
ಚಳ್ಳಕೆರೆ ನ.21 ಗ್ರಾಮ ಪಂಚಾಯಿತಿ ಸದಸ್ಯರೆಂದರೆ ಗ್ರಾಮ ಸರಕಾರದ ಪ್ರತಿನಿಧಿಗಳು. ಗ್ರಾಪಂ ಸದಸ್ಯರು ತಮ್ಮ ವಾರ್ಡ್ ಗಳಲ್ಲಿ ಸಂಬಂಧಿಸಿದ ಮೂಲ ಸಮಸ್ಯೆಗಳ ಕುರಿತು ಪರಿಶೀಲಿಸಿ ಕೆಲಸ ಮಾಡಬೇಕು ಅದು ಬಿಟ್ಟು ಗ್ರಾಮಪಂಚಾಯಿತಿ ಕಚೇರಿ ಮಾರ್ಯಾದೆ ಕೆಡಿಸಲು ಮುಂದಾಗಿದ್ದಾರೆ ಎಂದು ಗ್ರಾಪಂಅಧ್ಯಕ್ಷೆ ದ್ರಾಕ್ಷಾಯಣಿಮ್ಮ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ತಳಕು ಗ್ರಾಪಂ ಅಧ್ಯಕ್ಷತೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ತಳಕು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಿಂತಿಲ್ಲ , ಮೂಲಪಿಡಿಒ ಇಲ್ಲ ಎಂದು ಪ್ರಭಾರ ಪಿಡಿಒಗಳು ಉತ್ತಮ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಕೆಲ ಸದಸ್ಯರು ಗೆದ್ದ ವಾರ್ಡ್ ಳಲ್ಲಿ ಕುಡಿಯುವ ನೀರು,ಬೀದಿ ದೀಪ, ಸ್ವಚ್ಚತೆ ಅಭಿವೃದ್ಧಿ ಕೆಲಸ ಮಾಡದೆ ಬೋಗಸ್ ಬಿಲ್ ಮಾಡುವಂತೆ ಪಿಡಿಒಗಳಿಗೆ ಒತ್ತಡ ಹಾಕುವುದು ಬಿಲ್ ಮಾಡಿಕೊಡಲಿಲ್ಲ ಎಂದು ಪ್ರಭಾವಿಗಳಿಂದ ಒತ್ತಡ ಹಾಕಿ ಅಮಾನತ್ತು ಮಾಡಿಸುವುದು ಇಲ್ಲವೆ ವರ್ಗಾವಣೆ ಮಾಡಿಸುವ ಕೆಲಸ ಮಾಡುತ್ತಾರೆ ಒಂದೇ ವರ್ಷದಲ್ಲಿ ಸುಮಾರು 9 ಪಿಡಿಒಗಳು ಬದಲಾವಣೆಯಾಗಿದ್ದಾರೆ.
ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಿಂತು ಮೂರು ಬಾರಿ ಸೋತ ವ್ಯಕ್ತಿಯಿಂದಲ್ಲೇ ಒಬ್ಬ ಪರಿಶಿಷ್ಟಜಾತಿಯ ಮಹಿಳೆ ಅಧ್ಯಕ್ಷೆಯಾಗಿರುವುದರಿಂದ ಸಹಿಸಲಾಗದೆ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ನೀಡುತ್ತಾ ಪತ್ರಿಕೆಗೆ ಹಾಕಿಸುವುದು , ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಪ್ರತಿಭಟನೆ ಮಾಡುವುದಾಗಿ ಇಲ್ಲ ಸಲ್ಲದ ಹೇಳಿಕೆ ನೀಡುವ ಮೂಲಕ ತಳಕು ಗ್ರಾಮಪಂಚಾಯಿತಿಗೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ ಎಂದು ಆರೋಪ ಮಾಡುವ ಸದಸ್ಯರ ವಿರುದ್ದ ಅಕ್ರೊಶವ್ಯಕ್ತಪಡಿಸಿದ್ದಾರೆ.

ಸದಸ್ಯ ರವಿಚಂದ್ರ ಮಾತನಾಡಿ ಪಿಡಿಒ ಹೇಮಾವತಿ ಕರ್ತವ್ಯವಧಿಯಲ್ಲಿ ಮೂರು ಸಾಮಾನ್ಯ ಸಭೆಗೆ ಗೈರು ಹಾಜರಿ ಮಾಡಿದ್ದರು , ಗ್ರಾಪಂ ಸದಸ್ಯರು ಗುತ್ತಿಗೆ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ಸದಸ್ಯ ಸೈಯಾದ್ ಕರೀಂ ಖಾನ್ ನರೇಗಾ ಯೋಜನೆಯ ಕಾಮಗಾರಿ ಸಾಮಾಗ್ರಿ ಬಿಲ್ ಅವರ ಖಾತೆಗೆ ಹಾಕಿಸಿಕೊಂಡಿದ್ದರೂ ಈಗಾಲೂ ಸಹ ಕಳೆದ ತಿಂಗಳು ಹಾಗೂ ಈ ತಿಂಗಳು ಒಟ್ಟು ಎರಡು ಸಾಮಾನ್ಯ ಸಭೆಗಳಿಗೆ ಸದಸ್ಯರು ಗೈರು ಹಾಜರಿಯಾಗಿದ್ದಾರೆ ಜತೆಗೆ ಸಭೆಗೆ ಬರುವ ಸದಸ್ಯರಿಗೆ ಸಭೆಗೆ ಹೋಗ ಬೇಡಿ ಎಂದು ಒತ್ತಾಯ ಮಾಡುತ್ತಾರೆ ಆದರೂ ಅವರ ಮಾತಿಗೆ ಕಿವಿಕೊಡದೆ ಸದಸ್ಯರು ಸಭೆಗೆ ಬರುತ್ತಾರೆ.
ಗ್ರಾಮದ ಏನಾದರೂ ಸಮಸ್ಯೆ ಇದ್ದರೆ ಸಾಮಾನ್ಯ ಸಭೆಯಲ್ಲಿ ಕೂತು ಕೇಳಲಿ ಅದು ಬಿಟ್ಟು ಇವರೇ ಸಾಮಾನ್ಯ ಸಭೆಗೆ ಗೈರಾಗುತ್ತಾರೆ ಇನ್ನು ಮೂಲ ಪಿಡಿಒ ಬಗ್ಗೆ ಇವರು ಯಾವ ನೈತಿಕತೆ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ನರೇಗಾ ಕಾಮಗಾರಿ ಎನ್ ಎಂ ಆರ್ ಗ್ರಾಪಂ ಕಚೇರಿಯಲ್ಲೇ ತೆಗೆಯುತ್ತಾರೆ ಇವರಿಗೆ ಇಷ್ಟ ಬಂದ ಕಡೆ ಎನ್.ಎಂ.ಆರ್ ತೆಗೆಸಿ ತಮ್ ಕೊಡಿ ಎಂದು ಅಧ್ಯಕ್ಷರಿಗೆ ಕೇಳುತ್ತಾರೆ ಎಲ್ಲಿ ಕೆಲಸ ಮಾಡಿಸಿದ್ದೀಯಾ ಫೋಟೊ ಕೊಡಿ ಇಲ್ಲವೇ ಕೆಲಸ ತೋರಿಸಿ ಎಂದು ಕೇಳಿದಾರೆ. ಒಬ್ಬ ಜವಾಬ್ದಾರಿಯುತ್ತ ಸದಸ್ಯ ಸೈಯಾದ್ ಕರೀಂ ಖಾನ್ ಫೋಟೊ ಏನು ವಿಧಾನ ಸೌಧದಲ್ಲಿ ಹಾಕಲ್ಲ ಏನು ತೊಂದರೆಯಾಗುವುದಿಲ್ಲ ಎನ್ ಎಂ ಆರ್ ಗೆ ತಮ್ ಕೊಡಿ ಎಂದು ಮಹಿಳಾ ಅಧ್ಯಕ್ಷರಿಗೆ ಈರೀತಿ ಉತ್ತರ ಕೊಡುವುದು ಎಷ್ಟು ಸರಿ ಸಾಮಾನ್ಯ ಸಭೆಗೆ ಗೈರು ಹಾಜರಿಯಾಗಿರುವ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಸಮಾನ್ಯ ಸಭೆಗೆ ಸದಸ್ಯರ ಗೈರು.
ತಳಕು ಗ್ರಾಮಪಂಚಾತಿ ಕಚೇರಿಯಲ್ಲಿ ಗ್ರಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 5-92020ರಂದು ನಡೆದ ಸಾಮಾನ್ಯ ಸಭೆಯಲ್ಲಿ ಸೈಯಾದ್ ಕರೀಮ್ ಬಿ.ನಾಗರಾಜ್.ನೀಲಾಬಾಯಿ.ಶಾಂತಕುಮಾರ್.
4-8-2022 ನೀಲಾಬಾಯಿ.ಬಿ.ನಾಗರಾಜ್.ತಿಪ್ಪೇಸ್ವಾಮಿ.ಲಕ್ಷ್ಮಿ ವಾಣಿಬಾಯಿ.ಸೈಯಾದ್ ಕರೀಮ್.
20-10-2022 ಸಯಾದ್ ಕರೀಮ್, ಲಕ್ಷ್ಮಿ. ನೀಲಾಬಾಯಿ.
18-10-2022ಸೈಯಾದ್ ಕರೀಮ್, .ಲಕ್ಷ್ಮಿ ಸಾಮಾನ್ಯ
8-9-2023 ಸೈಯಾದ್ ಖರೀಮ್ ಖಾನ್,ಟಿ.ವಾಣಿಬಾಯಿ, ಲಕಗಷ್ಮಿ. ಲಕ್ಷ್ಮಮ್ಮ ಭಾಗ್ಯಮ್ಮ, ಗೀತಬಾಯಿ,ನೀಲಾಬಾಯಿ,ಶಾಂತಕುಮಾರ್,ಕೆ.ತಿಪ್ಪೇಸ್ವಾಮಿ, ಮಾರಯ್ಯ,
20-11-2023 ಟಿ.ವಾಣಿಬಾಯಿ, ಟಿ.ಕೃಷ್ಣಮೂರ್ತಿ, ಸೈಯಾದ್ ಕರೀಂ ಖಾನ್, ಹೆಚ್.ಮಾರಯ್ಯ, ಶಮೀನ್ ಖಾನಂ,ಲಕ್ಷö್ಮಮ್ಮ, ನೀಲಾಬಾಯಿ, ಭಾಗ್ಯಮ್ಮ, ತಿಪ್ಪೇಸ್ವಾಮಿ, ಎಂ.ಶಾAತಕುಮಾರ, ಲಕ್ಷಿö್ಮಸಭೆಗೆವಗೈರಾಗಿರುತ್ತಾರೆ.
ಸತತವಾಗಿ ಸಾಮಾನ್ಯ ಸಭೆಗಳಿಗೆ ಗೈರು ಹಾಜರಿಯಾಗುವ ಸದಸ್ಯರೇ ಚಿತ್ರದುರ್ಗದಲ್ಲಿ ಮೂಲ ಪಿಡಿಒ ಹಾಕುವಂತೆ ಇಲ್ಲವಾದರೆ ಪ್ರತಿಭಟನೆ ಮಾಡುವುದಾಗಿ ಸೈಯಾದ್ ಕರೀಮ್ ಖಾನ್,ಲಕ್ಷ್ಮಿ, ವಾಣಿಬಾಯಿ, ಭಾಗ್ಯಮ್ಮ ಬಿ.ತಿಪ್ಪೇಸ್ವಾಮಿ,ಶಾಂತಕುಮಾರ್ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊAಡಿದ್ದಾರೆ ಇವೇರೆ ಸಾಮಾನ್ಯ ಸಭೆಗಳಿಗೆ ಗೈರು ಕೂಡಲೆ ಗ್ರಾಮಪಂಚಾಯಿತಿ ಬಗ್ಗೆ ಆರೋಪ ಮಾಡುತ್ತಿರುವ ಸದಸ್ಯರ ವಿರುದ್ದ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕೈಗೊಳ್ಳುವಂತೆ ಗ್ರಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ, ಸದಸ್ಯರಾದ ರವಿಚಂದ್ರ, ನೀಲಮ್ಮ,ಶಮೀನ್ ಖಾನ್, ತಿಪ್ಪೇಸ್ವಾಮಿ ಎಂ,ಬಿ,ನಾಗರಾಜ,ಓಬಮ್ಮ, ಭಾಗ್ಯಮ್ಮ,ಗಿರಿಜಮ್ಮ,ಚಂದ್ರಣ್ಣ,ಗೌರಮ್ಮ,ಚನ್ನಪ್ಪ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಸದಸ್ಯನ ಖಾತೆಗೆ ನರೇಗಾ ಸಾಮಾಗ್ರಿ ಬಿಲ್.

ಗ್ರಾಮಪಂಚಾಯಿಗೆ ಚುನಾವಣೆಗೆ ಸ್ಪರ್ಧಿಸುವಾಲೇ ಗುತ್ತಿಗೆ ದಾರರು ಚುನಾವಣೆಗೆ ಸ್ಫರ್ಧಿಸುವಂತಿಲ್ಲ ಎಂಬ ಮಾಹಿತಿ ಇದೆ. ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ಖಡಕ್ಕಾಗಿ ಗ್ರಾಪಂ ಸದಸ್ಯರು ನರೇಗಾ ಕಾಮಗಾರಿಯಲ್ಲಿ ಅರ್ಹರು ಕೂಲಿ ಕೆಲಸಕ್ಕೆ ಭಾಗವಗಿಸಬುದು ಆದರೆ ನರೇಗಾ ಸಾಮಾಗ್ರಿ ಸರಬರಾಜ್ ಬಿಲ್ ಪಡೆದರೆ ಸದಸ್ಯತ್ವ ರದ್ದು ಪಡಿಸುವ ಬಗ್ಗೆ ಸುತ್ತೋಲೆ ಹೊರಡಿಸಿದ್ದರೂ ಸಹ ತಳಕು ಗ್ರಾಪಂ ಸಮಾನ್ಯ ಸಭೆಗೆ ನಾಲ್ಕು ಸಭಗೆಗಳಿಗೆ ಗೈರಾದ ಸದಸ್ಯ ಸೈಯಾದ್ ಕರೀಮ್ ಇವರ ಖಾತೆಗೆ 2022-23 ನೇ ಸಾಲಿನ ನರೇಗಾ ಯೋಜನೆಯಡಿಯಲ್ಲಿ ತಿಮ್ಮಣ್ಣನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಂಪೌAಡ್ ಮತ್ತು ಗ್ರಿಲ್ ನಿರ್ಮಾಣ ಭಾಗ-೨ ನಡೆದ ನರೇಗಾ ಕಾಮಗಾರಿ ಬಿಲ್ ಸುಮಾರು 23500 ರೂಗಳ ಖಾತೆಗೆ ಜಮೆ ಮಾಡಿರುವುದು ಬೆಳಕಿಗೆ ಬಂದಿದೆ.


ಇದೇ ರೀತಿ ತಾಲೂಕಿನ ಗ್ರಾಪಂ ವ್ಯಾಪ್ತಿಯ ಸಭೆಗಳಿಗೆ ಗೈರಾದ ಸದಸ್ಯರ ಹಾಗೂ ನರೇಗಾ ಸಾಮಾಗ್ರಿ ಬಿಲ್ ಪಡೆದಿರುವ ಬಗ್ಗೆ ಈ ಹಿಂದೆ 20-12-2022 ರಂದು ಸದಸ್ಯರ ಗೈರು ಹಾಗೂ ನರೇಗಾ ಸಮಾಗ್ರಿ ಬಿಲ್ ಸದಸ್ಯನ ಖಾತೆಗೆ ಹಾಕಿಸಿಕೊಂಡಿರುವ ಬಗ್ಗೆ ಮಾಧ್ಯಮದಲ್ಲಿ ದಾಖಲೆಗಳೊಂದಿಗೆ ವರದಿ ಬೆಳೆಕು ಚೆಲ್ಲಿದ್ದರೂ ಸಹ ಅಧಿಕಾರಿಗಳು ಒತ್ತಡಕ್ಕೆ ಮಣಿದು ತನಿಖೆ ನೆಪ ಮಾತ್ರಕ್ಕೆ ಮಾಡಿ ರಕ್ಷಣೆ ನೀಡಿದ್ದಾರೆ ಆದರೂ ಸಹ ಮತ್ತೆ ಅದೇ ಚಾಳಿಯನ್ನು ಸದಸ್ಯರು ಮಂದುವರಿಸಿರುವುದು ವಿಪರ್ಯಾಸವಾಗಿದೆ ಈಗಾಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮಗಳಿಗೆ ಕಡಿವಾಣ ಹಾಕುವರೇ ಕಾದು ನೋಡ ಬೇಕಿದೆ.
0 Comments