ಚಳ್ಳಕೆರೆ ಜನಧ್ವನಿ ವಾರ್ತೆ ಜ.8. ಗ್ರಾಮಗಳ ಅಭಿವೃದ್ಧಿಗೆ ಸರಕಾರದಿಂದ ಬಿಡುಗಡೆಯಾದ ಅನುದಾವನ್ನು ಸಕಾಲಕ್ಕೆ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿಗಳನ್ನು ಸಕಾಲಕ್ಕೆ ಪೂರ್ಣಗೊಳಿಸದೆ ಇರುವುದಕ್ಕೆ ಗೋಪನಹಳ್ಳಿ ಗ್ರಾಪಂ ಪಿಡಿಒ ಯೋಗೇಶ್ ಗೆ ತಾಪಂ ಇ ಒ ಹೊನ್ನಯ್ಯ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ತಾಲೂಕಿನ ಗೋಪನಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು 15
ನೇ ಹಣಕಾಸು ಯೋಜನೆಯಡಿಯಲ್ಲಿ ಅನುಷ್ಟಾನಗೊಳಿಸುತ್ತಿರುವ ಘನ ತ್ಯಾಜ್ಯ ಘಟಕ
ಕಾಮಗಾರಿಯನ್ನು ಪೂರ್ಣಗೊಳಿಸದೇ ಕರ್ತವ್ಯ ಲೋಪವೆಸಗಿರುವ ಬಗ್ಗೆ ಗ್ರಾಮಸ್ಥರ ದೂರಿನ ಮೇರೆಗೆ ಗ್ರಾಮ ಪಂಚಾಯಿತಿ ಕಚೇರಿಗೆ ಕಾಮಗಾರಿಗಳ ಪರಿಶೀಲನೆಗಾಗಿ
ದಿನಾಂಕ:02.01.2023 ರಂದು ಭೇಟಿ ನೀಡಿದ ಪರಿಶೀಲನೆವಮಾಡಿದಾಗ ಕಂಡು ಬಂದಿವೆ
2021-22 ನೇ ಸಾಲಿನ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು 15ನೇ ಹಣಕಾಸು
ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿಯನ್ನು
ಸತತ ಸುಮಾರು 1.5 ವರ್ಷಗಳಿಂದಲೂ ಪೂರ್ಣಗೊಳಿಸದೇ ನೀವು ಕರ್ತವ್ಯ ನಿರ್ಲಕ್ಷತೆ ಮತ್ತು
ಕರ್ತವ್ಯದಲ್ಲಿ ಲೋಪವೆಸಗಿರುವುದು ದಿನಾಂಕ:02.01.2023 ರಂದು ಗ್ರಾಮ ಪಂಚಾಯಿತಿಗೆ ಭೇಟಿ
ನೀಡಿದ ಸಂದರ್ಭದಲ್ಲಿ ಕಾಮಗಾರಿಯ ಪರಿಶೀಲನೆಯಿಂದ ತಿಳಿದುಬಂದಿರುತ್ತದೆ. ಈ ನಿಮ್ಮ
ಕರ್ತವ್ಯ ನಿರ್ಲಕ್ಷತೆ, ಬೇಜವಾಬ್ದಾರಿತನ ಮತ್ತು ಕರ್ತವ್ಯ ಲೋಪದ ಬಗ್ಗೆ ಸೂಕ್ತ ಶಿಸ್ತು ಕ್ರಮಕ್ಕಾಗಿ
ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಏಕೆ ಶಿಫಾರಸ್ಸು ಮಾಡಬಾರದಾಗಿ ಈ
ನೋಟೀಸ್ ತಲುಪಿದ ಮೂರು ದಿನಗಳೊಳಗಾಗಿ ಸೂಕ್ತ ಸಮಜಾಯಿಷಿ ನೀಡಲು ಸೂಚಿಸಿದೆ.
ತಪ್ಪಿದಲ್ಲಿ ಈ ವಿಷಯದ ಬಗ್ಗೆ ನಿಮ್ಮ ಸಮಜಾಯಿಷಿ ಏನೂ ಇಲ್ಲವೆಂದು ಪರಿಗಣಿಸಿ ನಿಮ್ಮ
ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ
ಶಿಫಾರಸ್ಸು ಮಾಡುವುದಾಗಿ ಪಿಡಿಒ ಯೋಗೇಶ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಚಳ್ಳಕೆರೆ ಚರಂಡಿಗಳ ಸ್ವಚ್ಚತೆ.ಬೀದಿ ದೀಪ.ಕುಡಿತುವ ನೀರಿನ ನಿರ್ವಣೆ ಸದಸ್ಯರು ಮಾಡಿಲ್ಲವೆಂದರೆ ಅಧಿಕಾರಿಗಳು ಮುಂದೆ ನಿಂತು ಮಾಡಿಸ ಬೇಕು ಎಂದು ತಾಪಂ ಇಒ ಹೊನ್ನಯ್ಯ ತಾಕೀತು ಮಾಡಿದ್ದರು. ಗ್ರಾಮಪಂಚಾಯತ್ ವ್ಯಾಪ್ತಿಯ ಮನೆ ಮನೆಗಳಿಗೆ ಭೇಟಿ ನೀಡಿ ಹಸಿ ಕಸ. ಒಣ ಕಸ ಸಂಗ್ರಹಿವಿಂಗಡೆ ಮಾಡುವ ಘನ ತ್ಯಾಜ್ಯ. ಘಕದ ಕಾಮಗಾರಿ ಅಧ್ಯಕ್ಷ ಉಪಾಧ್ಯಕ್ಷರ ನಡುವಿನ ಮುಸುಕಿನ ಜಗಳದಲ್ಲಿ ಅರೆ ಬರೆಯಾಗಿ ಅರ್ಧಕ್ಕೆ ನಿಂತಿರುವ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿ ನರೇಗಾ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಸದಸ್ಯರು ಹಂಚಿಕೊಳ್ಳುವಂತಿಲ್ಲ ಕಾಮಗಾರಿಗಳನ್ನು ಮಾಡುವಂತಿಲ್ಲ ಕೂಡಲೆ ಕಾಮಗಾರಿ ಪ್ರಾಂಭಿಸ ಬೇಕು ಇಲ್ಲವಾದಲ್ಲಿ ನೋಟಿಸ್ ಜಾರಿಮಾಡಲಾಗುವುದು ಎಂದು ಪಿ ಡಿ ಒ ಯೋಗೇಶ್ ಗೆ ಎಚ್ಚರಿಕೆ ನೀಡಿದ್ದರು. ಗ್ರಾಮದ ಎಸ್ಸಿ ಕಾಲೋನಿಗಳಲ್ಲಿ ಚರಂಡಿಗಳನ್ನು ವೀಕ್ಷಣೆ ಮಾಡಲು ಹೋದಾಗ ಅಲ್ಲಿನ ಸ್ವಚ್ಚತೆಯನ್ನು ಹಾಗೂ ಸಾರ್ವಜನಿಕರ ಕುಂದು ಕೊರೆತಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಚರಂಡಿಯೂ ಸೇರಿದಂತೆ ಇಲ್ಲಿನ ಹಲವು ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ತಿಂಗಳುಗಳೇ ಕಳೆದರೂ ಚರಂಡಿಗಳಲ್ಲಿ ಕಸ ತೆಗೆಯಲು ಬರುವುದಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಹಲವು ತಿಂಗಳುಗಳಿಂದ ಚರಂಡಿಗಳಲ್ಲಿ ತಾಜ್ಯ. ಕಸ ಕಡ್ಡಿ ತುಂಬಿಕೊಂಡಿವೆ. ನೀರು ನಿಂತಲ್ಲೇ ನಿಂತಿರುವ ಕಾರಣ ವಿಪರೀತ ದುರ್ನಾತ ಬೀರುವುದರ ಜತೆಗೆ ಸೊಳ್ಳೆಗಳ ಕಾಟ ವಿಪರೀತವಾಗಿ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ ಅನೇಕರು ನಾನಾ ರೀತಿಯ ಜ್ವರಗಳಿಂದ ಬಳಲುವಂತಾಗಿದೆ ಕೂಲಿ ಮಾಡಿ ನಿತ್ಯದ ಹೊಟ್ಟೆ ತುಂಬಿಸಿಕೊಳ್ಳುವ ಬಹುತೇಕ ಬಡವರ್ಗದ ಜನರೇ ವಾಸ ಮಾಡುತ್ತಿರುವ ಇಲ್ಲಿ ಜನರು ಸೊಳ್ಳೆಗಳಿಂದ ಬರುವ ಜ್ವರಗಳಿಗೆ ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ. ಕಳೆದ ಒಂದು ತಿಂಗಳ ಹಿಂದೆ ಇಲ್ಲಿನ ಚರಂಡಿಗಳನ್ನು ಸ್ವಚ್ಛ ಮಾಡಿ ಚರಂಡಿಯ ಕೊಳಚೆ ತ್ಯಾಜ್ಯವನ್ನು ಚರಂಡಿಯ ಪಕ್ಕದಲ್ಲಿ ಹಾಕಿ ಹೋದವರು ಇತ್ತ ಇದೂವರೆವಿಗೂ ತಿರುಗಿಯೂ ಸಹ ನೋಡಿಲ್ಲ. ತ್ಯಾಜ್ಯ ವಿಲೇವಾರಿ ಸಹ ಮಾಡದೆ ಹೋಗಿರುವ ಪರಿಣಾಮ ರಸ್ತೆಯ ತುಂಬೆಲ್ಲಾ ತ್ಯಾಜ್ಯ ಹರಡಿ ದಾರಿ ಹೋಕರಿಗೆ ದುರ್ನಾತ ಬೀರುತ್ತಿತ್ತು ಎಂದು ದೂರಿನ ಸುರಿಮಳೆ ಗೈದಿದ್ದರು.
ನೀರಗಂಟಿ ಸರಿಯಾಗಿ ಕೆಲಸ. ಮಾಡುತ್ತಿಲ್ಲ
ಬೀದಿ ದೀಪ. ಕುಡಿಯುವ ನೀರಿನ ಸಮಸ್ಯೆ. ಸ್ವಚ್ಚತೆ ಬಗ್ಗೆ ಬಂದ ದೂರು ಗಳ ಸಮಸ್ಯೆಗನ್ನು ಸದಸ್ಯರು ಮಾಡಿಸಲಿ ಎಂದು ಹೇಳದೆ ಅಧಿಕಾರಿಗಳು ಮಾಡಿಸ ಬೇಕು ಎಂದು ತಾಕೀತು ಮಾಡಿದರು.
ಗ್ರಾಮದ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿದ್ದು ಅದಕ್ಕೆ ಅಧ್ಯಕ್ಷರು ಸಹಿ ಹಾಕುತ್ತಿಲ್ಲ ಎಂದು ದೂರಿದ್ದರು ಈ ಕಾರಣದಿಂದ ಪಿಡಿಒ ಯೋಗೇಶ್ ಗೆ ನೋಟಿಸ್ ಜಾರಿ ಮಾಡಕಾಗಿದೆ
0 Comments