ಗ್ರಾಮಗಳಲ್ಲಿ ಮಕ್ಕಳ ಕಾವಲು ಸಮಿತಿ ರಚಿಸಿ ತಪ್ಪದೇ ಸಭೆ ನಡೆಸಿ ಡಾ.ಕೆ.ಟಿ.ತಿಪ್ಪೇಸ್ವಾಮಿ ಮಕ್ಕಳ ಆಯೋಗ ಸದಸ್ಯ

by | 16/10/23 | ಕಾನೂನು


ಚಿತ್ರದುರ್ಗ ಅ.16: ಪ್ರತಿ ಗ್ರಾಮ ಪಂಚಾಯತಿ ಹಂತದಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ರಚಿಸಿ 3 ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಗ್ರಾಮ ಲೆಕ್ಕಿಗರು, ಆಶಾ, ಬೀಟ್ ಪೊಲೀಸ್ ಅಂಗನವಾಡಿ ಮೇಲ್ವಿಚಾರಕರು, ಸ್ತಿçà ಶಕ್ತಿ ಸಂಘದ ಪ್ರತಿನಿಧಿ ಪ್ರೌಢಶಾಲೆಯ ಬಾಲಕ, ಬಾಲಕಿಯರು ತಪ್ಪದೇ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ. ಕೆ.ಟಿತಿಪ್ಪೇಸ್ವಾಮಿ ಹೇಳಿದರು.
ಅ.12 ರಂದು ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಕ್ಕಳ ರಕ್ಷಣೆ ಕುರಿತಂತೆ ಎಲ್ಲಾ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಪಂಚಾಯತ್‌ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯಿಂದ 4 ಅಂಶಗಳ ಮಾದರಿ ಚಾರ್ಟ್ನ್ನು ಪಡೆದುಕೊಂಡು ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಮಾಹಿತಿ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಶಿಕ್ಷಣ ಕಾರ್ಯಪಡೆ ರಚನೆ ಮಾಡಬೇಕು. ಈ ಕಾರ್ಯಪಡೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಎಸ್.ಡಿ.ಎಂ.ಸಿ ಸದಸ್ಯರು, ಎ.ಎನ್.ಎಂ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಪಿ.ಡಿ.ಓ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಓದು ಬೆಳಕು ಕಾರ್ಯಕ್ರಮದಲ್ಲಿ ಗ್ರಂಥಾಲಯಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ-1098/112 ಕುರಿತು ಮಾಹಿತಿ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿಕುರಿತು ಪುಸ್ತಕಗಳನ್ನು ನೀಡಿ ಮಾಹಿತಿ ನೀಡಬೇಕು. ಪಂಚಾಯತ್ ರಾಜ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸುತ್ತೊಲೆಯಲ್ಲಿ ತಿಳಿಸಿರುವಂತೆ ಕಡ್ಡಾಯವಾಗಿ ನವೆಂಬರ್-14 ರಿಂದ ಜನವರಿ-21 2024ರವರೆಗೆ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕೆಂದು ತಿಳಿಸಿದರು.
ಜಿ.ಪಂ.ಸಿಇಓ ಸೋಮಶೇಖರ್.ಎಸ್.ಜೆ ಮಾತನಾಡಿ ಎಲ್ಲಾ ಪಂಚಾಯಿತಿ ಕಛೇರಿಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ-1098/112 ಫಲಕಗಳನ್ನು ಅಳವಡಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಾಲೆ, ಹಾಸ್ಟಲ್, ಅಂಗನವಾಡಿ ಕೆಂದ್ರಗಳ ಹತ್ತಿರ ಎಲೆಕ್ಟಿçÃಕಲ್ ಕಂಬ, ವೈರ್‌ಗಳು ಹಾದು ಹೋಗಿದ್ದಲ್ಲಿ ಅವುಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆಟೋ, ಟೆಂಪೋಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವುದು ಕಂಡುಬAದಲ್ಲಿ ಆರ್.ಟಿ.ಓಕಛೇರಿಗೆ ಮಾಹಿತಿ ನೀಡಬೇಕು. ನರೇಗಾದಲ್ಲಿ ಶಾಲೆ ಶೌಚಾಲಯ ನಿರ್ಮಾಣಕ್ಕೆ ಪ್ರಥಮ ಪ್ರಾಶಸ್ತö್ಯ ನೀಡಿ, ತಪ್ಪದೇ ಮಕ್ಕಳ ಗ್ರಾಮ ಸಭೆಗಳನ್ನು ನಡೆಸುವಂತೆ ಪಿ.ಡಿ.ಓ ಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಸೇರಿದಂತೆ ಎಲ್ಲಾ ತಾ.ಪ. ಇಓ ಹಾಗೂ ಪಿಡಿಓಗಳು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *