ಚಳ್ಳಕೆರೆ ಆ.,30. ಗೃಹ ಲಕ್ಷ್ಮೀ ಯೋಜನೆ ಹಣವನ್ನು ಮಕ್ಕಳ ವಿದ್ಯಾಬ್ಯಾಸಕ್ಕೆ ಬಳಸಿಕೊಳ್ಳಿ ಎಂದು ತಾಪಂ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಫಲಾನುಭವಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ನನ್ನಿವಾಳ ಗ್ರಾಪಂ ಆವಣರದಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು..
ಗೃಹ ಲಕ್ಷ್ಮೀ ಯೋಜನೆ ಮಹಾತ್ವಕಾಂಕ್ಷಿ, ದೇಶಕ್ಕೆ ಮಾದರಿ ಯೋಜನೆಯಾಗಿದೆ. ಮನೆಯಲ್ಲಿ ರೇಷನ್ ಕಾರ್ಡ್ ನಲ್ಲಿರುವ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ಜಮಾ ಆಗಲಿದೆ, ಈ ಯೋಜನೆಯಲ್ಲಿ ಇನ್ ಕಂ ಟ್ಯಾಕ್ಸ್, ಜಿಎಸ್ ಟಿ ಪಾವತಿ ಮಾಡುವವರಿಗೆ ಹಣ ಬರುವುದಿಲ್ಲ, ಅದುಬಿಟ್ಟು ಎಪಿಎಲ್, ಬಿಪಿಎಲ್ ಕಾರ್ಡ್ ಆಗಲಿ ಅದರಲ್ಲಿರುವ ಮನೆಯ ಯಜಮಾನಿಗೆ 2 ಸಾವಿರ ಬರಲಿದೆ, ಗೃಹ ಲಕ್ಷ್ಮೀ ಯೋಜನೆ ಹಣವನ್ನು ಮಕ್ಕಳ ವಿದ್ಯಾಬ್ಯಾಸಕ್ಕೆ, ಆರೋಗ್ಯ ಬಳಕೆ ಮಾಡಿಕೊಂಡರೆ ನಿಮ್ಮ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಶಿವಮ್ಮ ರಾಜಣ್ಣ .ಉಪಾಧ್ಯಕ್ಷೆ ಬಿಬಿಜಾನ್ ಗ್ರಾಪಂ ಸದಸ್ಯರಾದ ಚಿನ್ನಯ್ಯ, ಬಸವರಾಜು, ಪಾರಿಜಾತ, ಪಿಡಿಒ ಪಾಲಯ್ಯ ಇತರರಿದ್ದರು.
0 Comments