತ್ಸೆಗೆ ಕರೆತಂದ ವ್ಯಕ್ತಿಯೊಬ್ಬರು ಜನಧ್ವನಿಗೆ ನೂಕು ನುಗ್ಗಲಿನ ವೀಡಿಯೋ ಕಳಿಸಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಚೀಟಿ ಪಡೆಯಲು ನೂಕು ನುಗ್ಗಲು ತಪ್ಪಿಸಲು ಮುಂದಾಗುವರೇ ಕಾದು ನೋಡ ಬೇಕಿದೆ.
0 Comments