ನಾಯಕನಹಟ್ಟಿ:: ಸೆಪ್ಟೆಂಬರ್ 7ರಂದು ಗೌರಿ ಗಣೇಶ ಹಾಗೂ ಸೆಪ್ಟಂಬರ್ 16ರಂದು ಈದ್ ಮಿಲಾದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸುವಂತೆ ನಾಯಕನಹಟ್ಟಿ ಪಟ್ಟಣದ ಪಿಎಸ್ಐ ದೇವರಾಜ್ ಹೇಳಿದ್ದಾರೆ.
ಶನಿವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆವರಣದಲ್ಲಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಪರಿಸರಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡತಕ್ಕದ್ದು ವಿಸರ್ಜನೆ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಂಡಳಿಯವರು ಗಮನ ಹರಿಸಬೇಕು ಸಂಘಟಿಕರು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಕೂರಿಸುವ ಮೊದಲು ಸಂಬಂಧ ಪಟ್ಟ ಪಟ್ಟಣ ಪಂಚಾಯಿತಿ ಗ್ರಾಮ ಪಂಚಾಯಿತಿ ಬೆಸ್ಕಾಂ ಇಲಾಖೆ ಅಗ್ನಿಶಾಮಕ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪತ್ರ ಪಡಿಯಬೇಕು ಸಾರ್ವಜನಿಕ ರಸ್ತೆ ಹಾಗೂ ವಾಹನ ಓಡಾಡುವ ಸ್ಥಳದಲ್ಲಿ ಶಾಮಿಯಾನ ಹಾಕಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು ಗಣಪತಿ ಮೂರ್ತಿಯನ್ನು ದಿನದ 24 ಗಂಟೆಗಳ ಕಾಲ ಕಾಯಲು ಸಮಿತಿ ಸದಸ್ಯರು ನೇಮಿಸಿ ಮಂಜಾಗ್ರತ ವಹಿಸಬೇಕು ತಾತ್ಕಾಲಿಕ ವಿದ್ಯುತ್ ಸರಬರಾಜಿಗೆ ಬೆಸ್ಕಾಂ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಧ್ವನಿವರ್ಧಕ ಬಳಕೆ ಪೊಲೀಸ್ ವೃತ್ತ ನಿರೀಕ್ಷಕರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು
ಗಣೇಶ ಮೂರ್ತಿ ವಿಸರ್ಜನ ವೇಳೆ ಸಿಡಿ ಮದ್ದು ಪಟಾಕಿ ಮುಂತಾದವುಗಳನ್ನು ಸಿಡಿಸುವಾಗ ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ಜಾಗರೂಕತೆ ವಹಿಸಬೇಕು ಸಾರ್ವಜನಿಕ ಓಡಾಟಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪೆಂಡಲ್ ನಿರ್ಮಿಸಬೇಕು ನಾಗರಿಕರು ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸಬೇಕು ಸಂಪೂರ್ಣ ಡಿಜೆ ಬಳಕೆ ನಿಷೇಧಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು .ಇನ್ನೂ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶಾಂತಿ ಸೌಹಾರ್ದತೆಯಿಂದ ಆಚರಿಸಿ ಸಹಕಾರ ನೀಡಬೇಕು
ಎಂದರು.
ಇದೇ ಸಂದರ್ಭದಲ್ಲಿ ಪಿಎಸ್ಐ 2. ಕೆ. ಶಿವಕುಮಾರ್, ಜಿ.ಬಿ. ಮುದಿಯಪ್ಪ, ವರವು ಕಾಟಯ್ಯ, ಶಂಕರ್ ಮೂರ್ತಿ, ಮುಸ್ಲಿಂ ಮುಖಂಡ ಜಾಕಿರ್ ಹುಸೇನ್, ಕರವೇ ಹೋಬಳಿ ಘಟಕ ಅಧ್ಯಕ್ಷ ಪಿ ಮುತ್ತಯ್ಯ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಸಿ. ರಾಘವೇಂದ್ರ, ಗುಂತಕೋಲಮ್ಮನಹಳ್ಳಿ ವಿಷ್ಣು, ಮನಮೈನಹಟ್ಟಿ ನಿರಂಜನ್, ಮೀಸೆ ನಾಗರಾಜ್, ಪಟ್ಟಣ ಪಂಚಾಯತಿ ಆರೋಗ್ಯ ನಿರೀಕ್ಷಾಧಿಕಾರಿ ತಿಪ್ಪೇಶ್, ಬೆಸ್ಕಾಂ ಇಲಾಖೆ ಧನಂಜಯ್,
ಠಾಣೆಯ ಸಿಬ್ಬಂದಿಗಳಾದ ಅಣ್ಣಪ್ಪ, ಶ್ರೀ ಹರಿ, ದೇವರಾಜ್, ಮಹಿಳಾ ಪೇದೆ ಮಂಜಮ್ಮ, ಸೇರಿದಂತೆ ಹೋಬಳಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು
0 Comments