ಚರಿತ್ರೆ
ಇತಿಹಾಸವನ್ನು ತಿರುಚಬಹುದು ಆದರೆ ಇತಿಹಾಸವನ್ನು ನಾಷಪಡಿಸಲು ಸಾಧ್ಯವಿಲ್ಲ ಕಡಿಮೆ ಜೀವಿತಾವಧಿಯಲ್ಲಿ ಇತಿಹಾಸ ಪುಟ ಸೇರಿದ ಮೈಸೂರಿನ ಹುಲಿ’ ಎಂದೇ ಪ್ರಖ್ಯಾತರಾಗಿದ್ದ ದೊರೆ ಟಿಪ್ಪು ಸುಲ್ತಾನ್ ಸ್ವಾತ್ರಂತ್ರ್ಯ ಹೋರಾಟಗಾರ ಎಂದು ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ ನ.19 ಇತಿಹಾಸವನ್ನು ತಿರುಚಬಹುದು ಆದರೆ ಇತಿಹಾಸವನ್ನು ನಾಷಪಡಿಸಲು ಸಾಧ್ಯವಿಲ್ಲ ಕಡಿಮೆ ಜೀವಿತಾವಧಿಯಲ್ಲಿ ಇತಿಹಾಸ ಪುಟ ಸೇರಿದ ಮೈಸೂರಿನ ಹುಲಿ’ ಎಂದೇ ಪ್ರಖ್ಯಾತರಾಗಿದ್ದ ದೊರೆ ಟಿಪ್ಪು ಸುಲ್ತಾನ್ ಸ್ವಾತ್ರಂತ್ರ್ಯ ಹೋರಾಟಗಾರ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಸರಕಾರಿ ನೌಕರರ ಭವನದಲ್ಲಿ ಟಿಪ್ಪ ಸುಲ್ತಾನ್ ಅಭಿಮಾನಿಗಳ ಮಹಾವೇಧಿಕೆ ಮತ್ತು ಮುಸ್ಲೀಂ ಬಾಂದವರು ಆಯೋಜಿಸಿದ್ದ 273 ನೇ ಸುಲ್ತಾನ್ ಜಯಂತಿ ಹಾಗೂ 68 ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ಚಳುವಳಿ ಹೋರಾಟದಲ್ಲಿ ಮುಸ್ಲೀಂ ಸಮುದಾಯದ ಪಾತ್ರವಿದೆ ಎಷ್ಟೋ ಮುಸ್ಲೀಂ ಸ್ವಾಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಹುತಾತ್ಮರಾಗಿರುವುದನ್ನು ಇತಿಹಾಸದ ಪುಟದಲ್ಲಿ ನೋಡ ಬಹುದು. ರಾಕೇಟ್ ಉಡಾವಣೆ, ರೇಷ್ಮೆ, ಬನ್ನೂರು ಕುರಿ,ಅಮೃತಮಹಾಲ್ ತಳಿ ಹಸುಗಳ ಉತ್ತೇಜನಕ್ಕೆನೀಡಿದ ಟಿಪ್ಪೂ ಮೊದಲಿಗರು.

ರಾಜಕೀಯಕ್ಕಾಗಿ ಜಾತಿ ಜಾತಿಗಳ ಮಧ್ಯೆ ಹತ್ತಿಕ್ಕಲು ಕೆಲವರು ಟಿಪ್ಪು ಹಿಂದು ವಿರೋಧಿ ಎಂದು ಬಿಂಬಿಸಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ .
ರಾಜಕೀಯ ಪ್ರೇರಿತ ಅಪಪ್ರಚಾರಕ್ಕೆ ಕಿವಿಗೊಡದೆ ನೈಜ ಇತಿಹಾಸದ ಪುಟಗಳಿಂದ ಟಿಪ್ಪುವನ್ನು ಅರಿಯೋಣ ಎಂದು ತಿಳಿಸಿದರು.

ಟಿಪ್ಪು ಸುಲ್ತಾನ್ ಆಭಿಮಾಜಿಗಳ ಸಂಘದ ರಾಜ್ಯ ವೇಧಿಕೆ ಅಧ್ಯಕ್ಷ ಟಿಪ್ಪು ಖಾಸೀಂವಲಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಮೈಸೂರು ಸಂಸ್ಥಾನ ಉಳಿಸುವ ಸಲುವಾಗಿ ತನ್ನ ಮಕ್ಕಳನ್ನು ಒತ್ತೆಯಿಟ್ಟಿರುವ ಮಹಾನ್ ವ್ಯಕ್ತಿ. ದಲಿತರ ಭೂಮಿ ಒಡೆತನ, ಆನೇಕ ಪ್ರಸಿದ್ದ ಹಿಂದೂ ದೇವಾಲಯಗಳ ನಿರ್ಮಾಣ ದೇವಾಲಯಗಳಲ್ಲಿ ಟಿಪ್ಪುವಿನ ಇತಿಹಾಸ ಇದೆ,ಬಾಬ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲೂ ಟಿಪ್ಪೂಸುಲ್ತಾನ್ ಇತಿಹಾಸ ಇದೆ. ಟಿಪ್ಪುಸುಲ್ತಾನ್ ಅಪ್ಪಟ ಸ್ವಾತಂತ್ರ್ಯಾ ಹೋರಾಟಗಾರ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ರಾಜನಾಗಿದ್ದನು ಮೈಸೂರು ಹುಲಿ ಎಂದ ಯಾವ ಅರಸು ನೀಡಿದ ನಾಮಾಂಕಿತವಲ್ಲ ಜನಸಾಮಾನ್ಯರು ಟಿಪ್ಪುವಿಗೆ ಮೈಸೂರು ಹುಲಿ ಎಂದು ಹೆಸರುಕೊಟ್ಟವರು ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನ.10ರಂದು ಸರಕಾರದಿಂದಲೇ ಟಿಪ್ಪು ಜಯಂತಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ.ತಿಸ್ವಾಮಿ,ಎಚ್.ಎಸ್. ಸೈಯಾದ್, ಕಮಿನಿಸ್ಟ್ ಪಕ್ಷದ ಸಿ.ವೈ.ಶಿವರುದ್ರಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಸ್ಲೀಂ ಸಮಾಜದ ಮುಖಂಡರಾದ ಕೆ.ಜಿ,ಎನ್ .ಮುಜೀಬುಲ್ಲಾ, ಅತಿಕ್ ರೆಹಮಾನ್,ಎಂ.ದಾದಾಪಿರ್, ಎಸ್ ಪಿ.ಜುಬೇರ್, ಸಿ.ಬಷೀರ್ ಹಯಾತ್ ಜಾಕೀರ್ ಹಸೇನ್ ಇತರರಿದ್ದರು,
ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಪಿ.ತಿಪ್ಪೇಸ್ವಾಮಿ ಹಾಗೂ ಸಮಾಜದ ಮುಖಂಡರಿಗೆ ಸನ್ಮಾನಿಸಿ ಗೌರವಿಸಿದರು.

ಓಬವ್ವನ ದೇಶಪ್ರೇಮ, ಧೈರ್ಯ, ಇಂದಿನ ಮಹಿಳೆಯರಿಗೆ ಸ್ಪೂರ್ತಿಯಾಗಬೇಕು :ಜಿಲ್ಲಾಉಸ್ತುವಾರಿ ಸಚಿವ ಸುಧಾಕರ್
ಹಿರಿಯೂರು :
ಚಿತ್ರದುರ್ಗದ ಕೋಟೆಯನ್ನು ಹೈದರಾಲಿಯ ಸೈನಿಕರಿಂದ ರಕ್ಷಣೆ ಮಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಏಕಾಂಗಿಯಾಗಿ ಹೋರಾಡುವ ಮೂಲಕ ದುರ್ಗದ ಕೋಟೆಯನ್ನು ರಕ್ಷಣೆ ಮಾಡಿದ ಒನಕೆ ಓಬವ್ವನ ದೇಶಪ್ರೇಮ, ಧೈರ್ಯ, ಹಾಗೂ ಸಾಹಸ ನಿಜಕ್ಕೂ ಮೆಚ್ಚುವಂತಹುದು, ಈ ನಿಟ್ಟಿನಲ್ಲಿ ಓನಕೆ ಓಬವ್ವನ ತ್ಯಾಗ-ಬಲಿದಾನ ಆದರ್ಶಗಳು ಇಂದಿನ ಮಹಿಳೆಯರಿಗೆ ಸ್ಪೂರ್ತಿಯಾಗಬೇಕು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಕೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೀರವನಿತೆ ಒನಕೆ ಓಬವ್ವನ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತನ್ನ ಗಂಡ ಊಟಕ್ಕೆ ಮನೆಗೆ ಬಂದ ಸಂದರ್ಭದಲ್ಲಿ ಚಿತ್ರದುರ್ಗದ ಕೋಟೆಯೊಳಗೆ ನುಸುಳಿದ ಹೈದರಾಲಿಯ ಸೈನಿಕರನ್ನು ಸಮಯೋಚಿತ ಚಿಂತನೆಯಿಂದ ಹೋರಾಡುವ ಮೂಲಕ ಬೃಹತ್ ಗಾತ್ರದ ಎದುರಾಳಿ ಸೈನ್ಯವನ್ನು ಒಬ್ಬ ಸಾಮಾನ್ಯ ಮಹಿಳೆ ಯಾವುದೇ ಶಸ್ತ್ರಾಸ್ತ್ರಗಳಿಲ್ಲದೆ ಎದುರಿಸಬಹುದು ಎಂಬುದಕ್ಕೆ ವೀರವನಿತೆ ಒನಕೆ ಓಬವ್ವ ಸಾಕ್ಷಿಯಾಗಿದ್ದಾರೆ ಎಂಬುದಾಗಿ ಹೇಳಿದರು.
ವಾಣಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಸುಮಾರು 18ನೇ ಶತಮಾನದ ವೀರಮಹಿಳೆಯರ ಸಾಲಿನಲ್ಲಿ ಕಂಡುಬರುವ ಒನಕೆ ಓಬವ್ವ ಚಿತ್ರದುರ್ಗದ ಕೋಟೆಯ ಕಾವಲುಗಾರ ಚಲವಾದಿ ಸಮುದಾಯದ ಮದ್ದಹನುಮಪ್ಪನ ಹೆಂಡತಿ, ಹೈದರಾಲಿಯ ಸೈನಿಕರು ಕೋಟೆಯನ್ನು ಮುತ್ತಿಗೆ ಹಾಕಿದಾಗ ಮನೆಯಲ್ಲಿ ಬಳಸುವ ಒನಕೆಯನ್ನೇ ಅಸ್ತ್ರವಾಗಿ ಬಳಸಿ, ಶತ್ರು ಸೈನ್ಯದೊಂದಿಗೆ ಹೋರಾಡುತ್ತಲೇ, ಶತ್ರುಗಳ ಕತ್ತಿಗೆ ಬಲಿಯಾಗಿ ವೀರಮರಣವನ್ನಪ್ಪಿದ ವೀರಮಹಿಳೆಯಾಗಿದ್ದಾರೆ ಎಂಬುದಾಗಿ ಹೇಳಿದರು.
ಇಂತಹ ವೀರಮಹಿಳೆಯ ಪ್ರತಿಮೆಯನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸ್ಥಾಪಿಸುವ ಮೂಲಕ ಗೌರವ ಸಲ್ಲಿಸಿದೆ, ನಮ್ಮ ಸರ್ಕಾರ 2021 ರ ನವಂಬರ್ 11 ರಿಂದ ಒನಕೆ ಓಬವ್ವನ ಜಯಂತ್ಯೋತ್ಸವವನ್ನು ನಾಡಿನ ಎಲ್ಲಡೆ ಆಚರಣೆಯನ್ನು ಮಾಡುವ ಮೂಲಕ ಗೌರವ ಸಲ್ಲಿಸಲಾಗಿದೆ, ಅಲ್ಲದೆ ಇಂತಹ ದಿಟ್ಟ, ವೀರಮಹಿಳೆಯನ್ನು ನಾಡಿನಜನ ಸ್ಮರಿಸುವಂತೆ ಮಾಡಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಸ್ತೇದಾರರಾದ ತಿಪ್ಪೇಸ್ವಾಮಿ ವಹಿಸಿದ್ದರು, ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷರಾದ ಪ್ರಕಾಶ್, ನಗರಸಭೆ ಸದಸ್ಯರುಗಳಾದ ಈರಲಿಂಗೇಗೌಡ, ಶ್ರೀಮತಿ ಮಮತಾ, ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಚಲವಾದಿ ಮಹಾಸಭಾ ಅಧ್ಯಕ್ಷರಾದ ಖಾದಿ ಹೇಮಂತ್ ಕುಮಾರ್, ಉಪಾಧ್ಯಕ್ಷರಾದ ಕೃಷ್ಣಮೂರ್ತಿ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ನರಸಿಂಹಮೂರ್ತಿ, ಜಿ.ಪಂ.ಮಾಜಿ ಸದಸ್ಯರಾದ ನಾಗೇಂದ್ರ ನಾಯಕ್, ಮಸ್ಕಲ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಬಿಂಬೂಧರ, ಮಹಮ್ಮದ್ ಫಕ್ರುದ್ದೀನ್, ವಿಕೆಗುಡ್ಡ ಗ್ರಾ.ಪಂ.ಉಪಾಧ್ಯಕ್ಷರಾದ ಮಂಜುನಾಥ, ಎಂ ಡಿ ಕೋಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಯಶವಂತ್, ಇದ್ದಲನಾಗೇನಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಸದಸ್ಯರಾದ ರಾಜಣ್ಣ, ಎಲ್.ಐ.ಸಿ ಸೂಪರ್ ಡೆಂಟ್ ಕೇಶವಮೂರ್ತಿ, ವಕೀಲರ ಸಂಘದ ಅಧ್ಯಕ್ಷರಾದ ರಾಮಚಂದ್ರಪ್ಪ, ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಅಧ್ಯಕ್ಷರಾದ ಹೆಚ್.ಎನ್.ಕೇಶವಮೂರ್ತಿ, ಉಪಾಧ್ಯಕ್ಷರಾದ ಶ್ರೀಮತಿ ಶಾಂತಮ್ಮ, ಉಡುವಳ್ಳಿ ಗ್ರಾಮ ಪಂಚಾಯಿತಿ ವಿಜಯಕುಮಾರ್, ಕೆಇಪಿ ಸದಸ್ಯರಾದ ಶಿವಕುಮಾರ್, ಕೆಪಿಸಿಸಿ ಸದಸ್ಯರಾದ ವಿಜಯ್ ಕುಮಾರ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಾಮಾನ್ಯ ಹೆಣ್ಣುಮಗಳು ಯಾವುದೇ ಯುದ್ದ ಕಲೆ ತಿಳಿಯದಿದ್ದರೂ, ವೀರಾವೇಶದಿಂದ ಹೋರಾಡಿ ಶತ್ರುಗಳಿಂದ ತನ್ನ ನಾಡನ್ನು ಕಾಪಾಡಿದ ವೀರ ವನಿತೆ ಒನಕೆ ಓಬವ್ವಳ ಚರಿತ್ರೆಯನ್ನು ಇಂದು ಎಲ್ಲರೂ ಸ್ಮರಿಸಬೇಕು ಶಾಸಕ ಟಿ.ರಘುಮೂರ್ತಿ .
ಚಳ್ಳಕೆರೆ ಜನಧ್ವನಿ ವಾರ್ತೆ ನ.11 ಸಾಮಾನ್ಯ ಹೆಣ್ಣುಮಗಳು ಯಾವುದೇ ಯುದ್ದ ಕಲೆ ತಿಳಿಯದಿದ್ದರೂ, ವೀರಾವೇಶದಿಂದ ಹೋರಾಡಿ ಶತ್ರುಗಳಿಂದ ತನ್ನ ನಾಡನ್ನು ಕಾಪಾಡಿದ ವೀರ ವನಿತೆ ಒನಕೆ ಓಬವ್ವಳ ಚರಿತ್ರೆಯನ್ನು ಇಂದು ಎಲ್ಲರೂ ಸ್ಮರಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯಾ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಛಲವಾದಿ ಸಂಘ ಛಲುವಾಧಿ ಸಮದಾಯದವತಿಯಿಂದ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಓಬವ್ವ ಅವರು ಕನ್ನಡ ಸ್ತ್ರೀಯರಲ್ಲಿ ಹೆಮ್ಮೆಯ ಸಂಕೇತವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಎಂದು ಕರೆಯಲಾಗುತ್ತದೆ ಈಗಿನ ಮಹಿಳೆಯರು ಓಬವ್ವನ ದೈರ್ಯ ಮಾಡಿದರೆ ಯಾರೂ ಮಹಿಳೆಯರ ಮೇಲೆ ದೌರ್ಜನ್ಯ ಮಾಡಲು ಸಾಧ್ಯವಾಗಯವುದಿಲ್ಲ ಎಂದು ತಿಳಿಸಿದರು.
ನಾನು ಭದ್ರವಾತಿಯಲ್ಲಿ 1972 ನೇ ಸಾಲಿನಲ್ಲಿ 4 ನೇ ತರಗತಿ ವ್ಯಾಸಂಗ ಮಾಡುವಾಗ ದಿ.ವಿಷ್ಣುವರ್ಧನ್ ನಟಿಸಿರುವ ಕೋಟೆ ನಾಡಿ ಒನಕೆ ಓಬವ್ವನ ಸಿನಿಮಾ ನೋಡಿ ಹೈದಾರಿ ಸೈನಿಕರು ಕೋಟೆ ಒಳಗೆ ನುಸುಳಿ ಬರುತ್ತಿರುವುದನ್ನು ಒನೆಕೆಯಿಂದ ಒಬ್ಬರನ್ನು ಸದೆ ಬಡಿದು ರಾಸಿ ರಾಸಿ ಸೈನಿಕರ ಮೃತದೇಹಳ ದೃಶ್ಯ ಇನ್ನು ನನ್ನ ಕಣ್ಮುಂದೆ ಕೋಟೆ ನಾಡು ರಕ್ಷಣೆಯ ಇತಿಹಾಸದ ದೃಶ್ಯಗಳು ಬರುತ್ತಿವೆ ಎಂದು ಹಳೆಯ ನೆನೆಪು ಮೆಲುಕು ಹಾಕಿದರು.
ವೀರ ವನಿತೆ ಓಬವ್ವ ಕೇವಲ ಛಲಾವಾದಿ ಸಮುದಾಯಕ್ಕೆ ಸೀಮಿತವಲ್ಲ ಇಡೀ ರಾಜ್ಯಕ್ಕೆ ಸೇರಿದವರು. ಚಿತ್ರದುರ್ಗ ಕೋಟೆಯ ಕಾವಲುಗಾರ ಮುದ್ದಲೆ ಹನುಮಂತಪ್ಪನ ಹೆಂಡತಿಯಾದ ಓಬವ್ವ ಯಾವುದೇ ಯುದ್ದ ಕಲೆ ತಿಳಿಯದಿದ್ದರೂ, ಕೋಟೆಯ ಮೇಲೆ ಆಕ್ರಮಣ ಮಾಡುತ್ತಿದ್ದ ಶತ್ರು ಸೈನ್ಯದ ಮೇಲೆ ಕೇವಲ ಒನಕೆಯನ್ನು ಹಿಡಿದು ಸಾವಿರಾರು ಶತ್ರು ಸೈನಿಕರ ಕೊಂದು ಕೋಟೆಯ ರಕ್ಷಣೆ ಮಾಡಿದಳು. ಸಿನಿಮಾದ ದೃಶ್ಯದಲ್ಲಿ ತೋರಿಸಿರುವಂತೆ ಓಬವ್ವಳ ಇತಿಹಾಸ ಅಷ್ಟಕ್ಕೇ ಸೀಮಿತವಲ್ಲ. ಚರಿತ್ರೆಯ ಪುಟಗಳನ್ನು ತೆಗೆಯುತ್ತಾ ಹೋದಂತೆ ಓಬವ್ವ ಯಾರು, ಅವರ ಜಯಂತಿಯನ್ನು ಇಂದು ಏಕೆ ಆಚರಿಸಬೇಕು ಎನ್ನುವುದು ಅರಿವಾಗುತ್ತದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಶ್ರೀರಾಮರೆಡ್ಡಿ ವಿಶೇಷ ಉಪನ್ಯಾಸ ನೀಡುತ್ತಾ ಚಿತ್ರದುರ್ಗದ ಒನಕೆ ಓಬ್ಬವ್ವ ತೋರಿಸದ ಶೌರ್ಯ ಬೇರೆ ಯಾರು ತೋರಲಾರರು, ಯಾರಿಗೂ ತಿಳಿಯದೆ ತಕ್ಷಣ ಬಂದ ಶತ್ರು ಸೈನಿಕರ ಬಗ್ಗೆ ಗಂಡನಿಗೆ ಹೇಳದೆ, ಮನೆಯಲ್ಲಿ ಇದ್ದ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು ತನ್ನ ರಾಜ್ಯ ರಕ್ಷಣೆಗೆ ಹೋರಾಡಿ ತಾಯಿ ನಾಡಿಗಾಗಿ ಮಡಿದ ಓಬವ್ವ ಸ್ರೀ ಕುಲದ ಸ್ವಾಭಿಮಾನದ ಸಂಕೇತವಾಗಿದ್ದಾರೆ,ಸಮಾಜಕ್ಕೆ ಕೊಡುಗೆ ನೀಡಿದ ಮಹಾನೀಯರ ಜಯಂತಿಗಳು ಸತ್ವಯುತವಾಗುವ ಬದಲು ಶಕ್ತಿಯುತವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಮಾಜಿ ತಾಪಂ ಸದಸ್ಯರಾದ ನಿಜಲಿಂಗಪ್ಪ, ಜಯರಾಂ ಮಾತನಾಡಿದರು.
ನಗರಸಭೆ ಸದಸ್ಯರಾದ ವೀರಭದ್ರಪ್ಪ, ರಮೇಶ್ ಗೌಡ, ಛಲುವಾದಿ ಸಂಘದ ಅಧ್ಯಕ್ಷ ಓಬಣ್ಣ,ಮಾರುತಿ,ಓಂಕಾರಮೂರ್ತಿ,ಲಿಂಗಪ್ಪ,ರಾಮಕೃಷ್ಣಪ್ಪ,ಕೆಂಚಣ್ಣ, ಹನುಮಂತಪ್ಪ,ಮಂಜುಳ್ಳಮ್ಮ,ದೇವರಾಜ್, ಚಿದಾನಂದಪ್ಪ, ಎಸ್.ಲಕ್ಷ್ಮಣ,ರವೀಂದ್ರಪ್ಪ,ನರಸಿಂಹಮೂರ್ತಿ, ಪಶುಸಂಗೋನೆ ಸಹಾಯಕ ನಿರ್ದೇಶಕ ಡಾ.ರೇವಣ್ಣ ಪೌರಾಯುಕ್ತ ಚಂದ್ರಪ್ಪ, ಕಸಬಾ ಆರ್ ಐ ಲಿಂಗೇಗೌಡ,ಶಿರಸ್ಥೆದಾರ್ ಗಿರೀಶ್, ಗ್ರಾಮಲೆಕ್ಕಾಧಿಕಾರಿ ಪ್ರಕಾಶ್ ನಗರಸಭೆ ಸದಸ್ಯರಾದ ವೀರಭದ್ರಪ್ಪ, ರಮೇಶ್ ಗೌಡ, ಜಿಪಂ ಡಿವೈಎಸ್ ಪಿ ರಾಜಣ್ಣ, ಪಿಎಸ್ ಐ ಶಿವರಾಜ್, ನಿವೃತ್ತ ಪ್ರೊ.ಟಿ.ನಾಗರಾಜ್. ಇತರರಿದ್ದರು.
ಓಬಮ್ಮನ ಭಾವಚಿತ್ರದೊಂದಿಗೆ ಸಾರೋಟದಲ್ಲಿ ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ವಿವಿಧ ಕಲಾ ತಂಡ ವಾದ್ಯಗಳೊಂದಿಗೆ ಮೆರೆವಣಿಗೆ ಮಾಡಲಾಯಿತು.
ಎತ್ತಪ್ಪ ಗುಡ್ಡದ ಅಭಿವೃದ್ಧಿಗಾಗಿ 3.50 ಕೋಟಿ ಮಂಜೂರು ಕಾಡುಗೊಲ್ಲ ಸಮುದಾಯವು ಎಸ್ ಟಿ ಮೀಸಲಾತಿ ಪಡೆಯಲು ಸಂಘಟಿತರಾಗಬೇಕು; ರಾಜ್ಯಾಧ್ಯಕ್ಷ ರಾಜಣ್ಣ
ಚಳ್ಳಕೆರೆ: ಕಾಡುಗೊಲ್ಲ ಸಮುದಾಯವು ಅಭಿವೃದ್ಧಿ ಹೊಂದಬೇಕಾದರೆ ಎಸ್ ಟಿ ಮೀಸಲಾತಿ ಅವಶ್ಯಕವಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯನ್ನು ಕಾಡುಗೊಲ್ಲರ ಹಟ್ಟಿಗಳಲ್ಲಿ ಬಹಿಷ್ಕರಿಸಿ ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಿದಾಗ ಮಾತ್ರ ನಮ್ಮ ಹಕ್ಕನ್ನು ಪಡೆಯಲು ಸಾಧ್ಯ ಎಂದು ಕಾಡುಗೊಲ್ಲ ಸಮುದಾಯದ ರಾಜ್ಯಾಧ್ಯಕ್ಷ ರಾಜಣ್ಣ ಕರೆ ನೀಡಿದರು.
ತಾಲೂಕಿನ ತಳಕು ಹೋಬಳಿಯ ಎತ್ತಪ್ಪ ಗುಡ್ಡದಲ್ಲಿ ಕಾಡುಗೊಲ್ಲ ಸಮುದಾಯದ ವತಿಯಿಂದ ಆಯೋಜಿಸಿದ್ದ ಕಾಡುಗೊಲ್ಲರ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಡುಗೊಲ್ಲ ಸಮುದಾಯವು ನಮ್ಮ ಹಿಂದಿನ ಪದ್ಧತಿಗಳನ್ನು ಅನುಸರಿಸಿಕೊಂಡು ಬರುತ್ತಿರುವುದರಿಂದ ನಮಗೆ ಮೀಸಲಾತಿ ದೊರೆಯುತ್ತಿಲ್ಲ ಸಮುದಾಯದಲ್ಲಿನ ಕೆಲವು ಅನಿಷ್ಟ ಪದ್ದತಿಯ ಆಚರಣೆಗಳನ್ನು ಬದಲಿಸಿಕೊಂಡು ಆಧುನಿಕತೆಯತ್ತ ಮರಳಬೇಕಿದೆ ನಮ್ಮ ಮುಂದಿನ ಪೀಳಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕಾದರೆ ಮೀಸಲಾತಿ ಅವಶ್ಯಕವಾಗಿದೆ ಕಾಡುಗೊಲ್ಲ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇರುವುದರಿಂದ ರಾಜಕೀಯ ಪಕ್ಷಗಳು ನಮ್ಮನ್ನು ಹಿಂದೆ ತಳ್ಳುತ್ತಿವೆ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಉದ್ದೇಶಗಳು ಈಡೇರಲು ಸಾಧ್ಯವಿಲ್ಲ ಹೀಗಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ಮೂಲಕ ನಮ್ಮ ಹಕ್ಕನ್ನು ಪಡೆಯಲೇಬೇಕಾದ ಅನಿವಾರ್ಯತೆ ಎದುರಾಗಿದೆ ಈಗನಿಂದಲೇ ಎಲ್ಲರೂ ಸಂಘಟಿತರಾಗಿ ಹೋರಾಡೋಣ ಎಂದರು.
ಕಾಡುಗೊಲ್ಲ ಸಮುದಾಯದ ಜಿಲ್ಲಾಧ್ಯಕ್ಷ ರಾಜ್ ಕುಮಾರ್ ಮಾತನಾಡಿ ಸರ್ಕಾರಗಳನ್ನು ನಡೆಸುವ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ನಮ್ಮ ಸರ್ಕಾರ ಬಂದರೆ ಮೀಸಲಾತಿ ನೀಡುತ್ತೇವೆ ಎಂಬ ಮಾತುಗಳಿಂದ ನಮ್ಮ ಮೂಗಿಗೆ ತುಪ್ಪ ಸವರಿ ಮತ ಗಿಟ್ಟಿಸಿಕೊಂಡು ಚುನಾವಣೆಯ ನಂತರ ನಮ್ಮನ್ನು ಕಡೆಗಣಿಸಲಾಗುತ್ತಿದೆ ಗೊಲ್ಲರಹಟ್ಟಿಗಳಲ್ಲಿ ಯುವಕರು ಸಂಘಗಳನ್ನು ರಚಿಸಿಕೊಂಡು ಒಗ್ಗಟ್ಟಾಗಿ ರಾಜ್ಯ ಜಿಲ್ಲಾ ತಾಲೂಕು ಸಂಘಟನೆಗಳು ಹೇಳುವ ವ್ಯಕ್ತಿಗೆ ಹಾಗೂ ನಮ್ಮ ಬೇಡಿಕೆಯನ್ನು ಈಡೇರಿಸುವ ಪಕ್ಷಕ್ಕೆ ಮತ ನೀಡುತ್ತೇವೆ ಎಂಬ ಧ್ವನಿಯನ್ನು ಎತ್ತಿದಾಗ ಮಾತ್ರ ನಮ್ಮ ಮೀಸಲಾತಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಸೇರಿದಂತೆ ಇತರೆ ಬೇಡಿಕೆಗಳು ಈಡೇರಲು ಸಾಧ್ಯ ಎಂದು ತಿಳಿಸಿದರು.
ಕಾಡುಗೊಲ್ಲ ಸಮುದಾಯದ ತಾಲೂಕು ಅಧ್ಯಕ್ಷ ಎಸ್ ರವಿಕುಮಾರ್ ಮಾತನಾಡಿ ಎತ್ತಪ್ಪ ಗುಡ್ಡವನ್ನು ಅಭಿವೃದ್ಧಿಪಡಿಸಲು ಈಗಾಗಲೇ 1.50 ಕೋಟಿ ಮಂಜೂರು ಆಗಿದ್ದು 30 ಲಕ್ಷ ಬಿಡುಗಡೆಯಾಗಿ ಕೆಲಸ ಪ್ರಾರಂಭವಾಗಿದೆ ಈ ಎತ್ತಪ್ಪ ಗುಡ್ಡವನ್ನು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಿ ಜಾತ್ರೆಯ ರೂಪದಲ್ಲಿ ರಾಜ್ಯದಲ್ಲಿ ಇರುವ ಕಾಡುಗೊಲ್ಲ ಸಮುದಾಯದ ಎಲ್ಲಾ ಬಾಂಧವರು ಸೇರಿ ಆಚರಿಸುವಂತಾಗಬೇಕು ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ಒತ್ತಡವನ್ನು ಹೇರಿ ಕಾಡುಗೊಲ್ಲ ಸಮುದಾಯಕ್ಕೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ದೊರಕುವಂತೆ ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳು ಎಲ್ಲ ತಹಶೀಲ್ದಾರ್ ಗಳ ಸಭೆ ನಡೆಸಲು ತೀರ್ಮಾನಿಸಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಎಸ್ಟಿ ಮೀಸಲಾತಿ ಪಡೆಯಲು ಒತ್ತಡ ಹೇರುವ ಸಲುವಾಗಿ ಹೋರಾಟದ ರೂಪುರೇಷೆಗಳನ್ನು ರೂಪಿಸಲಾಗುವುದು ಸಮುದಾಯದ ಜನರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಕೇಳಿಕೊಂಡರು.
ಕಾರ್ಯಕ್ರಮಕ್ಕೆ ಮುನ್ನ ಎತ್ತಪ್ಪ ಗುಡ್ಡದಲ್ಲಿನ ಎತ್ತಪ್ಪ ಸ್ವಾಮಿಯ ಸಮಾಧಿಗೆ ಕಾಡುಗೊಲ್ಲ ಸಮುದಾಯದ ಸಂಪ್ರದಾಯದಂತೆ ಪೂಜೆಯನ್ನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಸಮುದಾಯದ ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಮೀಸೆ ಮಹಾಲಿಂಗಪ್ಪ ಬಾಲರಾಜ್ ದೊಡ್ಡ ನಾಗಯ್ಯ ದೇವರಾಜ್ ರಾಜಣ್ಣ ಕರಿಯಪ್ಪ ರಂಗಸ್ವಾಮಿ ಗೋವಿಂದಪ್ಪ ಸುಂಕಪ್ಪ ಬಸವರಾಜ್ ಸೇರಿದಂತೆ ಕಾಡುಗೊಲ್ಲ ಸಮುದಾಯದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು
ಶ್ರೀಕೃಷ್ಣ ಭಗವಂತ ಸಕಲರಿಂದ ಪೂಜನೀಯ -ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ
ಚಿತ್ರದುರ್ಗ ಸೆ.06:
ಶ್ರೀಕೃಷ್ಣ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಶೂದ್ರ ಕುಲದಲ್ಲಿ ಹುಟ್ಟಿದರೂ ಬ್ರಾಹ್ಮಣರಾದಿಯಾಗಿ ಸಕಲ ಜನರಿಂದಲೂ ಶ್ರೀಕೃಷ್ಣ ಭಗವಂತ ಪೂಜನೀಯವಾಗಿದ್ದಾನೆ. ಶ್ರೀ ಕೃಷ್ಣ ಗೀತಸಾರ ಪ್ರತಿಯೊಬ್ಬರ ಜೀವನಕ್ಕೂ ದಾರಿ ದೀಪವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಆಯೋಜಿಸಲಾದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಈಗಲೂ ಮೌಢ್ಯ, ಕಂದಾಚಾರಗಳು ಮನೆ ಮಾಡಿವೆ. ಇವುಗಳಿಂದ ಹೊರಬರಬೇಕು. ವಿಜ್ಞಾನ ಹಾಗೂ ನಾಗರಿಕತೆ ಇಂದು ಬಹಳಷ್ಟು ಮುಂದುವರೆದಿದೆ. ಯಾದವ ಸಮುದಾಯದವರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಮುದಾಯ ಪ್ರಬಲವಾಗಬೇಕು. ಹಳೆಯ ಮೌಢ್ಯಗಳ ಪಾಲನೆ ಬಿಡಬೇಕು. ಶುಚ್ಚಿತ್ವ ಕಾಪಾಡಿಕೊಳ್ಳಬೇಕು. ಯಾರೊಬ್ಬರು ಇಂತಹದೇ ಜಾತಿ ಹುಟ್ಟಬೇಕು ಎಂದು ಅರ್ಜಿಹಾಕಿ ಜನಿಸುವುದಿಲ್ಲ. ಹುಟ್ಟು ಆಕಸ್ಮಿಕ. ಬಡತನದಲ್ಲಿ ಹುಟ್ಟಿದವರು ತಮ್ಮ ಸ್ಥಿತಿಯನ್ನು ಮೀರಿ ಉತ್ತಮ ಸ್ಥಾನಮಾನಗಳಿಸಬಹುದು. ಇದಕ್ಕೆ ಶಿಕ್ಷಣ ಹಾಗೂ ಕಷ್ಟಪಟ್ಟು ದುಡಿಯುವ ಮನಸ್ಸಿರಬೇಕು ಎಂದರು.
ಶ್ರೀಕೃಷ್ಣ ಎಲ್ಲಾ ವರ್ಗದ ಜನರನ್ನು ಪ್ರೀತಿಯಿಂದ ಕಂಡಿರುವ ಕುರಿತು ಪುರಾಣಗಳಲ್ಲಿ ಉಲ್ಲೇಖವಿದೆ. ಸಕಲ ಜನರನ್ನು ಪ್ರೀತಿಸಬೇಕು. ಸಕಲ ಜೀವಾತ್ಮಗಳಿಗೂ ಲೇಸು ಬಯಸಬೇಕು. ಮುಂದಿನ ವರ್ಷದಲ್ಲಿ ಶ್ರೀಕೃಷ್ಣ ಜಯಂತಿಯನ್ನು ವೇಷಭೂಷಣ, ಚಿತ್ರಕಲಾ, ಲೇಖನ ಸ್ಪರ್ಧೆಗಳನ್ನು ಆಯೋಜಿಸಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ಸಾಹಿತಿ ಎಸ್.ಆನಂದ ಉನ್ಯಾಸ ನೀಡಿ, ಪುರಾಣಗಳ ಪ್ರಕಾರ ಶ್ರೀಕೃಷ್ಣ ಅಹಿರ ಜನಾಂಗದಲ್ಲಿ ಹುಟ್ಟಿದ್ದಾನೆ. ಸದಾ ಪ್ರಕೃತಿಯೊಂದಿಗೆ ಕೃಷ್ಣ ಬೆರೆಯುತ್ತಿದ್ದ. ಅಂದಿನ ಜಾತಿ ಸಮಾಜವನ್ನೂ ಮೀರಿ ಎಲ್ಲಾ ಜನರನ್ನು ಸಮಚಿತ್ತದಿಂದ ನೋಡಿದ. ಹಿಂದುಳಿದ ಜಾಂಬವಂತನ ಮಗಳನ್ನು ಮದುವೆಯಾದ. ಎಲ್ಲಾ ಕಳೆದಕೊಂಡು ಇಲ್ಲದವರಾಗಿದ್ದ ಪಾಂಡವರ ಪರ ನಿಂತು ಕುರುಕ್ಷೇತ್ರದಲ್ಲಿ ಜಯ ತಂದಿತ್ತ. ದೇಹ ಹಾಗೂ ಆತ್ಮದ ಕುರಿತು ಕೃಷ್ಣ ನೀಡಿದ ಸಂದೇಶ ಇಂದಿಗೂ ಸತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ರಂಗನಾಥ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಯಾದವ ಸಮುದಾಯ ಪ್ರಧಾನ ಕಾರ್ಯದರ್ಶಿ ಆನಂದ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮೀಕಾಂತ ಸೇರಿದಂತೆ ಸಮುದಾಯದ ಮುಖಂಡರಾದ ಆರ್.ಕೃಷ್ಣಪ್ಪ, ಬಿ.ಪಿ.ಪ್ರಕಾಶ್, ಸಿ.ವೀರಭದ್ರಪ್ಪ, ಸುಧಾಕರ್, ಧನಂಜಯ, ಹೊನ್ನೂರು ತಿಮ್ಮಪ್ಪ, ಈಶ್ವರಪ್ಪ, ಡಿ.ಜೆ.ಗೋವಿಂದಪ್ಪ, ಟಿ.ತಿಮ್ಮಪ್ಪ, ನಾಗೇಂದ್ರಪ್ಪ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಸ್ವಾಗತಿಸಿದರು. ರಂಗನಿರ್ದೇಶಕ ಕೆ.ಪಿ.ಗಣೇಶಯ್ಯ ನಿರೂಪಿಸಿದರು. ಚಳ್ಳಕೆರೆಯ ಮುತ್ತುರಾಜ್ ತಂಡ ಗೀತಗಾಯನ ನಡೆಸಿಕೊಟ್ಟರು.
ಶಾಸಕರ ಭವನದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜು ಅರಸು ಅವರ ಪುಣ್ಯ ಸ್ಮರಣೆ ಆಚರಣೆ.
ಚಳ್ಳಕೆರೆ ಜನಧ್ವನಿ ವಾರ್ತೆ ಜೂ6
ನಗರದ ಶಾಸಕರ ಭವನದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜು ಅರಸು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗು ನಗರಸಭೆ ಸದಸ್ಯ ವೀರಭದ್ರಯ್ಯ ಮಾತನಾಡಿ ಜೀತ ಮುಕ್ತ ಪದ್ದತಿಯನ್ನು ನಿರ್ಮೂಲನೆ ಮಾಡಿ ಜೀತ ಮುಕ್ತ ಹರಿಕಾರರು ಎನ್ನಿಸಿಕೊಂಡವರು ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ್ ಅರಸು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ್ ಅವರು ತಮ್ಮ ಅಧಿಕಾರ ಅವಧಿಯಲ್ಲಿ ತುಳಿತಕ್ಕೊಳಗಾದವರಿಗೆ ಧ್ವನಿ ನೀಡಿದ ವ್ಯಕ್ತಿ, ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೆ ತಂದವರು. ಇಂತಹ ಮಹಾನ್ ನಾಯಕರುಗಳ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಪುರಸಭೆ ಮಾಜಿ ಸದಸ್ಯ ಹೆಚ್.ಎಸ್. ಸೈಯದ್, ತಾಪಂ ಮಾಜಿ ಸದಸ್ಯ ಮೂಡಲಗಿರಿಯಪ್ಪ, ಸೇರಿದಂತೆ ಮುಂತಾದವರು.
ದಾರ್ಶನಿಕರ ಜಯಂತಿಗಳ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಚರಣೆ ಮಾಡುವ ಎಲ್ಲಾ ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತಾಗಬೇಕು ಶಾಸಕ ಟಿ.ರಘುಮೂರ್ತಿ.
ಚಳ್ಳಕೆರೆ ಜನಧ್ವನಿ ವಾರ್ತೆ ಮಾ.೧೨
ನಮ್ಮ ನಾಡು, ನುಡಿಯ ಬಗ್ಗೆ ಬರಿ ಅಭಿಮಾನವಿದ್ದರೆ ಸಾಲದು ನಾಡಿಗಾಗಿ ನಾವು ತ್ಯಾಗ ಮತ್ತು ಸೇವೆ ಸಲ್ಲಿಸಬೇಕು ಇಂತಹ ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಕಡಿಮೆ ಜನರು ಭಾಗವಹಿಸದೆ ಇರುವ ಬಗ್ಗೆ ಶಾಸಕ ಟಿ.ರಘುಮೂರ್ತಿ ವಿಷಾದ ವ್ಯಕ್ತಪಡಿಸಿದರು.
ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಬಯಲು ರಂಗಮಂದಿರಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ನಾಲ್ಕನೇತಾಲೂಕು ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಭಾಗವಹಿಸಿ ಮಾತನಾಡಿದರು.ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಚರಣೆ ಮಾಡುವ ದಾರ್ಶನಿಕ ಜಯಂತಿಗಳ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಚರಣೆ ಮಾಡುವ ಎಲ್ಲಾ ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತಾಗ ಬೇಕು. ಚುವಾವಣೆ ಸಂದರ್ಭದಲ್ಲಿ ರಾಜಕೀಯ ಉದ್ದೇಶಕ್ಕಾಗಿ ಸಮಾವೇಶಗಳಿಗೆ ಜನ ಸೇರಿಸುತ್ತಾರೆ ಆದರೆ ಕನ್ನಡ ನಾಡು ನುಡಿ, ಜಲ ಉಳಿವಿಗಾಗಿ ಹಮ್ಮಿಕೊಳ್ಳುವ ಮಹತ್ವದ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕನ್ನಡಾಭಿಮಾನಿಗಳು, ವಿವಿಧ ಸಂಘಟನೆಗಳು, ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
ಕನ್ನಡ ಸಾಹಿತ್ಯದ ಕೃಷಿ ಬೆಳವಣಿಗೆಗೆ ಕೇವಲ ಸಂಘಟನೆ ಸಾಲದು. ಬದಲಾಗಿ ದೊಡ್ಡ ಪರಂಪರೆ ಬೆಳೆಯಬೇಕಾಗಿದೆ. ಕನ್ನಡ ನಮ್ಮೆಲ್ಲರ ಜೀವಾಳವಾಗಿದ್ದು, ಭಾರತದ ಸಂಸ್ಕ್ರತಿ ಕನ್ನಡದ ಮೇಲೆ ನಿಂತಿದೆ. ಭಾಷೆಯಲ್ಲಿ ಮೇಲು-ಕೀಳು ಎಂಬುದಿಲ್ಲ. ಉಳಿದ ಭಾಷೆಗಳನ್ನು ಗೌರವಿಸುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದು ತಿಳಿಸಿದರು.
ನಿಕಟಪೂವರ್ಗ ತಾಲೂಕು ಸಮ್ಮೇಳನಾಧ್ಯಕ್ಷ ಹಾಗೂ ನಿವೃತ್ತ ಪ್ರಾಚಾರ್ಯ ಶಿವಲಿಂಗಪ್ಪ ಮಾತನಾಡಿ ಬಳ್ಳಾರಿ ಚಿತ್ರದುರ್ಗ ಬರದ ನಾಡು ಅತಿ ಕಡಿಮೆ ಮಳೆ ಬೀಳುವ ಪ್ರದೇಶ, ಹಿಂದುಳಿದ ಜಿಲ್ಲೆಗಳು ಎಂದು ಎನಿಸಿಕೊಂಡಿದ್ದು ವಿಶೇಷ ಅನುದಾನದಡಿಯಲ್ಲಿ ಕಲ್ಯಾಣ ಕರ್ನಾಟ ಎಂದು ಹೇಗೆ ಅಭಿವೃದ್ಧಿಯಾಗಿದೆಯೋ ಅದೇ ರೀತಿ ಚಿತ್ರದುರ್ಗ, ಬಳ್ಳಾರಿ ಎರಡು ಜಿಲ್ಲೆಗಳನ್ನು ೩೭೧ ಜೆ ಅಡಿಯಲ್ಲಿ ಜಾರಿಗೆ ತರುವ ಮೂಲಕ ಪರಶುರಾಂಪುರ ತಾಲೂಕು ಕೇಂದ್ರ, ನಿರುದ್ಯೋಗ ಹೋಗಲಾಡಿಸಲು ಉದ್ಯೋಗ ಸಂಸ್ಥೆ, ಡಿಆರ್ ಡಿಒ, ಸೇರಿದಂತೆ ಕೇಂದ್ರದ ಸಂಸ್ಥೆಗಳು ಸ್ಥಾಪನೆಯಾಗಿದ್ದು ಸ್ಥಳಿಯರಿಗೆ ಉದ್ಯೋಗ ಕಲ್ಪಿಸ ಬೇಕು, ರಾಣಿಕೆರೆ ಪೀಡರ್ ಚಾನಲ್ , ಕೆರೆ ಗಳು ಅಭಿವೃದ್ಧಿ, ಗಡಿ ಭಾಗದ ಶಾಲೆಗಳ ಅಭಿವೃದ್ಧಿ ಪಡಿಸಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿ ಅವುಗಳನ್ನು ಮುಚ್ಚುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ ಸರಕಾರಿ ಶಾಲೆಗಳನ್ನು ಮುಚ್ಚದಂತೆ ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷ ಕಲಮರಹಳ್ಳಿ ಡಾ.ಮಲ್ಲಿಕಾರ್ಜುನ ಮಾತನಾಡಿ ಕನ್ನಡ ಭಾಷೆಗೆ ಸೌಂದರ್ಯವಿದೆ. ಭಾಷೆಯನ್ನು ಗೌರವಸುವುದು ಎಂದರೆ ಆ ಭಾಷೆಯನ್ನು ಮಾತನಾಡುವ ಜನರನ್ನು ಗೌರವಿಸಿದಂತೆ. ನಮ್ಮ ಜಿಲ್ಲೆ ಅದರಲ್ಲೂ ಚಳ್ಳಕೆರೆ ತಾಲೂಕು ಹಲವಾರು ತಳಕಿನ ವೆಂಕಣ್ಣಯ್ಯ, ಜಾನಪದ ಸಿರಿಯಜ್ಜಿ, ಬೆಳೆಗೆರೆ ಕೃಷ್ಣಶಾಸ್ತಿç ಸೇರಿದ ಹಲವು ಸಾಹಿತಿಗಳ ಜನ್ಮ ಸ್ಥಳವಾಗಿದ್ದು ಕನ್ನಡ ಭವನ, ನಾಡೋಜ ದಿ.ಸಿರಿಯಜ್ಜಿಯ ಸ್ಮಾರಕ,ಶತಮಾನ ಕಂಡ ಶಾಲೆಗಳನ್ನು ಉನ್ನತೀಕರಿಸಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು, ಜಾರಿಯಲ್ಲಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಬರಡು ಸೀಮೆಯನ್ನು ಹಸಿರು ವಲಯವನ್ನಾಗಿಸುವುದು, ತಾಲೂಕಿನ ಬಡ ಕುಟುಂಬದ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಅರಣ್ಯ ಕೃಷಿ ಪದ್ದತಿ, ಸೇರಿದಂತೆ ಹಲವು ಯೋಜೆಗಳನ್ನು ಜಾರಿಗೊಳಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ ತಾಲೂಕು ಕನ್ನಡ ಸಾಹಿತ್ಯ ೪ ನೇ ಸಮ್ಮೇಳನ ಕಾರ್ಯಕ್ಕೆ ಸುಮಾರು ೨ ಸಾವಿರ ಕನ್ನಡಾಭಿಮಾನಿಗಳ ನಿರೀಕ್ಷೆಯಿತ್ತು ಆದರೆ ನಿರೀಕ್ಷೆಯಂತೆ ಬಾರದೆ ಇರುವುದು ವಿಷಾಧನೀಯ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾಗವಹಿಸಿ ಎಲ್ಲಾರಿಗೂ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಯಶಸ್ವಿಗೆ ಸಹಕರಿದವರು ಅಭಿನಂಧನೆಗಳನ್ನು ತಿಳಿಸಿದರು.
ಕಾರ್ಯಕ್ರಕ್ಕೂ ಮುನ್ನ ಬೆಳಗ್ಗೆ ೭ ಗಂಟೆಗೆ ತಹಶೀಲ್ದಾರ್ ರೇಹಾನ್ ಪಾಷ ರಾಷ್ಟçಧ್ವಜರೋಹಣ ನೆರವೇರಿಸಿದರು, ನಗರಸಭೆ ಅಧ್ಯಕ್ಷೆ ಸುಮಕ್ಕ ನಾಡಧ್ವಜರೋಹಣ, ತಾಲೂಕು ಅಧ್ಯಕ್ಷ ಪರಿಷತ್ ಧ್ವಜರೋಹಣ, ಸಾಹಿತಿ ಮರಿಕುಂಟೆ ತಿಪ್ಪಣ್ಣ ಬೆಳಗೆರೆ ಕೃಷ್ಣ ಶಾಸ್ತಿçಯವರ ಮಹಾಧ್ವರವನ್ನು ಉದ್ಘಾಟಿಸಿದರು ನಂತರ ಚಳ್ಳಕೆರೆಮ್ಮ ದೇವಸ್ಥಾನ ಬಳಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕಲಮರಹಳ್ಳಿ ಡಾ.ಮಲ್ಲಿಕಾರ್ಜುನ ಇವರನ್ನು ಸಾರೋಟದಲ್ಲಿ ವಿವಿಧ ಕಲಾ ತಂಡಗಳೊAದಿಗೆ ಪ್ರಮುಖ ಬೀದಿಗಳನ್ನುಮೆರವಣಿಗೆ ಮೂಲಕ ಕಾರ್ಯಕ್ರಮದ ವೇಧಿಯತ್ತ ಕರೆ ತಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಸ್ಥಾಯಿಸಮಿತಿ ಅಧ್ಯಕ್ಷೆ ಎಂ.ಜೆ,ರಾಘವೇAದ್ರ, ಸಾಹಿತಿ ಮಿರಸಾಬಿಹಳ್ಳಿ ಶಿವಣ್ಣ, ಮಾಜಿ ಗಡಿನಾಡು ಅಧ್ಯಕ್ಷ ರಾಮಚಂದ್ರಪ್ಪ,ನಾಟಕ ಅಕಾಡಮೆ ಮಾಜಿ ಸದಸ್ಯ ಪಿ.ತಿಪ್ಪೇಸ್ವಾಮಿ, ಕ.ಸ,ಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ,ಡಾ.ಎA.ಮAಜಣ್ಣ, ಸಾಹಿತಿ ಟಿ.ಜೆ.ತಿಪ್ಪೇಸ್ವಾಮಿ , ಪಾಪಣ್ಣ, ತಹಶೀಲ್ದಾರ್ ರೇಹಾನ್ ಪಾಷ, ತಾಪಂ ಇಒ ಹೊನ್ನಯ್ಯ, ನೌಕರರ ಸಂಘದ ಅಧ್ಯಕ್ಷ ಲಿಂಗೇಗೌಡ, ಮೋದೂರು ತೇಜ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರ ಸಾಹಿತಿ , ಕವಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಹಟ್ಟಿ ತಿಪ್ಪೇಶನ ಜಾತ್ರೆಯಲ್ಲಿ ಅಭಿಮಾನಿಗಳಿಂದ ಶಾಸಕ ಟಿ.ರಘುಮೂರ್ತಿ ಭಾವಚಿತ್ರ ಪ್ರದರ್ಶನ
ಚಳ್ಳಕೆರೆ ಜನಧ್ವನಿ ವಾರ್ತೆ ಮಾ.10
ಹಟ್ಟಿ ತಿಪ್ಪೇಶನ ಪುಣ್ಯ ಕ್ಷೇತ್ರದ ರಥೋತ್ಸವ ಜಾತ್ರೆಯಲ್ಲೂ ಅಭಿಮಾನಿಗಳು ಶಾಸಕ ಟಿ.ರಘುಮೂರ್ತಿ ಫೋಟೊ ಪ್ರದರ್ಶನ ಮಾಡುವ ಮೂಲಕ್ಕೆ ಮೊತ್ತೊಮ್ಮೆ ಟಿ.ರಘೂರ್ತಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ರಥೋತ್ಸವಕ್ಕೆ ಎಸೆದಿರುವುದು ಕಂಡು ಬಂದಿದೆ.
ಕರ್ನಾಟಕದ ಯಾವುದೇ ಮೂಲೆಯಲ್ಲಿ ಜಾತ್ರೆ ಹಬ್ಬ,ಉತ್ಸವಗಳು ನಡೆದರೆ ದಿ. ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ರವರ ಭಾವ ಪ್ರದರ್ಶನ ಮಾಡುವ ಮೂಲಕ ಕುಣಿದು ಕುಪ್ಪಳಿದ ದೃಶ್ಯಗಳನ್ನು ಕಾಣ ಬಹುದು ಆದರೆ ಶುಕ್ರವಾರ ನಾಯಕನಹಟ್ಟಿ ಶ್ರೀ ಗುರು ಹಟ್ಟಿ ತಿಪ್ಪೇಶನ ಜಾತ್ರೆಯಲ್ಲಿ ಅಭಿಮಾನಿಗಳು ಶಾಸಕ ಟಿ.ರಘುಮೂರ್ತಿಯವರು ಭಾವ ಚಿತ್ರದೊಂದಿಗೆ ಕುಣಿದು ಕುಪ್ಪಳಿಸಿ ಮತ್ತೊಮ್ಮೆ ಶಾಸಕ ಟಿ.ರಘುಮೂರ್ತಿ ಎಂದು ಘೋಷಣೆಗಳನ್ನು ಕೂಗಿದರೆ.
ಇತ್ತ ಭಕ್ತರು ಬಾಳೆ ಹಣ್ಣಿನ ಮೇಲೆ ಮತ್ತೊಮ್ಮೆ ಶಾಸಕ ಟಿ.ರಘುಮೂರ್ತಿ ಎಂದು ಬರೆದು ಹಟ್ಟಿ ತಿಪ್ಪೇಶನ ತೇರಿಗೆ ಎಸೆಯುವ ಮೂಲಕ ಹರಕೆ ಮಾಡಿಕೊಂಡಿದ್ದಾರೆ.
ಹಟ್ಟಿ ತಿಪ್ಪೇಶನ ತೇರಿಗೆ ಹರಿದು ಬಂದ ಜನಸಾಗರ ಹರಕೆ ತೀರಿಸಿದ ಭಕ್ತರು
ಚಳ್ಳಕೆರೆ.ಜನಧ್ವನಿ ವಾರ್ತೆ ಮಾ.10
ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಜನಸಾಗರ ನಡುವೆ ಸಡಗರ ಸಂಭ್ರಮದೊAದಗೆ ಗುರುವಾರ ಮಧ್ಯಾಹ್ನ 3.30 ಗಂಟೆಗೆ ಸರಿಯಾಗಿ ಜರುಗಿತು.
ರಥೋತ್ಸವ ನಡೆಯುವ ಮುನ್ನ ಬೆಳಿಗ್ಗೆ 9 ಗಂಟೆಯಿAದ ಚಿಕ್ಕ ರಥೋತ್ಸವ ನಡೆಯಿತು. ಮಧ್ಯಾಹ್ನ ೧೨ ಗಂಟೆಯಿAದ ದೊಡ್ಡರಥೋತ್ಸವಕ್ಕೆ ಎಳೆಯುವ ಮುನ್ನ ವಿಶೇಷ ಪೂಜೆ ಪುರಸ್ಕಾರಗಳೊಂದಿಗೆ ಸಿದ್ದತೆಗಳು ನಡೆದವು
ಫಣಿಯಪ್ಪನ ವಂಶಜರಾದ ಪೂಜಾರಿ ಮನೆಯಲ್ಲಿ ವಿಧಿವತ್ತಾಗಿ ತಯಾರಿಸಿದ ಬಲಿ ಅನ್ನವನ್ನು ಹೊತ್ತ ಗೊಂಚಿಕಾರರು ಅಲಂಕೃತಗೊAಡ ಬಸವ ಬಸವಿಯರು ಉತ್ಸವಮೂರ್ತಿ ಪ್ರತಿಷ್ಟಾಪಿಸಿ ವಿಶೇಷವಾಗಿ ಅಲಂಕರಿಸಿದ ಪಲ್ಲಕ್ಕಿಯೊಂದಿಗೆ ಮಂಗಳವಾಧ್ಯ, ನಂದಿಕೋಲು, ಗೊರವನಕುಣಿತ, ಆಯಗಾರರ ದಂಡಿನೊಂದಿಗೆ ಭಕ್ತರ ಹಿಂಡು ತೇರಿನ ಬಳಿ ಮಡಿಯಲ್ಲಿ ಬರುತ್ತಾರೆ.
ಬಾಬುದಾರರಾದ ತಳವಾರನಾಯಕ, ಮಣಿಗಾರರು, ಜೋಗಿಹಟ್ಟಿಯವರು, ದೈವದ ಹೆಸರಿನಲ್ಲಿ ನಾಲ್ಕು ದಿಕ್ಕಿನ ರಥದ ಗಾಲಿಗಳಿಗೆ ಬಲಿ ಅನ್ನ ಹಾಕಿದ ನಂತರ ಶಾಸ್ತೊçÃಕ್ತವಾಗಿ ಪೂಜೆ ಪುಣ್ಯಾನ ಶಾಶ್ತçಗಳಿಂದ ಮೊದಲು ಕುಪ್ಪಿನಕೆರೆ ಆಂಜನೇಯಸ್ವಾಮಿಗೆ ಮಹಾಮಂಗಳಾರತಿ ಸಲ್ಲಿಸಿದ ನಂತರ ಶ್ರೀ ತಿಪ್ಪೇಸ್ವಾಮಿಗೆ ಮಹಾಮಂಗಳಾರತಿ ಸಲ್ಲಿಸಿ ಮುಕ್ತಿ ಬಾವುಟ ಹರಾಜು ಮಾಡಲಾಡಲಾಯಿತು. ಮುಕ್ತಿ ಬಾವುಟವನ್ನು ಸಿ.ವೀರಭದ್ರಬಾಬು ಕೆಎಂಎಫ್ ನಿರ್ದೇಶಕ ೨೬ ಲಕ್ಷ ರೂಗಳಿಗೆ ಹರಾಜಿನಲ್ಲಿ ತಮ್ಮಗಾಗಿಸಿಕೊಂಡರು.
ನAತರ ಮಣಿ ಕೊಡುವ ಭಕ್ತರು ಮನ್ನೆಕೋಟೆ, ತಳಕು ದೈವದವರು ಹೆಸರು ಕೂಗಿ ಕರೆದು ಸ್ವಾಮಿಯ ರಥದ ಹಗ್ಗಕ್ಕೆ ಕೈಹಾಕುತ್ತಿದ್ದಂತೆ ಸುಮಾರು ೮೦ ಟನ್ ತೂಕದ ೮೦ ಅಡಿ ಎತ್ತರದ ಐದು ಗಾಲಿಗಳು 9 ಮಜಲಿನ ದೊಡ್ಡದಾದ ಶ್ರೀ ತಿಪ್ಪೇರುದ್ರಸ್ವಾಮಿಗೆ ಜಯವಾಗಲಿ ಎಂಬ ಕೂಗೂ ಮುಗಿಲು ಮುಟ್ಟುತ್ತಲೆ ಬೃಹತ್ ರಥ ಮುಂದೆ ಸಾಗಿತು. ಭಕ್ತರು ಸ್ವಾಮಿಯ ರಥಕ್ಕೆ ಬಾಳೆಹಣ್ಣು, ಸೂರು ಬೆಲ್ಲ ಮೆಣಸು, ತೂರುವ ಮೂಲಕ ಸ್ವಾಮಿಗೆ ಅರಕೆಯನ್ನು ತೀರಿಸಿದರು.
ವ್ಯಾಪಾರ ಬಲು ಜೋರು
ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ರಾಜ್ಯದ ವಿವಿದ ಭಾಗಗಳಿಂದ ಬಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬಿಸಿಲ ದಗೆಯನ್ನು ತೀರಿಸಿಕೊಳ್ಳಲು ತಂಪು ಪಾನಿಯ, ಎಳೆನೀರು, ಮಜ್ಜಿಗೆ, ಕಲ್ಲಂಗಡಿಹಣ್ಣು, ಐಸ್‌ಸ್ಕ್ರೀಂ ಪಾನಕ, ಸೋಡ ಕಬ್ಬಿನ ಹಾಲು ಅಂಗಡಿಗಳ ಮಾಲಿಕರಿಗೆ ಬರ್ಜರಿ ವ್ಯಾಪವಾಗುತ್ತಿತ್ತು. ಜಾತ್ರಗೆ ಬಂದ ಭಕ್ತರು ಬರಿಗೈಲಿ ಮರಳದೆ ಕಾರ ಮಂಡಕ್ಕಿ, ಬೆಂಡು-ಬೆತ್ತಾಸು, ಮಕ್ಕಳ ಆಟಿಕೆ ಸಾಮಾಗ್ರಿಗಳು, ಮಹಿಳೆಯರು ಬಳೆ ಸರ ಖರೀದಿರುವ ಜತೆಗೆ ವಿಭೂತಿ, ಶ್ರೀ ತಿಪ್ಪೇಸ್ವಾಮಿಯ ಪೋಟೊ ಭಕ್ತಿಗೀತೆಗಳ ಕ್ಯಾಸೆಟ್ ರೈತರು ಎತ್ತುಗಳ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಬರ್ಜರಿ ಖರೀದಿ ಮಾಡುತ್ತಿರುವುದು ಸಾಮಾನ್ಯ ದೃಷ್ಯವಾಗಿತ್ತು.
ಎತ್ತಿನ ಗಾಡಿಗಳ ಸಾಲು ಸಾಲು
ತಿಪ್ಪೇರುದ್ರ ಸ್ವಾಮಿ ಜಾತ್ರೆ ಹಾಗು ಎತ್ತಿನ ಗಾಡಿಗಳಿಗೆ ಅವಿನಾಭಾವ ಸಂಭAಧ. ಹುಣ್ಣಿಮೆಯ ಸಂದರ್ಭದಲ್ಲಿ ಜಾತ್ರೆ ನಡೆಯುವುದರಿಂದ ಚಂದ್ರನ ಬೆಳಕಿನಲ್ಲಿ ಇಡೀ ರಾತ್ರಿ ಎತ್ತಿನ ಗಾಡಿಗಳು ಜಾತ್ರೆಗೆ ಆಗಮಿಸಿದ್ದವು. ಗ್ರಾಮದ ಸುತ್ತಲಿನ ನೀರು , ನೆರಳಿರುವ ತೋಟಗಳ ಪ್ರದೇಶ ಹಾಗು ಬಯಲು ಪ್ರದೇಶಗಳಲ್ಲಿ ಎತ್ತಿನ ಗಾಡಿಗಳು ಬಿಡಾರ ಹೂಡಿದ್ದವು ಪ್ರೌಢಶಾಲೆ ಆವರಣ ಸೇರಿದಂತೆ ವಿವಿದ ಭಾಗದಲ್ಲಿ ಎತ್ತಿನಗಾಡಿಗಳಿಂದ ತುಂಬಿಹೋಗಿತ್ತು.
ಎರಡು ದಿನಗಳ ಹಿಂದೆ ಸುತ್ತಲಿನ ಜಿಲ್ಲೆಗಳು ಹಾಗು ನೆರೆಯ ಆಂದ್ರ ಪ್ರದೇಶದಿಂದಲೂ ಜಾತ್ರೆಗೆ ಭಕ್ತರು ಎತ್ತಿನ ಗಾಡಿಗಳಲ್ಲಿ ಆಗಮಿಸಿದ್ದರು. ಜಾತ್ರೆಯ ನಂತರ ಒಂದೆರಡು ದಿನಗಳ ಕಾಲ ತಂಗಿದ್ದು ದೇವರಿಗೆ ಎಡೆ ನೀಡಿ ಜಾತ್ರೆ ಮಾಡಿಕೊಂಡು ಹಿಂದಿರುಗುತ್ತಾರೆ. ಕೆಲವು ರೈತರು ಹಳೆಯ ಮಾದರಿಯ ಚಕ್ಕಡಿಗಳನ್ನು ಬಳಸಿದರೆ ಇನ್ನೂ ಕೆಲವು ರೈತರು ಆಧುನಿಕ ಸ್ಪರ್ಶದ ಟೈರ್ ಗಾಡಿಗಳಲ್ಲಿ ಜಾತ್ರೆಗೆ ಆಗಮಿಸಿದ್ದರು.ಎತ್ತುಗಳ ಕಾಲಿಗೆ ಗೆಜ್ಜೆ, ಮೈಮೇಲೆ ಬಣ್ಣಬಣ್ಣದ ಬಟ್ಟೆ, ಕೊಂಬುಗಳಿಗೆ ನಾನಾ ಬಣ್ಣದ ಟೇಪುಗಳನ್ನು ಕಟ್ಟಿ ಅಲಂಕರಿಸಿರುವುದು ವಿಶೇಷವಾಗಿತ್ತು.
ಬ್ಯಾರಿಕೇಡ್ ನಿರ್ಮಾಣ
ಪುಣ್ಯ ಕ್ಷೇತ್ರವಾದ ತಿಪ್ಪೇಸ್ವಾಮಿಯ ಮಠಕ್ಕೆ ಬರುವ ಭಕ್ತರಿಗೆ ದಾಸೋಹ ನಡೆಯುತ್ತಿದೆ ಆದ್ದರಿಂದ ಒಳಮಠ ಮತ್ತು ಹೊರ ಮಠದಲ್ಲಿ ಲಕ್ಷಾಂತರ ಭಕ್ತರು ತೆಂಗಿನಕಾಯಿ, ಅಕ್ಕಿ ಬೇಳೆ ಇಷ್ಟಾರ್ಥದಂತೆ ತಮ್ಮ ಹರಕೆಗಳನ್ನು ಸಲ್ಲಿಸಲು ಹಾಗೂ ಸ್ವಾಮಿಯ ದರ್ಶನ ಪಡೆಯಲು ಸಾಲಿನಲ್ಲಿ ಹೋಗಲು ಎರಡು ದೇವಾಲಯಗಳ ಆವರಣದಲ್ಲಿ ಭಕ್ತರು ಸಾಲಿನಲ್ಲಿ ತೆರಳಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ಇದೇ ರೀತಿ ಗ್ರಾಮದ ಒಳಭಾಗದಲ್ಲಿ ವಾಹನಗಳ ಪ್ರವೇಶ ನಿಷೇದಿಸಲಾಗಿತ್ತು. ತೇರು ಬೀದಿ, ಒಳಮಠದ ರಸ್ತೆಗಳಲ್ಲಿ ಬ್ಯಾರಿಕೇಟ್ ನಿರ್ಮಾಣಮಾಡಲಾಗಿತ್ತು.
ಕೊಬ್ಬರಿ ಹರಕೆ
ಪೂರ್ವಕಾಲದಿಂದಲೂ ಭಕ್ತರು ಕೊಬ್ಬರಿ ಸುಡುವುದು ಒಂದು ಸಂಪ್ರದಾಯ ಆದರೆ ದೇವಾಸ್ಥಾನ ಸಮಿತಿಯವರು ಕೊಬ್ಬರಿಯನ್ನು ಅರಕೆಗೆ ಸ್ವಲ್ಪ ಮಾತ್ರ ಹಾಕಿ ಉಳಿದ ಕೊಬ್ಬರಿಯನ್ನು ದೇವಾಸ್ಥಾನದ ಅನ್ನದಾಸೋಹಕ್ಕೆ ನೀಡಿ ಎಂದು ಪ್ರಚಾರ ಹಾಗೂ ನಾಪ ಫಲಕಗಳನ್ನೂ ಹಾಕಿದರೂ ಸಹ ವಿಶೇಷವಾಗಿ ನಿರ್ಮಿಸಿದ ಅಗ್ನಿಕುಂಡಕ್ಕೆ ಭಕ್ತರು ತಮ್ಮ ತಮ್ಮ ಹರಕೆಯಂತೆ 10 ರೂ ದಿಂದ 100 ರೂ ವರೆಗೆ ಸೂಮಾರು ಟನ್‌ಗಳಷ್ಟು ಕೊಬ್ಬರಿ ಭಕ್ತರು ಅಗ್ನಿ ಕುಂಡಕ್ಕೆ ಹಾಕಿ ತಮ್ಮ ತಮ್ಮ ಹರಕೆ ತೀರಿಸಿಕೊಂಡರು.
ಜಾತ್ರೆಯಲ್ಲಿ ವಸ್ತು ಪ್ರದರ್ಶನ
ಪಶುಸಂಗೋಪನಾ, ಕೃಷಿ ಇಲಾಖೆ, ರೇಷ್ಮೆ, ತೋಟಗಾರಿಕಾ ಇಲಾಖೆ, ಮತ್ತು ಅರೋಗ್ಯ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಪ್ರದರ್ಶನ ವಿವಿದ ಹಳ್ಳಿಂದ ಎತ್ತುಗಳನ್ನು ಸಿಂಗರಿಕೊAಡು ಪ್ರದರ್ಶನ ನೋಡುಗರ ಕಣ್ಣಿಗೆ ಆಕರ್ಷಣೆಯಾಗಿತ್ತು.
ಜಾತ್ರೆಗೆ ಬಂದ ಭಕ್ತಾಧಿಗಳಿಗೆ ಸುಡು ಬಿಸಿಲಿನಲ್ಲಿ ಬಾಯಾರಿಕೆಯಾದವರಿಗೆ ಸಂಘ ಸಂಸ್ಥೆಯವರು ಉಚಿತ ಮಜ್ಜಿಗೆ ಹಾಗೂ ಕುಡಿಯವ ನೀರಿನ ವ್ಯಸ್ಥೆ ಕಲ್ಲಿಸಲಾಗಿತ್ತು.
ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಅಡಚಣೆಯಾಗದೆಂತೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿತ್ತು, ಪೋಲಿಸ್ ಇಲಾಖೆ ಎಲ್ಲಾ ಮುಂಜಾಗ್ರತೆಯನ್ನು ವ್ಯವಸ್ಥೆ ಕಲ್ಪಿಸಲಾಗಿತ್ತು.
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಢಳಿತ, ಪೋಲಿಸ್ ಇಲಾಖೆ ಮುಂಜಾಗೃತ ಕ್ರಮ ವಹಿಸಿತ್ತು ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಟ್ಯಾಂಕರ್‌ಗಳು ಮೂಲಕ ನೀರು ಸರಬರಾಜು ಹಾಗೂ ವಿವಿಧ ಸಮಾಜ ಸೇವಕರು ಕುಡಿಯುವ ನೀರಿನ ಬಾಟಲಿ, ಪಾಕೇಟ್ ಹಾಗೂ ಮಜ್ಜಿಗೆ ಉಚಿತವಾಗಿ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು.
ಮುಕ್ತಿ ಬಾವುಟ ಹರಾಜು.ರಥೋತ್ಸವ ಪ್ರಾರಂಭವಾಗುವ ಮುನ್ನ ಮುಕ್ತಿ ಬಾವುಟ ಹಾರಾಜು ಮಾಡುವ ಪ್ರಕ್ರಿಯ ನಡೆಯಿತು ಮಾಜಿ ಸಚಿವ ಡಿ. ಸುಧಾಕರ್ ಮುಕ್ತಿ ಬಾವುಟ ಹಾರಾಜಿನಲ್ಲಿ ಭಾಗವಹಿಸಿ೫೫ಲಕ್ಷ ರೂಗಳಿಗೆ ತನ್ನಾಗಿಸಿಕೊಂಡರು.
ಜಾತ್ರೆಯಲ್ಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಟಿ.ರಘುಮೂರ್ತಿ, ಆಂದ್ರ ರಾಯದುರ್ಗಂ ಶಾಸಕ ಕಾಪು ರಾಮಚಂದ್ರರೆಡ್ಡಿ, ಮಾಜಿ ಶಾಸಕ ತಿಪ್ಪೇಸ್ವಾಮಿ, ವಿವಿಧ ಪಕ್ಷದ ಟಿಕೇಟ್ ಆಕಾಂಕ್ಷಿಗಳಾದ ಅನಿಲ್‌ಕುಮಾರ್, ಎಂ,ರವೀಶ್, ಕುಮಾರಸ್ವಾಮಿ, ಡಾ.ಯೋಗೇಶ್ ಬಾಬ್, ಪ್ರಭಾಕರ ಮ್ಯಾಸನಾಯಕ,ವೀರಭದ್ರಪ್ಪ,ಎನ್.ರಘುಮೂರ್ತಿ ಜಿಲ್ಲಾಧಿಕಾರಿ ದೀವ್ಯಪ್ರಭು , ಜಿಲ್ಲಾ ರಕ್ಷಣಾಧಿಕಾರಿ ಪರಶುರಾಂ, ಅಪ್ರಾರ ಜಿಲ್ಲಾಧಿಕಾರಿ, ತಹಶೀಲ್ದಾರ್ ಸಂಧ್ಯಾ, ತಾಪಂ ಇಒ ಹೊನ್ನಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು .
ಶ್ರೀಗೌರಸಮುದ್ರಮಾರಮ್ಮ ದೇವಸ್ಥಾನದಲ್ಲಿ ಸಡಗರ ಸಂಭ್ರಮದಿಂದ ಗುಗ್ಗರಿ ಹಬ್ಬಕ್ಕೆ ಚಾಲನೆ
ಚಳ್ಳಕೆರೆ ಜನಧ್ವನಿ ವಾರ್ತೆ ಫೆ28.ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಮುದಾಯಗಳ ತವರೂರು ಎಂಬ ಖ್ಯಾತಿಗೆ ಚಳ್ಳಕೆರೆ ತಾಲುಯಕು ಹೆಸರಾಗಿದೆ. ಆಧುನಿಕತೆಯ ಭರಾಟೆ ನಡುವೆಯೂ ಈ ಬುಡಕಟ್ಟು ಸಂಸ್ಕೃತಿ ಇನ್ನೂ ಜೀವಂತವಾಗಿದೆ.
ಬೆಳ್ಳುಳ್ಳಿ. ತರಕಾರಿ ಸೇರಿದಂತೆ. ದವಸ ಧಾನ್ಯಗಳನ್ನು ದೇವಸ್ಥಾನಕ್ಕೆ ತಂದು ಒಪ್ಪಿಸುತ್ತಾರೆ ಇಡೀ ರಾತ್ರಿ ಭಜನೆ ಮಾಡುತ್ತ ರೈತರು
ಸಾರ್ವಜನಿಕರು ನೀಡಿದ ಕಾಳು.ತರಕಾರಿಯನ್ನು ಮಡಿಯಿಂದ ಬೇಯಿಸಲು ಪ್ರಾರಂಭಿಸುತ್ತಾರೆ
ವಿಡೀ ಗ್ರಾಮ ಹಬ್ಬದ ವಾತಾವರದಿಂದ ದೇವಿಯ ಗುಗ್ಗರಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಮನೆದೇವರ ಹೆಸರಲ್ಲಿ ನಡೆಯೋ ಈ ಹಬ್ಬದಲ್ಲಿ ದವಸ ದಾನ್ಯಗಳ ಪೂಜೆ ಮಾಡಿ ನೈವೈದ್ಯ ಸಲ್ಲಿಸೋದು ಇಲ್ಲಿನ ಭಕ್ತರ ವಾಡಿಕೆ. ವರ್ಷಕ್ಕೊಮ್ಮೆ ನಡೆಯೋ ಗುಗ್ಗರಿ ಹಬ್ಬ ಕಣ್ತುಂಬಿಕೊಳ್ಳಲು ಸುತ್ತಲೂ ನೆರೆದಿರುವ ಜನರು, ಭಕ್ತಿಯಿಂದ ದೇಇಗೆ ಪೂಜೆ ಸಲ್ಲಿಸುತ್ತಾರೆ. ಭಕ್ತರು,
https://janadhwani.in/wp-content/uploads/2023/02/Screenshot_20230228_205650-1024x563.pngight=”352″ mp4=”https://janadhwani.in/wp-content/uploads/2023/02/VID-20230228-WA0071.mp4″][/video]
ಈ ಭಾಗದಲ್ಲಿ ವಿವಿಧ ಬುಡಕಟ್ಟು ಸಾಂಸ್ಕೃತಿಕ ಹಬ್ಬಗಳ ಆಚರಣೆ. ಭವ್ಯ ಪರಂಪರೆ ಇಂದಿಗೂ ನಡೆಯುತ್ತಲೇ ಬಂದಿದೆ, ಈ ಪರಂಪರೆಗೆ ಗ್ರಾಮದಲ್ಲಿ ನಡೆಯೋ ಗುಗ್ಗರಿ ಹಬ್ಬವೇ ಸಾಕ್ಷಿ. ಗುಗ್ಗರಿ ಹಬ್ಬ ಪುರಾತನ ಕಾಲದಿಂದಲೂ ಹಿರಿಯರ ಸಮ್ಮುಖದಲ್ಲಿ ನಡೆಯುತ್ತಲೇ ಬಂದಿದೆ.
ಗ್ರಾಮದಲ್ಲಿ ಶ್ರೀಗೌರಸಂದ್ರ ಮಾರಮ್ಮ ದೇವಿಯ ಭವ್ಯ ಮೆರವಣಿಗೆಯಲ್ಲಿ ತಂದು, ವಿಶೇಷ ಪೂಜೆ ಸಲ್ಲಿಸುತ್ತಾರೆ.
ಶ್ರೀಮಾರಮ್ಮ ದೇವಸ್ಥಾನದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಬಂದು ಭಾಗವಹಿಸುತ್ತಾರೆ


ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಂಸ್ಕೃತಿಯ ಸಂಭ್ರಮಾಚರಣೆಗಳು ಇನ್ನೂ ಜೀವಂತವಾಗಿವೆ.ಎಂಬುದಕ್ಕೆ ಪೂರ್ವಜರು ನಡೆಸಿಕೊಂಡು ಬಂದ ಆಚರಣೆಗಳೂ ಇಂದಿಗೂ ಜೀವಂತವೇ ಸಾಕ್ಷಿ

