ನಾಯಕನಹಟ್ಟಿ ಜನಧ್ವನಿ ವಾರ್ತೆ ನ.7: ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡಲು ರೆಡಿ ಇದೆ ಆದರೆ ರೈತರಿಗೆ ಬೆಳೆ ಪರಿಹಾರ ನೀಡಲು ಏಕೆ ಆಗುತ್ತಿಲ್ಲ ಎಂದು ಮಾಜಿ ಸಭಾಪತಿ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ರಾಜ್ಯ ಸರ್ಕಾರಕ್ಕೆ ತಾಕತ್ತು ಮಾಡಿದ್ದಾರೆ.
ಅವರು ಮಂಗಳವಾರ ಹೋಬಳಿಯ ನಲಗೇತನಹಟ್ಟಿ. ಉಪ್ಪಾರಹಟ್ಟಿ ಬೋಸೆದೇವರಹಟ್ಟಿ. ರೈತರ ಬೆಳೆಗಳ ವೀಕ್ಷಣೆ ಮಾಡಿ ನಂತರ ನಾಯಕನಹಟ್ಟಿ ಚಿಕ್ಕ ಕೆರೆಗೆ ಭೇಟಿ ನೀಡಿ ಮಾತನಾಡಿದ್ದಾರೆ. ಹೋಬಳಿಯಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದವರು ಅಲ್ಪಸಂಖ್ಯಾತರು ಸೇರಿದಂತೆ ರೈತರೇ ಹೆಚ್ಚಾಗಿದ್ದು ಕೂಡಲೇ ರಾಜ ಸರ್ಕಾರ ಜಾನುವಾರುಗಳಿಗೆ ಮೇವು ಬ್ಯಾಂಕ್ ತೆರೆಯಬೇಕು, ರೈತರ ಬೆಳೆಗೆ ಏಳು ತಾಸು ವಿದ್ಯುತ್ ನೀಡಬೇಕು. ಗೂಳಿ ಹೋಗುವ ಕೂಲಿ ಕಾರ್ಮಿಕರಿಗೆ ಗ್ರಾಮದಲ್ಲಿ ಉದ್ಯೋಗ ನೀಡಬೇಕು. ಗೋಶಾಲೆಯನ್ನು ತೆರೆಯಬೇಕು ಜನರಿಗೆ ಕುಡಿಯುವ ನೀರು ಪೂರೈಸಬೇಕೆಂದು ಆಗ್ರಹಿಸಿದರು..
ಇನ್ನೂ ಸುಳ್ಳು ಗ್ಯಾರಂಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಬೋಗಸ್ ಕ್ಯಾರಂಟಿ ನೀಡಿ ಅಧಿಕಾರಕ್ಕೆ ಏರಿದೆ ಎಂದು ಜನರು ಕೆಲಸ ಕಾರ್ಯ ಬಿಟ್ಟು ಹಣ ಜಮಾ ಆಗದಿದ್ದರೂ ಬ್ಯಾಂಕು ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ ಇದರಿಂದ ಜನರು ಕಷ್ಟ ಅನುಭವಿಸುತ್ತಾರೆ.

ನಮ್ಮ ಸರ್ಕಾರ ಇರುವಾಗ ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿ ಜನ ಪರ ಕಾಳಜಿ ವಹಿಸಿ ರಾಜ್ಯವನ್ನು ಅಭಿವೃದ್ಧಿಪಥಕೊಂಡಯಲು ಶ್ರಮಿಸಿದ್ದೇವೆ . ಅಕ್ಕಿ ,ಲಾ ಅಂಡ್ ಆರ್ಡರ್ ಕಾವೇರಿ ನೀರು ಬರಗಾಲ ವಿದ್ಯುತ್ ಕೇಳಿದ್ರೆ ಕೇಂದ್ರ ಸರ್ಕಾರದ್ದು ಎಂದು ಹೇಳುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಅವಲಂಬಿತವಾಗಿದೆ. ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡುಕರಿದರು.
ಇದೇ ಸಂದರ್ಭದಲ್ಲಿ ಹೊಳಲ್ಕೆರೆ ಶಾಸಕ ಚಂದ್ರಪ್ಪ, ಮಾಜಿ ಶಾಸಕ ಜಿ ಎಚ್ ತಿಪ್ಪಾರೆಡ್ಡಿ, ಮೊಳಕಾಲ್ಮುರು ಕ್ಷೇತ್ರದ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಈ. ರಾಮರೆಡ್ಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ, ಚನ್ನಗಾನಹಳ್ಳಿ ಮಲ್ಲೇಶ್, ಮಾಜಿ ನಿಕಟ ಪೂರ್ವ ಅಧ್ಯಕ್ಷ ಎಂವೈಟಿ ಸ್ವಾಮಿ, ತಿಮ್ಮಪ್ಪಯ್ಯನಹಳ್ಳಿ ತಿಪ್ಪೇಸ್ವಾಮಿ (ಕೋಟೆಪ್ಪ) ನಲಗೇತನಹಟ್ಟಿ ಬಿಜೆಪಿ ಮುಖಂಡ ಪಿ ಎಂ ಪೂರ್ಣ ಓಬಯ್ಯ, ಪೂಜಾರಿ ಬೋರ್ ಮುತ್ತೆ ,ಗಗ್ಗ ಚನ್ನಯ್ಯ, ಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ ಶಿವಣ್ಣ, ನಗರ ಘಟಕ ಅಧ್ಯಕ್ಷ ಎನ್ ಮಹಾಂತಣ್ಣ, ಹಿರೇಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಡಿ ಎಚ್ ಪರಮೇಶ್ವರಪ್ಪ, ರೈತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ಬಿ.ಶಾರದಮ್ಮ , ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಬಿ ಒ ಬೋಸೆರಂಗಪ್ಪ, ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್ ಬಿ ಬಾಲರಾಜ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ ಬೋರಯ್ಯ ಗಿಡ್ಡಾಪುರ, ಬಿಜೆಪಿ ಕಾರ್ಯಕರ್ತರಾದ ಎನ್ ತಿಪ್ಪೇಸ್ವಾಮಿ, (ಜೆಸಿಬಿ) ಗುಂತಕೋಲಮ್ಮನಹಳ್ಳಿ, ಮಾಜಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ಶಂಕರಸ್ವಾಮಿ, ಅಬ್ಬೇನಹಳ್ಳಿ ಶಿವಪ್ರಕಾಶ್, ತೊರೆಕೋಲಮನಹಳ್ಳಿ ಮಂಜಣ್ಣ, ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಗಿಣಿಯರ್ ತಿಪ್ಪೇಶ್, ವಾಸಣ್ಣ ಗುಂತಕೋಲಮ್ಮನಹಳ್ಳಿ ವಿಷ್ಣು, ವಾಸಣ್ಣ, ಸೇರಿದಂತೆ ಮುಂತಾದವು ಇದ್ದರು


0 Comments