ತಳಕು:: ಹೋಬಳಿಯ ಗೌರಸಮುದ್ರ ಗ್ರಾಮದ ಜಾತ್ರೆಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಘಟಕ ಬೆಂಗಳೂರು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಚಿತ್ರದುರ್ಗ. ICTC ಚಳ್ಳಕೆರೆ. ICTC ನಾಯಕನಹಟ್ಟಿ ಇವರುಗಳ ಸಹಯೋಗ ದಿಂದ ಗೌರಸಮುದ್ರ ಮಾರಮ್ಮ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ HIV/ಹಾಗೂ TB ಸೊಂಕಿನ ಬಗ್ಗೆ. ಮತ್ತು ರಕ್ತ ದಾನದ ಮಹತ್ವದ ಬಗ್ಗೆ ಜನರಿಗೆ ಆಟೋ ಅನೋನ್ಸ್ ಮೆಂಟ್ ಜೊತೆಗೆ IEC ಕರಪತ್ರಗಳನ್ನು ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಎಂದು ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಶ್ರೀಮತಿ ಕೆ.ಬಿ. ಸುಧಾರಂಗಸ್ವಾಮಿ ಹೇಳಿದ್ದಾರೆ.
ಮಂಗಳವಾರ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಯಲ್ಲಿ ಎಚ್ಐವಿ ಹಾಗೂ ಟಿ.ಬಿ ಸೋಂಕಿನ ಬಗ್ಗೆ ಆಟೋದಲ್ಲಿ ಜಾಗೃತಿ ಮೂಡಿಸಿ ಮಾತನಾಡಿದ ಅವರು ಇತ್ತೀಚೆಗೆ ಎಚ್ಐವಿ ಸೊಂಕಿನ ಪ್ರಮಾಣ ಹೆಚ್ಚಾಗುತ್ತಿದೆ ಆದಕಾರಣ ಪ್ರತಿಯೊಬ್ಬರು ಈ ಸೋಂಕಿನ ಬಗ್ಗೆ ತಿಳಿದುಕೊಳ್ಳಿ ಮತ್ತು ಎಲ್ಲರೂ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಯ ICTC ವಿಭಾಗಕ್ಕೆ ಭೇಟಿ.ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಎಂದು ನಾಯಕನಹಟ್ಟಿ ಸಮುದಾಯ ಅರೋಗ್ಯ ಕೇಂದ್ರ ಆಪ್ತ ಸಮಾಲೋಚಕರಾದ ಶ್ರೀಮತಿ ಕೆ ಬಿ ಸುಧಾರಂಗಸ್ವಾಮಿ ತಿಳಿಸಿದ್ದಾರೆ.
ಇದೆ ವೇಳೆ ಚಳ್ಳಕೆರೆ ICTC ಆಪ್ತ ಸಮಾಲೋಚಕರಾದ ಶ್ರೀಮತಿ ನಂದಾಜ್ಯೋತಿ. ಮಾತನಾಡಿ ಪ್ರತಿಯೊಬ್ಬರು ಎಚ್ಐವಿ ಇದೆಯಾ ಇಲ್ವೋ ಎಂದು ಖಚಿತ ಪಡಿಸಿಕೊಂಡು ಸರಿಯಾದ ಚಿಕಿತ್ಸೆ ಪಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ ಸಂಸ್ಥೆ ವತಿಯಿಂದ ಬಸವರಾಜ್. ಸಿದ್ದಣ್ಣ. ಲತಾ.ಸ್ವಾತಿ. ಮಂಗಳಮ್ಮ. ನಾರಾಯಣಪ್ಪ. ಅಪೂರ್ವ.ಈರಣ್ಣ. ಸೌಖ್ಯ ಸಮುದಾಯದ ಸಂಸ್ಥೆ.ಭಾಗ್ಯ. ಮಂಜಮ್ಮ ಅನಿತಾ. ಕವಿತ. ಭಾಷಾ. ನೇತ್ರಮ್ಮ.ಲೋಕೇಶ್. ಕಮಲಮ್ಮ ಇದ್ದರು.
0 Comments