ಚಳ್ಳಕೆರೆ ಸೆ.4‘ಗುರುಭವನ ನಿರ್ಮಾಣಗೊಂಡರೂ ಕಾರ್ಯಕ್ರಮಗಳನ್ನು ನಡೆಸಲು ಸಿಗದ ‘ಗುರು’ಬಲ.
ಹೌದು ಇದು ಚಳ್ಳಕೆರೆ ನಗರದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಆವರದಣದಲ್ಲಿ ಬೃಹತ್ ಗುರು ಭವನ ಕಟ್ಟಡ ಕಾಮಗಾರಿ ಪೂರ್ಣಗೊಂಡು ಒಂದೆರಡು ಕಾರ್ಯಕ್ರಮ ಬಿಟ್ಟರೆ ಸುಮಾರು 6 ವರ್ಷಗಳು ಕಳೆದರೂ ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಕಲ್ಯಾಣ ಮಂಟಪದಲ್ಲಿ ಮಾಡುತ್ತಿರುವುದು ವಿಷಾದನೀಯವಾಗಿದೆ.
ಬೃಹತ್ ಕಟ್ಟಡವಿದ್ದರೂ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ಗುರು
ಭವನವನ್ನು ಬಟ್ಟೆ ವ್ಯಾಪಾರಕ್ಕೆ ಬಾಡಿಗೆ ನೀಡಲಾಗಿದೆ.
ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಗುರುಭವನದ ನಿವೇಶನ ಖಾತೆ ಇಲ್ಲದೆ ಸರಕಾರಿ ಅನುದಾನ ಪಡೆಯಲು ಸಾಧ್ಯವಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಗುರುಭವನ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಶಿಕ್ಷಕರು ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿದ ಕೆಲವು ಶಿಕ್ಷಕರು ನಿವೃತ್ತಿ ಹೊಂದಿದ್ದಾರೆ.ಶಿಕ್ಷಕರ ಸಭೆ, ಸಮಾರಂಭಗಳು, ತರಬೇತಿ ಚಟುವಟಿಕೆಗಳು ಸೇರಿದಂತೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗೆ.ಶಿಕ್ಷಕರ ದಿನಾಚರಣೆಗೆ ಬಳಕೆಯಾಗ ಬೇಕಿದ್ದ ಗುರು ಭವನದ ಕಟ್ಟಡ ವಾಣಿಜ್ಯ ಮಳಿಗೆಯಾಗಿದೆ.
ಸಾವಿರಾರು ಸಂಖ್ಯೆಯಲ್ಲಿರುವ ಶಿಕ್ಷಕ ವರ್ಗ ಗುರುಭವನಕ್ಕೆ ಹಲವು ವರ್ಷಗಳಿಂದ ಬೇಡಿಕೆ ಇಡುತ್ತಲೇ ಬಂದಿದೆ. ಅಲ್ಲದೆ ಭವನ ನಿರ್ಮಾಣಕ್ಕೆ ಶಿಕ್ಷಕರು ವಂತಿಗೆಯನ್ನೂ ನೀಡಲಾಗುದೆ
ಆದರೂ ಸಹ ಕಟ್ಟ ಇದ್ದರೂ ಕಲ್ಯಾಣ ಮಂಟಪಬಾಡಿಗೆ ಪಡೆದು ಕಾರ್ಯಕ್ರಮ ನಡೆಸಬೇಕಾದ ಅನಿವಾರ್ಯತೆ ಇದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪಕ್ಕದ ಜಾಗವನ್ನು ಗುರುಭವನ ನಿರ್ಮಾಣದ ಉದ್ದೇಶಕ್ಕೆ ಈ ಜಾಗ ಖಾತೆ ಆಗದೆ ಇರುವುದೇ ವಿಳಂಬಕ್ಕೆ ಕಾರಣವಾಗಿದ್ದು ಗುರುಭವನ ಜಾಗಕ್ಕೆ ಖಾತೆ ಇದೀಗ ಲಭ್ಯವಾಗಿದ್ದು ಸರಕಾರಿ ಶಿಕ್ಷಕರ ಕಲ್ಯಾಣ ನಿಧಿಪಡೆಯಲು ಸಹಕಾರಿಯಾಗಲಿದೆ.
ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಕಾದರೂ ಸಂಬಂಧಪಟ್ಡ ಅಧಿಕಾರಿಗಳು ಮುಂದಿನ ವರ್ಷವಾದರೂ ಶಿಕ್ಷಕರ ದಿನಾಚರಣೆ. ಸಭೆ ಸಮಾರಂಭಗಳನ್ನು ಗುರುಭವನದಲ್ಲಿ ನಡೆಸುವಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವರೇ ಕಾದು ನೋಡ ಬೇಕಿದೆ.
0 Comments