ಹಿರಿಯೂರು, ನವೆಂಬರ್ 20 : ಶಿವಮೊಗ್ಗ ನಗರದ ಭದ್ರಾವತಿ ನಿವಾಸಿ ಸಂತೋಷ್ ಡಿ. ರವರ ಸಂಬಂಧಿಕರಾದ
ಕವನ ಮತ್ತು ಮಗಳಾದ ಪ್ರಮೀಳಾಬಾಯಿ, ರವರೊಂದಿಗೆ ದೀಪಾವಳಿ ಹಬ್ಬಕ್ಕೆಂದು ಬೆಂಗಳೂರು ನಗರದಿಂದ
ತನ್ನ ಊರಿಗೆ ಬಂದಿದ್ದು, ಸೋಮವಾರ ಮಧ್ಯಾಹ್ನ 01. ಗಂಟೆ ಸಮಯದಲ್ಲಿ ಭದ್ರಾವತಿ
ನಗರದಿಂದ ಹೊರಟು ಚಿತ್ರದುರ್ಗ ಮುಖಾಂತರ ಚಿತ್ರದುರ್ಗ ಹಿರಿಯೂರು ಎನ್.ಹೆಚ್-48 ರಸ್ತೆಯಲ್ಲಿ
ಹೋಗುತ್ತಿರುವಾಗ ಸುಮರು ಸೋಮವಾರ 07.00 ಗಂಟೆ ಸಮಯದಲ್ಲಿ ಜವರಗೊಂಡನಹಳ್ಳಿ ಗ್ರಾಮದ
ಬೈನರಿ ಪ್ಯಾಕ್ಟರಿ ಸಮೀಪ ಕಾರು ಚಾಲಕ ಸಂತೋಷ್ ಡಿ. ಕಾರನ್ನು ಅತೀವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ
ಲಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನ ಚಾಲಕ ಸಂತೋಷ್ ರವರಿಗೆ ತುಟಿಗೆ, ತಲೆಗೆ ಪೆಟ್ಟು ಬಿದ್ದು
ರಕ್ತಗಾಯಗಳಾಗಿರುತ್ತದೆ. ಜೊತೆಯಲ್ಲಿದ್ದ ಪ್ರಮೀಳಾಬಾಯಿ ರವರಿಗೆ ತಲೆಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತದೆ ಮತ್ತು ಶಿವಮೊಗ್ಗ ನಗರದ
ಎಡಕಿವಿಯ ಎಂಬುವವರಿಗೆ ತಲೆಗೆ,ಬಳಿ ಪೆಟ್ಟು ಬಿದ್ದು
ರಕ್ತಗಾಯಗಳಾಗಿರುತ್ತದೆ. ನಂತರ ಗಾಯಾಳುಗಳನ್ನು 108 ಆಂಬ್ಯುಲೆನ್ಸ್ ಮೂಲಕ ಹಿರಿಯೂರು ಸರ್ಕಾರಿ
ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿರುತ್ತದೆ.
ಚಲಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿ ಮೂವರಿಗೆ ಗಾಯ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments