ಗೌರಸಮುದ್ರ ಗ್ರಾಮದಲ್ಲಿ ಭಯಭಕ್ತಿಯಿಂದ ದೇವಿಯ ಜಾತ್ರೆ ಆರಣೆ ಮಾಡುವ ಗ್ರಾಮದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಆಚರಣೆ ನಡೆಯಲ್ಲ.

by | 16/09/23 | Uncategorized


ಚಳ್ಳಕೆರೆ ಜನಧ್ವನಿ ವಾರ್ತೆ ಸೆ.16. ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬುಡಕಟ್ಟುಗಳಾದ ಕಾಡುಗೊಲ್ಲ ಮತ್ತು ಮ್ಯಾಸ ಬೇಡ ಸಮುದಾಯಕ್ಕೆ ತಮ್ಮ ಆರಾಧ್ಯ ದೇವತೆ ಗೌರಸಮುದ್ರದ ಮಾರಿದೇವತೆ ಜಾತ್ರೆಗೆ ಭಾನುವಾರ 17 ರಂದು ಹುತ್ತಕ್ಕೆ ಅಭಿಶೇಕ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಲಿದ್ದು , 18 ರ ಸೋಮವಾರ ಮೂಲ ಸನ್ನಿಯದ ದೇವಿಗೆ ಅಭಷೇಕ ನಡೆಯಲಿದ್ದು 19ಮಂಗಳವಾರ ಮೂಲ ಸ್ಥಾನದಿಂದ ದೇವಿಯನ್ನು ಮೆರವಣಿಗೆಯೊಂದಿಗೆ ಜಾತ್ರೆ ನಡೆಯಲು ತುಮ್ಮಲು ಪ್ರದೇಶಕ್ಕೆ ಕರೆತರಾಗವುದು ಸಂಭ್ರಮದ ಜಾತ್ರೆಗಾಗಿ ಈಗಾಗಲೆ ಜಿಲ್ಲಾಡಳಿತ, ತಾಲೂಕು ಆಡಳಿತ , ಪೊಲೀಸ್ ಇಲಾಖೆ, ಗ್ರಾಮಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಅದ್ದೂರಿಯಾಗಿ ಜಾತ್ರೆಗೆ ಬರುವ ಭಕ್ತರಿಗೆ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ ಪ್ರತಿ ನಿತ್ಯ ಸಂAಧಪಟ್ಟ ಅಧಿಕಾರಿಗಳು ಜಾತ್ರಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ನಾಯಕನಹಟ್ಟಿ ಶ್ರೀತಿಪ್ಪೇರುದ್ರಸ್ವಾಮಿ ಜಾತ್ರೆ ಬಿಟ್ಟರೆ ಹೊರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನಸೇರುವ ಬಹುದೊಡ್ಡ ಜಾತ್ರೆ ಗೌರಸಮುದ್ರ ಮಧ್ಯಾಹ್ನ ಮಾರಮ್ಮ ದೇವಿ ಜಾತ್ರೆ.
ಹಿನ್ನೆಲೆ

ದಾನಸಾಲಮ್ಮ ಎಂಬ ಯುವತಿ ಈಶ್ವರ ತಪಸ್ಸಿನಿಂದ ವರಪಡೆದ ಕುಂಬಳಕಾಯಿಯನ್ನು ಬೇಯಿಸಿ ತಿಂದ ಮೇಲೆ ದಾನಸಾಲಮ್ಮನಿಗೆ ಒಂದು ಹೆಣ್ಣು ಮಗು ಜನಿಸಿತು. ಬಹಳ ದಿನಗಳಿಗೆ ಈಶ್ವರನ ವರದಾನದಿಂದ ಹುಟ್ಟಿದ ಹೆಣ್ಣು ಮಗುವಿಗೆ ಮಾರಮ್ಮ ಎಂದು ನಾಮಕರಣ ಮಾಡಲಾಗಿದೆ.
ದಾನಸಾಲಮ್ಮ ಪತಿ ಸಂಚಸಿಖನಾಯಕ ದಂಪತಿಗಳಿಗೆ ಮಾರಮ್ಮ ಜನಿಸಿದ ನಂತರ ಏಳು ಜನ ಗಂಡು ಮಕ್ಕಳು ಹುಟ್ಟಿದರು. ಇವರು ಬೆಳೆದು ದೊಡ್ಡವರಾದ ಮೇಲೆ ಮಾರಮ್ಮ ಕುಟುಂಬದೊAದಿಗೆ ಕೋಟೆಕೊತ್ತಲಗಳನ್ನ ಕಟ್ಟಿಸಿ ಸಮಾಜದೊಂದಿಗೆ ಸಂತೋಷದಿAದ ಜೀವನ ಸಾಗಿಸಿದರು.

ಬಹುದಿನಗಳನಂತರ ಉಪ್ಪಾರ ಉಪ್ಪಿನ ಮಾಳಿಗೆಯಲ್ಲಿ ಹುತ್ತ ಬೆಳೆಯಲು ಪ್ರಾರಂಬವಾಯಿತು ದಿನಲೂ ಅವರು ಬಂದು ಬೆಳೆದ ಹುತ್ತವನ್ನು ಕಿತ್ತು ಹಾಕಿ ತನ್ಮ ಕಾಯಕ ಮಾಡುತ್ತಿದ್ದರು ಪ್ರತಿ ದಿನ ಹುತ್ತವನ್ನು ಕಿತ್ತು ಹಾಕಿದರೂ ಸಹ ಅದು ದೊಡ್ಡದಾಗಿ ಬೆಳೆಯಲು ಪ್ರಾರಂಬಿಸಿದಾಗ ಇವರಿಗೆ ಆಶ್ವರ್ಯ ಜತೆಗೆ ಗಾಬರಿಗೊಂಡು ಗೌರಸಮುದ್ರದ ಐಹೋರಿ ಮಠಕ್ಕೆ ಬಂದು ಜೋತಿಷ್ಯ ಕೇಳಿದಾಗ ಅವರಿಗೆ ಆಶ್ಚರ್ಯವಾಯಿತು.
ಹುತ್ತಬೆಳೆಯುವುದನ್ನು ಮತ್ತೆ ಕಿತ್ತುಹಾಕಲು ಹೋಗುವುದು ಬೇಡ ಈ ಸ್ಥಳದಲ್ಲಿ ಮಾರಮ್ಮ ಎಂಬ ಹೆಣ್ಣು ಮಗಳು ನಿಮಗೆ ಒಲಿಯುತ್ತಾಳೆ ಆದ್ದರಿಂದ ಭಯ ಭಕ್ತಿ ಶ್ರದ್ದೆಯಿಂದ ಪೂಜೆ ಮಾಡಿದರೆ ನಿಮಗೆ ಒಳ್ಳೆಯಾಗುತ್ತದೆ ಎಂಬ ಜ್ಯೋತಿಷಿಯ ಸಲಹೆಯಂತೆ ಉಪ್ಪಾರ ಜನಾಂಗದ ಕೆಂಚಮ್ಮ ಎಂಬ ಮಹಿಳೆ ಪತ್ರಿ ನಿತ್ಯ ಹುತ್ತಕ್ಕೆ ಹಾಲು ಬಿಟ್ಟು ಪೂಜೆ ಸಲ್ಲಿಸುತ್ತಿದ್ದಳು ಈಗಿರುವ ದೇವಸ್ಥಾನದ ಸ್ಥಳವೇ ಗೌರಸಮುದ್ರ ಮಾರಮ್ಮ ದೇವಿಯ ಗುಡಿ ಎಂದು ಹೇಳಲಾಗುತ್ತಿದೆ.

ಈಗಲೂ ಸಹ ಹುತ್ತಕ್ಕೆ ಹಾಲು ಬಿಡುವ ಮೂಲಕ ಜಾತ್ರೆ ಪ್ರಾರಂಭವಾಗುವುದು ಇಂದಿಗೂ ಸಹ ಗೌರಸಮುದ್ರಮಾರಮ್ಮ ದೇವಿಯ ಪೂಜೆಯನ್ನು ಉಪ್ಪಾರ ಜನಾಂಗದವರೇ ಪೂಜೆ ಮಾಡುವ ಪದ್ದತಿ ಇದೆ.
ಗೌರಸದ್ರಮುದ್ರ ಮಾರಮ್ಮ ದೇವಿ ಜಾತ್ರೆ ನಡೆದ ನಂತರ ಮರಿಪರಿಷೆ ಆಗುವ ಒಂದು ತಿಂಗಳವರೆಗೆ ಗ್ರಾಮಗಳಲ್ಲಿ ಮಾರಿ ಹಬ್ಬ ಆಚರಣೆ ಮಾಡುವ ಪದ್ದತಿಯನ್ನು ಆಚರಣೆ ಮಾಡಿಕೊಂಡು ಬಂದಿದ್ದಾರೆ.
ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇದ ಮಾಡಲಾಗಿದೆ ಜಾತ್ರೆಗೆ ಬರುವ ಎಲ್ಲಾ ದಿಕ್ಕುಗಳಲ್ಲಿ ಪೊಲೀಸ್ ಇಲಾಖೆವತಿಯಿಂದ ಚೆಕ್ ಪೋಷ್ಟ್ ಗಳನ್ನು ನಿರ್ಮಿಸಲಾಗಿದೆ.

ಗ್ರಾಮದಲ್ಲಿ ಗಣೇಶೋತ್ಸವ ಆಚರಣೆಮಾಡಲ್ಲ . ಬೆಲೆ ಏರಿಕೆ ನಡುವೆಯೂ ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಹಾಗೂ ಶ್ರದ್ಧಾ- ಭಕ್ತಿಯಿಂದ ತಳಿರು ತೋರಣಗಳಿಂದ ಸಿಂಗರಿಸಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸುವ ಮೂಲಕ ಗಣೇಶೋತ್ಸವ ಆಚರಿಸುತ್ತಿದ್ದಾರೆ ಆದರೆ ಈ ಗ್ರಾಮದೆಲ್ಲಿ ಮಾತ್ರ ಗಣೇಶೋತ್ಸವ ಆಚರಣೆಯಿಂದ ದೂರ. ಪ್ರತಿ ಹಳ್ಳಿಯಲ್ಲೂ ತಿಂಗಳ ಮೊದಲೇ ಚಿಣ್ಣರು,ಯುವಕರು ಗಣೇಶ ಚಂದಾ ಸಂಗ್ರಹ ಮಾಡಲು ರಸ್ತೆ ತಡೆದು ವಾಹನಗಳ ಹಾಗೂ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಚಪ್ಪರ ,ಶೆಡ್ ಹಾಕಲು ಮಂದಾಗುತ್ತಾರೆ. ರಾಜ್ಯದ ಗಡಿಯಂಚಿನಲ್ಲಿ, ಸೀಮಾಂಧ್ರಕ್ಕೆಹೊAದಿಕೊAಡAತಿರುವ ಈ ಗೌರಸಮುದ್ರ ಗ್ರಾಮದಲ್ಲಿ ಮಾರಮ್ಮದೇವಿಯ ಜಾತ್ರೆಗೆ ಪ್ರಸಿದ್ದಿ ಪಡೆದ ಮಾರಮ್ಮ ದೇವಿಯ ಸುಕ್ಷೇತ್ರದಲ್ಲಿ ಮಾತ್ರಗೌರಸದ್ರಮುದ್ರ ಮಾರಮ್ಮ ದೇವಿ ಜಾತ್ರೆ ನಡೆಯುವ ಗೌರಸದ್ರಮುದ್ರ ಗ್ರಾಮದಲ್ಲಿ ಪೂರ್ವಕಾಲದಿಂದಲೂ ಗಣೇಶೋತ್ಸವ ಹಬ್ಬವನ್ನು ಆಚರಣೆ ಮಾಡುತ್ತಿಲ್ಲವೆಂಬುದೇ ಸೋಜಿಗದ ಸಂಗತಿಯಾಗಿದೆ. ಈ ಗ್ರಾಮದಲ್ಲಿ ದೇವಿಯ ಜಾತ್ರೆ ಪ್ರತಿಭಾದ್ರಪದ ಮಾಸದ ಮೊದಲ ಸೋಮವಾರ ಹಾಗೂ ಮಂಗಳವಾರಗಳAದು ಶ್ರೀ ಮಾರಮ್ಮದೇವಿಉತ್ಸವ ಭರ್ಜರಿಯಾಗಿ ನಡೆಯುತ್ತದೆ. ಹೀಗಾಗಿ ಈಗ್ರಾಮದಲ್ಲಿ ಗಣೇಶನ ಹಬ್ಬದ ಆಚರಣೆಯೇ ಇಲ್ಲ. ಇಲ್ಲಿ ವಿಘ್ನ ನಿವಾರಕ ವಿಶ್ಲೇಶ್ವರನಿಗೆ ಪ್ರವೇಶವೇ ಇಲ್ಲದಂತಾಗಿದೆ. ಅಮ್ಮನ ಉತ್ಸವದ ಆಚರಣೆಯವೇಳೆ ಬೇರೆ ಯಾವುದೇ ಉತ್ಸವ ಮಾಡುವುದಿಲ್ಲ, ಮಾಡುವಂತೆಯೂ ಇಲ್ಲ ಎಂಭುದು ಗ್ರಾಮದ ಹಿರಿಯ ಅನಿಸಿಕೆಯಾಗಿದೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *