ಗತ ವರ್ಷದಲ್ಲಿ, ಪೊಲೀಸ್ ಇಲಾಖೆಯ ಕಾರ್ಯ ವೈಖರಿ ತೃಪ್ತಿ ತಂದಿದೆ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ

by | 04/01/23 | Uncategorized

ಬೆಂಗಳೂರು : ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಇಂದು ತಮ್ಮ ಇಲಾಖೆಯ ಹಿರಿಯ ಅಧಿಕಾರಿ ಗಳೊಂದಿಗೆ, ಇಂದು, ಸಭೆ ನಡೆಸಿದರು.

ಹೊಸ ವರ್ಷದ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿದ್ದ, ಸಚಿವರು, ಇಲಾಖೆಯ, ಕಳೆದ ವರ್ಷದ ಸಾಧನೆಗಳು, ಎದುರಿಸಿದ ಸವಾಲುಗಳು, ಕ್ರಮಿಸಬೇಕಾದ ಹಾದಿಗಳು ಹಾಗೂ ಇನ್ನೂ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಡಿಜಿಪಿ ಪ್ರವೀಣ್ ಸೂದ್ ಅವರು, ಸಚಿವರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕಾರ್ಯ ದಕ್ಷತೆ ಯಿಂದ, ಹತ್ತು ಹಲವು ಸವಾಲುಗಳನ್ನು, ಸಮರ್ಥವಾಗಿ ಎದುರಿಸಲು ಸಹಾಯವಾಯಿತು ಎಂದು, ಹೇಳಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಪೊಲೀಸ್ ಸಿಬ್ಬಂದಿಗಳು, ಹಗಲಿರುಳು ಶ್ರಮಿಸಿದ ಫಲವಾಗಿ, ಅತ್ಯುತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಿದೆ, ಸರಕಾರಕ್ಕೂ ಒಳ್ಳೆಯ ಹೆಸರು ಬಂದಿದೆ.

ಕಳೆದ ಒಂದು ವರ್ಷದಲ್ಲಿ, ಗೃಹ ಇಲಾಖೆಯ ಕಾರ್ಯದಕ್ಷತೆ ಹೆಚ್ಚಿಸಲು ಸರಕಾರವೂ ಆದ್ಯತೆ ನೀಡಿದೆ.

ಒಂದು ಲಕ್ಷ ಸಿಬ್ಬಂದಿ ಹೊಂದಿದ, ಗೃಹ ಇಲಾಖೆ, ಎಲ್ಲಾ ಸವಾಲುಗಳನ್ನೂ ಯಶಸ್ವಿಯಾಗಿ ನಿಭಾಯಿಸಿದೆ.

ನೇಮಕಾತಿ ಹಗರಣವನ್ನು ಬಯಲುಗೊಳಿಸಿ, ಇಲಾಖೆಗೆ ಭ್ರಷ್ಟ ಅಧಿಕಾರಿಗಳ ಸೇರ್ಪಡೆಗೆ ತಡೆಯೊಡ್ಡಿ ದಂತಹ ಘಟನೆಯೂ ನಡೆಯಿತು.

ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ, ಆತ್ಮ ವಿಶ್ವಾಸ ಹೆಚ್ಚಿಸುವ ಪೂರಕ ಕಾರ್ಯಕ್ರಮ ಗಳಿಗೆ, ಆದ್ಯತೆ ನೀಡಿದ್ದು, ತೃಪ್ತಿ ತಂದಿದೆ.

ಗೃಹ ಇಲಾಖೆಯ ಕಾರ್ಯದಕ್ಷತೆ ಹೆಚ್ಚಿಸಲು ಪೋಲಿಸ್ ಸಿಬ್ಬಂದಿಗಳಿಗೆ ಉತ್ತಮ ವಸತಿ ಗೃಹಗಳು, ಕರ್ತವ್ಯ ನಿರ್ವಹಿಸಲು ಅತ್ಯುತ್ತಮ ಕಟ್ಟಡಗಳು, ಹಾಗೂ ಇನ್ನಿತರ ಮೂಲ ಸೌಕರ್ಯ ಅಭಿವೃದ್ಧಿ ಕಲ್ಪಿಸಲು ಆದ್ಯತೆ ನೀಡಲಾಗಿದೆ.

ಕಳೆದ ವರ್ಷದಲ್ಲಿ, ಸರಕಾರ, ಮತಾಂತರ ನಿಷೇಧ ಹಾಗೂ ಗೋ ವಧೆ ನಿಷೇಧ ಕಾಯಿದೆಗಳನ್ನು ಬಲ ಗೊಳಿಸಲು ಕ್ರಮ ಕೈಗೊಂಡಿದೆ. ಆದರೆ ಅದರ ಅನುಷ್ಟಾನ ಸಮರ್ಪಕವಾಗಿ ಆಗಬೇಕಿದೆ ಎಂದು ಕಿವಮಾತು ಹೇಳಿದರು.

ಬೀಟ್ ವ್ಯವಸ್ಥೆ ಇನ್ನಷ್ಟು ಚುರುಕು ಗೊಳ್ಳಬೇಕು ಎಂದ ಸಚಿವರು, ವಿಧಾನ ಸಭಾ ಚುನಾವಣೆಯಲ್ಲಿ ಹತ್ತಿರವಿರು ವುದರಿಂದ ಇನ್ನಷ್ಟು ಎಚ್ಚರಿಕೆಯಿಂದ, ಸವಾಲುಗಳನ್ನೂ ಎದುರಿಸಲು ಸಿದ್ದರಾಗಬೇಕಿದೆ, ಎಂದೂ ಹೇಳಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಒಳಾಡಳಿತ, ಶ್ರಿ ರಜನೀಶ್ ಗೋಯಲ್, ಡಿಜಿಪಿ ಪ್ರವೀಣ್ ಸೂದ್, ಡಿಜಿ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *