ಖಾಸಗಿ ಬಸ್ ನಿಲ್ದಾಣದಲ್ಲಿ ಸರಕಾರಿ ಹಾಗೂ ಖಾಸಗಿ ಬಸ್ ಗಳು ಪ್ರಯಾಣಿಕರನ್ನು‌ ಕರೆದೊಯ್ಯಲು‌ ಪೈಪೋಟಿ

by | 20/12/22 | ಜನಧ್ವನಿ

ಚಳ್ಳಕೆರೆ
ನಗರದ ಖಾಸಗಿ ಬಸ್ ನಿಲ್ದಾಣ. ನೆಹರು ವೃತ್ತ.ಪಾವಗಡ ರಸ್ತೆತಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಹಾಗೂ ಸರಕಾರಿ ಬಸ್ ಗಳು ಚಿತ್ರದುರ್ಗಕ್ಕೆ ಪ್ರಯಾಣಿಕರನ್ನು ಕರೆದೊಯ್ಯಲು ತಾ ಮುಂದು ನಾ ಮುಂದೆ ಎಂದು ರಸ್ತೆಯಲ್ಲಿ ವಾಹನಗಳನ್ನು ಅಡ್ಡದಿಡ್ಡಿ ನಿಲ್ಲಿಸಿ ವಾಹನಗಳ ಸಂಚಾರ ವ್ಯವಸ್ಥೆ ಹದಗೆಡುವಂತೆ ಮಾಡಿದೆ. ‌‌‌‌‌ ಬ ಖಾಸಗಿ ಬಸ್ ನಿಲ್ದಾಣಕ್ಕೆ ಸರಕಾರಿ ಹಾಗೂ ಖಾಸಗಿ ಬಸ್ ಗಳು ಬಂದ ತಕ್ಷಣ ಆಟೋಗಳು ಬಂದು ಬಸ್ ಗಳ ಸುತ್ತುವರಿದು ನಿಂತುಕೊಳ್ಳುವುದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುವ ಜತೆಗೆ ಟ್ರಾಫಿಕ್ ಜಾಮ್ ಅಗುತ್ತದೆ. ಇದರಿಂದ. ವಿವಿಧ ಗ್ರಾಮಗಳತ್ತ ಪ್ರಯಾಣಿಸುವ ವಾಹನಗಳ ವೇಗ ಮಿತಿ ಎಷ್ಟು ಇರಬೇಕು ಎಂಬುದರ ಬಗ್ಗೆ ಎಲ್ಲಿಯೂ ಫಲಕಗಳನ್ನು ನಿಲ್ಲಿಸಲಾಗಿಲ್ಲ. ಪ್ರತಿ ಭಾನು ವಾರ ನಗರದಲ್ಲಿ ವಾರದ ಸಂತೆ ನಡೆಯುವ ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆ. ಬಿಡಾಡಿ ದನಗಳ ಹಾಗೂ ವಾಹನಗಳ ಸಂಚಾರ ನಿಯಂತ್ರಿಸಲು ಮುಂದಾಗುತ್ತಿಲ್ಲ ಇದರಿಂದ ನಗರದಲ್ಲಿ ವಾಹನಗಳ ಸಂಚಾರ ನಿಯಮಗಳು ಉಲ್ಲಂಘನೆಯಾರೂ ತಡೆಯಲು ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ವಾಹನಗಳ ಅಡ್ಡಾದಿಡ್ಡಿ ಸಂಚಾರಕ್ಕೆ ಬ್ರೇಕ್ ಹಾಕುವರೇ ಕಾದು ನೋಡಬಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *