ನಾಯಕನಹಟ್ಟಿ:: ಸದೃಢವಾದ ಮತ್ತು ಆರೋಗ್ಯವಂತ ಸಮಾಜ ಕಟ್ಟಬೇಕಾದರೆ ಗರ್ಭಣಿಯರು ಮತ್ತು ಭಾರತೀಯರು ಪೌಷ್ಟಿಕ ಆಹಾರ ಬಳಸುವ ಮೂಲಕ ತಮ್ಮ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಶ್ರೀಮತಿ ಸುನಿತಾ ಜಿ ಬಿ. ಮುದಿಯಪ್ಪ ಹೇಳಿದ್ದಾರೆ.
ಶನಿವಾರ ಪಟ್ಟಣದ ಐದನೇ ವಾರ್ಡಿನ .ಎಫ್. ಅಂಗನವಾಡಿ ಕೇಂದ್ರದಲ್ಲಿ ಪೋಷಣೆ ಮಾಸಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಜೀವನ ಶೈಲಿ ಬದಲಿಯಿಸಿಕೊಳ್ಳಬೇಕು ಆಧುನಿಕ ಜೀವನದಲ್ಲಿ ಸಣ್ಣ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತದೆ ಪೋಷಣೆ ಅಭಿಯಾನ ಮಕ್ಕಳು ಗರ್ಭಿಣಿಯರಲ್ಲಿ ಪೌಷ್ಟಿಕತೆ ಹೆಚ್ಚಿಸಲು ಅನುಕೂಲವಾಗುವ ಸೌಲಭ್ಯಗಳನ್ನು ಪಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಡಿ.ಎಂ. ನಾಗರತ್ನ ಆಶಾ ಕಾರ್ಯಕರ್ತೆ ಎಲ್ ದ್ರಾಕ್ಷಾಯಿಣಿ, ಅಂಗನವಾಡಿ ಸಹಾಯಕಿ ಕೌಸರ್ ಬಾನು, ಅನ್ನಪೂರ್ಣ, ಶೋಭಾ, ಮಾರಣ್ಣ ರೇಷ್ಮಾ ಭಾನು ಮಲ್ಲಿನಾಥ್ ಮೈಲಾರಪ್ಪ ಐಶ್ವರ್ಯ ಗಂಗಮ್ಮ ವೀಣಾ ಚೌಡಪ್ಪ ದಡ್ಲಮ್ಮ ಇದ್ದರು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments