ಚಳ್ಳಕೆರೆ.
ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಡಕುಟುಂಬದ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಬರುತ್ತಿದ್ದು ಗುಣ ಮಟ್ಟದ ಶಿಕ್ಷಣ ನೀಡಿ ಉತ್ತಮ ಫಲಿತಾಂಶಬರುವAತೆ ಉಪನ್ಯಾನಸರು ಬೋದನೆ ಮಾಡುವಂತೆ ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮಂಗಳವಾರ ನಡೆದ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷತೆ ಮಾತನಾಡಿದರು.
ನ್ಯಾಕ್ ಕಮಿಟಿ ಕಾಲೇಜಿಗೆ ಭೇಟಿ ನೀಡಿದಾಗ ಪ್ರತಿಯೊಂದು ಸೌಲಭ್ಯಗಳನ್ನು ನೋಡಿ ಗ್ರೇಡ್ ಕೊಡುತ್ತಾರೆ.ಹೀಗಾಗಿ ಈ ಕಾಲೇಜಿನಲ್ಲಿ ಮೂರು ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಗ್ರೇಡ್ ಪಡೆದುಕೊಂಡರೆ ಯುಜಿಸಿಯಿಂದ ಹೆಚ್ಚಿನ ಅನುದಾನ ಪಡೆಯಲು ಸಾಧ್ಯವಾಗುತ್ತದೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಅನುದಾನ ಕೊಡುವುದು ಕಷ್ಟವಿದೆ.ಹಾಗಾಗಿ ಅಗತ್ಯವಿರುವ ವ್ಯವಸ್ಥೆ ಮಾಡಲಾಗುವುದು ಮತ್ತು ಕಾಲೇಜು ಶಿಕ್ಷಣ ಆಯುಕ್ತರಿಗೆ ಪತ್ರ ಬರೆಯುವ ಮೂಲಕ ಹೆಚ್ಚಿನ ಅನುದಾನ ಪಡೆಯಬೇಕಿದೆ ಎಂದು ಪ್ರಾಚಾರ್ಯರಿಗೆ ಶಾಸಕ ಟಿ.ರಘುಮೂರ್ತಿ ಸೂಚಿಸಿದರು.
ಕೆಎಚ್‌ಬಿ ಎಇಇ ಶರಣಪ್ಪ ಮಾಹಿತಿ ನೀಡಿ, ಹೊಸ ಕಟ್ಟಡ ಕಾಮಗಾರಿ ಇನ್ನೂ ೧೫ ದಿನಗಳಲ್ಲಿ ಒಂದು ಹಂತಕ್ಕೆ ಬರುವುದು.ಕಾರ್ಮಿಕರ ಸಮಸ್ಯೆಯಿಂದ ತಡವಾಗುತ್ತಿದೆ ಎಂದು ತಿಳಿಸಿದರು.
ಪ್ರಾಚಾರ್ಯ ರಂಗಪ್ಪ ಸಭೆಗೆ ಮಾಹಿತಿ ನೀಡುತ್ತಾ ನ್ಯಾಕ್ ಕಮಿಟಿ ಕಾಲೇಜಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಟ್ಟಡದ ಕಾಮಗಾರಿಗಳು ಪೂರ್ಣಗೊಳಿಸುವ ಜತೆಗೆ ಕಂಪ್ಯೂಟರ್ ಲ್ಯಾಬ್, ಶೌಚಾಲಯಗಳು, ಹೆಚ್ಚುವರಿ ಶುದ್ಧ ನೀರಿನ ಘಟಕ,ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಕೊಠಡಿ ಬೇಕಿದೆ.ಮುಖ್ಯವಾಗಿ ಪ್ರತ್ಯೇಕ ಸ್ನಾತಕೋತ್ತರ ಅಧ್ಯಯನ ವಿಭಾಗ ನಿರ್ಮಿಸಬೇಕಿದೆ ಎಂದು ತಳಿಸಿದರು.
ಪ್ರಾಧ್ಯಾಪಕ ಡಾ.ಕೆ.ಚಿತ್ತಯ್ಯ ಮಾಹಿತಿ ನೀಡಿ,ಪುರುಷ ವಿದ್ಯಾರ್ಥಿಗಳಿಗೆ ಶೌಚಾಲಯ ಬೇಕಿದೆ ಎಂದರೆ, ಗ್ರಂಥಪಾಲಕ ಪಾಪಣ್ಣ,ಗ್ರಂಥಾಲಯಕ್ಕೆ ಪರಾಮರ್ಶನ ಕೊಠಡಿ ಅಗತ್ಯವಿದೆ ಎಂದಾಗ ಶಾಸಕರು ಮಂಜೂರಾಗಿರುವ ೫೦ ಲಕ್ಷ ರೂ. ಅನುದಾನ ನಿರ್ಮಿಸಲಾಗುತ್ತದೆ ಎಂದರೆ, ಕೆಎಚ್‌ಬಿ ಎಂಜಿನಿಯರ್ ಸುನೀಲ್ ಮಾಹಿತಿ ನೀಡಿ, ಮೂರು ಕೊಠಡಿಗಳಲ್ಲಿ ದೊಡ್ಡದೊಂದು ಹಾಲ್ ಸಹಾ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾಸುರೇಶ್‌ಬಾಬು, ಜಿಪಂ ಮಾಜಿ ಸದಸ್ಯ ಪ್ರಕಾಶ್‌ಮೂರ್ತಿ, ತ್ಯಾಗರಾಜು, ಕುಶಾಲಪ್ಪ, ಮಂಜುಳಮ್ಮ, ಅನ್ವರ್‌ಸಾಬ್, ಪ್ರಾಧ್ಯಾಪಕರಾದ ರಘುನಾಥ್, ಬಿಎಸ್.ಮಂಜುನಾಥ್ ಇತರರಿದ್ದರು.
ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಡಕುಟುಂಬದ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಬರುತ್ತಿದ್ದು ಗುಣ ಮಟ್ಟದ ಶಿಕ್ಷಣ ನೀಡಿ ಉತ್ತಮ ಫಲಿತಾಂಶಬರುವAತೆ ಉಪನ್ಯಾನಸರು ಬೋದನೆ ಮಾಡುವಂತೆ ಶಾಸಕ ಟಿ.ರಘುಮೂರ್ತಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments