ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಎಫೆಕ್ಟ್
ವರದಿ ಫಲಶೃತಿ.
ಚಳ್ಳಕೆರೆ ಸೆ.17. ಹೂಳು ತುಂಬಿದ ಚರಂಡಿಗಳು ಸಾಂಕ್ರಮಿಕ ರೋಗ ಬೀತಿಯಲ್ಲಿ ಚನ್ನಗಾನಹಳ್ಳಿ ಗ್ರಾಮಸ್ಥರು ಎಂಬ ತಲೆಬರಹದಡಿಯಲ್ಲಿ ಜನಧ್ವನಿ ಮೀಡಿಯಾ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಭಾನುವಾರ ರಜೆ ದಿನ ಲೆಕ್ಕಿಸದೇ ಚರಂಡಿ ಸ್ವಚ್ಚತೆಗೆ ಮುಂದಾಗಿದ್ದಾರೆ. ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಘಟಪರ್ತಿ ಗ್ರಾಪಂ ವ್ಯಾಪ್ತಿಯ ಚನ್ನಗಾನಹಳ್ಳಿ ಗ್ರಾಮದ ಮುಸ್ಲೀಂ ಸಮುದಾಯದ ಬೀದಿಯಲ್ಲಿರುವ ಚರಂಡಿ ಹೂಳು ತುಂಬಿ ಸುಮಾರು ತಿಂಗಳುಗಳೆ ಕಳೆದಿವೆ ಈ ಬಗ್ಗೆ ಗ್ರಾಪಂ ಅಧಿಕಾರಿಗಳ ಗಮನ ಸೆಳೆದರೂ ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ನಿವಾಸಿಗಳ ಮನವಿ ಅವರ ಕಿವಿಗೆ ಬೀಳದೆ ಸ್ವಚ್ಚತೆ ಮಾಡಲು ಮಾತ್ರ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ನಿವಾಸಿ ತಿಪ್ಪುಜನಧ್ವನಿ ಡಿಜಿಟಲ್ ಮೀಡಿಯಾ ದೊಂದಿಗೆ ಮನವಿ ಮಾಡಿಕೊಂಡಿದ್ದರು .
ಶನಿವಾರ ಸಂಜೆ ಸುದ್ದಿ ಬೆಳಕು ಚೆಲ್ಲಿದ ಕೆಲವೇ ಗಂಟೆಯಲ್ಲಿ ಪಿ.ಡಿ ಒ ಹೊನ್ನೂರಪ್ಪ ಜನಧ್ವನಿಗೆ ಈ ರೀತಿ ಪ್ರತಿಕ್ರಿಯೆ ನೀಡಿ ಅದು ಚಿಕ್ಕ ಚರಂಡಿ ಯಾಗಿರುವುದರಿಂದ ನರೇಗಾ ಯೋಜನೆಯ ಕ್ರಿಯಾಯೋಜನೆಯಲ್ಲಿ ಬಾಕ್ಸ್ ಚರಂಡಿ ಮಾಡಲಾಗುವುದು ತಾತ್ಕಾಲಿಕ ವಾಗಿ ಸಧ್ಯಕ್ಕೇ ಭಾನುವಾರ ಬೆಳಗ್ಗೆ ಗಿಡಗೆಂಟೆಗಳನ್ನು ತೆರವುಗೊಳಿಸಿ ಚರಂಡಿ ಸ್ವಚ್ಚತೆ ಮಾಡಿ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದರು ಅದರಂತೆ ಭಾನುವಾರ ಚರಂಡಿಯನ್ನು ಸ್ವಚ್ಚತೆ ಮಾಡಿಸಿದ್ದಾರೆ.

0 Comments